For Quick Alerts
ALLOW NOTIFICATIONS  
For Daily Alerts

ಪ್ರತಿ ದಿನ 411 ರೂ. ಹೂಡಿಕೆ ಮಾಡಿ 66 ಲಕ್ಷ ಪಡೆಯುವುದು ಹೇಗೆ?

|

ಹೂಡಿಕೆ ಎಂದಾಗ ನಾವು ಎಂದಿಗೂ ಕೂಡಾ ಕಡಿಮೆ ಹೂಡಿಕೆ ಮಾಡಿ ಅಧಿಕ ರಿಟರ್ನ್ ಪಡೆಯಲು ಎಲ್ಲಿ ಸಾಧ್ಯವಾಗಲಿದೆ ಎಂಬುವುದನ್ನು ನೋಡುತ್ತೇವೆ. ಹಾಗೆಯೇ ಇದರೊಂದಿಗೆ ನಾವು ಹೂಡಿಕೆ ಮಾಡಿದ ಹಣ ಎಷ್ಟು ಸುರಕ್ಷಿತವಾಗಿರುತ್ತದೆ ಎಂಬುವುದನ್ನು ಕೂಡಾ ನೋಡುತ್ತೇವೆ. ನಾವು ಕಷ್ಟಪಟ್ಟು ದುಡಿದ ಹಣ ನಮ್ಮ ಕೈತಪ್ಪಿ ಹೋಗದಂತೆ ನೋಡುವುದು ಮುಖ್ಯವಲ್ಲವೇ? ಆದರೆ ನಾವು ಕಡಿಮೆ ಹೂಡಿಕೆ ಮಾಡಿ ಅಧಿಕ ರಿಟರ್ನ್ ಪಡೆಯುವ ಸುರಕ್ಷಿತ ಹೂಡಿಕೆ ಯೋಜನೆಯನ್ನು ನಾವಿಲ್ಲಿ ವಿವರಿಸಿದ್ದೇವೆ.

 

ಹೆಣ್ಣು ಮಕ್ಕಳ ಪೋಷಕರಿಗೆ, ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಖಾತೆ (ಎಸ್‌ಎಸ್‌ಎ) ಯೋಜನೆಯು ಸಹಕಾರಿಯಾಗಿದೆ. ಇದರಲ್ಲಿ ನಾವು ಕಡಿಮೆ ಹೂಡಿಕೆ ಮಾಡಿ ಅಧಿಕ ರಿಟರ್ನ್ ಪಡೆಯಲು ಸಾಧ್ಯವಾಗಲಿದೆ. ಹತ್ತು ವರ್ಷದವರೆಗೆ ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಲು ಅವಕಾಶ ಈ ಯೋಜನೆಯಲ್ಲಿ ಇದೆ.

ಪೋಸ್ಟ್ ಆಫೀಸ್ ಅಥವಾ ಅಧಿಕೃತ ಬ್ಯಾಂಕ್‌ನಲ್ಲಿ ನಾವು ಈ ಖಾತೆಯನ್ನು ತೆರೆಯಲು ಸಾಧ್ಯವಾಗಲಿದೆ. ಈ ಯೋಜನೆಯಲ್ಲಿ ವರ್ಷಕ್ಕೆ ಶೇಕಡ 7.6ರಷ್ಟು ಬಡ್ಡಿಯನ್ನು ಪಡೆಯಲು ಸಾಧ್ಯವಾಗಲಿದೆ. (ಏಪ್ರಿಲ್ 1, 2020 ರಿಂದ ಜಾರಿಗೆ ಬರುವಂತೆ). ಬಡ್ಡಿಯನ್ನು ವಾರ್ಷಿಕವಾಗಿ ಲೆಕ್ಕ ಹಾಕಲಾಗುತ್ತದೆ. ಈ ಯೋಜನೆಯ ಬಗ್ಗೆ ಹಾಗೂ ನಾವು ಪ್ರತಿ ದಿನ 411 ರೂಪಾಯಿ ಹೂಡಿಕೆ ಮಾಡಿ 60 ಲಕ್ಷ ರೂಪಾಯಿ ಪಡೆಯುವುದು ಹೇಗೆ ಎಂಬ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ ಮುಂದೆ ಓದಿ....

 ಕನಿಷ್ಠ ಎಷ್ಟು ಹೂಡಿಕೆ ಮಾಡಲು ಅವಕಾಶ

ಕನಿಷ್ಠ ಎಷ್ಟು ಹೂಡಿಕೆ ಮಾಡಲು ಅವಕಾಶ

ಸಾಮಾನ್ಯವಾಗಿ ಎಲ್ಲ ಹೂಡಿಕೆ ಯೋಜನೆಗಳಲ್ಲಿ ನಾವು ಕನಿಷ್ಠ ಎಷ್ಟು ಹೂಡಿಕೆ ಮಾಡಬೇಕು ಎಂಬ ನಿಯಮ ಇರುತ್ತದೆ. ಅದರಂತೆಯೇ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ಪ್ರತಿ ದಿನ ಕನಿಷ್ಠ 250 ರೂಪಾಯಿಯನ್ನು ಹೂಡಿಕೆ ಮಾಡಬಹುದು. ಹಾಗೆಯೇ ಗರಿಷ್ಠ 1,50,000 ರೂಪಾಯಿವರೆಗೆ ಹೂಡಿಕೆ ಮಾಡುವ ಅವಕಾಶವಿದೆ. ಹಾಗೆಯೇ ಯಾವುದೇ ಹೆಚ್ಚುವರಿ ಠೇವಣಿ ಮಾಡಿದರೆ ಅದನ್ನು 50ರಲ್ಲಿ ಗುಣಿಸಿ ಲೆಕ್ಕಾಚಾರ ಮಾಡಲಾಗುತ್ತದೆ.

 ದಿನಕ್ಕೆ 411 ರೂಪಾಯಿ ಹೂಡಿಕೆ ಮಾಡಿ 66 ಲಕ್ಷ ಗಳಿಸುವುದು ಹೇಗೆ?

ದಿನಕ್ಕೆ 411 ರೂಪಾಯಿ ಹೂಡಿಕೆ ಮಾಡಿ 66 ಲಕ್ಷ ಗಳಿಸುವುದು ಹೇಗೆ?

ಯಾರಾದರೂ 15 ವರ್ಷಗಳವರೆಗೆ ಪ್ರತಿ ವರ್ಷ ಪೂರ್ಣ 1.5 ಲಕ್ಷ ರೂಪಾಯಿಗಳನ್ನು ತೆರಿಗೆ ಮುಕ್ತವಾಗಿ ಹೂಡಿಕೆ ಮಾಡಿದರೆ, ಅಂತಿಮವಾಗಿ ಹೂಡಿಕೆಯು 22,500,000 ರೂಪಾಯಿ ಆಗುತ್ತದೆ. ಅಂದರೆ ಪ್ರತಿ ದಿನ ನೀವು 411 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಹುಡುಗಿಗೆ 21 ವರ್ಷ ತುಂಬಿದಾಗ, 65,93,071 ರೂಪಾಯಿ (22,50,000 ಜೊತೆಗೆ 43,43,071 ಬಡ್ಡಿ) ಮೆಚ್ಯೂರಿಟಿ ಪಾವತಿಯನ್ನು ಸ್ವೀಕರಿಸುತ್ತಾಳೆ.

 ಸುಕನ್ಯಾ ಸಮೃದ್ಧಿ ಖಾತೆ-ತೆರಿಗೆ ಪ್ರಯೋಜನ
 

ಸುಕನ್ಯಾ ಸಮೃದ್ಧಿ ಖಾತೆ-ತೆರಿಗೆ ಪ್ರಯೋಜನ

ಚಂದಾದಾರರಿಗೆ ನಾಲ್ಕು ಪ್ರಮುಖ ಅನುಕೂಲಗಳು ಇಲ್ಲಿ ಲಭ್ಯವಾಗಲಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಹೂಡಿಕೆಗೆ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ರೂಪಾಯಿ 1.5 ಲಕ್ಷದವರೆಗೆ ವಾರ್ಷಿಕ ಕಡಿತಕ್ಕೆ ಅನುಮಿತಿ ಇದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10 ರ ಪ್ರಕಾರ, ಸಂಗ್ರಹವಾದ ಬಡ್ಡಿಯು ತೆರಿಗೆಗೆ ಒಳಪಡುವುದಿಲ್ಲ. ಮುಕ್ತಾಯ ಅಥವಾ ಹಿಂಪಡೆಯು ಮೊತ್ತದ ಮೇಲೆಯೂ ತೆರಿಗೆ ವಿನಾಯಿತಿ ಇದೆ.

English summary

Sukanya Samriddhi Account: Get Rs 66 lakh by investing Rs 411 per day, explained in kannada

Sukanya Samriddhi Account: Get Rs 66 Lakh by Investing Rs 411 Per Day, Here's Explained in Kannada, read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X