For Quick Alerts
ALLOW NOTIFICATIONS  
For Daily Alerts

2022-23ರ ಐಟಿಆರ್ ಈಗಲೇ ಫೈಲ್ ಮಾಡಿ ಎಂದ ಆದಾಯ ತೆರಿಗೆ ಇಲಾಖೆ

|

ಆದಾಯ ತೆರಿಗೆ ಇಲಾಖೆಯು ಹಣಕಾಸು ವರ್ಷ 2022-23ರ ಆದಾಯ ತೆರಿಗೆ ರಿಟರ್ನ್ ಅನ್ನು ಈಗಲೇ ಪಾವತಿ ಮಾಡಿ. ಐಟಿಆರ್ ಫೈಲಿಂಗ್ ಮಾಡುವ ಮೊದಲಿಗರಾಗಿ ಎಂದು ಟ್ವೀಟ್ ಮಾಡಿದೆ. ಹಣಕಾಸು ವರ್ಷ 2022-23ರ ಆದಾಯ ತೆರಿಗೆ ರಿಟರ್ನ್ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿದೆ ಎಂದು ತಿಳಿಸಿದೆ.

 

ಐಟಿಆರ್ ಪೈಲಿಂಗ್ ಮಾಡುವ ಮೊದಲು ನಿಮ್ಮ ಫಾರ್ಮ್ 26AS, AIS ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ. ಮೊದಲು ಐಟಿಆರ್ ಸಲ್ಲಿಕೆ ಮಾಡುವ ವ್ಯಕ್ತಿ ನೀವಾಗಿ. ಹಣಕಾಸು ವರ್ಷ 2022-23 ಗಾಗಿ ಐಟಿಆರ್ ಸಲ್ಲಿಕೆಯ ಕೊನೆಯ ದಿನಾಂಕ ಜುಲೈ 31 ಆಗಿದೆ.

 

ಐಟಿಆರ್‌ನ ಹೊಸ ಫಾರ್ಮ್: ನೀವು ತಿಳಿದಿರಬೇಕಾದ 10 ವಿಷಯಗಳುಐಟಿಆರ್‌ನ ಹೊಸ ಫಾರ್ಮ್: ನೀವು ತಿಳಿದಿರಬೇಕಾದ 10 ವಿಷಯಗಳು

ಕಳೆದ ವರ್ಷ ಪ್ರಾರಂಭಿಸಲಾದ ಇಲಾಖೆಯ ಹೊಸ ಆದಾಯ ತೆರಿಗೆ ಪೋರ್ಟಲ್ ತೆರಿಗೆದಾರರು ತಮ್ಮ ಇ-ಫೈಲಿಂಗ್ ಖಾತೆಗೆ ನೇರವಾಗಿ ಆಧಾರ್ ಮತ್ತು ಪ್ಯಾನ್ ಮೂಲಕ ಸುಲಭವಾಗಿ ಲಾಗ್ ಇನ್ ಮಾಡಲು ಅವಕಾಶ ನೀಡುತ್ತದೆ. ಈ ಮೂಲಕ ತೆರಿಗೆದಾರರು ಇಫೈಲಿಂಗ್ ಮಾಡಿಕೊಳ್ಳಬಹುದಾಗಿದೆ.

 2022-23ರ ಐಟಿಆರ್ ಈಗಲೇ ಫೈಲ್ ಮಾಡಿ ಎಂದ ಆದಾಯ ತೆರಿಗೆ ಇಲಾಖೆ

ಇ-ಫೈಲಿಂಗ್ ಖಾತೆಗೆ ನೇರವಾಗಿ ಆಧಾರ್ ಮತ್ತು ಪ್ಯಾನ್ ಮೂಲಕ ಸುಲಭವಾಗಿ ಲಾಗ್ ಇನ್ ಆಗುವ ಮೂಲಕ ತೆರಿಗೆದಾರರು ಬಾಕಿ ಉಳಿದಿರುವ ಕ್ರಮಗಳ ಬಗ್ಗೆ ತಿಳಿದುಕೊಳ್ಳಬಹುದು. ಹಾಗೆಯೇ ವರ್ಷವಾರು ಐಟಿಆರ್, ತೆರಿಗೆ ಬಗ್ಗೆ ಮಾಹಿತಿ ಪಡೆಯಬಹುದು. ಯಾವುದೇ ಸಮಸ್ಯೆ ಇದ್ದರೂ ಪರಿಶೀಲನೆ ಮಾಡಲು ಸಾಧ್ಯವಾಗಲಿದೆ.

ಈ ಹಿಂದೆ ಅದೇ ವಿವರಗಳನ್ನು ವಿವಿಧ ಟ್ಯಾಬ್‌ಗಳ ಅಡಿಯಲ್ಲಿ ಒದಗಿಸಲಾಗಿದೆ. ಆದರೆ ಈಗ ಒಂದೇ ಡ್ಯಾಶ್‌ಬೋರ್ಡ್‌ನ ಅಡಿಯಲ್ಲಿ ಈ ಬಗ್ಗೆ ವಿವರಣೆ ಇದೆ. ತೆರಿಗೆದಾರರಿಗೆ ತಮ್ಮ ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ಸೇರಿಸುವ ಆಯ್ಕೆಯನ್ನು ಸಹ ನೀಡಲಾಗಿದೆ. ತೆರಿಗೆದಾರರ ಚಾರ್ಟರ್ಡ್ ಅಕೌಂಟೆಂಟ್‌ಗಳು ಕೂಡಾ ವಿವರಗಳನ್ನು ವೀಕ್ಷಿಸಬಹುದು ಮತ್ತು ತೆರಿಗೆದಾರರ ಪರವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದು.

ಹಣಕಾಸು ವರ್ಷ 2021-22ರ ಐಟಿಆರ್ ಫಾರ್ಮ್ ಅನ್ನು ಏಪ್ರಿಲ್‌ನಲ್ಲಿ ಸೂಚಿಸಲಾಗಿದ್ದು, ಸಂಬಳ ಪಡೆಯುವ ತೆರಿಗೆದಾರರು ತಮ್ಮ ಐಟಿಆರ್ ಅನ್ನು ಮೇ 31 ರ ಮೊದಲು ಸಲ್ಲಿಸದಂತೆ ತಜ್ಞರು ಸಲಹೆ ನೀಡಿದ್ದಾರೆ. ಏಕೆಂದರೆ ಐಟಿಆರ್ ರಿಟರ್ನ್ ಫೈಲಿಂಗ್‌ನ ಅಂತಿಮ ದಿನಾಂಕವು ಮೇ 31, 2022 ಆಗಿತ್ತು. ತೆರಿಗೆದಾರರ ಫಾರ್ಮ್ 26AS ಅನ್ನು ನವೀಕರಿಸಿರಲಿಲ್ಲ.

English summary

Income Tax Department Posts Message For Taxpayers: Be An Early Filer

The due date for filing income tax return without late fee is July 31, 2022. Be An Early Filer message to tax payers from Income Tax Department.
Story first published: Friday, June 24, 2022, 15:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X