For Quick Alerts
ALLOW NOTIFICATIONS  
For Daily Alerts

5 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಸಗಟು ಹಣದುಬ್ಬರ: ಜುಲೈನಲ್ಲಿ ಶೇ. 13.93 ದಾಖಲು

|

ಸಗಟು ಬೆಲೆ ಆಧಾರಿತ ಹಣದುಬ್ಬರವು (ಡಬ್ಲ್ಯೂಪಿಐ) ಜುಲೈ 2022 ರಲ್ಲಿ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಆಹಾರ ಪದಾರ್ಥಗಳು ಮತ್ತು ಆಹಾರ ಉತ್ಪನ್ನಗಳ ಬೆಲೆಗಳು ಕೊಂಚ ಇಳಿಕೆಯಾದ ಕಾರಣದಿಂದಾಗಿ ಜುಲೈನಲ್ಲಿ ಸಗಟು ಹಣದುಬ್ಬರವು ಶೇಕಡ 13.93ಕ್ಕೆ ಇಳಿದಿದೆ. ಕಳೆದ ವರ್ಷ ಜುಲೈನಲ್ಲಿ ಸಗಟು ಹಣದುಬ್ಬರ ಶೇ.11.57ರಷ್ಟಿತ್ತು.

 

ಡಬ್ಲ್ಯೂಪಿಐ ಆಧಾರಿತ ಹಣದುಬ್ಬರವು ಜುಲೈನಲ್ಲಿ ಸತತ ಎರಡನೇ ತಿಂಗಳಲ್ಲಿ ಕಡಿಮೆಯಾಗಿದೆ. ಮುಂಬರುವ ತಿಂಗಳುಗಳಲ್ಲಿ ಸಗಟು ಬೆಲೆಗಳಲ್ಲಿ ಮತ್ತಷ್ಟು ಇಳಿಯುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

Breaking news: ಜುಲೈನಲ್ಲಿ ರಿಟೇಲ್ ಹಣದುಬ್ಬರ ಶೇಕಡ 6.71ಕ್ಕೆ ಇಳಿಕೆ

ಇನ್ನು ದೇಶದಲ್ಲಿ ಜುಲೈ ತಿಂಗಳಿನಲ್ಲಿ ರಿಟೇಲ್ ಹಣದುಬ್ಬರವು ಇಳಿಕೆಯಾಗಿದೆ. ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ರಿಟೇಲ್ ಹಣದುಬ್ಬರ ಶೇಕಡ 6.71ಕ್ಕೆ ಇಳಿದಿದ್ದು, ಮಾರ್ಚ್ ಬಳಿಕ ಮೊದಲ ಬಾರಿಗೆ ರಿಟೇಲ್ ಹಣದುಬ್ಬರ ಇಷ್ಟು ಕೆಳಕ್ಕೆ ಇಳಿದಿದೆ. ಸಿಪಿಐ ಆಧಾರಿತ ರಿಟೇಲ್ ಹಣದುಬ್ಬರವು ಜೂನ್‌ನಲ್ಲಿ ಶೇಕಡ 7.01 ರಷ್ಟಿತ್ತು. ಸತತ ಆರನೇ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಅಂದಾಜು ಮಿತಿಯನ್ನು ಹಣದುಬ್ಬರ ಮೀರಿತ್ತು. ಈಗ ಸತತ ಏಳನೇ ತಿಂಗಳಿನಲ್ಲಿ ಆರ್‌ಬಿಐ ಮಿತಿಗಿಂತ ರಿಟೇಲ್ ಹಣದುಬ್ಬರ ಅಧಿಕವಾಗಿದೆ.

 5 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಸಗಟು ಹಣದುಬ್ಬರ

ಮೇ ಮತ್ತು ಜೂನ್‌ನಲ್ಲಿ WPI ಹಣದುಬ್ಬರ ಎಷ್ಟಿತ್ತು?
ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಮೇ ತಿಂಗಳಲ್ಲಿ ದಾಖಲೆಯ 15.88 ಶೇಕಡಾಕ್ಕೆ ಏರಿಕೆಯಾಗಿದೆ. ಆದರೆ ಜೂನ್‌ನಲ್ಲಿ ಶೇಕಡಾ 15.18 ಕ್ಕೆ ಇಳಿದಿದೆ. ಫೆಬ್ರವರಿಯಲ್ಲಿ ಶೇ.13.43ರಷ್ಟಿತ್ತು. ಜುಲೈನಲ್ಲಿ WPI ಹಣದುಬ್ಬರ ಸತತ ಎರಡನೇ ತಿಂಗಳು ಇಳಿಕೆಯಾಗಿದೆ. ಕಳೆದ ವರ್ಷ ಏಪ್ರಿಲ್‌ನಿಂದ ಆರಂಭಗೊಂಡು ಸತತ 16 ನೇ ತಿಂಗಳಲ್ಲಿ ಸಗಟು ಹಣದುಬ್ಬರ ಎರಡಂಕಿಯಲ್ಲಿ ಉಳಿದಿದೆ.

ಆಹಾರ, ಇಂಧನ ಹಣದುಬ್ಬರದ ವಿವರ
ಜೂನ್‌ನಲ್ಲಿ ಶೇಕಡಾ 14.39ರಷ್ಟು ಆಹಾರ ವಸ್ತುಗಳ ಹಣದುಬ್ಬರ ಇದ್ದವು. ಇದು ಜುಲೈನಲ್ಲಿ ಶೇಕಡ 10.77 ಕ್ಕೆ ಇಳಿದಿದೆ. ತರಕಾರಿಗಳ ಬೆಲೆ ಏರಿಕೆ ದರವು ಜುಲೈನಲ್ಲಿ ಶೇ 18.25 ಕ್ಕೆ ಗಣನೀಯವಾಗಿ ಇಳಿಕೆಯಾಗಿದ್ದು, ಹಿಂದಿನ ತಿಂಗಳಲ್ಲಿ ಶೇ 56.75 ರಷ್ಟಿತ್ತು. ಇನ್ನು ಇಂಧನ ಮತ್ತು ವಿದ್ಯುತ್ ಹಣದುಬ್ಬರವು ಜುಲೈನಲ್ಲಿ ಶೇಕಡಾ 43.75 ರಷ್ಟಿದೆ. ಕಳೆದ ತಿಂಗಳಲ್ಲಿ ಶೇಕಡಾ 40.38 ರಷ್ಟಿತ್ತು. ತಯಾರಿಸಿದ ಉತ್ಪನ್ನಗಳು ಮತ್ತು ಎಣ್ಣೆ ಬೀಜಗಳ ಹಣದುಬ್ಬರವು ಕ್ರಮವಾಗಿ 8.16 ಶೇಕಡಾ ಮತ್ತು ಶೇಕಡ 4.06ರಷ್ಟಿದೆ.

 

ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಸುದ್ದಿ ಓದಿ...

"ಅಧಿಕ ಕಚ್ಚಾ ತೈಲ ಬೆಲೆಯು ಇನ್ನು ಕೂಡಾ ಇತರೆ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಇದು ರಿಟೇಲ್ ಹಣದುಬ್ಬರ ಹೆಚ್ಚಾಗಲು ಕಾರಣವಾಗಿದೆ. ಲೋಹಗಳು, ತೈಲಗಳು, ಕಚ್ಚಾ ಮತ್ತು ರಸಗೊಬ್ಬರಗಳ ಬೇಡಿಕೆ ಅಧಿಕವಾಗಿದೆ. ಇದರಿಂದಾಗಿ ಜಾಗತಿಕ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಹಣದುಬ್ಬರವು ಕಡಿಮೆ ಆಗುತ್ತದೆ," ಎಂದು ಸಿಆರ್‌ಸಿಎಲ್‌ ಎಲ್‌ಎಲ್‌ಪಿ ಸಿಇಒ ಮತ್ತು ವ್ಯವಸ್ಥಾಪಕ ಡಾ. ರೆಡ್ಡಿ ಹೇಳಿದ್ದಾರೆ.

ಹಣದುಬ್ಬರ ಏರಿಕೆಯಾಗುತ್ತಿದ್ದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಹೆಚ್ಚಳ ಮಾಡಿದೆ. ಸತತ ಮೂರು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದ್ದು ಪ್ರಸ್ತುತ ರೆಪೋ ದರ ಶೇಕಡ 5.40ಕ್ಕೆ ಏರಿದೆ.

ಉಕ್ರೇನ್ ರಷ್ಯಾ ಯುದ್ಧದ ಬಳಿಕ ಮೊದಲ ಬಾರಿಗೆ ಬ್ರೆಂಟ್ ಕಚ್ಚಾ ತೈಲ ದರವು ಶೇಕಡ 9ರಷ್ಟು ಕುಸಿದಿದೆ. ಬ್ಯಾರೆಲ್‌ಗೆ 125 ಡಾಲರ್‌ಗೂ ಅಧಿಕವಾಗಿದ್ದ ಬ್ರೆಂಟ್ ಕಚ್ಚಾ ತೈಲ ದರವು ಈಗ ಬ್ಯಾರೆಲ್‌ಗೆ 100 ಡಾಲರ್‌ಗೂ ಕಡಿಮೆಯಾಗಿದೆ. ಸರ್ಕಾರವು ಆಮದು ಸುಂಕವನ್ನು ಅಧಿಕ ಮಾಡಿರುವುದು ಹಾಗೂ ಗೋಧಿ ರಫ್ತಿನ ಮೇಲೆ ನಿರ್ಬಂಧ ಹೇರಿದ್ದು ರಿಟೇಲ್ ಹಣದುಬ್ಬರ ಇಳಿಕೆಗೆ ಸಹಾಯಕವಾಗಿರುವ ಸಾಧ್ಯತೆ ಇದೆ. ಆದರೂ ರಿಟೇಲ್ ಹಣದುಬ್ಬರವು ಆರ್‌ಬಿಐನ ಮಿತಿಗಿಂತ ಅಧಿಕವಾಗಿಯೇ ಉಳಿದಿದೆ.

English summary

India's wholesale inflation in July 2022 eases to 13.93 percent

The wholesale price-based inflation (WPI) eased to a five-month low of 13.93 per cent in July 2022.
Story first published: Tuesday, August 16, 2022, 17:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X