For Quick Alerts
ALLOW NOTIFICATIONS  
For Daily Alerts

ಎಫ್‌ಡಿ ಬಡ್ಡಿದರ ಏರಿಸಿದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ನೂತನ ದರ ಇಲ್ಲಿದೆ

|

ಮುಂಬೈ ಮೂಲದ ಹಣಕಾಸು ಸಂಸ್ಥೆಯಾದ ಐಡಿಎಫ್‌ಡಿಸಿ ಫಸ್ಟ್ ಬ್ಯಾಂಕ್ ತನ್ನ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಬಡ್ಡಿದರವನ್ನು ಏರಿಕೆ ಮಾಡಿದೆ. 2 ಕೋಟಿ ರೂಪಾಯಿಯಿಂದ 25 ಕೋಟಿ ರೂಪಾಯಿವರೆಗಿನ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರವನ್ನು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಹೆಚ್ಚಿಸಿದೆ.

ಪ್ರಸ್ತುತ ನೀವು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿ ಸುಮಾರು ಶೇಕಡ 7.55ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು 2-25 ಕೋಟಿ ರೂಪಾಯಿವರೆಗಿನ ನಿಮ್ಮ ಹೂಡಿಕೆಗೆ ಶೇಕಡ 5.30ರಿಂದ ಶೇಕಡ 7.55ರವರೆಗೆ ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ.

ಎಫ್‌ಡಿ ಬಡ್ಡಿದರ ಶೇ.7.25ಕ್ಕೆ ಏರಿಸಿದೆ ಈ ಬ್ಯಾಂಕ್!ಎಫ್‌ಡಿ ಬಡ್ಡಿದರ ಶೇ.7.25ಕ್ಕೆ ಏರಿಸಿದೆ ಈ ಬ್ಯಾಂಕ್!

ನೀವು ಈ ಅಧಿಕ ಮೊತ್ತ ಹೂಡಿಕೆಯ ಫಿಕ್ಸಿಡ್ ಡೆಪಾಸಿಟ್ ಹೂಡಿಕೆಯನ್ನು ಶೀಘ್ರವೇ ವಿತ್‌ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ನೀವು ಶೀಘ್ರವೇ ಹಣವನ್ನು ವಿತ್‌ಡ್ರಾ ಮಾಡಲು ಅವಕಾಶ ನೀಡುವ ಹಲವಾರು ಎಫ್‌ಡಿ ಆಯ್ಕೆಗಳು ಕೂಡಾ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿದೆ. ಆದರೆ ಈ ಎಫ್‌ಡಿಗಳಿಗೆ ಕೊಂಚ ಕಡಿಮೆ ಬಡ್ಡಿದರವಿರುತ್ತದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

 2-25 ಕೋಟಿ ರೂಪಾಯಿ ಹೂಡಿಕೆಗೆ ಬಡ್ಡಿದರ

2-25 ಕೋಟಿ ರೂಪಾಯಿ ಹೂಡಿಕೆಗೆ ಬಡ್ಡಿದರ

ನವೆಂಬರ್ 23ರಿಂದ ಜಾರಿಗೆ ಬರುವಂತೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ 366 ದಿನದಿಂದ 399 ದಿನಗಳ ಅವಧಿಯ ಎಫ್‌ಡಿ ಮೇಲೆ ಸುಮಾರು ಶೇಕಡ 7.55ರಷ್ಟು ಬಡ್ಡಿದರವನ್ನು ನೀಡುತ್ತದೆ. 400 ದಿನದಿಂದ 731 ದಿನಗಳವರೆಗಿನ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 7.40ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು 732 ದಿನದಿಂದ 1095 ದಿನಗಳವರೆಗಿನ ಎಫ್‌ಡಿ ಮೇಲೆ ಶೇಕಡ 7.35ರಷ್ಟು ಬಡ್ಡಿದರವನ್ನು ನೀಡುತ್ತದೆ. 271 ದಿನದಿಂದ 365 ದಿನಗಳವರೆಗಿನ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 7.30ರಷ್ಟು ಬಡ್ಡಿದರವನ್ನು ನೀಡುತ್ತದೆ.

3 ವರ್ಷ ಒಂದು ದಿನದಿಂದ 10 ವರ್ಷದ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 7.25ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು 181 ದಿನದಿಂದ 270 ದಿನಗಳ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 6.95ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಾಗೆಯೇ 92ರಿಂದ 180 ದಿನಗಳವರೆಗಿನ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 6.85ರಷ್ಟು ಬಡ್ಡಿದರ ನೀಡುತ್ತದೆ. ಇನ್ನು 61ರಿಂದ 91 ದಿನಗಳ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 6.20ರವರೆಗೆ ಎಫ್‌ಡಿಯನ್ನು ನೀಡುತ್ತದೆ.

 

 ಕಡಿಮೆ ಅವಧಿಯ ಹೂಡಿಕೆ ಮೇಲಿನ ಬಡ್ಡಿದರ

ಕಡಿಮೆ ಅವಧಿಯ ಹೂಡಿಕೆ ಮೇಲಿನ ಬಡ್ಡಿದರ

ನೀವು ಐಡಿಎಫ್‌ಸಿ ಬ್ಯಾಂಕ್‌ನ ಕಡಿಮೆ ಅವಧಿಯ ಹೂಡಿಕೆಯನ್ನು ಕೂಡಾ ಮಾಡಬಹುದು. ನೀವು 46 ದಿನದಿಂದ 60 ದಿನಗಳವರೆಗಿನ ಅವಧಿಯ ಎಫ್‌ಡಿ ಮೇಲೆ ಹೂಡಿಕೆ ಮಾಡಿದರೆ ಶೇಕಡ 5.65ರಷ್ಟು ಬಡ್ಡಿದರವನ್ನು ನೀಡುತ್ತದೆ. 36 ದಿನದಿಂದ 45 ದಿನಗಳವರೆಗಿನ ಎಫ್‌ಡಿ ಮೇಲೆ ಹೂಡಿಕೆ ಮಾಡಿದರೆ ಶೇಕಡ 5.55ರಷ್ಟು ಬಡ್ಡಿದರ ಲಭ್ಯವಾಗಲಿದೆ. 7ರಿಂದ 35 ದಿನಗಳ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರ ಶೇಕಡ 5.30 ಆಗಿದೆ.

 ಮಾಸಿಕ ಬಡ್ಡಿದರ ಪಾವತಿ ಆಯ್ಕೆ ಇದೆಯೇ?

ಮಾಸಿಕ ಬಡ್ಡಿದರ ಪಾವತಿ ಆಯ್ಕೆ ಇದೆಯೇ?

ಇನ್ನು ಬ್ಯಾಂಕ್‌ನ ಅಧಿಕೃತ ಮಾಹಿತಿ ಪ್ರಕಾರ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿ ಈ ಎಫ್‌ಡಿ ಮೇಲಿನ ಬಡ್ಡಿದರವನ್ನು ಮಾಸಿಕವಾಗಿ ಪಾವತಿ ಮಾಡಲಾಗುವುದಿಲ್ಲ. ಬಡ್ಡಿದರವನ್ನು 365 ದಿನಗಳ ಆಧಾರದಲ್ಲಿ ಅಂದರೆ ವಾರ್ಷಿಕ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ. 366 ದಿನಗಳ ಎಫ್‌ಡಿ ಮೇಲೆಯೂ ಇದೇ ಲೆಕ್ಕಾಚಾರವಿರಲಿದೆ. ಇನ್ನು ಈ ಎಫ್‌ಡಿಗೆ ಆಟೋ ರಿನಿವಲ್ ಆಯ್ಕೆ ಇಲ್ಲ.

 ಹಿರಿಯ ನಾಗರಿಕರಿಗೆ ಹೇಗಿದೆ ಬಡ್ಡಿದರ?

ಹಿರಿಯ ನಾಗರಿಕರಿಗೆ ಹೇಗಿದೆ ಬಡ್ಡಿದರ?

ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿದರವನ್ನು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿ ನೀಡಲಾಗುತ್ತದೆ. ಆದರೆ ಈ ಬಡ್ಡಿದರ ಎನ್‌ಆರ್‌ಇ ಅಥವಾ ಎನ್‌ಆರ್‌ಒಗಳ ಫಿಕ್ಸಿಡ್ ಡೆಪಾಸಿಟ್ ಮೇಲೆ ಅನ್ವಯವಾಗುವುದಿಲ್ಲ. ಹಿರಿಯ ನಾಗರಿಕರಿಗೆ ಶೇಕಡ 0.50ರಷ್ಟು ಅಧಿಕ ಬಡ್ಡಿದರವನ್ನು ಬ್ಯಾಂಕ್ ನೀಡುತ್ತದೆ. ಅವಧಿಗೂ ಮುನ್ನ ವಿತ್‌ಡ್ರಾ ಮಾಡಿದರೆ ಬ್ಯಾಂಕ್‌ ಬಡ್ಡಿದರವನ್ನು ನೀಡುವುದಿಲ್ಲ. ಹಾಗೆಯೇ ಅವಧಿ ಕೊನೆಯಾಗುವುದಕ್ಕೂ ಮುನ್ನ ಬಡ್ಡಿದರದ ಮೊತ್ತವನ್ನು ಬ್ಯಾಂಕ್ ಜಮೆ ಮಾಡಿದ್ದರೆ ಅದನ್ನು ಕಡಿತಗೊಳಿಸಲಾಗುತ್ತದೆ.

English summary

IDFC First Bank Hikes FD Interest Rates To 7.55 Percent, Details in Kannada

IDFC First Bank has increased its fixed deposit interest rates and the new rates have already become effective beginning from November 23, 2022.
Story first published: Friday, November 25, 2022, 15:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X