For Quick Alerts
ALLOW NOTIFICATIONS  
For Daily Alerts

ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 30 ನಿಮಿಷಗಳ 'ಎಕ್ಸ್‌ಪ್ರೆಸ್ ಕಾರ್ ಲೋನ್ಸ್' ಪ್ರಾರಂಭ

|

ಖಾಸಗಿ ವಲಯದ ಬ್ಯಾಂಕ್ ಎಚ್‌ಡಿಎಫ್‌ಸಿ ತನ್ನ ಅಸ್ತಿತ್ವದಲ್ಲಿರುವ ಗ್ರಾಹಕರು ಮತ್ತು ಹೊಸ ಗ್ರಾಹಕರಿಗಾಗಿ 30 ನಿಮಿಷಗಳ 'ಎಕ್ಸ್‌ಪ್ರೆಸ್ ಕಾರ್ ಲೋನ್ಸ್' ಅನ್ನು ಪ್ರಾರಂಭ ಮಾಡಿದೆ. ಕಾರು ಖರೀದಿದಾರರು 20 ಲಕ್ಷದವರೆಗೆ ಅರ್ಜಿ ಸಲ್ಲಿಸಬಹುದು. ಸಾಲದ ಮೊತ್ತವನ್ನು 30-ನಿಮಿಷದೊಳಗೆ ಕಾರು ಖರೀದಿದಾರರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.

ಸುಮಾರು 20 ರಿಂದ 30 ಶೇಕಡದಷ್ಟು ಗ್ರಾಹಕರು ಈ ಹೊಸ ಸೌಲಭ್ಯವನ್ನು ರೂ 20 ಲಕ್ಷದವರೆಗಿನ ಸಾಲ ಪಡೆಯುತ್ತಾರೆ ಎಂದು ಬ್ಯಾಂಕ್ ನಿರೀಕ್ಷೆ ಹೊಂದಿದೆ. ಎಕ್ಸ್‌ಪ್ರೆಸ್ ಸಾಲ ಸೌಲಭ್ಯವು ಪ್ರಸ್ತುತ ನಾಲ್ಕು-ಚಕ್ರ ವಾಹನಗಳಿಗೆ ಲಭ್ಯವಿದ್ದು, ಶೀಘ್ರದಲ್ಲೇ ದ್ವಿಚಕ್ರ ವಾಹನಗಳಿಗೂ ಲಭ್ಯವಾಗಲಿದೆ.

ಸೀಟ್ ಬೆಲ್ಟ್ ದೋಷ: 817000 ಇಲೆಕ್ಟ್ರಿಕ್ ವಾಹನಗಳನ್ನು ಹಿಂಪಡೆಯಲು ಮುಂದಾದ ಟೆಸ್ಲಾಸೀಟ್ ಬೆಲ್ಟ್ ದೋಷ: 817000 ಇಲೆಕ್ಟ್ರಿಕ್ ವಾಹನಗಳನ್ನು ಹಿಂಪಡೆಯಲು ಮುಂದಾದ ಟೆಸ್ಲಾ

ಎಚ್‌ಡಿಎಫ್‌ಸಿ ಬ್ಯಾಂಕ್ ಕಾರು ಖರೀದಿದಾರರಿಗೆ ಸಮಗ್ರ, ವೇಗದ, ಹೆಚ್ಚು ಅನುಕೂಲಕರ ಮತ್ತು ಅಂತರ್ಗತ ಡಿಜಿಟಲ್ ತಂತ್ರದ ಮೂಲಕ ಕಾರಿನ ಸಾಲ ನೀಡುತ್ತದೆ. ಇದು ಕಾರು ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ದೇಶದಾದ್ಯಂತ ಕಾರು ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

 ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 'ಎಕ್ಸ್‌ಪ್ರೆಸ್ ಕಾರ್ ಲೋನ್ಸ್'

ಎಂಡ್-ಟು-ಎಂಡ್ ಡಿಜಿಟಲ್ ಕಾರ್ ಲೋನ್ ಸಹಾಯ

"ಈಗ ನಾವು ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಗೆ ಎಂಡ್-ಟು-ಎಂಡ್ ಡಿಜಿಟಲ್ ಕಾರ್ ಲೋನ್ ಸಹಾಯವನ್ನು ಪ್ರಾರಂಭ ಮಾಡುವ ಮೂಲಕ ಹೊಸ ಹೆಜ್ಜೆಯನ್ನು ಇಡುತ್ತಿದ್ದೇವೆ. ಈ ಸಾಲ ವ್ಯವಸ್ಥೆಯು ನಮ್ಮ ಎಲ್ಲಾ ಶಾಖೆಗಳು, ಡೀಲರ್‌ಶಿಪ್‌ಗಳು ಮತ್ತು ಅಂತಿಮವಾಗಿ ಮೂರನೇ ವ್ಯಕ್ತಿಯ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ," ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸ್ಥಳೀಯ ಮುಖ್ಯಸ್ಥ ಅರವಿಂದ್ ಕಪಿಲ್ ಹೇಳಿದರು.

"ಆಟೋಮೋಟಿವ್ ಪರಿಸರ ವ್ಯವಸ್ಥೆಯು ವಿಕಸನಗೊಂಡಿದ್ದರೂ, ಗ್ರಾಹಕರ ಅನುಭವವನ್ನು ಪರಿವರ್ತಿಸುವ ಮೂಲಕ ಗ್ರಾಹಕರಿಗೆ ಹೊಸ ಅನುಭವ ನೀಡಲಾಗುತ್ತದೆ. ವಿಶೇಷವಾಗಿ ಅರೆ-ನಗರ ಮತ್ತು ಗ್ರಾಮೀಣ ಭಾರತದಲ್ಲಿನ ಜನರಿಗೆ ಹೊಸ ಅವಕಾಶ ಇದಾಗಿದೆ," ಎಂದು ಕೂಡಾ ತಿಳಿಸಿದ್ದಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಡಿಜಿಟಲ್ ನಮಗೆ ಜೀವನ ವಿಧಾನವಾಗಿದೆ. ಇದು ನಮ್ಮ ಬೆಳವಣಿಗೆಯ ಪಥವನ್ನು ಬದಲಾವಣೆ ಮಾಡಬಹುದು ಎಂದು ನಾವು ಬಲವಾಗಿ ನಂಬುತ್ತೇವೆ ಎಂದು ಹೇಳಿದರು. ಭಾರತೀಯ ವಾಹನೋದ್ಯಮವು ಮುಂದಿನ 5-7 ವರ್ಷಗಳಲ್ಲಿ ಪ್ರತಿ ವರ್ಷ 35 ಮಿಲಿಯನ್ ಹೊಸ ವಾಹನ ಮಾರಾಟದೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ಉದ್ಯಮವಾಗಲು ಸಿದ್ಧವಾಗಿದೆ. ಸುಮಾರು ಒಂದು ದಶಕದಲ್ಲಿ, ಇದು 350 ಮಿಲಿಯನ್‌ಗಿಂತಲೂ ಹೆಚ್ಚು ಕಾರುಗಳು ಮತ್ತು 250 ಮಿಲಿಯನ್‌ಗಿಂತಲೂ ಹೆಚ್ಚು ಬೈಕ್‌ಗಳು ರಸ್ತೆಗಿಳಿಯುತ್ತದೆ ಎಂದು ಅಂದಾಜಿಸಲಾಗಿದೆ.

English summary

HDFC Bank launches digital 30-minute Xpress Car Loan; check details in Kannada

HDFC Bank has launched a 30-minute Xpress Car Loans for its existing customers as well as new customers. Know details in Kannada.
Story first published: Tuesday, May 10, 2022, 14:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X