For Quick Alerts
ALLOW NOTIFICATIONS  
For Daily Alerts

ಐಟಿಆರ್‌ ಫಾರ್ಮ್‌ನಲ್ಲಿ ಕ್ರಿಪ್ಟೋಕರೆನ್ಸಿ ಆದಾಯದ ವಿವರಕ್ಕೆ ಪ್ರತ್ಯೇಕ ಕಾಲಮ್‌

|

ಆದಾಯ ತೆರಿಗೆ ರಿಟರ್ನ್ಸ್ ಕುರಿತು ಬಜೆಟ್ ಘೋಷಣೆಯ ಒಂದು ದಿನದ ನಂತರ, ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಮುಂದಿನ ವರ್ಷದಿಂದ ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳು ಕ್ರಿಪ್ಟೋಕರೆನ್ಸಿಗಳಿಂದ ಪಡೆದ ಆದಾಯದ ವಿವರಕ್ಕಾಗಿ ಪ್ರತ್ಯೇಕ ಕಾಲಮ್ ಅನ್ನು ಹೊಂದಿರುತ್ತವೆ ಎಂದು ತಿಳಿಸಿದ್ದಾರೆ. "ಮುಂದಿನ ವರ್ಷ ITR ಫಾರ್ಮ್ ಕ್ರಿಪ್ಟೋಗಾಗಿ ಪ್ರತ್ಯೇಕ ಕಾಲಮ್ ಇರಲಿದೆ. ಹೌದು ನೀವು ಈ ಮೂಲಕ ಕ್ರಿಪ್ಟೋ ಆದಾಯವನ್ನು ಬಹಿರಂಗಪಡಿಸಬೇಕಾಗಿದೆ," ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

 

ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐಗೆ ವಿವರಗಳನ್ನು ನೀಡಿದ ತರುಣ್‌ ಬಜಾಜ್, "ಕ್ರಿಪ್ಟೋಕರೆನ್ಸಿಗಳಿಂದ ಬರುವ ಲಾಭಗಳು ಯಾವಾಗಲೂ ತೆರಿಗೆಗೆ ಒಳಪಡುತ್ತವೆ. ಬಜೆಟ್ ಪ್ರಸ್ತಾಪಿಸಿರುವುದು ಹೊಸ ತೆರಿಗೆಯಲ್ಲ ಬದಲಾಗಿ ಸಮಸ್ಯೆಯ ಬಗ್ಗೆ ಒಂದು ಖಚಿತತೆಯನ್ನು ಬಜೆಟ್‌ನಲ್ಲಿ ವ್ಯಕ್ತಪಡಿಸಲಾಗಿದೆ," ಎಂದು ಅಭಿಪ್ರಾಯಪಟ್ಟರು.

 

 ಡಿಜಿಟಲ್ ಕರೆನ್ಸಿಯನ್ನು ನಗದಿನೊಂದಿಗೆ ಬದಲಾಯಿಸಿಕೊಳ್ಳಬಹುದು: ಮೋದಿ ಡಿಜಿಟಲ್ ಕರೆನ್ಸಿಯನ್ನು ನಗದಿನೊಂದಿಗೆ ಬದಲಾಯಿಸಿಕೊಳ್ಳಬಹುದು: ಮೋದಿ

"ಹಣಕಾಸು ಮಸೂದೆಯಲ್ಲಿನ ನಿಬಂಧನೆಯು ವರ್ಚುವಲ್ ಡಿಜಿಟಲ್ ಆಸ್ತಿಗಳ ತೆರಿಗೆಗೆ ಸಂಬಂಧಿಸಿದೆ. ಇದು ಕ್ರಿಪ್ಟೋಕರೆನ್ಸಿಗಳ ತೆರಿಗೆಯಲ್ಲಿ ನಿಶ್ಚಿತತೆ ತರಲಿದೆ," ಎಂದು ತಿಳಿಸಿದ್ದಾರೆ. ಇದಲ್ಲದೆ, ಕೇಂದ್ರ ಸರ್ಕಾರವು ಏಪ್ರಿಲ್ 1 ರಿಂದ ಕುದುರೆ ರೇಸ್ ಅಥವಾ ಇತರ ವಹಿವಾಟುಗಳಿಂದ ಪಡೆಯುವ ಆದಾಯಕ್ಕೆ 30 ಪ್ರತಿಶತ ತೆರಿಗೆ ಮತ್ತು ಸೆಸ್ ಮತ್ತು ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತದೆ.

 ಐಟಿಆರ್‌ ಫಾರ್ಮ್‌ನಲ್ಲಿ ಕ್ರಿಪ್ಟೋಕರೆನ್ಸಿ ಆದಾಯಕ್ಕೆ ಕಾಲಮ್‌

ಮಾಧ್ಯಮಗಳ ವರದಿಯ ಪ್ರಕಾರ ಕೇಂದ್ರವು ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಿಸಲು ಕಾನೂನನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಆದರೆ ಯಾವುದೇ ಕರಡು ಇನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ. ಆರ್‌ಬಿಐ 'ಡಿಜಿಟಲ್ ರುಪೀ' ಬಿಡುಗಡೆ ಮಾಡುವುದರ ಜೊತೆಗೆ ಕ್ರಿಪ್ಟೋಕರೆನ್ಸಿಗಳು ಮತ್ತು ಎನ್‌ಎಫ್‌ಟಿ ಸೇರಿದಂತೆ ಡಿಜಿಟಲ್ ಆಸ್ತಿ ವಹಿವಾಟುಗಳ ಲಾಭದ ಮೇಲೆ ಏಪ್ರಿಲ್ 1 ರಿಂದ ಶೇಕಡಾ 30 ತೆರಿಗೆಯನ್ನು ವಿಧಿಸಲಿದೆ ಎಂದು ಬಜೆಟ್‌ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

ಈ 20 ಷೇರುಗಳ ಖರೀದಿ ನಿಮಗೆ ಉತ್ತಮ ಲಾಭ ನೀಡಬಹುದುಈ 20 ಷೇರುಗಳ ಖರೀದಿ ನಿಮಗೆ ಉತ್ತಮ ಲಾಭ ನೀಡಬಹುದು

ಕ್ರಿಪ್ಟೋ ಆದಾಯದ ಮೇಲೆ ತೆರಿಗೆ ವಿಧಿಸುವ ವಿಚಾರದಲ್ಲಿ ಕೇಂದ್ರ ಸ್ಪಷ್ಟ

"ಕ್ರಿಪ್ಟೋಕರೆನ್ಸಿ ಆಸ್ತಿಗಳಿಂದ ಬರುವ ಆದಾಯದ ಮೇಲೆ ತೆರಿಗೆ ವಿಧಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರವು ಸ್ಪಷ್ಟವಾಗಿದೆ. ಆದ್ದರಿಂದ ನಾವು ಗರಿಷ್ಠ ದರವನ್ನು ತಂದಿದ್ದೇವೆ. ಶುಲ್ಕದೊಂದಿಗೆ 30 ಪ್ರತಿಶತವನ್ನು ವಿಧಿಸಿದ್ದೇವೆ. ನಾವು ಟಿಡಿಎಸ್‌ (ತೆರಿಗೆ ವಿನಾಯಿತಿ)ಅನ್ನು ಕೂಡಾ ತಂದಿದ್ದೇವೆ. ಆದ್ದರಿಂದ ನಾವು ಈಗ ವಹಿವಾಟುಗಳನ್ನು ಟ್ರ್ಯಾಕ್ ಮಾಡುತ್ತೇವೆ," ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

2022-23ರ ಬಜೆಟ್ ಒಂದು ವರ್ಷದಲ್ಲಿ ರೂ 10,000 ಮೀರಿದ ವರ್ಚುವಲ್ ಕರೆನ್ಸಿಗಳಿಗೆ ಪಾವತಿಗಳ ಮೇಲೆ 1 ಶೇಕಡಾ ಟಿಡಿಎಸ್‌ ಅನ್ನು ಪ್ರಸ್ತಾಪ ಮಾಡಿದೆ. ಐಟಿ ಕಾಯಿದೆಯ ಅಡಿಯಲ್ಲಿ ತಮ್ಮ ಖಾತೆಗಳನ್ನು ಆಡಿಟ್ ಮಾಡಬೇಕಾದ ವ್ಯಕ್ತಿಗಳು ತೆರಿಗೆ ವಿನಾಯಿತಿ ಮಿತಿಯು ವರ್ಷಕ್ಕೆ 50,000 ರೂಪಾಯಿ ಆಗಿದೆ. ಭಾರತದಲ್ಲಿನ ಕ್ರಿಪ್ಟೋ ಮಾರುಕಟ್ಟೆಯು ಜೂನ್ 2021 ರವರೆಗಿನ ವರ್ಷದಲ್ಲಿ ಶೇಕಡಾ 641 ರಷ್ಟು ಬೆಳೆದಿದೆ ಎಂದು ಉದ್ಯಮ ಸಂಶೋಧನಾ ಸಂಸ್ಥೆ ಚೈನಾಲಿಸಿಸ್ ಅಕ್ಟೋಬರ್‌ನಲ್ಲಿ ವರದಿ ಮಾಡಿದೆ.

"ಕ್ರಿಪ್ಟೋಗಳು ಯಾವಾಗಲೂ ತೆರಿಗೆಗೆ ಒಳಪಡುತ್ತದೆ, ಇದು ಹೊಸ ತೆರಿಗೆ ಅಲ್ಲ ಎಂದು ನಾನು ಹೇಳುತ್ತಿಲ್ಲ. ಈಗ ನೀವು ಐಟಿಆರ್ ರೂಪದಲ್ಲಿ ಕ್ರಿಪ್ಟೋ ಆದಾಯ ತೋರಿಸಿದ ಬಳಿಕ ನಿಮಗೆ ಶೇಕಡಾ 30 ರಷ್ಟು ತೆರಿಗೆ ವಿಧಿಸಲಾಗುತ್ತದೆ," ಎಂದು ಮತ್ತೆ ಸ್ಪಷ್ಟಪಡಿಸಿದ್ದಾರೆ.

ಇನ್ನು ಡಿಜಿಟಲ್ ಕರೆನ್ಸಿಯನ್ನು ನಗದಿನೊಂದಿಗೆ ಬದಲಾಯಿಸಿಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022ರ ಕೇಂದ್ರ ಬಜೆಟ್‌ನಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಘೋಷಣೆ ಮಾಡಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದಾರೆ.

English summary

ITR Forms From Next Year Will Have Separate Column For Income From Cryptocurrency: Revenue Secretary

ITR Forms From Next Year Will Have Separate Column For Income From Cryptocurrency Says Revenue Secretary.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X