For Quick Alerts
ALLOW NOTIFICATIONS  
For Daily Alerts

ಐಟಿಆರ್ ಗಡುವು ವಿಸ್ತರಣೆ ಮಾಡಿ: ಟ್ವಿಟ್ಟರ್‌ನಲ್ಲಿ ಟ್ರೆಂಡ್

|

ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಗಡುವು ವಿಸ್ತರಣೆ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ. ಈ ಬೆನ್ನಲ್ಲೇ ಟ್ವಿಟ್ಟರ್‌ನಲ್ಲಿ ಐಟಿಆರ್ ಗಡುವು ವಿಸ್ತರಣೆ ಮಾಡಿ ಎಂಬ ಕೂಗು ಕೇಳಿ ಬಂದಿದೆ. Extend Due Date Immediately ಎಂಬುವುದು ಟ್ರೆಂಡ್ ಆಗಿದೆ.

 

ಸರ್ಕಾರ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಗಡುವನ್ನು ವಿಸ್ತರಣೆ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಶುಕ್ರವಾರ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ. ಈ ಬೆನ್ನಲ್ಲೇ ನೆಟ್ಟಿಗರು ಐಟಿಆರ್ ಫೈಲಿಂಗ್ ವೆಬ್‌ಸೈಟ್‌ನಲ್ಲಿರುವ ದೋಷದ ಬಗ್ಗೆ ಪ್ರಸ್ತಾಪ ಮಾಡಿ ಟ್ವೀಟ್ ಮಾಡಲು ಆರಂಭಿಸಿದ್ದಾರೆ.

Breaking: ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಗಡುವು ವಿಸ್ತರಣೆ ಇಲ್ಲ!Breaking: ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಗಡುವು ವಿಸ್ತರಣೆ ಇಲ್ಲ!

"ಆನ್‌ಲೈನ್ ಐಟಿಆರ್ ಫೈಲಿಂಗ್ ಮಾಡುವ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಯನ್ನು ಮೊದಲು ಬಗೆಹರಿಸಿ. ಐಟಿಆರ್-3ರಲ್ಲಿ ಕೊನೆಯ ಹೆಸರನ್ನು ಹಾಕಲು ಆಗುವುದಿಲ್ಲ. ಈ ತೊಂದರೆ ಇರುವಾಗ ಆನ್‌ಲೈನ್ ವೆರಿಫಿಕೇಷನ್ & ಸಬ್‌ಮಿಷನ್ ಸಾಧ್ಯವಾಗುವುದಿಲ್ಲ. ದಂಡವೆಂಬ ಕತ್ತಿ ನನ್ನ ತಲೆಯ ಮೇಲೆ ಬಿದ್ದಂತೆ ಆಗಿದೆ. ಏನು ಮಾಡುವುದು," ಎಂದು ನೆಟ್ಟಿಗರು ಒಬ್ಬರು ಪ್ರಶ್ನೆ ಮಾಡಿದ್ದಾರೆ.

 ಆದಾಯ ತೆರಿಗೆ ಇಲಾಖೆ ಏನು ಹೇಳುತ್ತೇವೆ?

ಆದಾಯ ತೆರಿಗೆ ಇಲಾಖೆ ಏನು ಹೇಳುತ್ತೇವೆ?

ನೆಟ್ಟಿಗರ ಈ ಆರೋಪಕ್ಕೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಪ್ರತಿಕ್ರಿಯೆ ನೀಡಿದೆ. "ಈ ಸಮಸ್ಯೆಯ ವಿವರವನ್ನು ನಮಗೆ ನೀಡಿ. ಪ್ಯಾನ್ ಹಾಗೂ ಮೊಬೈಲ್ ಸಂಖ್ಯೆಯನ್ನು ಉಲ್ಲೇಖ ಮಾಡಿ ಸಮಸ್ಯೆಯ ಬಗ್ಗೆ orm@cpc.incometax.gov.in ಗೆ ಇಮೇಲ್ ಮಾಡಿ. ನಮ್ಮ ತಂಡವು ನಿಮ್ಮನ್ನು ಸಂಪರ್ಕ ಮಾಡಲಿದೆ. ನೀವು ಪ್ಯಾನ್ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಡಿ ಎಂದು ನಾವು ನಿಮಗೆ ವಿನಂತಿ ಮಾಡುತ್ತೇವೆ. ಈ ರೀತಿ ವೈಯಕ್ತಿಕ ಮಾಹಿತಿ ಹಂಚಿಕೊಂಡರೆ ಅದರ ದುರ್ಬಳಕೆ ಆಗುವ ಸಾಧ್ಯತೆ ಇದೆ," ಎಂದು ಹೇಳಿದೆ.

ಕೊನೆಯ ದಿನಕ್ಕೂ ಮುನ್ನ ಐಟಿಆರ್ ಸಲ್ಲಿಕೆ ಮಾಡಿದ್ರೆ ಲಾಭ, ಏನದು?ಕೊನೆಯ ದಿನಕ್ಕೂ ಮುನ್ನ ಐಟಿಆರ್ ಸಲ್ಲಿಕೆ ಮಾಡಿದ್ರೆ ಲಾಭ, ಏನದು?

 ನೆಟ್ಟಿಗರ ಆರೋಪವೇನು?
 

ನೆಟ್ಟಿಗರ ಆರೋಪವೇನು?

ಇನ್ನು ಹಲವಾರು ಮಂದಿ ಆದಾಯ ತೆರಿಗೆ ಇಲಾಖೆಯ ಪೋರ್ಟಲ್ https://eportal.incometax.gov.in ಸರಿಯಾಗಿ ಕಾರ್ಯ ನಿರ್ವಹಣೆ ಆಗುತ್ತಿಲ್ಲ. ಬಹಳ ಸಮಯ ತೆಗೆದುಕೊಳ್ಳುತ್ತಿದೆ. ಪ್ರಕ್ರಿಯೆ ಮಧ್ಯದಲ್ಲೇ ಅಂತ್ಯವಾಗುವುದಿಲ್ಲ. ಬದಲಾಗಿ ಬಹಳ ಸಮಯ ವ್ಯರ್ಥವಾಗುತ್ತಿದೆ ಎಂದು ನೆಟ್ಟಿಗರು ಆರೋಪ ಮಾಡುತ್ತಿದ್ದಾರೆ. ಇನ್ನೋರ್ವ ನೆಟ್ಟಿಗರು, @IncomeTaxIndia ಎಂದು ಟ್ಯಾಗ್ ಮಾಡಿ, "ಇಂದು ಮುಂಜಾನೆಯಿಂದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಬರೀ ಲೋಡಿಂಗ್ ಎಂದು ಬರುತ್ತಿದೆ. ಇದು ಸರಿಯಾಗಿ ಯಾವಾಗ ಕಾರ್ಯ ನಿರ್ವಹಣೆ ಮಾಡುತ್ತದೆ ಎಂದು ನಮಗೆ ಸ್ಪಷ್ಟಣೆ ನೀಡಿ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಈ ಹಿಂದೆ ಗಡುವು ವಿಸ್ತರಿಸಿದ್ದ ಸರ್ಕಾರ

ಈ ಹಿಂದೆ ಗಡುವು ವಿಸ್ತರಿಸಿದ್ದ ಸರ್ಕಾರ

ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ಹಲವಾರು ಮಂದಿಗೆ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಲು ಸಾಧ್ಯವಾಗಿರಲಿಲ್ಲ. ಹಾಗೆಯೇ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ವೆಬ್‌ಸೈಟ್‌ನಲ್ಲಿನ ತಾಂತ್ರಿಕ ತೊಂದರೆಯು ಉಂಟಾಗಿತ್ತು. ಈ ಕಾರಣದಿಂದಾಗಿ ಕಳೆದ ವರ್ಷ ಸರ್ಕಾರವು ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಗಡುವನ್ನು ವಿಸ್ತರಣೆ ಮಾಡಿದೆ. ಈ ನಡುವೆ ಇಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31ಕ್ಕೆ ಕೊನೆಯ ದಿನಾಂಕ ಎಂದು ಮತ್ತೆ ನೆನಪಿಸಿದೆ. ಇನ್ನು ಸಮೀಕ್ಷೆಯ ಪ್ರಕಾರ, 46% ತೆರಿಗೆ ಪಾವತಿದಾರರು ಐಟಿಆರ್ ಅನ್ನು ಸಲ್ಲಿಸಿದ್ದಾರೆ ಮತ್ತು 37% ಜನರು ಗಡುವಿನೊಳಗೆ ಹಾಗೆ ಮಾಡುವುದು ಕಷ್ಟ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ, ಆದಾಯ ತೆರಿಗೆ ಇಲಾಖೆಯ ಟ್ವೀಟ್ ಪ್ರಕಾರ, AY 2022-23 ಗಾಗಿ 2 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ (ITRs) ಆದಾಯ ತೆರಿಗೆ ಇ-ಫೈಲಿಂಗ್ ವ್ಯವಸ್ಥೆಯ ಮೂಲಕ ಸಲ್ಲಿಸಲಾಗಿದೆ.

English summary

ITR filing deadline: Extend Due Date Immediately Trends in Twitter

While the Government is not planning to extend the due dates, several users on Twitter today urged the Income Tax department to extend due dates immediately.
Story first published: Saturday, July 23, 2022, 15:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X