For Quick Alerts
ALLOW NOTIFICATIONS  
For Daily Alerts

ಗಮನಿಸಿ: ಪಿಪಿಎಫ್, ಎನ್‌ಎಸ್‌ಸಿ ಬಡ್ಡಿದರ ಸ್ಥಿರ

|

ಪಿಪಿಎಫ್, ಎನ್‌ಎಸ್‌ಸಿ ಬಡ್ಡಿದರವು ಶೀಘ್ರವೇ ಏರಿಕೆಯಾಗುವ ನಿರೀಕ್ಷೆಯಲ್ಲಿದೆ ಜನರಿಗೆ ನಿರಾಶೆ ಉಂಟಾಗಿದೆ. ಸರ್ಕಾರವು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹಾಗೂ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (ಎನ್‌ಎಸ್‌ಸಿ) ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿಲ್ಲ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವು ಸ್ಥಿರವಾಗಿದೆ.

ತ್ರೈಮಾಸಿಕ ಆಧಾರದಲ್ಲಿ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡುತ್ತದೆ. 2011ರ ಗೋಪಿನಾಥ್ ಸಮಿತಿಯು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವು ಅದೇ ಸಂದರ್ಭದ ಸರ್ಕಾರಿ ಸೆಕ್ಯುರಿಟಿಗಳಿಗಿಂತ ಸುಮಾರು 25-100 ಮೂಲಾಂಕಗಳು ಹೆಚ್ಚಳವಿರಬೇಕು ಎಂದು ಹೇಳಿದೆ.

ಸಿಹಿಸುದ್ದಿ: ಪಿಪಿಎಫ್, ಸುಕನ್ಯ ಯೋಜನೆ, ಎನ್‌ಎಸ್‌ಸಿ ಬಡ್ಡಿದರ ಶೀಘ್ರ ಏರಿಕೆಸಿಹಿಸುದ್ದಿ: ಪಿಪಿಎಫ್, ಸುಕನ್ಯ ಯೋಜನೆ, ಎನ್‌ಎಸ್‌ಸಿ ಬಡ್ಡಿದರ ಶೀಘ್ರ ಏರಿಕೆ

ಕಳೆದ ಒಂದು ವರ್ಷದಲ್ಲಿ ಸರ್ಕಾರಿ ಬಾಂಡ್‌ಗಳ ಬಡ್ಡಿದರವು ತೀವ್ರ ಏರಿಕೆಯಾಗಿದೆ. ಈ ನಡುವೆ ಈ ಬಾಂಡ್‌ಗಳಿಗೆ ಲಿಂಕ್ ಆಗಿರುವ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವು ಏರಿಕೆ ಮಾಡುವ ನಿರೀಕ್ಷೆ ಇತ್ತು. ಆದರೆ ಸರ್ಕಾರ ಯಥಾಸ್ಥಿತಿ ಕಾಯ್ದುಕೊಂಡಿದೆ.

ಗಮನಿಸಿ: ಪಿಪಿಎಫ್, ಎನ್‌ಎಸ್‌ಸಿ ಬಡ್ಡಿದರ ಸ್ಥಿರ

2021ರ ಮಾರ್ಚ್‌ನಲ್ಲಿ ಬಡ್ಡಿದರವು ಇಳಿಕೆಯಾಗಿದೆ. ಪಿಪಿಎಫ್ ಬಡ್ಡಿದರವನ್ನು ಶೇಕಡ 6.4ಕ್ಕೆ ಇಳಿಕೆ ಮಾಡಲಾಗಿದ್ದರೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಬಡ್ಡಿದರವನ್ನು ಶೇಕಡ 6.5ಕ್ಕೆ ಇಳಿಸಲಾಗಿದೆ. ಇನ್ನು ಸುಕನ್ಯ ಸಮೃದ್ಧಿ ಯೋಜನೆ ಬಡ್ಡಿದರವನ್ನು ಶೇಕಡ 6.7ಕ್ಕೆ ಇಳಿಸಲಾಗಿದೆ. ಆ ಬಳಿಕ ಸಣ್ಣ ಉಳಿತಾಯ ಯೋಜನೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.

ಒಂದು ವರ್ಷದ ಡೆಪಾಸಿಟ್ ಯೋಜನೆ ಮೇಲಿನ ಬಡ್ಡಿದರವು ಶೇಕಡ 5.5ರಷ್ಟೇ ಉಳಿಯಲಿದೆ. ಇನ್ನು ಹೆಣ್ಣು ಮಕ್ಕಳಿಗಾಗಿ ಇರುವ ಸುಕನ್ಯ ಸಮೃದ್ಧಿ ಯೋಜನೆ ಬಡ್ಡಿದರವು ಶೇಕಡ 7.6ರಷ್ಟಿದೆ. ಇತ್ತೀಚೆಗೆ ಪಿಎಫ್ ಬಡ್ಡಿದರವನ್ನು ಶೇಕಡ 8.5ರಿಂದ ಶೇಕಡ 8.1ಕ್ಕೆ ಇಳಿಕೆ ಮಾಡಲಾಗಿದೆ.

ಅಂಚೆ ಕಚೇರಿ ಯೋಜನೆಗಳ ಬಡ್ಡಿದರ ಎಷ್ಟು ಹೆಚ್ಚಾಗುವ ನಿರೀಕ್ಷೆಯಿತ್ತು?

ಪಿಪಿಎಫ್: 50 ಬಿಪಿಎಸ್, ಪ್ರಸ್ತುತ ಬಡ್ಡಿದರ ಶೇಕಡ 7.10, ನಿರೀಕ್ಷಿತ ಬಡ್ಡಿದರ ಶೇಕಡ 7.81
ಸುಕನ್ಯ ಸಮೃದ್ಧಿ ಯೋಜನೆ: 75 ಬಿಪಿಎಸ್, ಪ್ರಸ್ತುತ ಬಡ್ಡಿದರ ಶೇಕಡ 7.60, ನಿರೀಕ್ಷಿತ ಬಡ್ಡಿದರ ಶೇಕಡ 8.06
ಹಿರಿಯ ನಾಗರಿಕರ ಉಳಿತಾಯ ಯೋಜನೆ: 100 ಬಿಪಿಎಸ್, ಪ್ರಸ್ತುತ ಬಡ್ಡಿದರ ಶೇಕಡ 7.40, ನಿರೀಕ್ಷಿತ ಬಡ್ಡಿದರ ಶೇಕಡ 8.31

English summary

Govt keeps small saving interest rates unchanged for Jul-Sep quarter

Govt keeps small saving interest rates unchanged for Jul-Sep quarter, Here's a Full details.
Story first published: Thursday, June 30, 2022, 20:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X