For Quick Alerts
ALLOW NOTIFICATIONS  
For Daily Alerts

ಹಬ್ಬದ ಸೀಸನ್‌ ನಡುವೆ ಚಿನ್ನ ಖರೀದಿ ಮಾಡಬಹುದೇ?

|

ಭಾರತದಲ್ಲಿ ಚಿನ್ನ ಎಂದರೆ ಒಂದು ಮೌಲ್ಯಯುತ ಸಂಪತ್ತು. ಹಲವಾರು ಮಂದಿ ಚಿನ್ನವನ್ನು ಒಂದು ಮೌಲ್ಯಯುತವಾದ ಸಂಪತ್ತು ಎಂದು ಮಾತ್ರವಲ್ಲದೇ ಭಾರತದ ಸಂಸ್ಕೃತಿಯ ಪ್ರತೀಕ ಕೂಡಾ ಹೌದು. ಚಿನ್ನವನ್ನು ಸಾಂಪ್ರದಾಯಿಕವಾಗಿ ವಿತ್ತೀಯ ಆಸ್ತಿ ಎಂದು ಭಾರತದಲ್ಲಿ ಪರಿಗಣಿಸಲಾಗುತ್ತದೆ. ಈ ಹಳದಿ ಲೋಹವನ್ನು ಭಾರತೀಯರು ಹೆಚ್ಚಾಗಿ ಶುಭ ಕಾರ್ಯಗಳಲ್ಲಿ ಹಾಗೂ ಹಬ್ಬವಿದ್ದ ಸಂದರ್ಭದಲ್ಲಿ ಖರೀದಿ ಮಾಡುತ್ತಾರೆ.

ಹಾಗಾದರೆ ಈ ವರ್ಷ ಹಬ್ಬದ ಸಂದರ್ಭದಲ್ಲಿ ನಾವು ಚಿನ್ನವನ್ನು ಖರೀದಿ ಮಾಡಬಹುದೇ?. ಈ ವರ್ಷ ಈ ಹಬ್ಬಗಳ ಸೀಸನ್‌ನಲ್ಲಿ ಹೂಡಿಕೆದಾರರು ಚಿನ್ನವನ್ನು ಖರೀದಿ ಮಾಡುವ ವಿಚಾರದಲ್ಲಿ ಹೆಚ್ಚು ಕಾಳಜಿಯನ್ನು ಹೊಂದಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ದಿನದಿನಕ್ಕೆ ಏರಿಕೆ ಇಳಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುವುದರ ಬಗ್ಗೆ ಈ ಸಂದರ್ಭದಲ್ಲಿ ಅತೀವ ಕಾಳಜಿಯನ್ನು ಹೊಂದಿದ್ದಾರೆ.

ನಿಮ್ಮ ಖರ್ಚನ್ನು ಸರಿಯಾಗಿ ನಿರ್ವಹಿಸಲು ಹಣಕಾಸಿನ ಸಾಕ್ಷರತೆ ಹೇಗೆ ಸಹಕಾರಿ?ನಿಮ್ಮ ಖರ್ಚನ್ನು ಸರಿಯಾಗಿ ನಿರ್ವಹಿಸಲು ಹಣಕಾಸಿನ ಸಾಕ್ಷರತೆ ಹೇಗೆ ಸಹಕಾರಿ?

ಇನ್ನು ಮುಂಬರುವ ನವೆಂಬರ್‌ ತಿಂಗಳಿನಲ್ಲಿ ಭಾರತವು ಧನತ್ರಯೋದಶಿಯನ್ನು ಆಚರಿಸಲಿದೆ. ಭಾರತದ ಚಿನ್ನದ ಮಾರುಕಟ್ಟೆಗೆ ಈ ಧನತ್ರಯೋದಶಿಯು ಅತೀ ದೊಡ್ಡ ಹಬ್ಬವಾಗಲಿದೆ. ಈ ಸಂದರ್ಭದಲ್ಲೇ ಮದುವೆಯ ಸೀಸನ್‌ ಕೂಡಾ ಬಹಳ ಹತ್ತಿರದಲ್ಲಿದೆ. ಈ ಸಂದರ್ಭದಲ್ಲೂ ಚಿನ್ನದ ಖರೀದಿಯು ಹೆಚ್ಚಳವಾಗಲಿದೆ. ಈ ನಡುವೆ ಚಿನ್ನವನ್ನು ಖರೀದಿ ಮಾಡಬೇಕೆ ಇಲ್ಲವೇ ಎಂದು ತಲೆ ಕೆಡಿಸಿಕೊಂಡಿರುವವರಿಗೆ ಇಲ್ಲಿ ಈ ವರ್ಷದಲ್ಲಿ ಚಿನ್ನದ ದರದಲ್ಲಿ ಆದ ಬದಲಾವಣೆಗಳನ್ನು ವಿವರಿಸುತ್ತೇವೆ. ಮುಂದೆ ಓದಿ.

 ಚಿನ್ನದ ಬೆಲೆ ಎಷ್ಟು ಇಳಿಕೆ ಕಂಡಿದೆ?

ಚಿನ್ನದ ಬೆಲೆ ಎಷ್ಟು ಇಳಿಕೆ ಕಂಡಿದೆ?

ಕಳೆದ ವರ್ಷಕ್ಕಿಂತ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಚಿನ್ನದ ಬೆಲೆಯು ಶೇಕಡ 13 ರಷ್ಟು ಏರಿಕೆಯನ್ನು ಕಂಡಿದೆ. ಈ ವರ್ಷದ ಮೇ 15 ರಿಂದ ಚಿನ್ನದ ಬೆಲೆಯು ನಿಧಾನಗತಿಯಲ್ಲಿ ಏರಿಕೆಯಾಗಲು ಆರಂಭವಾಗಿತ್ತು. ಜೂನ್‌ ತಿಂಗಳಿನ ಆರಂಭದ ವಾರದಲ್ಲಿ ಚಿನ್ನದ ಬೆಲೆಯು ಭಾರೀ ಏರಿಕೆಯಾಗಿತ್ತು. ಕೊರೊನಾ ಕಾರಣದಿಂದಾಗಿ ಅಂತಾರಾಷ್ಟ್ರೀಯ ಆರ್ಥಿಕ ಪರಿಸ್ಥಿತಿಯು ಹದಗೆಟ್ಟ ಕಾರಣದಿಂದಾಗಿ ಈ ಏರಿಕೆ ಕಂಡಿತ್ತು. ಆದರೆ ಆ ಬಳಿಕ ಚಿನ್ನದ ಬೆಲೆಯು ತೀವ್ರವಾಗಿ ಇಳಿಕೆ ಕಾಣಲು ಆರಂಭ ಮಾಡಿದೆ. ಜುಲೈ ತಿಂಗಳಿನ ಎರಡನೇ ಭಾಗರ್ಧದಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಸ್ಥಿರತೆ ಕಂಡು ಬಂದಿತ್ತು. ನಾವು ಮೇ ತಿಂಗಳಿನಿಂದ ಲೆಕ್ಕ ಹಾಕುವುದಾದರೆ, ಚಿನ್ನದ ಬೆಲೆಯು ಸೆಪ್ಟೆಂಬರ್‌ನಲ್ಲಿ 1,100 ರೂಪಾಯಿಯಷ್ಟು ಏರಿಕೆ ಕಂಡಿತ್ತು. ದೊಡ್ಡ ಹೂಡಿಕೆದಾರರಿಗೆ ಈ ದರ ಏರಿಕೆಯು ಹೆಚ್ಚಿನ ಮಹತ್ವವನ್ನು ಪಡೆಯುವ ಸುದ್ದಿಯಾಗುತ್ತದೆ. ಆದರೆ ನಾವು ಜೂನ್‌ನಿಂದ ಲೆಕ್ಕ ಹಾಕುವುದಾದರೆ ಚಿನ್ನದ ಬೆಲೆಯು ಒಟ್ಟು 1680 ರೂಪಾಯಿಯಷ್ಟು ಸೆಪ್ಟೆಂಬರ್‌ನಲ್ಲಿ ಇಳಿಕೆ ಕಂಡಿದೆ. ಈ ಬೆಲೆ ಇಳಿಕೆಯು ಅಧಿಕ ಮಂದಿಯನ್ನು ಚಿನ್ನ ಖರೀರಿಗೆ ಆಕರ್ಷಿಸಿದೆ.

 ಭಾರತದಲ್ಲಿ ಕಳೆದ ಐದು ತಿಂಗಳ ಚಿನ್ನದ ಬೆಲೆ ವಿವರ

ಭಾರತದಲ್ಲಿ ಕಳೆದ ಐದು ತಿಂಗಳ ಚಿನ್ನದ ಬೆಲೆ ವಿವರ

2021 ರ ಸೆಪ್ಟೆಂಬರ್‌ 9: 22 ಕ್ಯಾರೆಟ್‌ ಚಿನ್ನದ ಬೆಲೆ 46,000 ರೂಪಾಯಿ, 24 ಕ್ಯಾರೆಟ್‌ ಚಿನ್ನದ ಬೆಲೆ 47,000 ರೂಪಾಯಿ
2021 ರ ಆಗಸ್ಟ್‌ 9: 22 ಕ್ಯಾರೆಟ್‌ ಚಿನ್ನದ ಬೆಲೆ 45,280 ರೂಪಾಯಿ, 24 ಕ್ಯಾರೆಟ್‌ ಚಿನ್ನದ ಬೆಲೆ 46,280 ರೂಪಾಯಿ
2021 ರ ಜುಲೈ 9: 22 ಕ್ಯಾರೆಟ್‌ ಚಿನ್ನದ ಬೆಲೆ 46,810 ರೂಪಾಯಿ, 24 ಕ್ಯಾರೆಟ್‌ ಚಿನ್ನದ ಬೆಲೆ 47,810 ರೂಪಾಯಿ
2021 ರ ಜೂನ್‌ 9: 22 ಕ್ಯಾರೆಟ್‌ ಚಿನ್ನದ ಬೆಲೆ 47,680 ರೂಪಾಯಿ, 24 ಕ್ಯಾರೆಟ್‌ ಚಿನ್ನದ ಬೆಲೆ 48,680 ರೂಪಾಯಿ
2021 ರ ಮೇ 9: 22 ಕ್ಯಾರೆಟ್‌ ಚಿನ್ನದ ಬೆಲೆ 44,910 ರೂಪಾಯಿ, 24 ಕ್ಯಾರೆಟ್‌ ಚಿನ್ನದ ಬೆಲೆ 45,910 ರೂಪಾಯಿ

ಕುಟುಂಬ ಸದಸ್ಯರಿಗೆ ಈ ಮಾಹಿತಿಗಳನ್ನು ನೀವು ತಿಳಿಸಿರಲೇಬೇಕು..ಕುಟುಂಬ ಸದಸ್ಯರಿಗೆ ಈ ಮಾಹಿತಿಗಳನ್ನು ನೀವು ತಿಳಿಸಿರಲೇಬೇಕು..

ಯುಎಸ್‌ನ ಕೃಷಿಯೇತರ ದತ್ತಾಂಶದ ಅಂಕಿ ಅಂಶದಿಂದ ಪ್ರೇರಿಪಿತವಾಗಿ ಆಗಸ್ಟ್‌ ಚಿನ್ನದ ದರಗಳು ಇಳಿಕೆ ಕಂಡಿದೆ. ಬಳಿಕ ಆಸ್ತಿ ಖರೀದಿಯು ಇಳಿಮುಖವಾದ ಕಾರಣದಿಂದಾಗಿ ಚಿನ್ನದ ಬೆಲೆಯು ಮತ್ತೆ ಇಳಿಕೆಯನ್ನು ಕಂಡಿದೆ. ಚಿನ್ನ ಬೆಲೆಯು ಡಾಲರ್‌ನ ಪ್ರಾಬಲ್ಯದ ಮೇಲೆ ಅವಲಂಬಿತವಾಗಿರುವ ಕಾರಣದಿಂದಾಗಿ ಯುಎಸ್‌ನಲ್ಲಿ ಉಂಟಾಗುವ ಎಲ್ಲಾ ಆರ್ಥಿಕ ಸಾಮಾಜಿಕ ಬೆಳವಣಿಗೆಗಳು ಚಿನ್ನದ ಮೇಲೆ ಪ್ರಭಾವವನ್ನು ಬೀರುತ್ತದೆ. ಚಿನ್ನದ ಬೆಲೆಯು ಎಂದಿಗೂ ಯುಎಸ್ ಫೆಡ್ ನಿರ್ಧಾರ ಮತ್ತು ಯುಎಸ್ ಡಾಲರ್ ಸೂಚಿಯನ್ನು ಅವಲಂಬಿಸಿರುತ್ತದೆ. ಇನ್ನು ಈ ವರ್ಷದ ಜನವರಿ ತಿಂಗಳಿನಲ್ಲಿ ಚಿನ್ನದ ಬೆಲೆಯು 22 ಕ್ಯಾರೆಟ್‌ ಚಿನ್ನದ ಬೆಲೆಯು ತೀವ್ರ ಏರಿಕೆಯಾಗಿತ್ತು. ಈ ತಿಂಗಳಿನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆಯು 48,460 ರೂಪಾಯಿ ಆಗಿತ್ತು. 24 ಕ್ಯಾರೆಟ್‌ ಚಿನ್ನದ ಬೆಲೆಯು ಕೂಡಾ ಏರಿಕೆ ಆಗಿತ್ತು. ಈ ತಿಂಗಳಿನಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆಯು 49,460 ರೂಪಾಯಿ ಆಗಿತ್ತು. ಆದರೆ ಪ್ರಸ್ತುತ ಚಿನ್ನದ ದರ ಇಳಿಕೆ ಆಗುವುದನ್ನು ನೋಡಿದರೆ, ಚಿನ್ನದ ಬೆಲೆಯು ಶೀಘ್ರವೇ ಏರಿಕೆಯಾಗುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಇನ್ನು ಯುಎಸ್‌ ಫೆ‌ಡ್‌ ಯಾವುದಾದರೂ ಬದಲಾವಣೆಯನ್ನು ಮಾಡಿದರೆ ಮತ್ತೆ ಚಿನ್ನದ ಬೆಲೆಯು ಇಳಿಕೆಯಾಗುವ ಸಾಧ್ಯತೆ ಇದೆ. ಈ ಸಂದರ್ಭವು ಭಾರತೀಯರಿಗೆ ಚಿನ್ನವನ್ನು ಖರೀದಿ ಮಾಡಲು ಉತ್ತಮ ಅವಕಾಶವಾಗಿದೆ. ಈ ಹಳದಿ ಲೋಹದ ಬೆಲೆಯನ್ನು ಎಂದಿಗೂ ಸುಮಾರು 5-8 ವರ್ಷಗಳ ಕಾಲದ ಅವಧಿಯ ಮೂಲಕ ಲೆಕ್ಕಾಚಾರ ಮಾಡಲಾಗುತ್ತದೆ.

 

 ವಿಶ್ವ ಚಿನ್ನ ಮಂಡಳಿಯ ಸ್ಥಳೀಯ ಸಿಇಒ ಹೇಳುವುದಿಷ್ಟು..

ವಿಶ್ವ ಚಿನ್ನ ಮಂಡಳಿಯ ಸ್ಥಳೀಯ ಸಿಇಒ ಹೇಳುವುದಿಷ್ಟು..

ಈ ಹಿಂದೆ ಮಾಧ್ಯಮವೊಂದಕ್ಕೆ ಸಂದರ್ಶನವನ್ನು ನೀಡಿದ ವಿಶ್ವ ಚಿನ್ನ ಮಂಡಳಿಯ ಸ್ಥಳೀಯ ಸಿಇಒ ಪಿ ಆರ್‌ ಸೋಮಸುಂದರಾಮ್‌, "2019 ರಲ್ಲಿ ಚಿನ್ನದ ಬೆಲೆಯು 30,000 ದಿಂದ 32,000 ದವರೆಗೆ ಇತ್ತು. ಆದರೆ 2021 ರಲ್ಲಿ ಚಿನ್ನದ ಬೆಲೆಯು ಜಿಎಸ್‌ಟಿಯನ್ನು ಒಳಗೊಂಡು ಸುಮಾರು ಐವತ್ತು ಸಾವಿರದಷ್ಟು ಆಗಿತ್ತು. ಆದರೆ ಯಾರ ಆದಾಯವೂ ಕೂಡಾ ಅಷ್ಟು ಮಟ್ಟಿನಲ್ಲಿ ಏರಿಕೆಯನ್ನು ಕಂಡಿಲ್ಲ," ಎಂದು ಹೇಳಿದ್ದಾರೆ. ಹಾಗೆಯೇ ಸಿಇಒ ಪಿ ಆರ್‌ ಸೋಮಸುಂದರಾಮ್‌ ಪ್ರಕಾರ ಭಾರತೀಯರು ಚಿನ್ನದ ಬೆಲೆ ಏರಿಕೆ ಇಳಿಕೆಯ ಬಗ್ಗೆ ಹೆಚ್ಚು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಚಿನ್ನದ ಬೆಲೆಯು ಇಳಿಕೆಯನ್ನು ಕಂಡಾಗ ಚಿನ್ನವನ್ನು ಖರೀದಿ ಮಾಡುವತತ ಚಿನ್ನ ನೆಟ್ಟಿದ್ದಾರೆ.

ಇನ್ನು ಈ ಹಬ್ಬದ ಸೀಸನ್‌ ಹಿನ್ನೆಲೆ ಚಿನ್ನದ ಬೆಲೆಯು ಏರಿಕೆಯಾದರೆ, ಅದನ್ನು ಖರೀದಿ ಮಾಡಲು ಉತ್ತಮ ಕಾಲ ಎಂದು ಸ್ಥಳೀಯ ಮಾರುಕಟ್ಟೆಯ ಮಧ್ಯವರ್ತಿಗಳು ಸೂಚನೆ ನೀಡುವುದಕ್ಕೆ ಕಾಯುತ್ತಿದ್ದಾರೆ. ಇನ್ನು ಹಬ್ಬದ ಸಂದರ್ಭದಲ್ಲಿ ಹಾಗೂ ಮದುವೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಚಿನ್ನದ ಬೆಲೆ ಏರಿಕೆಯಾಗುವಂತೆ ಈ ವರ್ಷ ಚಿನ್ನದ ಬೆಲೆಯು ಏರಿಕೆಯಾಗಲಾರದು ಎಂದು ಕೂಡಾ ಹೇಳಲಾಗಿದೆ. ಈ ಚಿನ್ನದ ಬೆಲೆಯಲ್ಲಿನ ಇಳಿಕೆಯು ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುವುದಕ್ಕೆ ಇನ್ನಷ್ಟು ಕಾಯಬೇಕಾಗುವ ಪರಿಸ್ಥಿತಿಯನ್ನು ತದ್ದೊಡಲಿದೆ. ಇನ್ನು ಈ ನಡುವೆ ಯುಎಸ್‌ನಲ್ಲಿ ಯಾವುದೇ ಬದಲಾವಣೆಯಾದರೂ ಕೂಡಾ ಚಿನ್ನದ ಬೆಲೆ ಏರಿಕೆ ಅಥವಾ ಇಳಿಕೆ ಎರಡೂ ಆಗುವ ಸಾಧ್ಯತೆಯಿದೆ. ಇನ್ನು ಮುಂಬರುವ ವರ್ಷವು ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ ಈಗ ಖರೀದಿ ಮಾಡಿದ ಚಿನ್ನವು ಈ ಹಿಂದಿನದಕ್ಕಿಂತ ಅಧಿಕ ಸಂಪನ್ಮೂಲ ವಸ್ತು ಆಗಲಿದೆ. ಇನ್ನು ಅಕ್ಟೋಬರ್‌-ನವೆಂಬರ್‌ನಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತದೆ ಎಂಬ ಕಾರಣದಿಂದಾಗಿ ಚಿನ್ನವನ್ನು ಖರೀದಿ ಮಾಡುವುದನ್ನು ಡಿಸೆಂಬರ್‌ಗೆ ಮುಂದೂಡಿಕೆ ಮಾಡಿದ್ದರೆ, ಅವರು ಚಿನ್ನವನ್ನು ಈಗಲೇ ಖರೀದಿ ಮಾಡಬಹುದು. ಚಿನ್ನದ ಬೆಲೆಗಳು ಈಗ ಕಡಿಮೆಯಾಗಿದ್ದು, ಚಿನ್ನದ ಮಳಿಗೆಗಳು ಈಗ ಒಳ್ಳೆಯ ಆಫರ್‌ಗಳನ್ನು ನೀಡಲು ಮುಂದಾಗಿದೆ.

 ಪ್ರಮುಖ ನಗರಗಳ ಚಿನ್ನದ ಬೆಲೆ ಇಲ್ಲಿದೆ

ಪ್ರಮುಖ ನಗರಗಳ ಚಿನ್ನದ ಬೆಲೆ ಇಲ್ಲಿದೆ

ಮುಂಬೈ: 22 ಕ್ಯಾರೆಟ್‌ ಚಿನ್ನದ ಬೆಲೆ 46,000 ರೂಪಾಯಿ, 24 ಕ್ಯಾರೆಟ್‌ ಚಿನ್ನದ ಬೆಲೆ 47,000 ರೂಪಾಯಿ
ದೆಹಲಿ: 22 ಕ್ಯಾರೆಟ್‌ ಚಿನ್ನದ ಬೆಲೆ 46,100 ರೂಪಾಯಿ, 24 ಕ್ಯಾರೆಟ್‌ ಚಿನ್ನದ ಬೆಲೆ 50,300 ರೂಪಾಯಿ
ಬೆಂಗಳೂರು: 22 ಕ್ಯಾರೆಟ್‌ ಚಿನ್ನದ ಬೆಲೆ 44,000 ರೂಪಾಯಿ, 24 ಕ್ಯಾರೆಟ್‌ ಚಿನ್ನದ ಬೆಲೆ 48,000 ರೂಪಾಯಿ
ಚೆನ್ನೈ: 22 ಕ್ಯಾರೆಟ್‌ ಚಿನ್ನದ ಬೆಲೆ 44,340 ರೂಪಾಯಿ, 24 ಕ್ಯಾರೆಟ್‌ ಚಿನ್ನದ ಬೆಲೆ 48,370 ರೂಪಾಯಿ
ಕೋಲ್ಕತ್ತಾ: 22 ಕ್ಯಾರೆಟ್‌ ಚಿನ್ನದ ಬೆಲೆ 46,540 ರೂಪಾಯಿ, 24 ಕ್ಯಾರೆಟ್‌ ಚಿನ್ನದ ಬೆಲೆ 49,240 ರೂಪಾಯಿ

ಯಾವುದೇ ನಗರದಲ್ಲಿ ನೀವು ಚಿನ್ನವನ್ನು ಖರೀದಿ ಮಾಡುವುದಾದರೂ, ನೀವು ಹಾಲ್‌ ಮಾರ್ಕ್‌ ಇರುವ ಚಿನ್ನವನ್ನೇ ಖರೀದಿ ಮಾಡಬೇಕು ಎಂಬುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕೇಂದ್ರ ಸರ್ಕಾರವು ಹಾಲ್‌ ಮಾರ್ಕಿಂಗ್‌ ವ್ಯವಸ್ಥೆಯನ್ನು ದೃಢವಾಗಿ ಪರಿಗಣನೆಗೆ ತೆಗೆದುಕೊಳ್ಳಲು ಹೇಳುತ್ತಿದೆ.

English summary

Indian Gold Rates Declining, Should You Buy Ahead Of Festive Season?

Indian Gold Rates Declining, Should You Buy Ahead Of Festive Season?. To know Read on.
Story first published: Friday, September 10, 2021, 20:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X