For Quick Alerts
ALLOW NOTIFICATIONS  
For Daily Alerts

Gautam Adani : ಬೆಜೊಸ್‌, ಅರ್ನಾಲ್ಟ್‌ರನ್ನು ಹಿಂದಿಕ್ಕಿ ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ!

|

ಕಳೆದ ಒಂದು ತಿಂಗಳ ಹಿಂದೆ ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತೀ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದ ಅದಾನಿ ಗ್ರೂಪ್ಸ್‌ನ ಗೌತಮ್ ಅದಾನಿ ಈಗ ವಿಶ್ವದ 2ನೇ ಅತೀ ಶ್ರೀಮಂತ ವ್ಯಕ್ತಿ ಎಂಬ ಪಟ್ಟಕ್ಕೆ ಏರಿದ್ದಾರೆ. ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ವಿಶ್ವದ ಶ್ರೀಮಂತ ವ್ಯಕ್ತಿಗಳಾದ ಫ್ರಾನ್ಸ್‌ನ ಜೆಫ್ ಬೆಜೊಸ್‌ ಹಾಗೂ ಬರ್ನಾರ್ಡ್ ಅರ್ನಾಲ್ಟ್‌ರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.

ಅದಾನಿ ಗ್ರೂಪ್‌ನ ಚೇರ್‌ಮನ್‌ನ ಸಂಪತ್ತು ಶುಕ್ರವಾರ ಸುಮಾರು 5 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ 40 ಸಾವಿರ ಕೋಟಿ ರೂಪಾಯಿಯಷ್ಟು ಸಂಪತ್ತು ಹೆಚ್ಚಾಗಿದೆ. ಪ್ರಸ್ತುತ ಗೌತಮ್ ಅದಾನಿ ಸಂಪತ್ತು ಸುಮಾರು 155.7 ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ. ಪ್ರಸ್ತುತ ಗೌತಮ್ ಅದಾನಿ ವಿಶ್ವದಲ್ಲೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಟೆಸ್ಲಾ ಮುಖ್ಯಸ್ಥ ಎಲನ್ ಮಸ್ಕ್‌ಗಿಂತ ಕೇವಲ ಒಂದು ಸ್ಥಾನ ಕೆಳಕ್ಕೆ ಇದ್ದಾರೆ.

ಅದಾನಿ ಪೋರ್ಟ್ಸ್ ಷೇರು ಸಾರ್ವಕಾಲಿಕ ಏರಿಕೆ, ಹೂಡಿಕೆದಾರರ ಸಂಪತ್ತು 3 ಪಟ್ಟು ಜಿಗಿತಅದಾನಿ ಪೋರ್ಟ್ಸ್ ಷೇರು ಸಾರ್ವಕಾಲಿಕ ಏರಿಕೆ, ಹೂಡಿಕೆದಾರರ ಸಂಪತ್ತು 3 ಪಟ್ಟು ಜಿಗಿತ

ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಾದ ಎಲನ್ ಮಸ್ಕ್ ನಿವ್ವಳ ಆದಾಯ ಸುಮಾರು 273.5 ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ. ಇನ್ನು ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ನ ಸ್ಟಾಕ್‌ಗಳಾದ ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಪವರ್, ಅದಾನಿ ವಿಲ್ಮರ್‌ ಮೊದಲಾದವು ಭಾರೀ ಏರಿಕೆಯನ್ನು ಕಂಡಿದೆ. ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ..

 ಬೆಜೊಸ್‌, ಅರ್ನಾಲ್ಟ್‌ರನ್ನು ಹಿಂದಿಕ್ಕಿದ ಅದಾನಿ

ಬೆಜೊಸ್‌, ಅರ್ನಾಲ್ಟ್‌ರನ್ನು ಹಿಂದಿಕ್ಕಿದ ಅದಾನಿ

ಅದಾನಿ ಗ್ರೂಪ್‌ನ ಸ್ಟಾಕ್‌ಗಳು ಭಾರೀ ಏರಿಕೆಯಾಗಿರುವುದು ಗೌತಮ್ ಅದಾನಿಯನ್ನು ಫೋರ್ಬ್ಸ್ ಪಟ್ಟಿಯಲ್ಲಿ ಎಲ್‌ವಿಎಂಎಚ್‌ ಸಿಇಒ ಬರ್ನಾರ್ಡ್ ಅರ್ನಾಲ್ಟ್‌ ಹಾಗೂ ಅಮೆಜಾನ್ ಸ್ಥಾಪಕ ಜೆಫ್ ಬೆಜೊಸ್‌ಗಿಂತ ಮೆಲಕ್ಕೆ ಎತ್ತಿದೆ. ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ಬರ್ನಾರ್ಡ್ ಅರ್ನಾಲ್ಟ್‌ ಈಗ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್‌ ನಿವ್ವಳ ಆದಾಯ 155.2 ಬಿಲಿಯನ್ ಡಾಲರ್ ಆಗಿದೆ. ಇನ್ನು ಜೆಫ್ ಬೆಜೊಸ್‌ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ಜೆಫ್ ಬೆಜೊಸ್‌ ಪ್ರಸ್ತುತ ಸಂಪತ್ತು 149.7 ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ.

ಬಿಲ್‌ಗೇಟ್ಸ್‌ ಹಿಂದಿಕ್ಕಿ ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ!ಬಿಲ್‌ಗೇಟ್ಸ್‌ ಹಿಂದಿಕ್ಕಿ ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ!

 ಅದಾನಿ ಗ್ರೂಪ್ ಸ್ಟಾಕ್ ಏರಿಕೆ

ಅದಾನಿ ಗ್ರೂಪ್ ಸ್ಟಾಕ್ ಏರಿಕೆ

ಗುರುವಾರ ಸ್ಥಳೀಯ ಸ್ಟಾಕ್ ಮಾರುಕಟ್ಟೆಯು ಕುಸಿತವನ್ನು ಕಂಡಿದ್ದರು ಕೂಡಾ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಸ್ಟಾಕ್‌ಗಳು ಮಾತ್ರ ಏರಿಕೆ ಕಂಡಿದೆ. ಅದಾನಿ ಗ್ರೂಪ್‌ನ ಲೀಸ್ಟ್‌ ಆದ ಏಳು ಸಂಸ್ಥೆಗಳು ಕೂಡಾ ಗುರುವಾರ ಲಾಭವನ್ನು ಕಂಡಿದೆ. ಅದಾನಿ ಎಂಟರ್‌ಪ್ರೈಸಸ್‌ ಸ್ಟಾಕ್ ಸುಮಾರು ಶೇಕಡ 4.97ರಷ್ಟು ಏರಿಕೆಯಾಗಿದೆ. ಅದಾನಿ ಟ್ರಾನ್ಸ್‌ಮಿಷನ್ ಸ್ಟಾಕ್ ಶೇಕಡ 3.27ರಷ್ಟು ಹೆಚ್ಚಾಗಿದೆ. ಅದಾನಿ ಟೋಟಲ್ ಗ್ಯಾಸ್ ಸ್ಟಾಕ್ ಶೇಕಡ 1.14ರಷ್ಟು ಮೇಲಕ್ಕೇರಿದೆ. ಇನ್ನು ಅದಾನಿ ಗ್ರೀನ್ ಎನರ್ಜಿ ಸ್ಟಾಕ್ ಶೇಕಡ 2ರಷ್ಟು ಏರಿಕೆಯಾಗಿದೆ. ಅದಾನಿ ಪೋರ್ಟ್ಸ್ ಸ್ಟಾಕ್ ಶೇಕಡ 2.21ರಷ್ಟು ಹೆಚ್ಚಾಗಿದೆ. ಅದಾನಿ ಪವರ್ ಸ್ಟಾಕ್ ಶೇಕಡ 3.45ರಷ್ಟು ಏರಿದರೆ, ಅದಾನಿ ವಿಲ್ಮರ್ ಸ್ಟಾಕ್ ಶೇಕಡ 3.03ರಷ್ಟು ಲಾಭವನ್ನು ದಾಖಲಿಸಿದೆ. ಈ ಏಳು ಸ್ಟಾಕ್‌ಗಳ ಮಾರುಕಟ್ಟೆ ಮೌಲ್ಯವು ಗುರುವಾರ 20.11 ಲಕ್ಷ ಕೋಟಿ ರೂಪಾಯಿ ಆಗಿತ್ತು.

 ಬ್ಲೂಬರ್ಗ್ ಬಿಲಿಯನೇರ್ ಪಟ್ಟಿಯಲ್ಲಿ ಅದಾನಿ

ಬ್ಲೂಬರ್ಗ್ ಬಿಲಿಯನೇರ್ ಪಟ್ಟಿಯಲ್ಲಿ ಅದಾನಿ

ಇನ್ನು ಬ್ಲೂಬರ್ಗ್ ಬಿಲಿಯನೇರ್ ಪಟ್ಟಿಯ ಪ್ರಕಾರ ಉದ್ಯೋಗದ ಲೆಕ್ಕಾಚಾರದಲ್ಲಿ ನೋಡಿದಾಗ ಗೌತಮ್ ಅದಾನಿ ವಿಶ್ವದಲ್ಲೇ ಎರಡನೇ ಶ್ರೀಮಂತ ವ್ಯಕ್ತಿಯಾಗಲು ಅಮೆಜಾನ್‌ನ ಜೆಫ್ ಬೆಜೊಸ್‌ಗಿಂತ 1 ಬಿಲಿಯನ್ ಡಾಲರ್ ಕೊರತೆ ಹೊಂದಿದ್ದಾರೆ. ಉದ್ಯೋಗದ ಲೆಕ್ಕಾಚಾರದಲ್ಲಿನ ಸಂಪತ್ತಿನ ಪಟ್ಟಿಯಲ್ಲಿ ಅದಾನಿ ಜೆಫ್ ಬೆಜೊಸ್‌ರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದರೆ, ಈ ಸಾಧನೆಯನ್ನು ಮಾಡಿದ ಏಷ್ಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಗಳಿಸಲಿದ್ದಾರೆ. ಆಗಸ್ಟ್ 30ರಂದು ಈ ಪಟ್ಟಿಯಲ್ಲಿ ಬರ್ನಾರ್ಡ್ ಅರ್ನಾಲ್ಟ್‌ರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದ ಮೊದಲ ಏಷ್ಯಾದ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

 2022: ಗೌತಮ್ ಅದಾನಿಗೆ ಅದ್ಭುತ ವರ್ಷ

2022: ಗೌತಮ್ ಅದಾನಿಗೆ ಅದ್ಭುತ ವರ್ಷ

2022 ಗೌತಮ್ ಅದಾನಿಗೆ ಅದ್ಭುತ ವರ್ಷವಾದಂತಿದೆ. ಗೌತಮ್ ಅದಾನಿ ಈ ವರ್ಷದ ಫೆಬ್ರವರಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್‌ಮನ್ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಅತೀ ಶ್ರೀಮಂತ ವ್ಯಕ್ತಿ ಎಂಬ ಪಟ್ಟಕ್ಕೆ ಏರಿದ್ದಾರೆ. ಇನ್ನು ಜುಲೈನಲ್ಲಿ ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತೀ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದಾರೆ. ಆಗಸ್ಟ್ 30ರಂದು ಉದ್ಯೋಗದ ಲೆಕ್ಕಾಚಾರದಲ್ಲಿ ಬ್ಲೂಬರ್ಗ್ ಬಿಲಿಯನೇರ್ ಪಟ್ಟಿಯ ಪ್ರಕಾರ ಬರ್ನಾರ್ಡ್ ಅರ್ನಾಲ್ಟ್‌ರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಿದ್ದಾರೆ.

English summary

Forbes Rich List: Gautam Adani Becomes the World's 2nd Wealthiest Man, Here's Details

Forbes Rich List: Gautam Adani becomes the world's 2nd wealthiest man, Overtakes Bernard Arnault, Jeff Bezos.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X