ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಸಾಲದ ಬಡ್ಡಿದರವನ್ನು ಏರಿಕೆ ಮಾಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು 10 ಮೂಲಾಂಕ ಹೆಚ್ಚಿಸಿದೆ.
ಸಾಮಾನ್ಯವಾಗಿ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಹೆಚ್ಚಾದರೆ ಸಾಲದ ಬಡ್ಡಿದರವು ಕೂಡಾ ಅಧಿಕವಾಗಲಿದೆ. ಎಂಸಿಎಲ್‌ಆರ್ ಅಧಿಕವಾದರೆ ಹೊಸದಾಗಿ ಸಾಲವನ್ನು ಪಡೆಯುವವರಿಗೆ ಮಾತ್ರವಲ್ಲದೆ ಈಗಾಗಲೇ ಪಡೆದಿರುವ ಸಾಲದ ಬಡ್ಡಿದರವು ಕೂಡಾ ಅಧಿಕವಾಗುತ್ತದೆ. ಇದರಿಂದಾಗಿ ಗೃಹ ಸಾಲ, ಆಟೋ ಸಾಲ ಹಾಗೂ ವೈಯಕ್ತಿಕ ಸಾಲ ಸೇರಿದಂತೆ ಸಾಲದ ಬಡ್ಡಿದರವು ಅಧಿಕವಾಗಲಿದೆ.
ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಈ ಹೊಸ ಬಡ್ಡಿದರವು ಸೆಪ್ಟೆಂಬರ್ 7ರಿಂದ ಜಾರಿಗೆ ಬಂದಿದೆ. ಎಂಸಿಎಲ್‌ಆರ್ ಎಂದರೆ ಬ್ಯಾಂಕ್ ಹಾಗೂ ಬೇರೆ ಹಣಕಾಸು ಸಂಸ್ಥೆಗಳು ಕನಿಷ್ಠ ಬಡ್ಡಿದರವಾಗಿದೆ. ಈ ದರಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್‌ಗಳು ಸಾಲವನ್ನು ನೀಡಲು ಸಾಧ್ಯವಾಗುವುದಿಲ್ಲ. ಹಾಗಾದರೆ ನೂತನ ಬಡ್ಡಿದರ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

ನೂತನ ಬಡ್ಡಿದರ ಎಷ್ಟಿದೆ ನೋಡಿ
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಒಂದು ವರ್ಷದ ಅವಧಿಯ ಎಂಸಿಎಲ್‌ಆರ್ ಶೇಕಡ 8.2ರಷ್ಟು ಹೆಚ್ಚಳವಾಗಿದೆ. ಈ ಸಂದರ್ಭದಲ್ಲೇ ಒಂದು ರಾತ್ರಿಯ ಅವಧಿಯ ಎಂಸಿಎಲ್‌ಆರ್ ಶೇಕಡ 7.9ರಷ್ಟು ಅಧಿಕವಾಗಿದೆ.ಈ ಒಂದು ವರ್ಷದ ಎಂಸಿಎಲ್ಆರ್ ಅತೀ ಮುಖ್ಯವಾಗಿದೆ. ಗೃಹ ಸಾಲದ ಬಡ್ಡಿದರವು ಕೂಡಾ ಇದರಲ್ಲೇ ಅವಲಂಬಿತವಾಗಿರುತ್ತದೆ. ಇನ್ನು ಒಂದು ತಿಂಗಳು, ಆರು ತಿಂಗಳು, ತ್ರೈಮಾಸಿಕ ಎಂಸಿಎಲ್‌ಆರ್ ಕ್ರಮವಾಗಿ ಶೇಕಡ 7.90 , ಶೇಕಡ 7.95 ಮತ್ತು ಶೇಕಡ 8.05 ಇರಲಿದೆ.
ಈ ಎಂಸಿಎಲ್‌ಆರ್ ಏರಿಕೆ ಮಾಡಿದ್ದರಿಂದಾಗಿ ಪ್ರಸ್ತುತ ಇರುವ ಹಾಗೂ ಹೊಸದಾಗಿ ಮಾಡಲಾಗುವ ಗೃಹ ಸಾಲ, ಆಟೋ ಸಾಲ, ವೈಯಕ್ತಿಕ ಸಾಲವನ್ನು ದುಬಾರಿಯಾಗಿದೆ. ಇನ್ನು ಹೊಸದಾಗಿ ಬ್ಯಾಂಕ್‌ನಿಂದ ಸಾಲ ಪಡೆಯುವವರಿಗೆ ಸಾಲ ದುಬಾರಿಯಾಗಲಿದೆ.
ಆರ್‌ಬಿಐನ ಹೊಸ ಮಾರ್ಗಸೂಚಿ ಪ್ರಕಾರ, ಬ್ಯಾಂಕಿನ ಮೂಲ ದರ ಎಂಸಿಎಲ್‌ಆರ್ ಮೇಲೆ ಆಧಾರಿತವಾಗಿದೆ. 2016ರ ಏಪ್ರಿಲ್ 1ರಂದು ಎಂಸಿಎಲ್‌ಆರ್ ಅನ್ನು ಜಾರಿಗೆ ತರಲಾಗಿದೆ. ಸಾಲಗಳು ಒಂದು ವರ್ಷದ ಎಂಸಿಎಲ್‌ಆರ್ ಮೇಲೆ ಆಧಾರಿತವಾದ ಕಾರಣ ಇಎಂಐ ಮೇಲೆ ಪ್ರಭಾವ ಉಂಟು ಮಾಡಲಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications