For Quick Alerts
ALLOW NOTIFICATIONS  
For Daily Alerts

ಸಾಲದ ಬಡ್ಡಿದರ ಏರಿಕೆ ಮಾಡಿದ ಬ್ಯಾಂಕುಗಳು: ಇಲ್ಲಿದೆ ಪಟ್ಟಿ

|

ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಅನಿರೀಕ್ಷಿತ ರೆಪೋ ದರ ಹೆಚ್ಚಳ ಮಾಡಿದೆ. ಈ ರೆಪೋ ದರ ಏರಿಕೆಯು ಹಲವಾರು ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್‌ಗಳು ಸಾಲದ ಬಡ್ಡಿದರ ಹೆಚ್ಚಳಕ್ಕೆ ಕಾರಣವಾಗಿದೆ. ಈಗಾಗಲೇ ಹಲವಾರು ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ.

ಆರ್‌ಬಿಐ ಬುಧವಾರ ಎಲ್‌ಐಸಿ ಐಪಿಒ ನಡೆಯುತ್ತಿರುವಾಗಲೇ ಅನಿರೀಕ್ಷಿತವಾಗಿ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ (100 ಬೇಸಿಸ್ ಪಾಯಿಂಟ್‌ಗಳು ಒಂದು ಶೇಕಡಾವಾರು ಪಾಯಿಂಟ್‌ಗೆ ಸಮ) ಹೆಚ್ಚಳ ಮಾಡಿದೆ. ಹಣದುಬ್ಬರ ನಿರ್ವಹಣೆ ಕಾರಣದಿಂದಾಗಿ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ಆದರೆ ಆರ್‌ಬಿಐನ ಈ ಕ್ರಮದಿಂದಾಗಿ ಸಾಲ ಪಡೆದಿರುವವರ ಅಥವಾ ಇನ್ನು ಸಾಲ ಪಡೆಯಲಿರುವವರ ಮೇಲೆ ಇಎಂಐ ಹೊರೆಯು ಹೆಚ್ಚಾಗಲಿದೆ.

ರೆಪೋ ದರ ಹೆಚ್ಚಳ: ಇಎಂಐ ಹೊರೆ ಹೆಚ್ಚಳ, ಯಾವ ವಲಯದ ಮೇಲೆ ಏನು ಪ್ರಭಾವ?ರೆಪೋ ದರ ಹೆಚ್ಚಳ: ಇಎಂಐ ಹೊರೆ ಹೆಚ್ಚಳ, ಯಾವ ವಲಯದ ಮೇಲೆ ಏನು ಪ್ರಭಾವ?

ಈಗಾಗಲೇ ತರಕಾರಿ, ಹಣ್ಣು, ಇಂಧನ ಎಲ್ಲಾ ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೆ ಏರಿದೆ. ಇಂದು (ಮೇ 7) ಎಲ್‌ಪಿಜಿ ಬೆಲೆಯು ಕೂಡಾ ಹೆಚ್ಚಳವಾಗಿ ಸಾವಿರ ರೂಪಾಯಿ ಗಡಿ ದಾಟಿದೆ. ಈ ನಡುವೆ ಆರ್‌ಬಿಐ ರೆಪೋ ದರ ಏರಿಕೆ ಹಿನ್ನೆಲೆ ಬ್ಯಾಂಕುಗಳ ಸಾಲದ ಬಡ್ಡಿದರವನ್ನು ಏರಿಕೆ ಮಾಡುತ್ತಿದೆ. ಈವರೆಗೆ ಹಲವಾರು ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಯಾವೆಲ್ಲಾ ಬ್ಯಾಂಕುಗಳ ಬಡ್ಡಿದರವನ್ನು ಏರಿಕೆ ಮಾಡಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ರೆಪೋ ದರ ಏರಿಕೆ: ನಿಮ್ಮ ಇಎಂಐ ಹೊರೆ ಕಡಿಮೆ ಮಾಡುವುದು ಹೇಗೆ? ರೆಪೋ ದರ ಏರಿಕೆ: ನಿಮ್ಮ ಇಎಂಐ ಹೊರೆ ಕಡಿಮೆ ಮಾಡುವುದು ಹೇಗೆ?

 ಎಚ್‌ಡಿಎಫ್‌ಸಿ ಲಿಮಿಟೆಡ್ ಬಡ್ಡಿದರ ಏರಿಕೆ

ಎಚ್‌ಡಿಎಫ್‌ಸಿ ಲಿಮಿಟೆಡ್ ಬಡ್ಡಿದರ ಏರಿಕೆ

ಶನಿವಾರ ತನ್ನ ಸಾಲದ ಬಡ್ಡಿದರವನ್ನು ಎಚ್‌ಡಿಎಫ್‌ಸಿ ಲಿಮಿಟೆಡ್ ಏರಿಕೆ ಮಾಡಿದೆ. ಸಾಲದ ಬಡ್ಡಿದರವನ್ನು 30 ಬೇಸಿಸ್ ಪಾಯಿಂಟ್‌ ಏರಿಕೆ ಮಾಡಲಾಗುವುದು ಎಂದು ಎಚ್‌ಡಿಎಫ್‌ಸಿ ಲಿಮಿಟೆಡ್ ಘೋಷಣೆ ಮಾಡಿದೆ. "ಎಚ್‌ಡಿಎಫ್‌ಸಿ ಗೃಹ ಸಾಲಗಳ ಮೇಲಿನ ರಿಟೇಲ್ ಪ್ರೈಮ್ ಲೆಂಡಿಂಗ್ ದರವನ್ನು ಹೆಚ್ಚಳ ಮಾಡುತ್ತದೆ. 30 ಮೂಲ ಅಂಕಗಳಿಂದ ಏರಿಕೆ ಮಾಡಲಾಗುತ್ತದೆ. ಈ ಹೊಸ ದರವು 2022 ರ ಮೇ 9 ರಿಂದ ಜಾರಿಗೆ ಬರಲಿದೆ," ಎಂದು ಹೌಸಿಂಗ್ ಫೈನಾನ್ಸ್ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಹೊಸ ಸಾಲಗಾರರಿಗೆ ಪರಿಷ್ಕೃತ ದರಗಳು ಶೇಕಡ 7 ಮತ್ತು ಶೇಕಡ 7.45 ರ ನಡುವೆ ಇರುತ್ತದೆ. ಪ್ರಸ್ತುತ ಶೇಕಡ 6.70 ರಿಂದ ಶೇಕಡ 7.15ರ ನಡುವೆ ಸಾಲದ ಬಡ್ಡಿದರವಿದೆ. ಈಗಾಗಲೇ ಸಾಲ ಪಡೆದಿರುವವರಿಗೆ ಶೇಕಡ ಬೇಸಿಸ್ ಪಾಯಿಂಟ್‌ಗಳಷ್ಟು ಅಥವಾ ಶೇಕಡ 0.3ರಷ್ಟು ಬಡ್ಡಿ ಏರಿಕೆ ಆಗಲಿದೆ.

 ಪಂಜಾಬ್‌ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)

ಪಂಜಾಬ್‌ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)

ಜೂನ್ 1 ರಿಂದ ಜಾರಿಗೆ ಬರುವಂತೆ ಪಂಜಾಬ್‌ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ತನ್ನ ಸಾಲದ ಬಡ್ಡಿದರವನ್ನು ಶೇಕಡ 0.40ರಿಂದ ಶೇಕಡ 6.90ರವರೆಗೆ ಅಧಿಕ ಮಾಡಿದೆ. ಹೊಸ ಗ್ರಾಹಕರಿಗೆ, ಪರಿಷ್ಕೃತ ಬಡ್ಡಿದರವು ಮೇ 7, 2022 ರಿಂದ ಜಾರಿಗೆ ಬರಲಿದೆ. ಆದರೆ ಈಗಾಗಲೇ ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ನಿಂದ ಸಾಲ ಪಡೆದಿರುವವರಿಗೆ ಈ ಹೊಸ ಬಡ್ಡಿದರವು ಜೂನ್ 1 ರಿಂದ ಜಾರಿಗೆ ಬರಲಿದೆ. ಇನ್ನು ಬ್ಯಾಂಕ್ 2 ಕೋಟಿ ರೂ.ಗಿಂತ ಕಡಿಮೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

 ಐಸಿಐಸಿಐ ಬ್ಯಾಂಕ್ ಬಡ್ಡಿದರ ಎಷ್ಟು ಹೆಚ್ಚಳ?

ಐಸಿಐಸಿಐ ಬ್ಯಾಂಕ್ ಬಡ್ಡಿದರ ಎಷ್ಟು ಹೆಚ್ಚಳ?

ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಐಸಿಐಸಿಐ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಐಪಿಐಸಿಐ ಬ್ಯಾಂಕ್, "ರೆಪೋ ದರ ಏರಿಕೆ ಬೆನ್ನಲ್ಲೇ ಎಕ್ಸ್‌ಟರ್ನಲ್ ಬೆಂಚ್‌ಮಾರ್ಕ್ ಲೆಂಡಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ. ಮೇ 4, 2022 ರಿಂದ ಜಾರಿಗೆ ಬರುವಂತೆ ದರವು ಶೇಕಡ 8.10ಕ್ಕೆ ಹೆಚ್ಚಳವಾಗಿದೆ," ಎಂದು ಮಾಹಿತಿ ನೀಡಿದೆ.

 ಬ್ಯಾಂಕ್ ಆಫ್ ಬರೋಡಾದಲ್ಲೂ ಬಡ್ಡಿದರ ಹೆಚ್ಚಳ

ಬ್ಯಾಂಕ್ ಆಫ್ ಬರೋಡಾದಲ್ಲೂ ಬಡ್ಡಿದರ ಹೆಚ್ಚಳ

ಬ್ಯಾಂಕ್ ಆಫ್ ಬರೋಡಾ ಕೂಡಾ ಸಾಲದ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. "ಮೇ 5, 2022 ರಿಂದ ಜಾರಿಗೆ ಬರುವಂತೆ, ಚಿಲ್ಲರೆ ಸಾಲಗಳಿಗೆ ಸಂಬಂಧಿಸಿದ ಬರೋಡಾ ರೆಪೊ ಲಿಂಕ್ಡ್ ಸಾಲದ ದರ ಶೇಕಡಾ 6.90 ಆಗಿದೆ. ಪ್ರಸ್ತುತ ಆರ್‌ಬಿಐ ರೆಪೋ ದರ: 4.40 ಶೇಕಡಾ + ಮಾರ್ಕ್-ಅಪ್-2.50 ಶೇಕಡಾ, ಎಸ್.ಪಿ.ಒ 25 ಶೇಕಡ," ಎಂದು ಬ್ಯಾಂಕ್ ಆಫ್ ಬರೋಡಾ ವೆಬ್‌ಸೈಟ್ ತಿಳಿಸಿದೆ.

 ಬ್ಯಾಂಕ್ ಆಫ್ ಇಂಡಿಯಾದಲ್ಲೆಷ್ಟು ಬಡ್ಡಿದರ?

ಬ್ಯಾಂಕ್ ಆಫ್ ಇಂಡಿಯಾದಲ್ಲೆಷ್ಟು ಬಡ್ಡಿದರ?

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಸಾಲದ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಮೇ 5 ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗಿದೆ. ಈ ಬಗ್ಗೆ ಬ್ಯಾಂಕ್ ಮಾಹಿತಿ ನೀಡಿದೆ. ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲದ ಬಡ್ಡಿದರವನ್ನು ಶೇಕಡ 7.25ಕ್ಕೆ ಏರಿಕೆ ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

English summary

List of Banks That Have Hiked Lending Rates Post-rbi Repo Rate Announcement

List of banks that have hiked lending rates post-RBI repo rate announcement.
Story first published: Saturday, May 7, 2022, 16:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X