ನಿಮ್ಮ ಆದಾಯ ತೆರಿಗೆ ರಿಟರ್ನ್ ಪ್ರಕ್ರಿಯೆ ಆದ ಬಳಿಕ ನಿಮಗೆ ನೋಟಿಸ್ ಒಂದು ಲಭ್ಯವಾಗಬಹುದು. ಈ ನೋಟಿಸ್‌ನಲ್ಲಿ ನಿಮ್ಮ ಆದಾಯ ತೆರಿಗೆ ಬಾಕಿ ಮರುಪಾವತಿ ಇದೆಯೇ ಇಲ್ಲವೇ ಎಂಬ ವಿವರ ಲಭ್ಯವಾಗಲಿದೆ. ನಿಮಗೆ ಆದಾಯ ತೆರಿಗೆ ಮರುಪಾವತಿ ಇದ್ದರೆ, ಅದು ಕೆಲವೇ ವಾರಗಳಲ್ಲಿ ನಿಮ್ಮ ಖಾತೆಗೆ ಕ್ರೆಡಿಟ್ ಆಗಲಿದೆ.
ಆದರೆ ನಿಮಗೆ ಈ ಕನಿಷ್ಠ ಮೊತ್ತವಾದರೆ ಮರುಪಾವತಿ ಆಗಲಾರದು. ನಿಮ್ಮ ಆದಾಯ ತೆರಿಗೆ ಮರುಪಾವತಿಯು ರೂಪಾಯಿ ನೂರಕ್ಕಿಂತ ಕಡಿಮೆ ಆಗಿದ್ದರೆ, ಅದು ನಿಮ್ಮ ಖಾತೆಗೆ ಕ್ರೆಡಿಟ್ ಆಗುವುದಿಲ್ಲ. ಆದರೆ ಆ ಮೊತ್ತ ನಷ್ಟವೇನಲ್ಲ. ಆ ಮೊತ್ತವನ್ನು ಮುಂದಿನ ಹಣಕಾಸು ವರ್ಷದ ರಿಟರ್ನ್ ಸಲ್ಲಿಕೆ ವೇಳೆ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮೊತ್ತವನ್ನು ಸರಿದೂಗಿಸಲಾಗುತ್ತದೆ.
ಮುಂದಿನ ಹಣಕಾಸು ವರ್ಷದಲ್ಲಿ ನಿಮಗೆ ಆದಾಯ ತೆರಿಗೆ ಮರುಪಾವತಿ ಇದ್ದರೆ, ಆ ವರ್ಷದ ಮೊತ್ತಕ್ಕೆ ಹಿಂದಿನ ವರ್ಷದ ಮೊತ್ತವನ್ನು ಸೇರಿಸಿ ನಿಮಗೆ ಮರುಪಾವತಿ ಮಾಡಲಾಗುತ್ತದೆ. ಆ ಸಂದರ್ಭದಲ್ಲೂ ನಿಮ್ಮ ರಿಫಂಡ್ ಮೊತ್ತ ನೂರು ರೂಪಾಯಿಗಿಂತ ಅಧಿಕವಾಗಿದ್ದರೆ ಮಾತ್ರ ನಿಮಗೆ ರಿಫಂಡ್ ನೀಡಲಾಗುತ್ತದೆ.
ಒಂದು ವೇಳೆ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಬಳಿಕ ನೀವು ಆದಾಯ ತೆರಿಗೆ ಪಾವತಿಸಲು ಬಾಕಿ ಇದೆ ಎಂದಾದರೆ ಅದು ನೂರು ರೂಪಾಯಿಗಿಂತ ಸಣ್ಣ ಮೊತ್ತವಾದರೆ ಈ ಬಾಕಿ ಇರುವ ಮೊತ್ತದಿಂದ ಕಡಿತ ಮಾಡಲಾಗುತ್ತದೆ. ಇನ್ನೂ ಅಧಿಕ ಹಣ ನೀವು ಬಾಕಿ ಇದ್ದರೆ ಈ ಬಗ್ಗೆ ನಿಮಗೆ ನೋಟಿಸ್ ಲಭ್ಯವಾಗಲಿದೆ.
ಐಟಿಆರ್ ಫೈಲಿಂಗ್ ವೆಬ್‌ಸೈಟ್ ಸಿಇಒ ಹೇಳುವುದು ಹೇಗೆ?
ಈ ಬಗ್ಗೆ ಮಾಹಿತಿ ನೀಡಿದ ಐಟಿಆರ್ ಫೈಲಿಂಗ್ ವೆಬ್‌ಸೈಟ್ Tax2win ನ ಸಿಇಒ ಅಭಿಷೇಕ್ ಸೋನಿ, "2012ರ ಜನವರಿ 5ರಂದು ಪ್ರಕಟವಾದ ಪತ್ರಿಕಾ ಹೇಳಿಕೆಯ ಪ್ರಕಾರ ನೂರು ರೂಪಾಯಿಗಿಂತ ಕಡಿಮೆ ಮೊತ್ತದ ಮರುಪಾವತಿ ಮೊತ್ತವನ್ನು ಪಾವತಿ ಮಾಡಲಾಗುವುದಿಲ್ಲ. ಆದರೆ ಅದನ್ನು ಮುಂದಿನ ವರ್ಷದ ಆದಾಯ ತೆರಿಗೆ ಲೆಕ್ಕಾಚಾರಕ್ಕಾಗಿ ಕಾಯ್ದಿರಿಸಲಾಗುತ್ತದೆ. ಅಂದರೆ ನೂರು ರೂಪಾಯಿಗಿಂತ ಕಡಿಮೆ ಮೊತ್ತವಾದರೆ ನಿಮ್ಮ ಖಾತೆಗೆ ಜಮೆ ಆಗಲಾರದು ಎಂದು ನಿಮಗೆ ತಿಳಿದಿರಲಿ," ಎಂದು ಹೇಳಿದ್ದಾರೆ.
ಮೊದಲು ಬಾಕಿ ಮೊತ್ತ ಠೇವಣಿ ಮಾಡಿ
ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಯಾವುದೇ ಸಣ್ಣ ಆದಾಯ ತೆರಿಗೆ ಬಾಕಿ ಉಳಿದಿದ್ದರೆ, ಐಟಿಆರ್ ಸಲ್ಲಿಸುವ ಮತ್ತು ಪರಿಶೀಲಿಸುವ ಮೊದಲು ಅದನ್ನು ಪಾವತಿಸಬೇಕು ಎಂಬುವುದು ತಿಳಿದಿರಬೇಕಾಗಿದೆ. ಉದಾಹರಣೆಗೆ, ನಿಮ್ಮ ಒಟ್ಟು ಆದಾಯ ತೆರಿಗೆ ಬಾಕಿಗಳನ್ನು ಲೆಕ್ಕಾಚಾರ ಮಾಡಿದ ನಂತರ ನೀವಾಗಿ ರೂ 75 ಬಾಕಿ ಇದೆ ಎಂದುಕೊಳ್ಳಿ. ಆ ಸಂದರ್ಭದಲ್ಲಿ ನೀವು ಮೊದಲು ರೂ 75 ಅನ್ನು ಠೇವಣಿ ಮಾಡಿ ನಂತರ ಐಟಿಆರ್ ಅನ್ನು ಸಲ್ಲಿಸಬೇಕಾಗುತ್ತದೆ.
ಸರ್ಕಾರ ಪತ್ರಿಕಾ ಹೇಳಿಕೆ ಹೊರಡಿಸಲು ಕಾರಣವೇನು?
ಅನೇಕ ತೆರಿಗೆದಾರರು 1, ರೂ 2, ರೂ 6 ಇತ್ಯಾದಿಗಳ ಸಣ್ಣ ತೆರಿಗೆ ಬಾಕಿಗಳ ಬಗ್ಗೆ ಆದಾಯ ತೆರಿಗೆ ನೋಟಿಸ್‌ಗಳನ್ನು ಸ್ವೀಕರಿಸುವ ಬಗ್ಗೆ ದೂರುತ್ತಿರುವ ಕಾರಣದಿಂದಾಗಿ ಸರ್ಕಾರವು ಪತ್ರಿಕಾ ಹೇಳಿಕೆಯನ್ನು ನೀಡಿದೆ. ಬೆಂಗಳೂರಿನ ಸೆಂಟ್ರಲ್ ಪ್ರೊಸೆಸಿಂಗ್ ಸೆಂಟರ್ ನಿಂದ 1, 4, 6 ರೂ.ಗಳಷ್ಟು ಕಡಿಮೆ ತೆರಿಗೆ ಪಾವತಿಗೆ ನೋಟಿಸ್ ಕಳುಹಿಸುತ್ತಿರುವ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದಾಯ ತೆರಿಗೆ ಇಲಾಖೆಯಿಂದ 100 ರೂ.ಗಿಂತ ಕಡಿಮೆ ಮೊತ್ತದ ಮರುಪಾವತಿಯನ್ನು ನೀಡದಿದ್ದಾಗ, 100 ರೂ.ಗಿಂತ ಕಡಿಮೆಯಿರುವ ಬೇಡಿಕೆಯನ್ನೂ ಸಂಗ್ರಹಿಸಬಾರದು ಎಂದು ವಾದಿಸಲಾಗಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications