For Quick Alerts
ALLOW NOTIFICATIONS  
For Daily Alerts

ಎಚ್‌ಡಿಎಫ್‌ಸಿ-ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನಕ್ಕೆ ಸಿಸಿಐ ಅಸ್ತು

|

ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಎಚ್‌ಡಿಎಫ್‌ಸಿ) ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನಕ್ಕೆ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ (ಸಿಸಿಐ) ಅನುಮೋದನೆ ನೀಡಿದೆ. ಈ ಬಗ್ಗೆ ಸಿಸಿಐ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

"ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಎಚ್‌ಡಿಎಫ್‌ಸಿ) ಲಿಮಿಟೆಡ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ ಇನ್ವೆಸ್ಟ್‌ಮೆಂಟ್, ಎಚ್‌ಡಿಎಫ್‌ಸಿ ಹೋಲ್ಡಿಂಗ್ಸ್ ಅನ್ನು ವಿಲೀನ ಮಾಡುವ ಪ್ರಸ್ತಾಪವನ್ನು ಅನುಮೋದಿಸಲಾಗಿದೆ," ಎಂದು ಸಿಸಿಐ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಎಚ್‌ಡಿಎಫ್‌ಸಿ-ಎಚ್‌ಡಿಎಫ್‌ಸಿ ಬ್ಯಾಂಕ್‌ ವಿಲೀನ: ಪ್ರಮುಖ ಮಾಹಿತಿ ಗಮನಿಸಿಎಚ್‌ಡಿಎಫ್‌ಸಿ-ಎಚ್‌ಡಿಎಫ್‌ಸಿ ಬ್ಯಾಂಕ್‌ ವಿಲೀನ: ಪ್ರಮುಖ ಮಾಹಿತಿ ಗಮನಿಸಿ

ಕಳೆದ ತಿಂಗಳಲ್ಲಿ ಎನ್‌ಎಸ್‌ಸಿ ಹಾಗೂ ಬಿಎಸ್‌ಇಯಲ್ಲಿ ವಿಲೀನಕ್ಕೆ ಅನುಮೋದನೆ ಲಭಿಸಿದೆ. ವಿಲೀನವನ್ನು ಘೋಷಣೆ ಮಾಡಿದ ಎರಡು ತಿಂಗಳ ಬಳಿಕ ಷೇರು ಮಾರುಕಟ್ಟೆಯಲ್ಲಿ ವಿಲೀನಕ್ಕೆ ಸಮ್ಮತಿ ದೊರೆತಿದೆ. ಕಂಪನಿಗಳು ಜುಲೈ 2 ರಂದು ಷೇರು ವಿನಿಮಯ ಕೇಂದ್ರಗಳು, ಬಿಎಸ್‌ಇ ಮತ್ತು ಎನ್‌ಎಸ್‌ಇಗಳಿಂದ 'ವೀಕ್ಷಣಾ ಪತ್ರಗಳನ್ನು' ಸ್ವೀಕರಿಸಿವೆ.

ಎಚ್‌ಡಿಎಫ್‌ಸಿ-ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನಕ್ಕೆ ಸಿಸಿಐ ಅಸ್ತು

ಈಗಾಗಲೇ ಹೌಸಿಂಗ್ ಫೈನಾನ್ಸ್ ಕಂಪನಿಯ ಮಂಡಳಿಯು ಎಚ್‌ಡಿಎಫ್‌ಸಿ ಇನ್ವೆಸ್ಟ್‌ಮೆಂಟ್ ಲಿಮಿಟೆಡ್ ಮತ್ತು ಎಚ್‌ಡಿಎಫ್‌ಸಿ ಹೋಲ್ಡಿಂಗ್ಸ್ ಲಿಮಿಟೆಡ್‌ನ ವಿಲೀನವನ್ನು ಸಹ ಅನುಮೋದಿಸಿದೆ. ಈ ವಿಲೀನದ ಬಗ್ಗೆ ಪ್ರಮುಖ ಮಾಹಿತಿಯನ್ನು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ...

ವಿಲೀನದ ಬಗ್ಗೆ ತಿಳಿದಿರಬೇಕಾದ ಪ್ರಮುಖ ಮಾಹಿತಿ

ಎಚ್‌ಡಿಎಫ್‌ಸಿ-ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನವು ಹಣಕಾಸು ವರ್ಷ 2024 ರ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ವಿಲೀನದ ಮೂಲಕ ಶೇಕಡಾ ಎಚ್‌ಡಿಎಫ್‌ ಶೇಕಡಾ 41 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ಸಲ್ಲಿಕ್ಕೆ ಮಾಡಿದ್ದು, ಬಿಎಸ್‌ಇ, ಎನ್‌ಎಸ್‌ಇ ಅನುಮೋದಿಸಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ವಿಲೀನಕ್ಕೆ ಅಸ್ತು ಎಂದ NSE, BSEಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ವಿಲೀನಕ್ಕೆ ಅಸ್ತು ಎಂದ NSE, BSE

ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ವಿಲೀನದಿಂದಾಗಿ ಅತೀ ದೊಡ್ಡ ಸ್ಟಾಕ್ ಆಗುವ ಸಾಧ್ಯತೆ ಇದೆ. ಈ ವಿಲೀನದ ಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಕೃಷಿ ಸೇರಿದಂತೆ ಆದ್ಯತೆಯ ವಲಯಕ್ಕೆ ಹೆಚ್ಚಿನ ಪ್ರಮಾಣದ ಸಾಲವನ್ನು ಸುಗಮವಾಗಿ ಹಾಗೂ ಶೀಘ್ರವಾಗಿ ನೀಡಲು ಸಾಧ್ಯವಾಗುತ್ತದೆ ಎಂದು ಎಚ್‌ಡಿಎಫ್‌ಸಿ ಹೇಳಿದೆ. ಎಚ್‌ಡಿಎಫ್‌ಸಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಅನ್ನು ವಿಲೀನ ಮಾಡುವುದರಿಂದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಸುರಕ್ಷಿತ ಸಾಲಗಳ ಪ್ರಮಾಣ ಕಡಿಮೆ ಆಗಲಿದೆ.

ಇನ್ನು ಒಪ್ಪಂದದ ಭಾಗವಾಗಿ, ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಷೇರುದಾರರು ಎಚ್‌ಡಿಎಫ್‌ಸಿ ಬ್ಯಾಂಕ್‌ನ 42 ಷೇರುಗಳನ್ನು (ಪ್ರತಿ ರೂ. 1 ಮುಖಬೆಲೆ) ಎಚ್‌ಡಿಎಫ್‌ಸಿ ಲಿಮಿಟೆಡ್‌ನ 25 ಷೇರುಗಳಿಗೆ (ತಲಾ ರೂ. 2 ಮುಖಬೆಲೆ) ಸ್ವೀಕರಿಸುತ್ತಾರೆ.

ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ಬಳಿಕ ಎಚ್‌ಡಿಎಫ್‌ಸಿ ಬ್ಯಾಂಕ್ ಶೇಕಡ 100ರಷ್ಟು ಸಾರ್ವಜನಿಕ ಷೇರುದಾರರ ಒಡೆತನಕ್ಕೆ ಬರಲಿದೆ. ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಅಸ್ತಿತ್ವದಲ್ಲಿರುವ ಷೇರುದಾರರು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಶೇಕಡ 41 ಅನ್ನು ಹೊಂದಿದ್ದಾರೆ.

English summary

HDFC Set to Merged With HDFC Bank, Gets Nod From CCI

HDFC announced that it will merge with HDFC bank and CCI approved the merger proposal.
Story first published: Wednesday, August 17, 2022, 13:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X