For Quick Alerts
ALLOW NOTIFICATIONS  
For Daily Alerts

ಎಫ್‌ಡಿ, ಆರ್‌ಡಿ ಹಾಗೂ ಪಿಪಿಎಫ್​ ಬಡ್ಡಿ ಆದಾಯಕ್ಕೆ ತೆರಿಗೆ ಲೆಕ್ಕಾಚಾರ ಹೇಗೆ?

By ಅಚಿಂತ್ಯ ಆಚಾರ್
|

ಹೆಚ್ಚಿನ ಅಪಾಯ ತೆಗೆದುಕೊಳ್ಳಲು ಇಷ್ಟಪಡದವರು ತಮ್ಮ ಹಣವನ್ನು ಫಿಕ್ಸೆಡ್​ ಡೆಪಾಸಿಟ್​, ರೆಕರಿಂಗ್ ಡೆಪಾಸಿಟ್ ಅಥವಾ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (PPF) ಹೂಡಿಕೆ ಮಾಡಲು ಬಯಸುತ್ತಾರೆ. ಈ ಜನಪ್ರಿಯ ಹೂಡಿಕೆ ಆಯ್ಕೆಗಳಿಂದ ಬಡ್ಡಿ ಆದಾಯ ಸೃಷ್ಟಿಯಾಗುತ್ತದೆ ಮತ್ತು ಇದು ಮಾರುಕಟ್ಟೆಯ ಪರಿಸ್ಥಿತಿಗಳಿಗೆ ಏನೇನೂ ಸಂಬಂಧಿಸಿರುವುದಲ್ಲ. ಆದರೆ ಈ ರೀತಿ ನೀವು ಗಳಿಸುವ ಬಡ್ಡಿಯನ್ನು ಆದಾಯದ ಹೆಚ್ಚುವರಿ ಮೂಲ ಅಂತಲೇ ಪರಿಗಣಿಸಲಾಗುತ್ತದೆ. ಯಾವುದೇ ಇತರ ಆದಾಯದ ಮೂಲಗಳಂತೆಯೇ ದೇಶದ ಆದಾಯ ತೆರಿಗೆ ನಿಯಮಗಳ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.

ಅಂದರೆ, ನಿಮ್ಮ ಹೂಡಿಕೆ ಮೇಲೆ ಗಳಿಸಿದ ಆದಾಯವು ಸರ್ಕಾರದ ನಿಗದಿತ ಮಿತಿಯನ್ನು ಮೀರಿದರೆ ಅದು ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ಒದಗಿಸಲಾದ ಹಲವಾರು ತೆರಿಗೆ ಉಳಿತಾಯಗಳ ಲಾಭವನ್ನು ಪಡೆಯುವ ಮೂಲಕ ನಿಮ್ಮ ತೆರಿಗೆ ಹೊಣೆಗಾರಿಕೆ ಕಡಿಮೆ ಮಾಡಬಹುದು. ಆದರೆ ಮೊದಲಿಗೆ ಬಡ್ಡಿ ಆದಾಯಕ್ಕೆ ಹೇಗೆ ತೆರಿಗೆ ವಿಧಿಸಲಾಗುತ್ತದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಬಡ್ಡಿ ಆದಾಯಕ್ಕೆ ಹೇಗೆ ತೆರಿಗೆ ವಿಧಿಸಲಾಗುತ್ತದೆ ಎಂಬುದನ್ನು ನೋಡೋಣ.

 ಸ್ವಯಂಪ್ರೇರಿತ ಭವಿಷ್ಯ ನಿಧಿ: ತೆರಿಗೆ ವಿನಾಯಿತಿ ಜೊತೆ ನಿವೃತ್ತಿ ಜೀವನ ಸುಲಭ ಸ್ವಯಂಪ್ರೇರಿತ ಭವಿಷ್ಯ ನಿಧಿ: ತೆರಿಗೆ ವಿನಾಯಿತಿ ಜೊತೆ ನಿವೃತ್ತಿ ಜೀವನ ಸುಲಭ

ಎಫ್‌ಡಿ ಮೇಲಿನ ಬಡ್ಡಿ ಆದಾಯ
ಫಿಕ್ಸೆಡ್​ ಡೆಪಾಸಿಟ್​ ಮೇಲೆ ಗಳಿಸಿದ ಬಡ್ಡಿಯು ತೆರಿಗೆಗೆ ಒಳಪಡುತ್ತದೆ ಮತ್ತು ಆಯಾ ಹಣಕಾಸು ವರ್ಷಕ್ಕೆ ಐಟಿ ಕಾಯ್ದೆ ಸೂಕ್ತ ತೆರಿಗೆ ದರಗಳ ಪ್ರಕಾರ ತೆರಿಗೆಗಳನ್ನು ಪಾವತಿಸಬೇಕು. ಅಲ್ಲದೆ, ಯಾವುದೇ ಹಣಕಾಸು ವರ್ಷದಲ್ಲಿ ಫಿಕ್ಸೆಡ್​ ಡೆಪಾಸಿಟ್‌ಗಳ ಮೇಲಿನ ಬಡ್ಡಿ ಆದಾಯವು ರೂ. 40,000 (ಹಿರಿಯ ನಾಗರಿಕರಿಗೆ ರೂ 50,000) ತಲುಪಿದಾಗ ಬ್ಯಾಂಕ್‌ಗಳು ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸುತ್ತವೆ (ಟಿಡಿಎಸ್). 40,000 ರೂಪಾಯಿಗಿಂತ ಹೆಚ್ಚಿನ ಆದಾಯದ ಮೇಲೆ ಬ್ಯಾಂಕ್‌ಗಳು ಶೇ 10ರಷ್ಟು ತೆರಿಗೆಯನ್ನು ವಿಧಿಸುತ್ತವೆ ಮತ್ತು ಅದನ್ನು ಮೂಲದಲ್ಲೇ ಕಡಿತಗೊಳಿಸಲಾಗುತ್ತದೆ. ಅನಿವಾಸಿ ಭಾರತೀಯರು ಶೇ 30ರ ದರದಲ್ಲಿ ಟಿಡಿಎಸ್​ ಭರಿಸಬೇಕಾಗುತ್ತದೆ. ಇದರ ಜತೆಗೆ ಅನ್ವಯವಾಗುವ ಹೆಚ್ಚುವರಿ ಶುಲ್ಕ ಮತ್ತು ಸೆಸ್ ಸಹ ಇರುತ್ತವೆ.

ಎಫ್‌ಡಿ, ಆರ್‌ಡಿ ಹಾಗೂ ಪಿಪಿಎಫ್​ ಬಡ್ಡಿ ಆದಾಯಕ್ಕೆ ತೆರಿಗೆ ಲೆಕ್ಕ ಹೇಗ

ಎಲ್ಲ ಮೂಲಗಳಿಂದ ನಿಮ್ಮ ಒಟ್ಟು ತೆರಿಗೆಯ ಆದಾಯವು ತೆರಿಗೆ ವ್ಯಾಪ್ತಿಗೆ ಬರುವಷ್ಟಕ್ಕಿಂತ ಕಡಿಮೆ ಇದ್ದಲ್ಲಿ ಫಾರ್ಮ್ 15G (ಹಿರಿಯ ಜನರಿಗೆ 15H) ಸಲ್ಲಿಸುವ ಮೂಲಕ ಟಿಡಿಎಸ್​ ವಿನಾಯಿತಿ ಪಡೆಯಬಹುದು. ಸೆಕ್ಷನ್ 80TTB ಹಿರಿಯ ನಾಗರಿಕರಿಗೆ ಬಡ್ಡಿ ಆದಾಯದಲ್ಲಿ 50,000 ರೂಪಾಯಿವರೆಗೆ ಕಡಿತಕ್ಕೆ ಅವಕಾಶ ನೀಡುತ್ತದೆ. ನಿಮ್ಮ ಬ್ಯಾಂಕ್ ಟಿಡಿಎಸ್​ ಅನ್ನು ಕಡಿತಗೊಳಿಸಿದರೆ ಮತ್ತು ನಿಮ್ಮ ಒಟ್ಟು ಆದಾಯವು ವರ್ಷಕ್ಕೆ 5,00,000 ರೂಪಾಯಿಗಿಂತ ಕಡಿಮೆಯಿದ್ದರೆ ಮರುಪಾವತಿಗೆ ಅರ್ಹರಿರುತ್ತೀರಿ.

2022 ರ ಬಜೆಟ್‌ನಿಂದ ಆದಾಯ ತೆರಿಗೆ ಪಾವತಿದಾರರು ಬಯಸುವುದು ಇದನ್ನು..2022 ರ ಬಜೆಟ್‌ನಿಂದ ಆದಾಯ ತೆರಿಗೆ ಪಾವತಿದಾರರು ಬಯಸುವುದು ಇದನ್ನು..

ರೆಕರಿಂಗ್ ಡೆಪಾಸಿಟ್‌ಗಳ ಬಡ್ಡಿ ಆದಾಯ
ರೆಕರಿಂಗ್​ ಡೆಪಾಸಿಟ್​ ಹೂಡಿಕೆಗಳ ಮೇಲೆ ಯಾವುದೇ ತೆರಿಗೆ ಬೆನಿಫಿಟ್‌ಗಳು ಲಭ್ಯವಿಲ್ಲ. ರೆಕರಿಂಗ್​ ಡೆಪಾಸಿಟ್‌ಗಳ ಮೇಲೆ ಪಡೆಯುವ ಬಡ್ಡಿ ಮೇಲೆ ಆದಾಯ ತೆರಿಗೆಯನ್ನು ಪಾವತಿಸಬೇಕು. ಆರ್‌ಡಿ ಹೊಂದಿರುವವರ ತೆರಿಗೆ ಬ್ರಾಕೆಟ್‌ನ ದರದ ಆಧಾರದಲ್ಲಿ ತೆರಿಗೆಯನ್ನು ಪಾವತಿಸಬೇಕು. ರೆಕರಿಂಗ್​ ಡೆಪಾಸಿಟ್​ಗಳು ಟಿಡಿಎಸ್‌ಗೆ ಒಳಪಟ್ಟಿರುತ್ತವೆ (ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾಗುತ್ತದೆ). 40,000 ರೂಪಾಯಿಗಿಂತ ಹೆಚ್ಚು ಗಳಿಸಿದ ಬಡ್ಡಿಯ ಮೇಲೆ ಶೇ 10ರ ದರದಲ್ಲಿ ಕಡಿತಗೊಳಿಸಲಾಗುತ್ತದೆ. 40,000 ರೂಪಾಯಿವರೆಗಿನ ಬಡ್ಡಿಯ ಮೇಲೆ ಯಾವುದೇ ಟಿಡಿಎಸ್​ ಕಡಿತಗೊಳಿಸುವುದಿಲ್ಲ.

ಪಬ್ಲಿಕ್ ಪ್ರಾವಿಡೆಂಟ್​ ಫಂಡ್​ ಮೇಲಿನ ಬಡ್ಡಿ ಆದಾಯ
ಸಾರ್ವಜನಿಕ ಭವಿಷ್ಯ ನಿಧಿಯಿಂದ (PPF) ಗಳಿಸಿದ ಬಡ್ಡಿ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಿಲ್ಲ. ಏಕೆಂದರೆ ಇದು ಸಂಪೂರ್ಣವಾಗಿ ವಿನಾಯಿತಿ ಪಡೆದಿದೆ. ವಿನಾಯಿತಿ-ವಿನಾಯಿತಿ-ವಿನಾಯಿತಿ (EEE) ಇದು ಪಿಪಿಎಫ್‌ಗೆ ಅನ್ವಯಿಸುತ್ತದೆ. ಪರಿಣಾಮವಾಗಿ, ಠೇವಣಿ, ಪಡೆದ ಬಡ್ಡಿ ಮತ್ತು ಹಿಂತೆಗೆದುಕೊಳ್ಳುವ ಮೊತ್ತ ಈ ಮೂರೂ ತೆರಿಗೆ ಮುಕ್ತವಾಗಿರುತ್ತದೆ.

English summary

Know More About Interest Income Taxation on FD, RD, PPF in Kannada

Know more about interest income taxation on on FD, RD, PPF. Interest earned on a fixed deposit is taxable.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X