For Quick Alerts
ALLOW NOTIFICATIONS  
For Daily Alerts

ಅಟಲ್ ಪಿಂಚಣಿ ಯೋಜನೆ ನಿಯಮ ಬದಲಾವಣೆ: ವಿವರ ಇಲ್ಲಿದೆ

|

ಅಟಲ್ ಪಿಂಚಣಿ ಯೋಜನೆಯ ನಿಯಮಗಳು ಮತ್ತು ಷರತ್ತುಗಳನ್ನು ಸರ್ಕಾರವು ಬದಲಾಯಿಸಿದೆ. ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನ ಈ ಯೋಜನೆಯು 60 ವರ್ಷ ವಯಸ್ಸಿನ ನಂತರ ಚಂದಾದಾರರಿಗೆ ತಿಂಗಳಿಗೆ ರೂ 1000 ರಿಂದ ರೂ 5000 ವರೆಗೆ ಕನಿಷ್ಠ ಪಿಂಚಣಿಯನ್ನು ನೀಡುವ ಯೋಜನೆಯಾಗಿದೆ.

ನಮ್ಮ ನಿವೃತ್ತಿ ಜೀವನಕ್ಕೆ ಪಿಂಚಣಿಯು ಒಂದು ಸುರಕ್ಷಿತ ಹಣಕಾಸು ಮೂಲವಾಗಿದೆ. ಭವಿಷ್ಯದಲ್ಲಿ ಪಿಂಚಣಿ ಪಡೆಯಬೇಕಾದರೆ ನಾವು ಅದಕ್ಕೆ ಈಗಲೇ ತಯಾರಿ ಮಾಡುವುದು ಅತೀ ಮುಖ್ಯವಾಗಿದೆ. ಸರ್ಕಾರವು ಇದಕ್ಕಾಗಿ ಹಲವಾರು ಯೋಜನೆಗಳನ್ನು ಹೊಂದಿದೆ. ಆ ಯೋಜನೆಗಳ ಪೈಕಿ ಪ್ರಮುಖವಾದುದು ಅಟಲ್ ಪಿಂಚಣಿ ಯೋಜನೆಯಾಗಿದೆ.

ಅಟಲ್ ಪಿಂಚಣಿ ಯೋಜನೆ ಹೂಡಿಕೆ ನಿಯಮ ಬದಲಾವಣೆ, ಹೊಸತೇನು?ಅಟಲ್ ಪಿಂಚಣಿ ಯೋಜನೆ ಹೂಡಿಕೆ ನಿಯಮ ಬದಲಾವಣೆ, ಹೊಸತೇನು?

ಇತ್ತೀಚೆಗೆ ಸರ್ಕಾರವು ಈ ಯೋಜನೆಯ ಹೂಡಿಕೆ ಸಂಬಂಧಿತ ನಿಯಮದಲ್ಲಿ ಬದಲಾವಣೆಯನ್ನು ಮಾಡಿದೆ. ಪ್ರಮುಖವಾಗಿ ಖಾತೆಯನ್ನು ಯಾರು ತೆರೆಯಬಹುದು ಎಂಬ ಮಾನದಂಡದಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಪಿಂಚಣಿ ಮೊತ್ತವು ಚಂದಾದಾರರು ನೀಡಿದ ಕೊಡುಗೆಯನ್ನು ಅವಲಂಬಿಸಿರುತ್ತದೆ. ಆದಾಗ್ಯೂ, ಶೀಘ್ರದಲ್ಲೇ ಎಲ್ಲರಿಗೂ ಚಂದಾದಾರಿಕೆಗಾಗಿ ಖಾತೆಯನ್ನು ತೆರೆಯಲಾಗುವುದಿಲ್ಲ. ಈ ಹೊಸ ನಿಯಮದ ಬಗ್ಗೆ ನೀವು ತಿಳಿಯಬೇಕಾದ ಪ್ರಮುಖ ಅಂಶಗಳು ಇಲ್ಲಿದೆ ಮುಂದೆ ಓದಿ...

 ತೆರಿಗೆದಾರರಿಗೆ ನಿರ್ಬಂಧ

ತೆರಿಗೆದಾರರಿಗೆ ನಿರ್ಬಂಧ

ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಥವಾ ತೆರಿಗೆ ಪಾವತಿಸುವ ವ್ಯಕ್ತಿಗಳು ಅಕ್ಟೋಬರ್ 1, 2022ರಿಂದ ಅಟಲ್ ಪಿಂಚಣಿ ಯೋಜನೆ ಖಾತೆಯನ್ನು ತೆರೆಯಲು ಅವಕಾಶವಿಲ್ಲ. "1 ಅಕ್ಟೋಬರ್ 2022 ರಿಂದ, ಆದಾಯ ತೆರಿಗೆ ಪಾವತಿದಾರರಾಗಿರುವ ಅಥವಾ ಹೊಂದಿರುವ ಯಾವುದೇ ನಾಗರಿಕರು ಎಪಿವೈಗೆ ಸೇರಲು ಅರ್ಹರಾಗಿರುವುದಿಲ್ಲ," ಎಂದು ಹಣಕಾಸು ಸಚಿವಾಲಯದ ಅಡಿಯಲ್ಲಿ ಹಣಕಾಸು ಸೇವೆಗಳ ಇಲಾಖೆಯು 10 ಆಗಸ್ಟ್ 2022 ದಿನಾಂಕದ ಅಧಿಸೂಚನೆಯಲ್ಲಿ ತಿಳಿಸಿದೆ.

 ಅಕ್ಟೋಬರ್ 1 ಅಥವಾ ನಂತರ ಖಾತೆ ತೆರೆದರೆ ಏನಾಗುತ್ತದೆ?

ಅಕ್ಟೋಬರ್ 1 ಅಥವಾ ನಂತರ ಖಾತೆ ತೆರೆದರೆ ಏನಾಗುತ್ತದೆ?

ಅಧಿಸೂಚನೆಯ ಪ್ರಕಾರ, ಚಂದಾದಾರರು 1 ಅಕ್ಟೋಬರ್ 2022 ರಂದು ಅಥವಾ ನಂತರ ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಯಾದರೆ, ಈ ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಅವರ ಖಾತೆಯನ್ನು ಮುಚ್ಚಲಾಗುತ್ತದೆ. ಅಂತಹ ಚಂದಾದಾರರ ಖಾತೆಯಲ್ಲಿ ಇರುವ ಹಣವನ್ನು ಹಿಂದಕ್ಕೆ ನೀಡಲಾಗುತ್ತದೆ.

 ತೆರಿಗೆದಾರರು ಏನು ಮಾಡಬೇಕು?

ತೆರಿಗೆದಾರರು ಏನು ಮಾಡಬೇಕು?

ಅಟಲ್ ಪಿಂಚಣಿ ಯೋಜನೆಯ ಖಾತೆಯನ್ನು ತೆರೆಯಲು ಬಯಸುವ ತೆರಿಗೆದಾರರು ಅಕ್ಟೋಬರ್ 1, 2022 ರ ಮೊದಲು ಯೋಜನೆಗೆ ಸೇರ್ಪಡೆಯಾಗಬಹುದು. ಆದ್ದರಿಂದ ನೀವು 30 ಸೆಪ್ಟೆಂಬರ್ 2022 ರವರೆಗೆ ಎಪಿವೈ ಚಂದಾದಾರರಾಗಬಹುದು. ಈ ದಿನಾಂಕದ ನಂತರ, ನಿಮ್ಮ ಖಾತೆಯನ್ನು ಅಮಾನ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ ಆವರೆಗಿನ ಮೊತ್ತ ನಿಮಗೆ ಲಭ್ಯವಾಗಲಿದೆ.

 ತೆರಿಗೆದಾರರು ಎಪಿವೈ ಖಾತೆ ತೆರೆಯಬೇಕೇ?

ತೆರಿಗೆದಾರರು ಎಪಿವೈ ಖಾತೆ ತೆರೆಯಬೇಕೇ?

ಎಪಿವೈ ಖಾತೆಯು ಪ್ರಾಥಮಿಕವಾಗಿ ಕಡಿಮೆ ಆದಾಯವನ್ನು ಹೊಂದಿರುವ ಜನರಿಗೆ ಸಹಾಯಕವಾಗಲಿ ಎಂಬ ನಿಟ್ಟಿನಲ್ಲಿ ಆರಂಭ ಮಾಡಲಾಗಿದೆ. ಕಡಿಮೆ ಆದಾಯವನ್ನು ಹೊಂದಿರುವವರು ತಮ್ಮ ನಿವೃತ್ತಿಯ ಬಳಿಕ ಪಿಂಚಣಿಯನ್ನು ನೀಡುವ ದೊಡ್ಡ ಯೋಜನೆಗಳ ಚಂದಾದಾರಿಕೆ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಜನರಿಗೆ ಈ ಯೋಜನೆ ಸಹಕಾರಿಯಾಗಲಿದೆ. ಈ ಯೋಜನೆಯಲ್ಲಿ ಮಾಸಿಕವಾಗಿ ಕನಿಷ್ಠ 5 ಸಾವಿರ ರೂಪಾಯಿ ಪಿಂಚಣಿ ಲಭ್ಯವಾಗಲಿದೆ. ಇನ್ನು ತೆರಿಗೆದಾರರು ಎಪಿವೈಗೆ ಸೇರ್ಪಡೆಯಾಗಲು ಸಾಧ್ಯವಿಲ್ಲದ ಕಾರಣ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) ನಂತಹ ಯೋಜನೆಗೆ ಸೇರ್ಪಡೆಯಾಗಬಹುದು. ತೆರಿಗೆದಾರರು ಹೆಚ್ಚಿನ ಖಾತರಿ ಮತ್ತು ತೆರಿಗೆ-ಮುಕ್ತ ಆದಾಯಕ್ಕಾಗಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ನಂತಹ ಯೋಜನೆಗಳಲ್ಲೂ ಚಂದಾದಾರರಾಗಬಹುದು.

 ಎಪಿವೈಗೆ ಯಾರು ಸೇರ್ಪಡೆಯಾಗಬಹುದು?

ಎಪಿವೈಗೆ ಯಾರು ಸೇರ್ಪಡೆಯಾಗಬಹುದು?

ಪ್ರಸ್ತುತ, 18-40 ವಯಸ್ಸಿನ ಭಾರತೀಯ ನಾಗರಿಕರು ಅಟಲ್ ಪಿಂಚಣಿ ಯೋಜನೆಗೆ ಸೇರಲು ಅರ್ಹರಾಗಿದ್ದಾರೆ. ನಿಮ್ಮ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಶಾಖೆಗಳ ಮೂಲಕ ನೀವು ಯೋಜನೆಗೆ ಚಂದಾದಾರರಾಗಬಹುದು. ಅಧಿಕೃತ ಮಾಹಿತಿಯ ಪ್ರಕಾರ, ಮಾರ್ಚ್ 2022 ರ ಅಂತ್ಯದ ವೇಳೆಗೆ ಎಪಿವೈ ಚಂದಾದಾರರ ಒಟ್ಟು ಸಂಖ್ಯೆ 4.01 ಕೋಟಿ ಆಗಿದೆ.

English summary

New Atal Pension Yojana Account Opening Rule, Explained in Kannada

New Atal Pension Yojana account opening rule: New Atal Pension Yojana account opening rule, explained in kannada.
Story first published: Tuesday, August 16, 2022, 16:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X