For Quick Alerts
ALLOW NOTIFICATIONS  
For Daily Alerts

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಶೀಘ್ರವೇ ಸಂಬಳ ಹೆಚ್ಚಳ!

|

ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ ಇದೆ. ಸರ್ಕಾರ ಶೀಘ್ರದಲ್ಲೇ ಅವರ ತುಟ್ಟಿಭತ್ಯೆಯನ್ನು (ಡಿಎ) ಹೆಚ್ಚಿಸುವ ಸಾಧ್ಯತೆ ಇದೆ. ಸರ್ಕಾರ ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಿಸುತ್ತಿದೆ. ಜನವರಿಯಲ್ಲಿ ಸರ್ಕಾರ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಿದೆ. ಈಗ ಮತ್ತೆ ಹೆಚ್ಚಳ ಮಾಡುವ ಸಾಧ್ಯತೆ ಇದೆ.

 

ಡಿಎ ಹೆಚ್ಚಳ ಕುರಿತು ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಜುಲೈ 1ರಿಂದ ನೌಕರರು ಮತ್ತು ಪಿಂಚಣಿದಾರರ ಡಿಎ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ವರ್ಷದ ಜನವರಿಯಲ್ಲಿ, ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು ಶೇಕಡ 31ರಿಂದ ಶೇಕಡ 34ಕ್ಕೆ ಹೆಚ್ಚಿಸಿದೆ. ಡಿಎ ಹೆಚ್ಚಳದಿಂದ ಸುಮಾರು 50 ಲಕ್ಷ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ.

 

 ಗುಡ್‌ನ್ಯೂಸ್‌: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಏರಿಕೆ ಗುಡ್‌ನ್ಯೂಸ್‌: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಏರಿಕೆ

ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಹೆಚ್ಚಳದ ನಂತರ ಡಿಎ ಶೇ.4ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರಸ್ತುತ, ನೌಕರರು ಶೇಕಡ 34 ಡಿಎ ಪಡೆಯುತ್ತಿದ್ದಾರೆ. ಈಗ ಶೇಕಡ ರಷ್ಟು ಏರಿಕೆಯಾದರೆ ಕೇಂದ್ರ ಸರ್ಕಾರದ ನೌಕರರು ಶೇಕಡ 38ರಷ್ಟು ಡಿಎ ಪಡೆಯಲಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ನೀಡಿದರೆ ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ.

 ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಶೀಘ್ರವೇ ಸಂಬಳ ಹೆಚ್ಚಳ!

ಎಷ್ಟು ಸಂಬಳ ಹೆಚ್ಚಾಗುತ್ತದೆ?

ಮೂಲ ವೇತನ ರೂ 56,900 ಆಗಿರುವ ನೌಕರರು, ತುಟ್ಟಿ ಭತ್ಯೆ ಶೇಕಡ 38 ಆಗಿದ್ದರೆ, ಅವರು ರೂ 21,622 ರ ಡಿಎ ಪಡೆಯುತ್ತಾರೆ. ಪ್ರಸ್ತುತ ಶೇ.34ರ ದರದಲ್ಲಿ 19,346 ರೂ. ಡಿಎ ಪಡೆಯುತ್ತಿದ್ದಾರೆ. ಶೇ.4ರಷ್ಟು ಡಿಎ ಹೆಚ್ಚಳದಿಂದ ವೇತನದಲ್ಲಿ 2,276 ರೂಪಾಯಿ ಹೆಚ್ಚಳವಾಗಲಿದೆ. ಅಂದರೆ ವಾರ್ಷಿಕ ಸುಮಾರು 27,312 ರೂಪಾಯಿ ಹೆಚ್ಚಳವಾಗಲಿದೆ. ಸರ್ಕಾರದ ಡಿಎ ಹೆಚ್ಚಳದಿಂದ ಸುಮಾರು 50 ಲಕ್ಷ ನೌಕರರು ಪ್ರಯೋಜನ ಪಡೆಯಲಿದ್ದಾರೆ.

 ಮಕ್ಕಳ ಶಿಕ್ಷಣ ಭತ್ಯೆಯಡಿ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಮತ್ತೆ ವೇತನ ಹೆಚ್ಚಳ ಮಕ್ಕಳ ಶಿಕ್ಷಣ ಭತ್ಯೆಯಡಿ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಮತ್ತೆ ವೇತನ ಹೆಚ್ಚಳ

ಉತ್ತರಾಖಂಡ ಸರ್ಕಾರದಿಂದ ಡಿಎ ಹೆಚ್ಚಳ

ಉತ್ತರಾಖಂಡ ಸರ್ಕಾರವು ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು (ಡಿಎ) ಶೇಕಡ 3ರಷ್ಟು ಹೆಚ್ಚಿಸಿದೆ. ಡಿಎ ಹೆಚ್ಚಳ ಜುಲೈ 1 ರಿಂದ ಜಾರಿಗೆ ಬರಲಿದೆ. ಇತ್ತೀಚಿನ ಹೆಚ್ಚಳದ ನಂತರ, ಉತ್ತರಾಖಂಡ ರಾಜ್ಯ ಸರ್ಕಾರಿ ನೌಕರರು ಈಗ ಶೇಕಡ 31ರಷ್ಟು ಡಿಎ ಪಡೆಯುತ್ತಾರೆ. ತುಟ್ಟಿಭತ್ಯೆ ಹೆಚ್ಚಳವು ಉತ್ತರಾಖಂಡದ ಸುಮಾರು 2.5 ಲಕ್ಷ ರಾಜ್ಯ ಸರ್ಕಾರಿ ನೌಕರರಿಗೆ ಪ್ರಯೋಜನವನ್ನು ನೀಡುತ್ತದೆ.

English summary

Government employees to get DA hike soon! See how much will increase

7th Pay Commission: Government employees to get DA hike soon! See how much salary will increase.
Story first published: Thursday, June 2, 2022, 21:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X