For Quick Alerts
ALLOW NOTIFICATIONS  
For Daily Alerts

ದೇಶದ ಎರಡನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ನೆಟ್‌ ಬ್ಯಾಂಕಿಂಗ್‌ ಸೇವೆ ವ್ಯತ್ಯಯ

|

ಭಾರತದ ಎರಡನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಬ್ಯಾಂಕ್‌ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸಮಸ್ಯೆ ಉಂಟಾಗಿದ್ದು, ಗ್ರಾಹಕರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಮಾಧ್ಯಮಗಳ ವರದಿಗಳು ಉಲ್ಲೇಖ ಮಾಡಿದೆ. ಮಿಂಟ್ ವರದಿಯ ಪ್ರಕಾರ, ಗ್ರಾಹಕರು ಅಪ್ಲಿಕೇಶನ್ ಮೂಲಕ ಲಾಗ್ ಇನ್ ಮಾಡುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ಶುಕ್ರವಾರ ನೆಟ್ ಬ್ಯಾಂಕಿಂಗ್ ಸೇವೆಗಳು ಸ್ಥಗಿತಗೊಂಡಿವೆ.

ವರದಿಗಳ ಪ್ರಕಾರ, ಜನರು ಅಪ್ಲಿಕೇಶನ್ ಮೂಲಕ ಲಾಗ್ ಇನ್ ಮಾಡಲು ಪ್ರಯತ್ನಿಸಿದಾಗ, "ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸುವಲ್ಲಿ ನಾವು ಪ್ರಸ್ತುತ ತೊಂದರೆಯನ್ನು ಅನುಭವಿಸುತ್ತಿದ್ದೇವೆ" ಎಂಬ ಸಂದೇಶವು ಪಾಪ್ ಅಪ್ ಆಗಿತ್ತು. ದಯವಿಟ್ಟು ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸಿ ಎಂಬ ಸಂದೇಶ ಕೂಡಾ ಕಂಡು ಬಂದಿದೆ.

 Bank Holidays in April 2022: ಏಪ್ರಿಲ್‌ನಲ್ಲಿ 15 ದಿನ ಬ್ಯಾಂಕ್‌ ರಜೆ, ಇಲ್ಲಿದೆ ಪಟ್ಟಿ Bank Holidays in April 2022: ಏಪ್ರಿಲ್‌ನಲ್ಲಿ 15 ದಿನ ಬ್ಯಾಂಕ್‌ ರಜೆ, ಇಲ್ಲಿದೆ ಪಟ್ಟಿ

ಐಸಿಐಸಿಐ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. "ಆತ್ಮೀಯ ಗ್ರಾಹಕರೇ, http://ICICIdirect.com ನಲ್ಲಿ ಈ ಕ್ಷಣದಲ್ಲಿ ವ್ಯತ್ಯಯ ಉಂಟಾಗಿದೆ. ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಿ ಸಾಮಾನ್ಯ ಸ್ಥಿತಿಗೆ ತರುವ ಕಾರ್ಯವನ್ನು ನಾವು ಮಾಡುತ್ತೇವೆ. ಈ ಬಗ್ಗೆ ನಿಮಗೆ ಅಪ್‌ಡೇಟ್‌ ನೀಡಲಾಗುವುದು. ಸೇವೆಯಲ್ಲಿ ವ್ಯತ್ಯಯಕ್ಕೆ ನಾವು ತೀವ್ರವಾಗಿ ವಿಷಾಧ ವ್ಯಕ್ತಪಡಿಸುತ್ತೇವೆ," ಎಂದು ತಿಳಿಸಿದ್ದಾರೆ.

 ಐಸಿಐಸಿಐ ಬ್ಯಾಂಕ್‌ ನೆಟ್‌ ಬ್ಯಾಂಕಿಂಗ್‌ ಸೇವೆಯಲ್ಲಿ ವ್ಯತ್ಯಯ

ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ನೆಟ್ಟಿಗರು

ಈ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ ಟೆಕ್‌ ಬ್ಲಾಗರ್‌ ಗೀಕಿ ರಂಜಿತ್‌, "ಐಸಿಐಸಿಐನಲ್ಲಿ ಪ್ರಮುಖ ಸಮಸ್ಯೆ ಇರುವಂತೆ ಕಂಡು ಬಂದಿದೆ. ನಾನು ಐಸಿಐಸಿಐ ಬ್ಯಾಂಕ್‌ ಖಾತೆಗೆ ಲಾಗಿನ್‌ ಆಗಲು ಪ್ರಯತ್ನ ಮಾಡಿದಾಗ ತೊಂದರೆ ಉಂಟಾಗುತ್ತಿದೆ. ಸೈಬರ್‌ ದಾಳಿ ಆಗಿದೆಯೇ ಅಥವಾ ಸಿಸ್ಟಮ್‌ ಡೌನ್‌ ಆಗಿದೆಯೇ?," ಎಂದು ಪ್ರಶ್ನೆ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರ ಅಂಶುಲ್ ಶ್ರೀವಾಸ್ತವ ಕೂಡ ಟ್ವೀಟ್ ಮಾಡಿದ್ದಾರೆ, "ಹಲೋ @ICICIBank @ICICIBank_Care ನಿಮ್ಮ ಕಾರ್ಪೊರೇಟ್ ಬ್ಯಾಂಕಿಂಗ್ ವೆಬ್‌ಸೈಟ್ ಡೌನ್ ಆಗಿರುವಂತೆ ತೋರುತ್ತಿದೆ. ದಯವಿಟ್ಟು ಬ್ಯಾಂಕ್‌ ತಮ್ಮ ವೆಬ್‌ಸೈಟ್‌ಡೌನ್ ಅನ್ನು ಪರಿಶೀಲನೆ ಮಾಡಿ," ಎಂದು ಹೇಳಿದ್ದಾರೆ.

English summary

ICICI Bank Customers face glitches as net banking and mobile app services down

ICICI Bank Customers face glitches as net banking and mobile app services down.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X