For Quick Alerts
ALLOW NOTIFICATIONS  
For Daily Alerts

ಹಬ್ಬದ ಸೀಸನ್‌: ಎಚ್‌ಡಿಎಫ್‌ಸಿ, ಎಸ್‌ಬಿಐಗಿಂತ ಕಡಿಮೆ ದರದಲ್ಲಿ ಸಾಲ ನೀಡುತ್ತೆ ಈ ಬ್ಯಾಂಕುಗಳು!

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸೆಪ್ಟೆಂಬರ್ 30ರಂದು ರೆಪೋ ದರವನ್ನು ಸತತ ನಾಲ್ಕನೇ ಬಾರಿಗೆ ಏರಿಕೆ ಮಾಡಿದೆ. ಆರ್‌ಬಿಐ ವಿತ್ತೀಯ ದರ 50 ಮೂಲಾಂಕ ಹೆಚ್ಚಳ ಮಾಡಿದ್ದು ಪ್ರಸ್ತುತ ರೆಪೋ ದರ ಶೇಕಡ 5.9ಕ್ಕೆ ತಲುಪಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ಸಾಲದ ಬಡ್ಡಿದರ ಏರಿಕೆ ಮಾಡಿದೆ. ಆದರೆ ಈ ಎರಡು ಬ್ಯಾಂಕುಗಳು ಸಾಲದ ಬಡ್ಡಿದರವನ್ನು ಕಡಿತ ಮಾಡಿದೆ.

ಹೌದು, ಸಾಮಾನ್ಯ ಆರ್‌ಬಿಐ ರೆಪೋ ದರ ಪರಿಷ್ಕರಣೆ ಮಾಡಿದಾಗ ಬ್ಯಾಂಕುಗಳು ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಕೂಡಾ ಪರಿಷ್ಕರಣೆ ಮಾಡುತ್ತದೆ. ಆರ್‌ಬಿಐ ರೆಪೋ ದರ ಏರಿಕೆ ಮಾಡಿದರೆ ಬ್ಯಾಂಕುಗಳು ಎಫ್‌ಡಿ, ಸಾಲದ ಬಡ್ಡಿದರ ಏರಿಸಿದರೆ, ಆರ್‌ಬಿಐ ವಿತ್ತೀಯ ದರ ಇಳಿಸಿದರೆ ಬ್ಯಾಂಕುಗಳು ಕೂಡಾ ದರ ಇಳಿಕೆ ಮಾಡುತ್ತದೆ. ಈಗಾಗಲೇ ಹಲವಾರು ಬ್ಯಾಂಕುಗಳು ಸಾಲದ ಬಡ್ಡಿದರ ಏರಿಕೆ ಮಾಡಿದೆ. ಆದರೆ ಈ ಎರಡು ಬ್ಯಾಂಕುಗಳು ಸಾಲದ ಬಡ್ಡಿದರ ಇಳಿಸಿದೆ.

ಆರ್‌ಬಿಐ ದರ ಹೆಚ್ಚಿಸಿದರೂ ಈ ಬ್ಯಾಂಕ್‌ನಲ್ಲಿ ಸಾಲಕ್ಕೆ ಬಡ್ಡಿ ಇಳಿಕೆಆರ್‌ಬಿಐ ದರ ಹೆಚ್ಚಿಸಿದರೂ ಈ ಬ್ಯಾಂಕ್‌ನಲ್ಲಿ ಸಾಲಕ್ಕೆ ಬಡ್ಡಿ ಇಳಿಕೆ

ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ ಈ ಹಬ್ಬದ ಸೀಸನ್ ನಡುವೆ ಸಾಲದ ಬಡ್ಡಿದರವನ್ನು ಇಳಿಕೆ ಮಾಡಿದೆ. ಅಷ್ಟು ಮಾತ್ರವಲ್ಲದೆ ದೇಶದ ಅತೀ ದೊಡ್ಡ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಾಗೂ ಎಚ್‌ಡಿಎಫ್‌ಸಿ ಲಿಮಿಟೆಡ್‌ಗಿಂತ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ಈ ಎರಡು ಬ್ಯಾಂಕುಗಳು ನೀಡುತ್ತದೆ. ಹಾಗಾದರೆ ಈ ಎರಡು ಬ್ಯಾಂಕುಗಳಲ್ಲಿ ನೂತನ ಬಡ್ಡಿದರ ಎಷ್ಟಿದೆ?, ಎಸ್‌ಬಿಐ, ಎಚ್‌ಡಿಎಫ್‌ಸಿಯಲ್ಲಿ ಗೃಹ ಸಾಲದ ಬಡ್ಡಿದರ ಎಷ್ಟು ಎಂದು ತಿಳಿಯೋಣ ಮುಂದೆ ಓದಿ....

 ಬಡ್ಡಿದರ ಇಳಿಕೆ ಮಾಡಿದ ಬ್ಯಾಂಕ್ ಆಫ್ ಇಂಡಿಯಾ

ಬಡ್ಡಿದರ ಇಳಿಕೆ ಮಾಡಿದ ಬ್ಯಾಂಕ್ ಆಫ್ ಇಂಡಿಯಾ

ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ಗೃಹ ಸಾಲದ ಬಡ್ಡಿದರವನ್ನು ಶೇಕಡ 8.30ಕ್ಕೆ ಇಳಿಕೆ ಮಾಡಿದೆ. ಅದು ಕೂಡಾ ಈ ಹಬ್ಬದ ಸೀಸನ್ ನಡುವೆ ಬಡ್ಡಿದರ ಇಳಿಸಿದೆ. ಅಕ್ಟೋಬರ್ 19, 2022ರಂದು ತನ್ನ ಸ್ಟೇಟ್‌ಮೆಂಟ್‌ನಲ್ಲಿ ಬ್ಯಾಂಕ್ ಈ ಬಗ್ಗೆ ಮಾಹಿತಿ ನೀಡಿದೆ. "ಸ್ಪರ್ಧಾತ್ಪಕ ಬಡ್ಡಿದರವನ್ನು ನಾವು ನೀಡುತ್ತಿದ್ದೇವೆ. ನಮ್ಮ ಗೃಹ ಸಾಲದ ಬಡ್ಡಿದರ ಶೇಕಡ 8.30ರಿಂದ ಆರಂಭವಾಗುತ್ತದೆ. ಹಾಗೆಯೇ ಇಎಂಐ ಅತೀ ಅಗ್ಗವಾಗಿದೆ. 755 ರೂಪಾಯಿಯಿಂದ ಇಎಂಐ ಆರಂಭವಾಗುತ್ತದೆ. ಗ್ರಾಹಕರು ಬೇರೆ ಬ್ಯಾಂಕುಗಳಲ್ಲಿ ಇರುವ ಗೃಹ ಸಾಲವನ್ನು ನಮ್ಮ ಬ್ಯಾಂಕಿಗೆ ವರ್ಗಾವಣೆಯನ್ನು ಮಾಡುವ ಅವಕಾಶ ಕೂಡಾ ಇದೆ ಎಂದು ಬ್ಯಾಂಕ್ ಆಫ್ ಇಂಡಿಯಾ ಹೇಳಿಕೊಂಡಿದೆ.

ಎಂಸಿಎಲ್‌ಆರ್ ಏರಿಸಿದ ಆಕ್ಸಿಸ್ ಬ್ಯಾಂಕ್, ಪರಿಣಾಮವೇನು?ಎಂಸಿಎಲ್‌ಆರ್ ಏರಿಸಿದ ಆಕ್ಸಿಸ್ ಬ್ಯಾಂಕ್, ಪರಿಣಾಮವೇನು?

 ಗ್ರಾಹಕರಿಗೆ ಮೂರು ಪ್ರಯೋಜನ

ಗ್ರಾಹಕರಿಗೆ ಮೂರು ಪ್ರಯೋಜನ

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡುವ ಗ್ರಾಹಕರು ಮೂರು ಪ್ರಯೋಜನಗಳನ್ನು ಪಡೆಯಬಹುದು. ಕಡಿಮೆ ಬಡ್ಡಿದರ, ಸುಲಭವಾದ ಲಿಕ್ವಿಡಿಟಿ ಮಾತ್ರವಲ್ಲದೆ ತೆರಿಗೆ ಪ್ರಯೋಜನ ಕೂಡಾ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹ ಸಾಲ ಪಡೆದವರಿಗೆ ಲಭ್ಯವಾಗಲಿದೆ. ನೀವು ಜಮೀನನ್ನು ಅಥವಾ ಮನೆಯನ್ನು ಕಟ್ಟಲು ಈ ಗೃಹ ಸಾಲವನ್ನು ಪಡೆಯಲಬಹುದು. ಹಾಗೆಯೇ ಹಳೆಯ ಅಥವಾ ಹೊಸ ಫ್ಲ್ಯಾಟ್ ಅನ್ನು ಖರೀದಿ ಮಾಡಲು ಕೂಡಾ ಈ ಗೃಹ ಸಾಲವನ್ನು ಪಡೆಯಬಹುದು. ನಿಮ್ಮ ಮನೆ ಅಥವಾ ಫ್ಲ್ಯಾಟ್‌ ಅನ್ನು ರಿನೋವೇಷನ್ ಮಾಡಲು ಕೂಡಾ ಸಾಲವನ್ನು ಪಡೆಯಬಹುದು.

 ಬಿಒಐ ಸ್ಟಾರ್ ಗೃಹ ಸಾಲದ ಮಾಹಿತಿ

ಬಿಒಐ ಸ್ಟಾರ್ ಗೃಹ ಸಾಲದ ಮಾಹಿತಿ

ಬ್ಯಾಂಕ್ ಆಫ್ ಇಂಡಿಯಾದ ಸ್ಟಾರ್ ಹೋಮ್ ಲೋನ್‌ನಲ್ಲಿ ಮರುಪಾವತಿ ಅವಧಿ 30 ವರ್ಷಗಳಾಗಿದೆ. ಹಾಗೆಯೇ ಇಎಂಐ ಬೇರೆ ಬೇರೆ ಅವಧಿಯಲ್ಲಿ ಇದೆ. ಇಎಂಐ ಪಾವತಿ ಮಾಡಿದಿದ್ದರೆ ಹಾಗೂ ಮೊದಲೇ ಅಧಿಕ ಮೊತ್ತ ಪಾವತಿ ಮಾಡುವುದಾದರೆ ಅದಕ್ಕೆ ಶುಲ್ಕವನ್ನು ವಿಧಿಸಲಾಗುತ್ತದೆ. ಕಡಿಮೆ ಬಡ್ಡಿದರವನ್ನು ವಿಧಿಸುವ ನಿಟ್ಟಿನಲ್ಲಿ ದೈನಂದಿನ ಆಧಾರದಲ್ಲಿ ಬಡ್ಡಿದರವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಹಾಗೆಯೇ ಡಿಸೆಂಬರ್ 31, 2022ರವರೆಗೆ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಪ್ರಕ್ರಿಯೆ ಶುಲ್ಕ ಇಲ್ಲದೆಯೇ ಸಾಲ ನೀಡುತ್ತದೆ. ಹಾಗೆಯೇ ಬ್ಯಾಂಕ್ ಆಫ್ ಇಂಡಿಯಾ ಫರ್ನಿಚರ್‌ಗಳಿಗಾಗಿ ಸಾಲವನ್ನು ನೀಡುತ್ತದೆ.

 ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಸಾಲದ ಬಡ್ಡಿದರ

ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಸಾಲದ ಬಡ್ಡಿದರ

ಬ್ಯಾಂಕ್ ಆಫ್ ಇಂಡಿಯಾದಂತೆ ಬ್ಯಾಂಕ್ ಆಫ್ ಮಹಾರಾಷ್ಟ್ರವು ಕೂಡಾ ಸಾಲದ ಬಡ್ಡಿದರವನ್ನು ಕಡಿತ ಮಾಡಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ವಿವಿಧ ಗೃಹ ಸಾಲ ಮತ್ತು ವೈಯಕ್ತಿಕ ಸಾಲದ ಮೇಲಿನ ಬಡ್ಡಿದರಗಳು ಗಣನೀಯವಾಗಿ ಇಳಿಸಿದೆ. ಗೃಹ ಸಾಲದ ಬಡ್ಡಿ ದರ 30 ರಿಂದ 70 ಬೇಸಿಸ್ ಪಾಯಿಂಟ್‌ವರೆಗೂ ಇಳಿಕೆಯಾಗಿದೆ. ಇನ್ನು ಪರ್ಸನಲ್ ಲೋನ್ ಮೇಲಿನ ಬಡ್ಡಿ ದರ ಕೂಡ 245 ಮೂಲಾಂಕಗಳಷ್ಟು ಕಡಿಮೆಯಾಗಿದೆ. ಅಂದರೆ ಬ್ಯಾಂಕ್ ಮಹಾರಾಷ್ಟ್ರದಲ್ಲಿ ಗೃಹ ಸಾಲದ ಮೇಲಿನ ವಾರ್ಷಿಕ ಬಡ್ಡಿ ದರ ಶೇ. 8ರಿಂದ ಆರಂಭವಾಗುತ್ತದೆ. ವೈಯಕ್ತಿಕ ಸಾಲಕ್ಕೆ ಶೇ. 11.35ರಷ್ಟಿದ್ದ ಬಡ್ಡಿ ದರವನ್ನು ಶೇ. 8.9ಕ್ಕೆ ಇಳಿಸಲಾಗಿದೆ. ಸಾಲ ಪಡೆಯುವವರ ಸಿಬಿಲ್ ಸ್ಕೋರ್ ಆಧಾರದಲ್ಲಿ ಇದು ನಿರ್ಧಾರವಾಗುತ್ತದೆ.

 ಎಸ್‌ಬಿಐ, ಎಚ್‌ಡಿಎಫ್‌ಸಿಯಲ್ಲಿ ಎಷ್ಟಿದೆ ಗೃಹ ಸಾಲ?

ಎಸ್‌ಬಿಐ, ಎಚ್‌ಡಿಎಫ್‌ಸಿಯಲ್ಲಿ ಎಷ್ಟಿದೆ ಗೃಹ ಸಾಲ?

ಎಸ್‌ಬಿಐ ಹಾಗೂ ಎಚ್‌ಡಿಎಫ್‌ಸಿ ಸುಮಾರು ಶೇಕಡ 8.40ಯಷ್ಟು ಬಡ್ಡಿದರವನ್ನು ನೀಡುತ್ತದೆ. ದೀಪಾವಳಿ ಹಬ್ಬದ ಆಫರ್‌ಗಳನ್ನು ಈ ಎರಡು ಪ್ರಮುಖ ಬ್ಯಾಂಕುಗಳು ಕೂಡಾ ನೀಡಿದೆ. ಎಸ್‌ಬಿಐ ಗೃಹ ಸಾಲದಲ್ಲಿ ಶೇಕಡ 0.25ರಷ್ಟು ಬಡ್ಡಿದರ ಇಳಿಕೆ ಮಾಡಿದೆ. ಟಾಪ್ ಅಪ್ ಸಾಲದ ಮೇಲೆ ಶೇಕಡ 0.15ರಷ್ಟು ಬಡ್ಡಿದರ ಕಡಿತ ಮಾಡಿದೆ. ಇನ್ನು ಆಸ್ತಿ ಮೇಲಿನ ಸಾಲಕ್ಕೆ ಶೇಕಡ 0.30ರಷ್ಟು ಬಡ್ಡಿದರ ಇಳಿಕೆ ಮಾಡಿದೆ. ಹಾಗೆಯೇ ಎಸ್‌ಬಿಐ ಜನವರಿ 31, 2023ರವರೆಗೆ ಸಾಲದ ಪ್ರಕ್ರಿಯೆ ಶುಲ್ಕವನ್ನು ಮನ್ನಾ ಮಾಡಿದೆ.

English summary

Festive Season: THESE Two Banks Offering Cheaper Loans Than SBI, HDFC

Amid rising interest rates, Bank of India and Bank of Maharashtra – have slashed their home loan rates during the festival season.
Story first published: Wednesday, October 19, 2022, 19:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X