For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ರಿಫಂಡ್ ಎಂದರೇನು, ಹೇಗೆ ಪಡೆಯುವುದು, ಅರ್ಹತೆ ಏನು? ಇಲ್ಲಿದೆ ಮಾಹಿತಿ

|

ನಾವು ಪಾವತಿ ಮಾಡಿದ ಆದಾಯ ತೆರಿಗೆ ಹಾಗೂ ನಿಜವಾಗಿ ಪಾವತಿ ಮಾಡಬೇಕಾದ ಆದಾಯ ತೆರಿಗೆಯ ನಡುವೆ ವ್ಯತ್ಯಾಸವಿದ್ದ ಸಂದರ್ಭದಲ್ಲಿ ಆದಾಯ ತೆರಿಗೆ ರಿಫಂಡ್ ಅನ್ನು ಮಾಡಲಾಗುತ್ತದೆ. ನೀವು ಪಾವತಿ ಮಾಡಿದ ಆದಾಯ ತೆರಿಗೆ ನೀವು ನಿಜವಾಗಿ ಪಾವತಿ ಮಾಡಬೇಕಾದ ಆದಾಯ ತೆರಿಗೆಗಿಂತ ಅಧಿಕವಾಗಿದ್ದರೆ ಮಾತ್ರ ಆದಾಯ ತೆರಿಗೆ ರಿಫಂಡ್ ಮಾಡಲಾಗುತ್ತದೆ.

ಇದಕ್ಕಾಗಿ ಫಾರ್ಮ್ 30 ಅನ್ನು ಬಳಕೆ ಮಾಡಲಾಗುತ್ತದೆ. ಆದಾಯ ತೆರಿಗೆ ಹಾಗೂ ಇತರೆ ನೇರ ತೆರಿಗೆ ನಿಯಮದ ಪ್ರಕಾರ ಈ ಹಿಂದೆ ಹೇಳಿದಂತೆ ನೀವು ಪಾವತಿ ಮಾಡಿದ ಮೊತ್ತ ಅಧಿಕವಾಗಿದ್ದರೆ ಮಾತ್ರ ರಿಫಂಡ್ ಲಭ್ಯವಾಗುತ್ತದೆ. ಈ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 237 ಮತ್ತು 245 ಅಡಿಯಲ್ಲಿ ಬರುತ್ತದೆ.

ಐಟಿಆರ್ ಗಡುವು ವಿಸ್ತರಣೆ ಮಾಡಿ: ಟ್ವಿಟ್ಟರ್‌ನಲ್ಲಿ ಟ್ರೆಂಡ್ಐಟಿಆರ್ ಗಡುವು ವಿಸ್ತರಣೆ ಮಾಡಿ: ಟ್ವಿಟ್ಟರ್‌ನಲ್ಲಿ ಟ್ರೆಂಡ್

ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಿದರೆ ನೀವು ಆದಾಯ ತೆರಿಗೆ ರಿಫಂಡ್ ಅನ್ನು ಪಡೆಯಲು ಸಾಧ್ಯವಾಗಲಿದೆ. ಸಾಮಾನ್ಯವಾಗಿ ಆದಾಯ ತೆರಿಗೆ ರಿಟರ್ನ್ ಪೈಲಿಂ್ಗ ಮಾಡಲು ಪ್ರತಿ ವರ್ಷದ ಜುಲೈ 31 ಕೊನೆಯ ದಿನಾಂಕವಾಗಿದೆ. ಸರ್ಕಾರ ಗಡುವು ವಿಸ್ತರಣೆ ಮಾಡಿದರೆ ಮಾತ್ರ ಈ ಅವಧಿಯು ಅಧಿಕವಾಗಲಿದೆ. ಇಲ್ಲವಾದರೆ ಪ್ರತಿ ವರ್ಷ ಜುಲೈ 31 ಐಟಿಆರ್ ಫೈಲಿಂಗ್ ಕೊನೆಯ ದಿನವಾಗಿದೆ. ಹಾಗಾದರೆ ನಾವು ಆದಾಯ ತೆರಿಗೆ ರಿಫಂಡ್ ಪಡೆಯುವುದು ಹೇಗೆ?, ಎಷ್ಟು ರಿಫಂಡ್ ಅನ್ನು ಪಡೆಯಲು ಸಾಧ್ಯವಾಗಲಿದೆ, ಅದನ್ನು ಕ್ಲೈಮ್ ಮಾಡುವುದು ಹೇಗೆ ಎಂಬ ಮೊದಲಾದ ಮಾಹಿತಿಯನ್ನು ನಾವು ಇಲ್ಲಿ ವಿವರಿಸಿದ್ದೇವೆ ಮುಂದೆ ಓದಿ...

 ಆದಾಯ ತೆರಿಗೆ ರಿಫಂಡ್ ಪಡೆಯಲು ಅರ್ಹತೆಯೇನು?

ಆದಾಯ ತೆರಿಗೆ ರಿಫಂಡ್ ಪಡೆಯಲು ಅರ್ಹತೆಯೇನು?

* ನೀವು ಪಾವತಿ ಮಾಡಿದ ಆದಾಯ ತೆರಿಗೆ ನೀವು ನಿಜವಾಗಿ ಆ ಹಣಕಾಸು ವರ್ಷದಲ್ಲಿ ಪಾವತಿ ಮಾಡಬೇಕಾದ ಹಣಕ್ಕಿಂತ ಅಧಿಕವಾಗಿದ್ದರೆ ನೀವು ಆದಾಯ ತೆರಿಗೆ ರಿಫಂಡ್ ಪಡೆಯಲು ಅರ್ಹರಾಗುತ್ತೀರಿ.
* ನಿಮ್ಮ ಟಿಡಿಎಸ್, ಸೆಕ್ಯೂರಿಟೀಸ್, ಡಿಬೆಂಚರ್, ಲಾಭಾಂಶ ಮೊದಲ ಬಡ್ಡಿಯು ಪಾವತಿಸಬೇಕಾದ ತೆರಿಗೆಗಿಂತ ಅಧಿಕವಾಗಿದ್ದರೆ, ರಿಫಂಡ್ ಪಡೆಯಲು ಅರ್ಹರಾಗುತ್ತೀರಿ.
* ನೀವು ಪಾವತಿ ಮಾಡಬೇಕಾದ ಆದಾಯ ತೆರಿಗೆಗಿಂತ ಅಧಿಕ ತೆರಿಗೆಯನ್ನು ವಿಧಿಸಿದ್ದರೆ ನೀವು ಆದಾಯ ತೆರಿಗೆ ರಿಫಂಡ್ ಪಡೆಯುವ ಅರ್ಹತೆಯನ್ನು ಹೊಂದಿರುತ್ತೀರಿ.
* ಬೇರೆ ದೇಶದಲ್ಲಿ ಇರುವ ಭಾರತೀಯರು ದುಪ್ಪಟ್ಟು ಆದಾಯ ತೆರಿಗೆಯನ್ನು ಪಾವತಿಸುವುದನ್ನು ತಪ್ಪಿಸಲು ಭಾರತ ಸರ್ಕಾರ ಕೆಲವು ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಂದು ವೇಳೆ ಬೇರೆ ದೇಶದಲ್ಲಿಯೂ ನಿಮಗೆ ತೆರಿಗೆ ವಿಧಿಸಿದ್ದರೆ, ಭಾರತದಲ್ಲಿಯೂ ತೆರಿಗೆ ವಿಧಿಸಿದ್ದರೆ ನೀವು ರಿಫಂಡ್ ಪಡೆಯಲು ಅರ್ಹರಾಗಿರುತ್ತೀರಿ.
* ನೀವು ತೆರಿಗೆ ಮುಕ್ತ ಹೂಡಿಕೆಯನ್ನು ಮಾಡಿದ್ದರೆ, ಅದನ್ನು ತೆರಿಗೆ ಪಾವತಿ ಮಾಡುವ ವೇಳೆ ಡಿಕ್ಲೈರ್ ಮಾಡಿಲ್ಲದಿದ್ದರೆ ರಿಫಂಡ್ ಪಡೆಯಬಹುದು.

ಇಲಾಖೆ ಈ ಮೊತ್ತದ ಆದಾಯ ತೆರಿಗೆ ಮರುಪಾವತಿಯನ್ನು ನಿಮಗೆ ಪಾವತಿಸಲ್ಲ!ಇಲಾಖೆ ಈ ಮೊತ್ತದ ಆದಾಯ ತೆರಿಗೆ ಮರುಪಾವತಿಯನ್ನು ನಿಮಗೆ ಪಾವತಿಸಲ್ಲ!

 ನಾವು ವಾಪಾಸ್ ಪಡೆಯಬಹುದಾದ ಮೊತ್ತ ಎಷ್ಟು, ಪ್ರಕ್ರಿಯೆ ಹೇಗೆ?

ನಾವು ವಾಪಾಸ್ ಪಡೆಯಬಹುದಾದ ಮೊತ್ತ ಎಷ್ಟು, ಪ್ರಕ್ರಿಯೆ ಹೇಗೆ?

ನೀವು ಆದಾಯ ತೆರಿಗೆ ರಿಫಂಡ್ ಪಡೆಯಬೇಕಾದರೆ ಮೊದಲು ನಾವು ಎಷ್ಟು ಆದಾಯ ತೆರಿಗೆ ಪಾವತಿ ಮಾಡಬೇಕಾಗಿದೆ ಎಂಬುವುದನ್ನು ಲೆಕ್ಕ ಹಾಕಿಕೊಳ್ಳಬೇಕು. ನೀವು ಪಾವತಿ ಮಾಡಿದ ಆದಾಯ ತೆರಿಗೆಯು ನೀವು ನಿಜವಾಗಿ ಪಾವತಿ ಮಾಡಬೇಕಾದ ಆದಾಯ ತೆರಿಗೆಗಿಂತ ಅಧಿಕವಾಗಿದ್ದರೆ ಮಾತ್ರ ನೀವು ರಿಫಂಡ್ ಪಡೆಯಲು ಸಾಧ್ಯವಾಗಲಿದೆ. ಬೆಂಗಳೂರಿನ ಕೇಂದ್ರೀಕೃತ ಸಂಸ್ಕರಣಾ ಕೇಂದ್ರದಲ್ಲಿ (CPC) ಹಾಜರಿರುವ ಆದಾಯ ತೆರಿಗೆ ಅಧಿಕಾರಿಗಳು ಆದಾಯ ತೆರಿಗೆ (IT) ಮರುಪಾವತಿಯನ್ನು ಪ್ರಕ್ರಿಯೆಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಒಬ್ಬ ವ್ಯಕ್ತಿ ಐಟಿಆರ್ ಅನ್ನು ಫೈಲ್ ಮಾಡಿದ ಬಳಿಕ ಅಧಿಕಾರಿಗಳು ಮರುಪಾವತಿಯನ್ನು ಪ್ರಕ್ರಿಯೆಗೊಳಿಸಬೇಕಾಗುತ್ತದೆ. ಮೌಲ್ಯಮಾಪನದ ಸಂದರ್ಭದಲ್ಲಿ ರಿಫಂಡ್ ಇರುವುದು ಗಮನಕ್ಕೆ ಬಂದರೆ ಅದನ್ನು ಪ್ರಕ್ರಿಯೆ ಮಾಡಬೇಕಾಗುತ್ತದೆ.

 ಆದಾಯ ತೆರಿಗೆ ರಿಫಂಡ್ ಕ್ಲೈಮ್ ಮಾಡುವುದು ಹೇಗೆ?

ಆದಾಯ ತೆರಿಗೆ ರಿಫಂಡ್ ಕ್ಲೈಮ್ ಮಾಡುವುದು ಹೇಗೆ?

ಆದಾಯ ತೆರಿಗೆ ರಿಫಂಡ್ ಅನ್ನು ನೀವು ಡಿಕ್ಲೈರ್ ಮಾಡಬೇಕಾದರೆ, ನೀವು ಮಾಡುವ ಹೂಡಿಕೆಯನ್ನು ಫಾರ್ಮ್ 16 ಅಲ್ಲಿ ಉಲ್ಲೇಖ ಮಾಡಬೇಕಾಗುತ್ತದೆ. ಇದರಲ್ಲಿ ನೀವು ವಿಮೆ ಪ್ರೀಮಿಯಂಗೆ ಮಾಡಿದ ಪಾವತಿ, ಮನೆಯ ಬಾಡಿಗೆ, ಮ್ಯೂಚುವಲ್ ಫಂಡ್, ಬ್ಯಾಂಕ್ ಎಫ್‌ಡಿ, ಎನ್‌ಎಸ್‌ಸಿಯಲ್ಲಿ ಮಾಡುವ ಹೂಡಿಕೆ, ಶಿಕ್ಷಣ ವೆಚ್ಚ ಮೊದಲಾದವುಗಳನ್ನು ಉಲ್ಲೇಖ ಮಾಡಬೇಕಾಗುತ್ತದೆ. ಹಾಗೆಯೇ ಇದಕ್ಕೆ ಪುರಾವೆಯನ್ನು ಕೂಡಾ ನೀಡಬೇಕಾಗುತ್ತದೆ. ನೀವು ಅಧಿಕ ತೆರಿಗೆಯನ್ನು ಪಾವತಿ ಮಾಡುತ್ತೀದ್ದೀರಿ ಎಂದು ನಿಮಗೆ ಅನಿಸಿದರೆ ನೀವು ಫಾರ್ಮ್ 30 ಅನ್ನು ಭರ್ತಿ ಮಾಡಬೇಕಾಗುತ್ತದೆ. ನಿಮ್ಮ ಆದಾಯ ತೆರಿಗೆ ರಿಫಂಡ್ ಕ್ಲೈಮ್ ಅನ್ನು ಹಣಕಾಸು ವರ್ಷದ ಕೊನೆಗೂ ಮುನ್ನ ಸಲ್ಲಿಕೆ ಮಾಡಬೇಕಾಗುತ್ತದೆ.

 ಆದಾಯ ತೆರಿಗೆ ರಿಫಂಡ್‌ಗೆ ಕೊನೆಯ ದಿನಾಂಕ

ಆದಾಯ ತೆರಿಗೆ ರಿಫಂಡ್‌ಗೆ ಕೊನೆಯ ದಿನಾಂಕ

ನೀವು ಆದಾಯ ತೆರಿಗೆ ರಿಫಂಡ್‌ ಅನ್ನು ಒಂದು ಹಣಕಾಸು ವರ್ಷದಲ್ಲಿ ಕ್ಲೈಮ್ ಮಾಡಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಮಾತ್ರ ಅವಧಿ ಅಂತ್ಯದ ಬಳಿಕ ಮಾಡಿ ಕ್ಲೈಮ್ ಅನ್ನು ಅಧಿಕಾರಿಗಳು ಪ್ರಕ್ರಿಯೆ ಮಾಡುತ್ತಾರೆ. ಆರು ಹಣಕಾಸು ವರ್ಷ ಕಳೆದು ಹೋದ ಬಳಿಕ ನೀವು ಆರು ವರ್ಷದ ಹಿಂದಿನ ರಿಫಂಡ್ ಅನ್ನು ಕ್ಲೈಮ್ ಮಾಡಲು ಸಾಧ್ಯವಾಗುವುದಿಲ್ಲ. ರಿಫಂಡ್ ಮೊತ್ತವು ಐವತ್ತು ಲಕ್ಷ ರೂಪಾಯಿಗಿಂತ ಕಡಿಮೆ ಆಗಿರಬೇಕು. ತಡವಾಗಿ ಕ್ಲೈಮ್ ಮಾಡುವ ಮೊತ್ತಕ್ಕೆ ಬಡ್ಡಿದರವನ್ನು ನೀಡಲಾಗುವುದಿಲ್ಲ.

 ಆದಾಯ ತೆರಿಗೆ ರಿಫಂಡ್ ಪಾವತಿ ಹೇಗೆ?

ಆದಾಯ ತೆರಿಗೆ ರಿಫಂಡ್ ಪಾವತಿ ಹೇಗೆ?

* ತೆರಿಗೆದಾರರ ಬ್ಯಾಂಕ್ ಖಾತೆಗೆ ಮರುಪಾವತಿ: ತೆರಿಗೆದಾರರ ಬ್ಯಾಂಕ್ ಖಾತೆಗೆ ಮರುಪಾವತಿಸಬೇಕಾದ ಮೊತ್ತದ ನೇರ ವರ್ಗಾವಣೆ ಮಾಡುವುದು ಸಾಮಾನ್ಯ ವಿಧಾನವಾಗಿದೆ. ಈ ವಹಿವಾಟನ್ನು NECS/RTGS ಮೂಲಕ ಪ್ರಕ್ರಿಯೆಗೊಳಿಸಲಾಗುತ್ತದೆ. ಇದಕ್ಕಾಗಿ ನಾವು ಆದಾಯ ರಿಟರ್ನ್ ಫೈಲ್ ಮಾಡುವ ಸಂದರ್ಭದಲ್ಲಿ ರಿಟರ್ನ್ ಫಾರ್ಮ್‌ಗಳಲ್ಲಿ ಸರಿಯಾಗಿ ಬ್ಯಾಂಕ್ ಖಾತೆ ವಿವರ ಉಲ್ಲೇಖ ಮಾಡಿದ್ದೇವೆಯೇ ಎಂದು ನೋಡಿಕೊಳ್ಳಬೇಕು.
* ಚೆಕ್ ಮೂಲಕ ಆದಾಯ ತೆರಿಗೆ ಮರುಪಾವತಿ: ಆದಾಯ ತೆರಿಗೆ ಮರುಪಾವತಿಗಳನ್ನು ಮಾಡಲು ಈ ವಿಧಾನವು ಪರ್ಯಾಯ ಆಯ್ಕೆಯಾಗಿದೆ. ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಸಮಯದಲ್ಲಿ ತೆರಿಗೆದಾರರು ಒದಗಿಸಿದ ಬ್ಯಾಂಕ್ ವಿವರಗಳು ಅಸ್ಪಷ್ಟ, ಅಪೂರ್ಣ ಅಥವಾ ತಪ್ಪು ಎಂದು ಅನಿಸಿದರೆ ಆದಾಯ ತೆರಿಗೆ ಅಧಿಕಾರಿಗಳು ತೆರಿಗೆದಾರರು ಒದಗಿಸಿದ ಖಾತೆ ಸಂಖ್ಯೆಯನ್ನು ನಮೂದಿಸುವ ಮೂಲಕ ಚೆಕ್ ಅನ್ನು ನೀಡುತ್ತಾರೆ.

 ನಮ್ಮ ಆದಾಯ ತೆರಿಗೆ ರಿಫಂಡ್ ಟ್ರ್ಯಾಕ್ ಮಾಡುವುದು ಹೇಗೆ?

ನಮ್ಮ ಆದಾಯ ತೆರಿಗೆ ರಿಫಂಡ್ ಟ್ರ್ಯಾಕ್ ಮಾಡುವುದು ಹೇಗೆ?

ನಿಮ್ಮ ರಿಫಂಡ್ ಅನ್ನು ನೀವು ಟ್ರ್ಯಾಕ್ ಮಾಡಲು ಐಟಿ ಇಲಾಖೆ ನಿಮಗೆ ಅವಕಾಶ ನೀಡುತ್ತದೆ. ನಿಮ್ಮ ಆದಾಯ ತೆರಿಗೆ ರಿಫಂಡ್ ಪ್ರಕ್ರಿಯೆ ಆಗದಿದ್ದರೆ ಈ ಬಗ್ಗೆ ನಿಮಗೆ ಸಂದೇಶ ಬರಲಿದೆ. ಇದಕ್ಕಾಗಿ ನೀವು ಮೊದಲು ಆದಾಯ ತೆರಿಗೆ ಇಫೈಲಿಂಗ್ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು. ನಿಮ್ಮ ಯೂಸರ್ ಐಡಿ, ಪಾಸ್‌ವರ್ಡ್, ದಿನಾಂಕ, ಕ್ಯಾಪ್ಚಾ ಹಾಕಿ ಲಾಗಿನ್ ಆಗಬೇಕಾಗುತ್ತದೆ. ಆ ಬಳಿಕ My Account ಸೆಕ್ಷನ್‌ಗೆ ಹೋಗಿ Refund/Demand Status ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಮಾಹಿತಿ ಲಭ್ಯವಾಗಲಿದೆ.

English summary

Income Tax Refund: Know Eligibility, Process to Claim refund, Due Date and How to Track in kannada

Income Tax Refund: Understand about Income Tax refund, who is eligible, how to get, how to claim, due date, how it is processed, how to track and what is the process to claim it in kananda. Read on.
Story first published: Monday, July 25, 2022, 14:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X