For Quick Alerts
ALLOW NOTIFICATIONS  
For Daily Alerts

ಆರೋಗ್ಯ ವಿಮೆ ವಿಚಾರದಲ್ಲಿ ನೀವು ಈ ತಪ್ಪುಗಳನ್ನು ಎಂದಿಗೂ ಮಾಡದಿರಿ..

|

ನಮ್ಮ ಭವಿಷ್ಯ ಸುರಕ್ಷಿತವಾಗಿರಬೇಕಾದರೆ ನಾವು ಹಣಕಾಸು ಉಳಿತಾಯ ಮಾಡಿಕೊಳ್ಳುವುದು ಅತೀ ಮುಖ್ಯ. ಅದರಂತೆ ನಮ್ಮ ಆರೋಗ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಲು ನಾವು ಹೇಗೆ ವೈದ್ಯರನ್ನು ಸಂಪರ್ಕ ಮಾಡುತ್ತೇವೋ ಹಾಗೆಯೇ ನಾವು ನಮ್ಮ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಕೂಡಾ ಅತೀ ಮುಖ್ಯ.

ನಿಮ್ಮ ಕೈಯಲ್ಲಿ ಹಣವಿದೆ ಎಂದಾದರೆ ನೀವು ಈಗಲೇ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಅತೀ ಉತ್ತಮ. ಈ ಕೊರೊನಾ ವೈರಸ್‌ ಸೋಂಕು ನಮಗೆ ಜೀವನದಲ್ಲಿ ಹಲವಾರು ಮೌಲ್ಯಗಳನ್ನು ಕಲಿಸಿದೆ ಅದರಲ್ಲಿ ಮುಖ್ಯವಾದುದು, ನಮ್ಮ ಜೀವನ ಅತೀ ಪ್ರಾಮುಖ್ಯವೆಂಬುವುದು. ನೀವು ಜೀವನವನ್ನು ಕಳೆದುಕೊಳ್ಳುವ ಯಾವುದೇ ಅವಕಾಶ ಇಲ್ಲದಂತೆ ಜೀವನವನ್ನು ಸುರಕ್ಷಿತಗೊಳಿಸುವುದು ಮುಖ್ಯ. ಹಾಗೆಯೇ ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿಸುವುದೂ ಮುಖ್ಯ. ನೀವು ಇದಕ್ಕಾಗಿ ಉತ್ತಮವಾದ ಆರೋಗ್ಯ ವಿಮೆಯನ್ನು ಮಾಡಿಕೊಳ್ಳುವುದು ಉತ್ತಮ.

ನಿಮ್ಮ ಭವಿಷ್ಯದ ಸುರಕ್ಷತೆಗೆ ಇಲ್ಲಿದೆ ಹಣಕಾಸು ಸಲಹೆ: ತಪ್ಪದೆ ಓದಿ..ನಿಮ್ಮ ಭವಿಷ್ಯದ ಸುರಕ್ಷತೆಗೆ ಇಲ್ಲಿದೆ ಹಣಕಾಸು ಸಲಹೆ: ತಪ್ಪದೆ ಓದಿ..

ಇನ್ನು ಕೆಲವರು ಈ ಆರೋಗ್ಯ ವಿಮೆಯನ್ನು ಮಾಡಿಕೊಂಡು ಬಿಡುತ್ತಾರೆ. ಆದರೆ ಆ ಬಳಿಕ ಹಲವಾರು ಮಂದಿ ಕೆಲವೊಂದು ತಪ್ಪನ್ನು ಮಾಡುತ್ತಾರೆ. ಈ ತಪ್ಪುಗಳನ್ನು ನೀವು ಎಂದಿಗೂ ಮಾಡಲೇ ಬಾರದು. ಹಾಗಾದರೆ ಆ ತಪ್ಪುಗಳು ಯಾವುದು ಎಂದು ತಿಳಿಯಲು ಮುಂದೆ ಓದಿ.

 'ನನ್ನ ಹೆಸರಲ್ಲಿ ಆರೋಗ್ಯ ವಿಮೆ ಇದೆಯೇ? ನನಗೆ ತಿಳಿದೇ ಇಲ್ಲ'

'ನನ್ನ ಹೆಸರಲ್ಲಿ ಆರೋಗ್ಯ ವಿಮೆ ಇದೆಯೇ? ನನಗೆ ತಿಳಿದೇ ಇಲ್ಲ'

ಹಲವಾರು ಮಂದಿ ಆರೋಗ್ಯ ವಿಮೆಯನ್ನು ಮಾಡಿಕೊಂಡಿಲ್ಲ. ತಮ್ಮಲ್ಲಿ ಆರೋಗ್ಯ ಸಮಸ್ಯೆ ಉಂಟಾದರೆ ಮಾತ್ರ ಅಯ್ಯೋ ನಾವು ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳಬೇಕಿತ್ತು ಅಂದುಕೊಳ್ಳುತ್ತಾರೆ. ಆದರೆ ಈ ನಡುವೆ ಇನ್ನೂ ಕೆಲವರು ಇದ್ದಾರೆ. ತಮ್ಮ ಹೆಸರಲ್ಲಿ ಆರೋಗ್ಯ ವಿಮೆ ಇರುವುದು ತಮಗೆಯೇ ತಿಳಿದಿರುವುದಿಲ್ಲ. ಈ ಗೊಂದಲಗಳು ಕಂಡು ಬರುವುದು ನಮ್ಮ ಹೆಸರಲ್ಲಿ ಆರೋಗ್ಯ ವಿಮೆ ಮಾಡಿಸಿದವರು ನಮಗೆ ಈ ಬಗ್ಗೆ ಸರಿಯಾದ ಮಾಹಿತಿ ನೀಡದ ಸಂದರ್ಭದಲ್ಲಿ. ಭಾರತದಲ್ಲಿ ಮನೆಯ ದುಡಿಯುವ ಕೈಗಳೇ ಪ್ರಮುಖ ವ್ಯಕ್ತಿ ಎಂಬ ಕಲ್ಪನೆ ಇದೆ. ಈ ವ್ಯಕ್ತಿಗಳು ತಮ್ಮ ಕುಟುಂಬದ ಅಪ್ರಾಪ್ತರ ಹೆಸರಲ್ಲಿ ಆರೋಗ್ಯ ವಿಮೆಯನ್ನು ಮಾಡಿಸಿಕೊಂಡು ಬಳಿಕ ಆ ಬಗ್ಗೆ ತಮ್ಮ ಕುಟುಂಬಸ್ಥರಿಗೆ ತಿಳಿಸಿಲ್ಲದಿರುವ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಇನ್ನು ತಮ್ಮ ಆರ್ಥಿಕ ವಿವರವನ್ನು ನೀಡದೆ, ತಾವು ಸಾವನ್ನಪ್ಪಿದ ಬಳಿಕ ತಮ್ಮ ಕುಟುಂಬಸ್ಥರು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದ್ದು ಕೂಡಾ ಇದೆ. ಹೀಗಾಗಿ ನೀವು ಯಾರದೇ ಹೆಸರಲ್ಲಿ ವಿಮೆ ಮಾಡಿಸುವುದಾದರೂ ಆ ಬಗ್ಗೆ ಸರಿಯಾದ ಮಾಹಿತಿಯನ್ನು ನಿಮ್ಮ ಕುಟುಂಬಸ್ಥರಿಗೆ ನೀಡಿ.

 ಖರೀದಿಸಿದ ವಿಮೆಯ ಬಗ್ಗೆ ನಂತರ ಪರಿಶೀಲನೆ ಮಾಡದಿರುವುದು

ಖರೀದಿಸಿದ ವಿಮೆಯ ಬಗ್ಗೆ ನಂತರ ಪರಿಶೀಲನೆ ಮಾಡದಿರುವುದು

ಜನರು ತಮ್ಮ ಜೀವದ ಹಾಗೂ ಕುಟುಂಬದ ಸುರಕ್ಷತೆಯ ದೃಷ್ಟಿಯಿಂದ ವಿಮೆಯನ್ನು ಖರೀದಿ ಮಾಡುತ್ತಾರೆ. ಆದರೆ ಹಲವಾರು ಮಂದಿ ಈ ಬಗ್ಗೆ ಬಳಿಕ ಯಾವುದೇ ಪರಿಶೀಲನೆಯನ್ನು ನಡೆಸುವುದೇ ಇಲ್ಲ. ವರುಷಗಳು ಕಳೆದಂತೆ ಈ ವಿಮೆಯ ಬಗ್ಗೆ ಪರಿಶೀಲನೆ ನಡೆಸುವುದು ಹಾಗೂ ಪ್ರಸ್ತುತ ಇರುವ ಬೇರೆ ವಿಮೆಗಳ ಬಗ್ಗೆ ತಿಳಿಯುವುದು ಅತೀ ಮುಖ್ಯವಾಗಿದೆ. ಇನ್ನು ವಿಮೆಯಲ್ಲಿ ಯಾವುದೇ ಬದಲಾವಣೆಗಳು ಆಗಿದ್ದರೆ ಈ ರೀತಿ ವಿಮೆಯ ಬಗ್ಗೆ ಪರಿಶೀಲನೆ ನಡೆಸದೆ ಇರುವ ಕಾರಣದಿಂದಾಗಿ ನಿಮಗೆ ಮಾಹಿತಿ ಲಭಿಸದೆ ಮುಂದೆ ತೊಂದರೆ ಉಂಟಾಗಬಹುದು. ಆದ್ದರಿಂದ ನೀವು ವಿಮಾ ಕ್ಷೇತ್ರದಲ್ಲಿ ಆಗುವ ಬದಲಾವಣೆಯ ಬಗ್ಗೆಯೂ ತಿಳಿಯುವುದು ಅತೀ ಮುಖ್ಯ.

ದುಂದುವೆಚ್ಚಕ್ಕೆ ಬ್ರೇಕ್‌ ಹಾಕುವುದು ಹೇಗೆ?, ಇಲ್ಲಿದೆ ಟಿಪ್ಸ್‌ದುಂದುವೆಚ್ಚಕ್ಕೆ ಬ್ರೇಕ್‌ ಹಾಕುವುದು ಹೇಗೆ?, ಇಲ್ಲಿದೆ ಟಿಪ್ಸ್‌

 ಆರೋಗ್ಯ ವಿಮೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡದರಿ

ಆರೋಗ್ಯ ವಿಮೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡದರಿ

ನಾವು ನಮ್ಮ ಜೀವನದ ಸುರಕ್ಷತೆಯ ದೃಷ್ಟಿಯಿಂದ ಆರೋಗ್ಯ ವಿಮೆಯನ್ನು ಮಾಡಿಕೊಂಡಿರುತ್ತೇವೆ. ಹಾಗಿರುವಾಗ ನಮ್ಮ ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ಈ ವಿಮೆಯನ್ನು ನಾವು ನಿರ್ಲಕ್ಷ್ಯ ಮಾಡುವುದು ಯಾವ ಕಾರಣಕ್ಕಾಗಿ?. ಹೌದು ಹಲವಾರು ಮಂದಿ ತಮ್ಮ ಆರೋಗ್ಯ ಸಂಕಷ್ಟದ ಸಂದರ್ಭದಲ್ಲೂ ಆರೋಗ್ಯ ವಿಮೆಯನ್ನು ನಿರ್ಲಕ್ಷ್ಯ ಮಾಡುತ್ತಾರೆ. ಇದಕ್ಕೆ ಮುಖ್ಯ ಕಾರಣ ನಾವು ವಿಮೆಯನ್ನು ಕ್ಲೈಮ್‌ ಮಾಡಲು ಹಲವಾರು ಪ್ರಕ್ರಿಯೆಯನ್ನು ಪೂರೈಸಬೇಕು, ಅದಕ್ಕಾಗಿ ಅಲೆದಾಡಬೇಕು ಎಂಬುವುದು ಆಗಿದೆ. ನಿಮಗೆ ಆ ಬಗ್ಗೆ ಚಿಂತೆ ಇದ್ದರೆ ನೀವು ವಿಮೆ ಖರೀದಿ ಮಾಡುವ ಸಂದರ್ಭದಲ್ಲಿ ಸುಲಭವಾಗಿ ಕ್ಲೈಮ್‌ ಮಾಡಲು ಸಾಧ್ಯವಾಗುವ ಸಂಸ್ಥೆಯಿಂದಲೇ ವಿಮೆಯನ್ನು ಖರೀದಿ ಮಾಡಿ. ನಿಮ್ಮ ವಿಮೆಯ ಹಣ ನಿಮ್ಮ ಆರೋಗ್ಯಕ್ಕೆ ಬಳಕೆ ಆಗದಿದ್ದರೆ ನೀವು ವಿಮೆ ಮಾಡಿ ಪ್ರಯೋಜನವಾದರೂ ಏನು ಹೇಳಿ?

ಹೂಡಿಕೆ ಮಾಡಲು ಮುಂದಾಗಿದ್ದೀರಾ?, ಮೊದಲು ಇದನ್ನು ತಪ್ಪದೇ ಓದಿಹೂಡಿಕೆ ಮಾಡಲು ಮುಂದಾಗಿದ್ದೀರಾ?, ಮೊದಲು ಇದನ್ನು ತಪ್ಪದೇ ಓದಿ

 ಆರೋಗ್ಯ ವಿಮೆ ನವೀಕರಣ ಮಾಡಲು ಇಂದೇ ಕೊನೆಯ ದಿನ...!

ಆರೋಗ್ಯ ವಿಮೆ ನವೀಕರಣ ಮಾಡಲು ಇಂದೇ ಕೊನೆಯ ದಿನ...!

ಆರೋಗ್ಯ ವಿಮೆಯನ್ನು ನಾವು ಮಾಡಿಸಿಕೊಂಡ ಬಳಿಕ ನಾವು ಅದನ್ನು ಟರ್ಮ್‌ಗೆ ಅನುಗುಣವಾಗಿ ನವೀಕರಣ ಅಂದರೆ ರಿನೀವಲ್‌ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಭಾರತದಲ್ಲಿ ಹಲವಾರು ಮಂದಿ ಈ ರಿನೀವಲ್‌ ಮಾಡಿಸಿಕೊಳ್ಳದೇ ತಮ್ಮ ಆರೋಗ್ಯ ವಿಮೆಯನ್ನೇ ಕಳೆದುಕೊಂಡಿರುವುದು ಇದೆ. "ಆರೋಗ್ಯ ವಿಮೆ ನವೀಕರಣ ಮಾಡಲು ಇಂದೇ ಕೊನೆಯ ದಿನ, ಅಯ್ಯೋ ನಾನು ಮರೆತು ಬಿಟ್ಟೆ," ಎಂದು ಹೇಳಿ ತಲೆ ಬಿಸಿಮಾಡಿಕೊಂಡವರು ಕೂಡಾ ಇದ್ದಾರೆ. ಇನ್ನು ಕೆಲವರು ನಾಳೆ ನವೀಕರಣ ಮಾಡಿದರೆ ಆಯಿತು, ಎಂದು ಹೇಳಿಕೊಳ್ಳುತ್ತಾ ಕೊನೆಯ ದಿನ ಬಂದಾಗ ಪೇಚಿಗೆ ಸಿಲುಕುತ್ತಾರೆ. ಹಾಗಾಗಿ ಇಂತಹ ಯಾವುದೇ ಸಂಕಷ್ಟಕ್ಕೆ ಸಿಲುಕದಂತೆ ನೀವು ಮೊದಲೇ ಯೋಜನೆ ರೂಪಿಸಿಕೊಳ್ಳಿ. ನಿಮ್ಮ ಆರೋಗ್ಯ ವಿಮೆಯ ಕೊನೆಯ ದಿನದ ಬಗ್ಗೆ ನೀವು ಹೆಚ್ಚಾಗಿ ಒಗ್ಗಿಕೊಂಡಿರುವ ಮೊಬೈಲ್‌ ಫೋನ್‌ನಲ್ಲಿ ರಿಮೈಂಡರ್‌ ಇಟ್ಟುಕೊಳ್ಳಿ. ಈ ಮೂಲಕ, "ನಿನ್ನೆ ಆರೋಗ್ಯ ವಿಮೆಯ ಕೊನೆಯ ದಿನ ಆಗಿತ್ತು, ನಾನು ಮರೆತೆ, ನವೀಕರಣ ಮಾಡಲೇ ಇಲ್ಲ," ಎಂದು ತಲೆಕೆಡಿಸಿಕೊಳ್ಳಬೇಕಾದ ಸ್ಥಿತಿಗೆ ಬರಬೇಡಿ.

English summary

Mistakes to Avoid at All Costs After Purchasing Health insurance, Explained in Kannada

Mistakes to Avoid at All Costs After Purchasing Health insurance, Explained in Kannada. Read on.
Story first published: Sunday, October 10, 2021, 16:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X