For Quick Alerts
ALLOW NOTIFICATIONS  
For Daily Alerts

ಐಟಿ ರಿಟರ್ನ್ ಸಲ್ಲಿಸುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

|

ನೀವು ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಪ್ರಕ್ರಿಯೆಯ ಬಗ್ಗೆ ಎಷ್ಟೇ ತಿಳಿದಿದ್ದರೂ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಮಾಡುವಾಗ ಮಾತ್ರ ಕೆಲವು ತಪ್ಪುಗಳು ಸಹಜವಾಗಿಯೇ ಆಗಿ ಬಿಡುತ್ತದೆ. ನಿಮ್ಮ ತಾಳ್ಮೆ ಪರೀಕ್ಷೆ ಮಾಡಲು ಇನ್ನು ನಿಮಗೆ ಅಗತ್ಯವಾದ ದಾಖಲೆಗಳು ಸರಿಯಾಗಿ ಲಭ್ಯವಾಗದಿರುವ ಒಂದು ಸಮಸ್ಯೆಯೇ ಸಾಕು ಬಿಡಿ. ಇನ್ನು ಕೊನೆಯ ಸಂದರ್ಭದಲ್ಲಿ ಆದಾಯ ತೆರಿಗೆ ರಿಟರ್ನ್-ಫೈಲಿಂಗ್ ಪೋರ್ಟಲ್‌ನಲ್ಲಿ ಯಾವುದಾದರೂ ಸಮಸ್ಯೆ ಉಂಟಾದರೆ ನಾವು ಈವರೆಗೆ ಮಾಡಿದ ಎಲ್ಲಾ ಪ್ರಕ್ರಿಯೆಗಳು ವ್ಯರ್ಥವಾದಂತೆ.

ಇನ್ನು ಇದಕ್ಕೆ ತಕ್ಕಂತೆ ಪ್ರತಿ ವರ್ಷವೂ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಮಾಡುವ ಪ್ರಕ್ರಿಯೆಯಲ್ಲಿ ಬದಲಾವಣೆಗಳು ಆಗುತ್ತಿರುತ್ತದೆ. ಹಳೆಯ ನಿಯಮಗಳೇ ಅರ್ಥವಾಗದ ನಮಗೆ ಇನ್ನು ಈ ಹೊಸ ನಿಯಮಗಳನ್ನು ಅರ್ಥ ಮಾಡಿಕೊಳ್ಳುವುದು ಭಾರೀ ಕಷ್ಟವಾದೀತು. ಆದ್ದರಿಂದಾಗಿ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಮಾಡುವಾಗ ಕೆಲವು ತಪ್ಪುಗಳು ಅಧಿಕ ಮಂದಿ ಮಾಡುತ್ತಾರೆ.

ಐಟಿ ರಿಟರ್ನ್ ಮುಂಚಿತವಾಗಿ ಸಲ್ಲಿಸಿದರೆ ನಿಮಗಿದೆ ಲಾಭ, ಇಲ್ಲಿದೆ ಮಾಹಿತಿಐಟಿ ರಿಟರ್ನ್ ಮುಂಚಿತವಾಗಿ ಸಲ್ಲಿಸಿದರೆ ನಿಮಗಿದೆ ಲಾಭ, ಇಲ್ಲಿದೆ ಮಾಹಿತಿ

ಬೇರೆ ವರ್ಷವನ್ನು ಆಯ್ಕೆ ಮಾಡುವುದು, ಬ್ಯಾಂಕ್‌ ಖಾತೆಯನ್ನು ಪೂರ್ವ ಮೌಲ್ಯಮಾಪನ ಮಾಡುವುದನ್ನು ನಾವು ಮರೆತು ಬಿಡುವುದು, ಬ್ಯಾಂಕಿನ ಖಾತೆ ಸಂಖ್ಯೆಯನ್ನು ತಪ್ಪಾಗಿ ನಮೂದಿಸುವುದು ಮೊದಲಾದ ತಪ್ಪುಗಳು ನಾವು ಮಾಡುತ್ತೇವೆ. ಈ ಎಲ್ಲಾ ತಪ್ಪುಗಳು ನಮಗೆ ಆದಾಯ ತೆರಿಗೆ ಇಲಾಖೆಯಿಂದ ನೊಟೀಸ್‌ ಲಭಿಸಲು ಸಾಕಾಗುತ್ತದೆ. ಹಾಗಾದರೆ ನಾವು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡುವಾಗ ಯಾವ ತಪ್ಪುಗಳನ್ನು ಮಾಡುತ್ತೇವೆ?. ಯಾವುದನ್ನು ಹೆಚ್ಚಾಗಿ ಪರಿಶೀಲನೆ ಮಾಡಬೇಕು? ತಿಳಿಯಲು ಮುಂದೆ ಓದಿ.

 ತಪ್ಪಾದ ವಿಳಾಸ ನಮೂದಿಸುವುದು

ತಪ್ಪಾದ ವಿಳಾಸ ನಮೂದಿಸುವುದು

ಹಿಂದಿನ ಹಣಕಾಸು ವರ್ಷದಲ್ಲಿ ನೀವು ಭಾರತದಲ್ಲಿ ಯಾವ ಪ್ರದೇಶದಲ್ಲಿ ಎಷ್ಟು ದಿನ ಉಳಿದಿದ್ದೀರಿ ಎಂಬುವುದು ನಿಮ್ಮ ವಿಳಾಸವನ್ನು ಗೊತ್ತು ಮಾಡುವ ಅಂಶವಾಗಿದೆ. ಉದಾಹರಣೆಗೆ, ನೀವು ಭಾರತೀಯ ಪ್ರಜೆ ಅಥವಾ ಭಾರತೀಯ ಮೂಲದ ವ್ಯಕ್ತಿ ಆದರೆ ಭಾರತದಲ್ಲಿ ಈ ಹಿಂದಿನ ಹಣಕಾಸು ವರ್ಷದಲ್ಲಿ 182 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ಕಳೆದಿದ್ದರೆ ನೀವು ಭಾರತದ 'ನಿವಾಸಿ' ವರ್ಗಕ್ಕೆ ಸೇರುತ್ತೀರಿ. ಈ ನಡುವೆ ನೀವು ನಿವಾಸಿಯೇ ಮತ್ತು ಸಾಮಾನ್ಯ ನಿವಾಸಿಯೇ ಅಥವಾ ನಿವಾಸಿ ಆದರೆ ಸಾಮಾನ್ಯ ನಿವಾಸಿಯಲ್ಲ ಎಂದು ಗೊತ್ತುಪಡಿಸುವ ಕೆಲವೊಂದು ನಿಯಮಗಳು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಸಂದರ್ಭದಲ್ಲಿ ಅನ್ವಯವಾಗಲಿದೆ. "ಹೆಚ್ಚಾಗಿ ಜನರು ನಿವಾಸಿ ಎಂದು ನಮೂದಿಸಬೇಕಾಗಿದ್ದರೆ, ಅನಿವಾಸಿ ಅಥವಾ ಸಾಮಾನ್ಯ ನಿವಾಸಿ ಎಂದು ನಮೂದಿ ಮಾಡಿರುತ್ತಾರೆ. ಇದು ಆದಾಯ ತೆರಿಗೆ ವಿಚಾರದಲ್ಲಿ ಬಹಳಷ್ಟು ತೊಂದರೆಯನ್ನು ಉಂಟು ಮಾಡುತ್ತದೆ," ಎಂದು TaxBirbal.in. ನ ಸ್ಥಾಪಕ ಚೇತನ್‌ ಚಂದಕ್‌ ಹೇಳುತ್ತಾರೆ.

 ಷೇರುಗಳ ಮಾಹಿತಿಯನ್ನು ಮರೆಮಾಚುವುದು

ಷೇರುಗಳ ಮಾಹಿತಿಯನ್ನು ಮರೆಮಾಚುವುದು

ನೀವು ಖಾಸಗಿ ಸಂಸ್ಥೆಗಳಲ್ಲಿ ಷೇರುಗಳನ್ನು ಹೊಂದಿದ್ದರೆ, ನೀವು ಈ ಬಗ್ಗೆ ಮಾಹಿತಿ ನೀಡುವುದು ಮುಖ್ಯ. ನೀವು ಕಳೆದ ಆರ್ಥಿಕ ವರ್ಷದಲ್ಲಿ ಹೂಡಿಕೆ ಮಾಡಿದ ಸ್ಟಾಕ್‌ಗಳ ಬಗ್ಗೆ ಮಾಹಿತಿ ನೀಡಬೇಕು. "ಇದರಿಂದಾಗಿ ನಿಮ್ಮ ತೆರಿಗೆ ಅಧಿಕಾರಿಗಳು ನಿಮ್ಮ ವಹಿವಾಟಿನ ಮೇಲಿನ ತೆರಿಗೆ ನಿರ್ಧಾರ ಮಾಡಲು ಸಹಾಯವಾಗುತ್ತದೆ. ನೀವು ಈ ಮಾಹಿತಿಯನ್ನು ನೀಡದಿದ್ದರೆ, ಅದನ್ನು ತಪ್ಪಾದ ರಿಟರ್ನ್ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ನಿಮಗೆ ದಂಡ ವಿಧಿಸುವ ಸಾಧ್ಯತೆ ಇದೆ," ಎಂದು ಚೇತನ್‌ ಚಂದಕ್‌ ತಿಳಿಸಿದ್ದಾರೆ.

ಐಟಿ ರಿಫಂಡ್‌ ಪಡೆಯಲು ಬ್ಯಾಂಕ್ ಖಾತೆಯನ್ನು ಪೂರ್ವ ಮೌಲ್ಯಮಾಪನ ಮಾಡುವುದು ಹೇಗೆ?ಐಟಿ ರಿಫಂಡ್‌ ಪಡೆಯಲು ಬ್ಯಾಂಕ್ ಖಾತೆಯನ್ನು ಪೂರ್ವ ಮೌಲ್ಯಮಾಪನ ಮಾಡುವುದು ಹೇಗೆ?

 ಉಳಿತಾಯ ಖಾತೆ ಬಡ್ಡಿಯನ್ನು ಘೋಷಿಸದಿರುವುದು

ಉಳಿತಾಯ ಖಾತೆ ಬಡ್ಡಿಯನ್ನು ಘೋಷಿಸದಿರುವುದು

ಹೆಚ್ಚಿನ ಮಂದಿ ನಮ್ಮ ಅಗತ್ಯ ಸಂದರ್ಭದಲ್ಲಿ ಬೇಕಾಗುತ್ತದೆ ಎಂಬ ನಿಟ್ಟಿನಲ್ಲಿ ಉಳಿತಾಯ ಖಾತೆಯಲ್ಲಿ ಗಣನೀಯ ಪ್ರಮಾಣ ಹಣವನ್ನು ಇಟ್ಟುಕೊಂಡಿರುತ್ತೇವೆ. ಇದಕ್ಕೆ ಬ್ಯಾಂಕುಗಳು ಬಡ್ಡಿಯನ್ನು ನೀಡುತ್ತದೆ. ಆದರೆ ಈ ಹಣವು ನಿಮ್ಮ ಉದ್ಯೋಗದಾತರು ನೀಡುವ ಫಾರ್ಮ್ 16 ನಲ್ಲಿ ಉಲ್ಲೇಖವಾಗಿರುವುದಿಲ್ಲ. ಈ ನಿಟ್ಟಿನಲ್ಲಿ ನೀವು ನಿಮ್ಮ ಉಳಿತಾಯ ಖಾತೆಗೆ ಎಷ್ಟು ಬಡ್ಡಿ ದೊರೆತಿದೆ ಎಂದು ಐಟಿ ರಿಟರ್ನ್‌ನಲ್ಲಿ ಸಲ್ಲಿಕೆ ಮಾಡುವಾಗ ಉಲ್ಲೇಖ ಮಾಡುವುದು ಮುಖ್ಯ. ಒಂದು ವೇಳೆ ನೀವು ನಿಮ್ಮ ಉಳಿತಾಯ ಖಾತೆಯ ಬಡ್ಡಿಯ ಬಗ್ಗೆ ಮಾಹಿತಿ ನೀಡದಿದ್ದರೆ, ನಿಮಗೆ ಆದಾಯ ತೆರಿಗೆ ಇಲಾಖೆಯ ನೊಟೀಸ್‌ ಬರುವ ಸಾಧ್ಯತೆಗಳು ಇರುತ್ತದೆ. ಇನ್ನು ಫಿಕ್ಸಿಡ್‌ ಡೆಪಾಸಿಟ್‌ನಿಂದ ಲಭಿಸುವ ಬಡ್ಡಿಯನ್ನು ಕೂಡಾ ನೀವು ಉಲ್ಲೇಖ ಮಾಡುವುದು ಅಗತ್ಯ.

 ಗಮನಿಸಿ: ಉದ್ಯೋಗ ಬದಲಾವಣೆ ಮಾಡಿದ್ದೀರಾ?

ಗಮನಿಸಿ: ಉದ್ಯೋಗ ಬದಲಾವಣೆ ಮಾಡಿದ್ದೀರಾ?

ನೀವು ಹಣಕಾಸು ವರ್ಷ 2020-21 ರಲ್ಲಿ ಉದ್ಯೋಗವನ್ನು ಬದಲಾವಣೆ ಮಾಡಿಕೊಂಡಿದ್ದರೆ, ನಿಮ್ಮ ಈ ಹಿಂದಿನ ಉದ್ಯೋಗದಾತರಿಂದ ಫಾರ್ಮ್-16 ಅನ್ನು ಪಡೆಯುವುದನ್ನು ಮರೆಯಬೇಡಿ. "ನೀವು ಎರಡೂ ಉದ್ಯೋಗದಾತರು ಅಥವಾ ಸಂಸ್ಥೆ ನಿಮಗೆ ನೀಡುತ್ತಿದ್ದ ಸಂಬಳವನ್ನು ಐಟಿಆರ್‌ನಲ್ಲಿ ಉಲ್ಲೇಖ ಮಾಡಬೇಕು. ನೀವು ಉಲ್ಲೇಖ ಮಾಡದಿದ್ದರೆ ನಿಮಗೆ ಆದಾಯ ತೆರಿಗೆ ಇಲಾಖೆಯಿಂದ ನೊಟೀಸ್‌ ಲಭಿಸುವ ಸಾಧ್ಯತೆ ಇದೆ," ಎಂದು TaxWin.in. ನ ಸಹಸಂಸ್ಥಾಪಕ ಹಾಗೂ ಸಿಇಒ ಆದ ಅಭಿಷೇಕ್‌ ಸೋನಿ ಹೇಳಿದ್ದಾರೆ.

ಗಮನಿಸಿ: 75 ವರ್ಷಕ್ಕಿಂತ ಮೇಲ್ಪಟ್ಟವರು ತೆರಿಗೆ ರಿಟರ್ನ್‌ ಫೈಲ್‌ ಮಾಡಬೇಕಾಗಿಲ್ಲ, ಷರತ್ತು ಅನ್ವಯಗಮನಿಸಿ: 75 ವರ್ಷಕ್ಕಿಂತ ಮೇಲ್ಪಟ್ಟವರು ತೆರಿಗೆ ರಿಟರ್ನ್‌ ಫೈಲ್‌ ಮಾಡಬೇಕಾಗಿಲ್ಲ, ಷರತ್ತು ಅನ್ವಯ

 ಲಾಭವನ್ನು ಉಲ್ಲೇಖ ಮಾಡದಿರುವುದು

ಲಾಭವನ್ನು ಉಲ್ಲೇಖ ಮಾಡದಿರುವುದು

ಈ ಲಾಭವನ್ನು ಉಲ್ಲೇಖ ಮಾಡದಿರುವ ತಪ್ಪುಗಳು ಸಾಮಾನ್ಯವಾಗಿ ಹೂಡಿಕೆದಾರರು ಮಾಡುತ್ತಾರೆ. ನೀವು ಐಟಿ ರಿಟರ್ನ್ ಸಲ್ಲಿಕೆ ಮಾಡುವಾಗ ಸ್ಟಾಕ್‌ ಹಾಗೂ ಮ್ಯೂಚುವಲ್‌ ಫಂಡ್‌ನಲ್ಲಿ ನೀವು ಮಾಡಿದ ಹೂಡಿಕೆಗೆ ಎಷ್ಟು ಲಾಭ ದೊರಕಿದೆ ಎಂಬುವುದನ್ನು ಕೂಡಾ ಉಲ್ಲೇಖ ಮಾಡುವುದು ಮುಖ್ಯವಾಗಿದೆ. ನೀವು ಈ ಉಲ್ಲೇಖವನ್ನು ಮಾಡದಿದ್ದರೆ ನಿಮ್ಮ ಆದಾಯ ಲೆಕ್ಕಾಚಾರದಲ್ಲಿ ತಪ್ಪುಗಳು ಕಂಡು ಬರಬಹುದು. 2020-21ರ ಆರ್ಥಿಕ ವರ್ಷದಿಂದ ಈ ವೈಯಕ್ತಿಕ ಹೂಡಿಕೆಯ ಲಾಭಾಂಶದ ಮೇಲೂ ತೆರಿಗೆ ವಿಧಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಾಗಿ ಜನರು ಈ ಮಾಹಿತಿಯನ್ನು ಮರೆಮಾಚುತ್ತಿದ್ದಾರೆ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಆದಾಯ ತೆರಿಗೆ ರಿಟರ್ನ್‌ನ ಕೊನೆಯ ದಿನಾಂಕವನ್ನು ಇತ್ತೀಚೆಗೆ ವಿಸ್ತರಣೆ ಮಾಡಿದೆ. ಡಿಸೆಂಬರ್‌ 31, 2021 ರವರೆಗೆ ಈಗ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಆದಾಯ ತೆರಿಗೆ ರಿಟರ್ನ್‌ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಇನ್ನೂ ಎರಡು ತಿಂಗಳುಗಳಿರುವ ಕಾರಣ ದೇಶದ ಅತಿದೊಡ್ಡ ಸಾಲದಾತ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಮುಂಚಿತವಾಗಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್‌ ಮಾಡುವ ಅನುಕೂಲಗಳು ಯಾವುದು ಎಂದು ಜನರಿಗೆ ತಿಳಿಸಿದೆ.

English summary

Mistakes to Avoid while Filing your income-tax returns, Explained in Kannada

Mistakes to Avoid while Filing your income-tax returns, Explained in Kannada. Read on.
Story first published: Friday, October 22, 2021, 18:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X