For Quick Alerts
ALLOW NOTIFICATIONS  
For Daily Alerts

ಪಿಪಿಎಫ್, ಸುಕನ್ಯಾ ಸಮೃದ್ಧಿ ಸೇರಿ ಹಲವಾರು ಯೋಜನೆಗಳ ಬಡ್ಡಿದರ ಏರಿಕೆ ಸಾಧ್ಯತೆ: ಇಲ್ಲಿದೆ ವಿವರ

|

ಸಾಮಾನ್ಯವಾಗಿ ಹೆಚ್ಚಿನ ಜನರು ಯಾವುದೇ ಅಪಾಯವಿಲ್ಲದ ಕಡೆ ಹೂಡಿಕೆ ಮಾಡಲು ಇಷ್ಟ ಪಡುತ್ತಾರೆ. ನೀವು ಯಾವೆಲ್ಲಾ ಕಡೆ ಅಪಾಯವಿಲ್ಲದ, ಸುರಕ್ಷಿತ ಹೂಡಿಕೆ ಮಾಡಬಹುದು ಎಂದು ನಾವು ಇಲ್ಲಿ ವಿವರಿಸಿದ್ದೇವೆ. ಅಷ್ಟೇ ಅಲ್ಲದೇ ಆ ಯೋಜನೆಗಳ ಬಡ್ಡಿದರ ಕೂಡಾ ಈ ವರ್ಷ ಅಧಿಕವಾಗುವ ಸಾಧ್ಯತೆ ಇದೆ.

ಪ್ರಮುಖವಾಗಿ ತಮ್ಮ ಹಣದ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಬಯಸದ ಜನರಿಗೆ ಪೋಸ್ಟ್ ಆಫೀಸ್ ಯೋಜನೆಗಳು ಸುರಕ್ಷಿತ ಹೂಡಿಕೆ ವಿಧಾನವಾಗಿದೆ. ಅಂಚೆ ಕಚೇರಿಯು ಹಲವಾರು ಸುರಕ್ಷಿತ ಹೂಡಿಕೆ ಆಯ್ಕೆಗಳನ್ನು ನೀಡುತ್ತದೆ. ಅದನ್ನು ಹೊರತುಪಡಿಸಿ ಇನ್ನೂ ಹಲವಾರು ಸುರಕ್ಷಿತ ಹೂಡಿಕೆ ಯೋಜನೆಗಳು ಇದೆ.

ಮಾಸಿಕ 1 ಸಾವಿರ ಹೂಡಿಕೆ ಮಾಡಿ 18 ಲಕ್ಷ ರೂ. ಪಡೆಯುವುದು ಹೇಗೆ?ಮಾಸಿಕ 1 ಸಾವಿರ ಹೂಡಿಕೆ ಮಾಡಿ 18 ಲಕ್ಷ ರೂ. ಪಡೆಯುವುದು ಹೇಗೆ?

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಥವಾ ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಗಳು ಉತ್ತಮ ಆದಾಯವನ್ನು ನೀಡುವ ಯೋಜನೆಗಳು ಆಗಿದೆ.

 ಪಿಪಿಎಫ್ ಸೇರಿ ಹಲವಾರು ಯೋಜನೆಗಳ ಬಡ್ಡಿದರ ಏರಿಕೆಯಾಗುತ್ತಾ?

ಆದರೆ ಹಲವಾರು ವರ್ಷಗಳಿಂದ ಈ ಯೋಜನೆಗಳ ಬಡ್ಡಿದರಗಳು ಹೆಚ್ಚಳವನ್ನು ಕಂಡಿಲ್ಲ. ಆದರೆ ಜೂನ್‌ನಲ್ಲಿ ಅಥವಾ ಈ ವರ್ಷದಲ್ಲಿ ಪಿಪಿಎಫ್, ಎನ್‌ಎಸ್‌ಸಿ ಅಥವಾ ಎಸ್‌ಎಸ್‌ವೈ ಸ್ಕೀಮ್ ಬಡ್ಡಿದರಗಳನ್ನು ಹೆಚ್ಚಿಸಲು ಸರ್ಕಾರವು ಮುಂದಾಗುವ ಸಾಧ್ಯತೆ ಇದೆ.

ಸಾರ್ವಜನಿಕ ಭವಿಷ್ಯ ನಿಧಿ (PPF) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಗಾಗಿ ವಾರ್ಷಿಕ ಬಡ್ಡಿ ದರವು ಕ್ರಮವಾಗಿ 7.1 ಶೇಕಡಾ ಮತ್ತು 6.8 ರಷ್ಟು ಇದೆ. ಒಂದು ವರ್ಷದ ಅವಧಿಯ ಠೇವಣಿ ಯೋಜನೆಯು ಶೇಕಡಾ 5.5 ರ ಬಡ್ಡಿದರವಿದೆ. ಆದರೆ, ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯು ಶೇಕಡಾ 7.6 ಬಡ್ಡಿದರವನ್ನು ನೀಡುತ್ತದೆ. ಉಳಿತಾಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ವರ್ಷಕ್ಕೆ 4 ಪ್ರತಿಶತ ಇದೆ. 2021ರ ಜುಲೈ-ಆಗಸ್ಟ್-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹಲವಾರು ಯೋಜನೆಗಳು ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಹಾಗಾದರೆ ಪ್ರಸ್ತುತ ಬಡ್ಡಿದರ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ...

ಪೋಸ್ಟ್ ಆಫೀಸ್ ಯೋಜನೆಗಳ ಮೇಲಿನ ಪ್ರಸ್ತುತ ಬಡ್ಡಿ ದರಗಳು

* ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) : 7.1 ಶೇ
* ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (National Savings Certificate) : 6.8 ಶೇ
* ಸುಕನ್ಯಾ ಸಮೃದ್ಧಿ ಯೋಜನೆ: 7.6 ಶೇ
* ಕಿಸಾನ್ ವಿಕಾಸ್ ಪತ್ರ: 6.9 ಶೇ
* ಉಳಿತಾಯ ಠೇವಣಿ: 4 ಶೇ
* 1-ವರ್ಷದ ಸಮಯದ ಠೇವಣಿ: 5.5 ಶೇಕಡಾ
* 2-ವರ್ಷದ ಸಮಯದ ಠೇವಣಿ: 5.5 ಶೇಕಡಾ
* 3-ವರ್ಷದ ಸಮಯದ ಠೇವಣಿ: 5.5 ಶೇಕಡಾ
* 5 ವರ್ಷದ ಸಮಯದ ಠೇವಣಿ: 6.7 ಶೇ
* 5 ವರ್ಷದ ರಿಕ್ಯೂರಿಂಗ್ ಡೆಪಾಸಿಟ್: 5.8 ಶೇ
* 5-ವರ್ಷದ ಹಿರಿಯ ನಾಗರಿಕರ ಉಳಿತಾಯ ಯೋಜನೆ: 7.4 ಶೇ
* 5-ವರ್ಷದ ಮಾಸಿಕ ಆದಾಯ ಖಾತೆ: 6.6 ಶೇ

English summary

Interest rates of PPF, Senior Citizen Savings Scheme and Sukanya Samriddhi Yojana to Hike this Year

Interest rates of PPF, Senior Citizen Savings Scheme and Sukanya Samriddhi Yojana to Hike in 2022. Know more details in kannada.
Story first published: Monday, May 30, 2022, 12:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X