For Quick Alerts
ALLOW NOTIFICATIONS  
For Daily Alerts

SBI ಕಾರ್ಡ್ ದಾರರಿಗೆ 20 ಲಕ್ಷದ ತನಕ ಇನ್ಷೂರೆನ್ಸ್: ಇಲ್ಲಿ ಸಂಪೂರ್ಣ ಮಾಹಿತಿ

|

ಬಹಳ ಮಂದಿಗೆ ಈ ಸಂಗತಿ ಗೊತ್ತಿರಲಿಕ್ಕಿಲ್ಲ. ಕೆಲವು ಬ್ಯಾಂಕ್ ಗಳ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಇದ್ದಲ್ಲಿ ಆ ಬ್ಯಾಂಕ್ ನಿಂದ ಇನ್ಷೂರೆನ್ಸ್ ಕೂಡ ಒದಗಿಸಲಾಗುತ್ತದೆ. ಅದು ಎಷ್ಟು ಮೊತ್ತಕ್ಕೆ ಎಂಬುದು ಆ ಕಾರ್ಡ್ ಯಾವುದು ಹಾಗೂ ಕೆಲವು ನಿರ್ದಿಷ್ಟ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಹಾಗಿದ್ದಲ್ಲಿ ಈ ದಿನ ನಿರ್ದಿಷ್ಟವಾಗಿ ಒಂದು ಬ್ಯಾಂಕ್ ನ ಕಾರ್ಡ್ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಯಾವುದು ಆ ಕಾರ್ಡ್ ಅಂತೀರಾ? ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಹಾಗಿದ್ದರೆ ನಿಮ್ಮ ಬಳಿ ಇದ್ದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆ ಕಾರ್ಡ್ ಎಂಬುದನ್ನು ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ. ಆ ಮೂಲಕ ದೊರೆಯುವ ಅನುಕೂಲಗಳೇನು ಎಂದು ತಿಳಿದುಕೊಳ್ಳಿ.

ವೈಯಕ್ತಿಕ ಅಪಘಾತ ಇನ್ಷೂರೆನ್ಸ್ (ಸಾವು) ವಿಮಾನ ಹೊರತಾಗಿ

ವೈಯಕ್ತಿಕ ಅಪಘಾತ ಇನ್ಷೂರೆನ್ಸ್ (ಸಾವು) ವಿಮಾನ ಹೊರತಾಗಿ

ಅಪಘಾತ ಸಂಭವಿಸುವ 90 ದಿನಗಳ ಮುನ್ನ ಯಾವುದಾದರೂ ಪ್ಲಾಟ್ ಫಾರ್ಮ್ ನಲ್ಲಿ ಒಮ್ಮೆಯಾದರೂ ಕಾರ್ಡ್ ಬಳಕೆ ಮಾಡಿದ್ದಲ್ಲಿ ಇನ್ಷೂರೆನ್ಸ್ ಕವರ್ ಇರುತ್ತದೆ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು ಮೃತಪಟ್ಟಲ್ಲಿ ಇನ್ಷೂರೆನ್ಸ್ ಕವರ್ ವಿಸ್ತರಣೆ ಆಗುತ್ತದೆ.

ವೈಯಕ್ತಿಕ ವಿಮಾನ ಅಪಘಾತ ಇನ್ಷೂರೆನ್ಸ್ (ಸಾವು)
 

ವೈಯಕ್ತಿಕ ವಿಮಾನ ಅಪಘಾತ ಇನ್ಷೂರೆನ್ಸ್ (ಸಾವು)

ಡೆಬಿಟ್ ಕಾರ್ಡ್ ಬಳಸಿ ವಿಮಾನ ಪ್ರಯಾಣಕ್ಕೆ ಟಿಕೆಟ್ ಖರೀದಿಸಿದ್ದಲ್ಲಿ, ಡೆಬಿಟ್ ಕಾರ್ಡ್ ಹೊಂದಿರುವವರು ಮೃತಪಟ್ಟಲ್ಲಿ ವೈಯಕ್ತಿಕ ವಿಮಾನ ಅಪಘಾತ ಇನ್ಷೂರೆನ್ಸ್ ಒದಗಿಸಲಾಗುತ್ತದೆ. ಆದರೆ ಅದು ಯಾವ ಕಾರ್ಡ್ ಎಂಬುದರ ಆಧಾರದಲ್ಲಿ ನಿರ್ಧಾರ ಆಗುತ್ತದೆ.

ಎಸ್ ಬಿಸಿ ಗೋಲ್ಡ್ (ಮಾಸ್ಟರ್ ಕಾರ್ಡ್/ವೀಸಾ): ವೈಯಕ್ತಿಕ ಅಪಘಾತ ವಿಮಾನ ಹೊರತಾಗಿ- 2 ಲಕ್ಷ, ವೈಯಕ್ತಿಕ ಅಪಘಾತ ವಿಮಾನ 4 ಲಕ್ಷ

ಎಸ್ ಬಿಐ ಯುವ (ವೀಸಾ): ವೈಯಕ್ತಿಕ ಅಪಘಾತ ವಿಮಾನ ಹೊರತಾಗಿ- 2 ಲಕ್ಷ, ವೈಯಕ್ತಿಕ ಅಪಘಾತ ವಿಮಾನ 4 ಲಕ್ಷ

ಎಸ್ ಬಿಐ ಪ್ಲಾಟಿನಂ (ಮಾಸ್ಟರ್ ಕಾರ್ಡ್/ವೀಸಾ): ವೈಯಕ್ತಿಕ ಅಪಘಾತ ವಿಮಾನ ಹೊರತಾಗಿ- 5 ಲಕ್ಷ, ವೈಯಕ್ತಿಕ ಅಪಘಾತ ವಿಮಾನ 10 ಲಕ್ಷ

ಎಸ್ ಬಿಐ ಪ್ರೈಡ್ (ಬಿಜಿನೆಸ್ ಡೆಬಿಟ್) (ಮಾಸ್ಟರ್ ಕಾರ್ಡ್/ವೀಸಾ): ವೈಯಕ್ತಿಕ ಅಪಘಾತ ವಿಮಾನ ಹೊರತಾಗಿ- 2 ಲಕ್ಷ, ವೈಯಕ್ತಿಕ ಅಪಘಾತ ವಿಮಾನ 5 ಲಕ್ಷ

ಎಸ್ ಬಿಐ ಪ್ರೀಮಿಯಂ (ಬಿಜಿನೆಸ್ ಡೆಬಿಟ್) (ಮಾಸ್ಟರ್ ಕಾರ್ಡ್/ವೀಸಾ): ವೈಯಕ್ತಿಕ ಅಪಘಾತ ವಿಮಾನ ಹೊರತಾಗಿ- 5 ಲಕ್ಷ, ವೈಯಕ್ತಿಕ ಅಪಘಾತ ವಿಮಾನ 10 ಲಕ್ಷ

ಎಸ್ ಬಿಐ ವೀಸಾ ಸಿಗ್ನೇಚರ್ ಡೆಬಿಟ್ ಕಾರ್ಡ್: ವೈಯಕ್ತಿಕ ಅಪಘಾತ ವಿಮಾನ ಹೊರತಾಗಿ- 10 ಲಕ್ಷ, ವೈಯಕ್ತಿಕ ಅಪಘಾತ ವಿಮಾನ 20 ಲಕ್ಷ

ಖರೀದಿ ಪ್ರೊಟೆಕ್ಷನ್

ಖರೀದಿ ಪ್ರೊಟೆಕ್ಷನ್

ಈ ಪಾಲಿಸಿಯು ಖರೀದಿ ಮಾಡಿದ ಯಾವುದಾದರೂ ವಸ್ತು ನಷ್ಟವಾದಲ್ಲಿ ಕವರ್ ಆಗುತ್ತದೆ. ಇದರಲ್ಲಿ ಕಳುವು, ದರೋಡೆ, ಮನೆ ಬೀಗ ಒಡೆಯುವುದು ಹಾಗೂ ವಾಹನ ಅಪಹರಣ ಕೂಡ ಒಳಗೊಳ್ಳುತ್ತವೆ. ಖರೀದಿ ಮಾಡಿದ 90 ದಿನದೊಳಗಾಗಿ ಇನ್ಷೂರೆನ್ಸ್ ಕವರ್ ಆಗುತ್ತದೆ. ಇದರಲ್ಲಿ ಕೊಳೆತು ಹೋಗುವ ವಸ್ತುಗಳು, ಆಭರಣಗಳು ಹಾಗೂ ಬೆಲೆಬಾಳುವ ರತ್ನಗಳು ಕವರ್ ಆಗಲ್ಲ. ಆಯಾ ಡೆಬಿಟ್ ಕಾರ್ಡ್ ಬಳಸಿಯೇ ಪಾಯಿಂಟ್ ಆಫ್ ಸೇಲ್ ಅಥವಾ ಮಳಿಗೆಗಳಲ್ಲಿ ವಸ್ತುಗಳ ಖರೀದಿ ಮಾಡಿರಬೇಕು. ಹಾಗಿದ್ದಲ್ಲಿ ಯಾವ ಕಾರ್ಡ್ ಗೆ, ಎಷ್ಟು ಮೊತ್ತಕ್ಕೆ ಖರೀದಿ ಪ್ರೊಟೆಕ್ಷನ್ ಇದೆ ಎಂಬುದು ತಿಳಿದುಕೊಳ್ಳಿ.

ಎಸ್ ಬಿಸಿ ಗೋಲ್ಡ್ (ಮಾಸ್ಟರ್ ಕಾರ್ಡ್/ವೀಸಾ): 5 ಸಾವಿರ

ಎಸ್ ಬಿಐ ಯುವ (ವೀಸಾ): 5 ಸಾವಿರ

ಎಸ್ ಬಿಐ ಪ್ಲಾಟಿನಂ (ಮಾಸ್ಟರ್ ಕಾರ್ಡ್/ವೀಸಾ): 50 ಸಾವಿರ

ಎಸ್ ಬಿಐ ಪ್ರೈಡ್ (ಬಿಜಿನೆಸ್ ಡೆಬಿಟ್) (ಮಾಸ್ಟರ್ ಕಾರ್ಡ್/ವೀಸಾ): 5 ಸಾವಿರ

ಎಸ್ ಬಿಐ ಪ್ರೀಮಿಯಂ (ಬಿಜಿನೆಸ್ ಡೆಬಿಟ್) (ಮಾಸ್ಟರ್ ಕಾರ್ಡ್/ವೀಸಾ): 50 ಸಾವಿರ

ಎಸ್ ಬಿಐ ವೀಸಾ ಸಿಗ್ನೇಚರ್ ಡೆಬಿಟ್ ಕಾರ್ಡ್: 1 ಲಕ್ಷ

ಇತರ ಅನುಕೂಲಗಳೇನು?

ಇತರ ಅನುಕೂಲಗಳೇನು?

ಇನ್ನು ಎಸ್ ಬಿಐ ಡೆಬಿಟ್ ಕಾರ್ಡ್ ಗಳಾದ ಗೋಲ್ಡ್, ಯುವ (ವೀಸಾ), ಪ್ಲಾಟಿನಂ (ಮಾಸ್ಟರ್ ಕಾರ್ಡ್/ವೀಸಾ), ಪ್ರೈಡ್ (ಮಾಸ್ಟರ್ ಕಾರ್ಡ್/ವೀಸಾ). ಪ್ರೀಮಿಯಂ (ಮಾಸ್ಟರ್ ಕಾರ್ಡ್/ವೀಸಾ), ಸಿಗ್ನೇಚರ್ (ವೀಸಾ) ಬಳಸಿ ವಿಮಾನದ ಟಿಕೆಟ್ ಬುಕ್ ಮಾಡಿದಲ್ಲಿ ಬ್ಯಾಗೇಜ್ 25 ಸಾವಿರ ರುಪಾಯಿ ಕವರ್ ಆಗುತ್ತದೆ.

English summary

India's Leading Bank SBI Debit Card Holders Get Insurance Up To 20 Lakh Rupees

SBI card holders insurance coverage: Here is detailed all that debit card holders need to know.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X