For Quick Alerts
ALLOW NOTIFICATIONS  
For Daily Alerts

ಬ್ಯಾಂಕ್‌ ಮುಷ್ಕರ ಮುಂದೂಡಿಕೆ: ನಾಳೆ ಬ್ಯಾಂಕ್‌ ಸೇವೆ ವ್ಯತ್ಯಯವಿಲ್ಲ

|

ನಾಳೆಯಿಂದ ಎರಡು ದಿನಗಳ ಕಾಲ ನಡೆಯಲಿದ್ದ ಬ್ಯಾಂಕ್‌ ಮುಷ್ಕರವನ್ನು ಕಾರ್ಮಿಕ ಸಂಘಟನೆಗಳು ಮುಂದೂಡಿಕೆ ಮಾಡಿದೆ. ಬ್ಯಾಂಕ್ ಮುಷ್ಕರವನ್ನು ಮಾರ್ಚ್ 28-29, 2022 ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ಹೇಳಿಕೆ ನೀಡಿದೆ.

 

ಜಂಟಿ ಹೇಳಿಕೆಯಲ್ಲಿ, ಕಾರ್ಮಿಕ ಸಂಘಟನೆಗಳು ಕಳೆದ ತಿಂಗಳು ತನ್ನ ನಿಗದಿತ ಫೆಬ್ರವರಿ 23-24 ರ ರಾಷ್ಟ್ರವ್ಯಾಪಿ ಮುಷ್ಕರವನ್ನು ಮುಂದೂಡಿರುವುದಾಗಿ ತಿಳಿಸಿವೆ. ಕೊರೊನಾ ವೈರಸ್‌ ಸಾಂಕ್ರಾಮಿಕ ಮೂರನೇ ಅಲೆಯ ಸಂದರ್ಭದಲ್ಲಿ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಿಂದಾಗಿ ಸರ್ಕಾರದ ಬ್ಯಾಂಕ್‌ ಖಾಸಗೀಕರಣದ ವಿರುದ್ಧದ ಮುಷ್ಕರವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

 

ಬ್ಯಾಂಕ್‌ ಮುಷ್ಕರ: 38 ಲಕ್ಷ ಚೆಕ್‌ಗೆ ವಹಿವಾಟಿಗೆ ಬಿತ್ತು ಪೆಟ್ಟು!ಬ್ಯಾಂಕ್‌ ಮುಷ್ಕರ: 38 ಲಕ್ಷ ಚೆಕ್‌ಗೆ ವಹಿವಾಟಿಗೆ ಬಿತ್ತು ಪೆಟ್ಟು!

"ಸೆಂಟ್ರಲ್ ಟ್ರೇಡ್ ಯೂನಿಯನ್ಸ್ (CTUs) ಮತ್ತು ಸೆಕ್ಟೋರಲ್ ಫೆಡರೇಶನ್ / ಅಸೋಸಿಯೇಷನ್‌ಗಳ ಜಂಟಿ ವೇದಿಕೆಯ ಆನ್‌ಲೈನ್ ಸಭೆಯು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಮಾರ್ಚ್ 28-29 ಕ್ಕೆ ಮುಂದೂಡಲು ನಿರ್ಧರಿಸಿದೆ," ಎಂದು ಜಂಟಿ ಹೇಳಿಕೆ ತಿಳಿಸಿದೆ. ಈ ಹಿನ್ನೆಲೆಯಿಂದಾಗಿ ಮಾರ್ಚ್ 28-29ರಂದು ಬ್ಯಾಂಕ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹಣಕಾಸು ವರ್ಷ ಅಂತ್ಯದ ದಿನಗಳಾದ ಕಾರಣ ಬ್ಯಾಂಕ್‌ ಸೇವೆಗೆ ಭಾರೀ ತೊಂದರೆ ಉಂಟಾಗಲಿದೆ.

 ಬ್ಯಾಂಕ್‌ ಮುಷ್ಕರ ಮುಂದೂಡಿಕೆ: ನಾಳೆ ಬ್ಯಾಂಕ್‌ ಸೇವೆ ವ್ಯತ್ಯಯವಿಲ್ಲ

ಕಾರ್ಮಿಕರ ರಾಷ್ಟ್ರೀಯ ಸಮಾವೇಶವು ನವೆಂಬರ್ 11, 2021 ರಂದು ಸಂಸತ್ತಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಫೆಬ್ರವರಿ 23-24 ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ಆಯೋಜಿಸಲು ನಿರ್ಧರಿಸಿತ್ತು. ಜಂಟಿ ಹೇಳಿಕೆಯ ಪ್ರಕಾರ, ಹಲವಾರು ರಾಜ್ಯಗಳು ಮತ್ತು ವಲಯಗಳಲ್ಲಿ ಮುಷ್ಕರದ ಸಿದ್ಧತೆಗಳು ಪ್ರಾರಂಭವಾಗಿದ್ದು, ಜಂಟಿ ರಾಜ್ಯ ಮಟ್ಟದ ಸಮಾವೇಶಗಳು ಮತ್ತು ಕೆಲವು ರಾಜ್ಯಗಳಲ್ಲಿ ಜಿಲ್ಲಾ ಮಟ್ಟದ ಸಮಾವೇಶಗಳು ಸಹ ನಡೆದಿವೆ.

ಡಿಸೆಂಬರ್‌ನಲ್ಲಿಯೂ ನಡೆದಿತ್ತು ಬ್ಯಾಂಕ್‌ ಮುಷ್ಕರ

ಈ ಹಿಂದೆಯೂ ಸಹ ಖಾಸಗೀಕರಣ ಮಸೂದೆಯನ್ನು ವಿರೋಧಿಸಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಡಿಸೆಂಬರ್ 16 ಮತ್ತು ಡಿಸೆಂಬರ್ 17 ರಂದು ಮುಷ್ಕರವನ್ನು ನಡೆಸಿದ್ದವು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾದಲ್ಲಿ ಸೇವೆಗಳ ಮೇಲೆ ಪರಿಣಾಮ ಬೀರಿತ್ತು.

ಇನ್ನು ಈ ಮುಷ್ಕರವೂ ಕೂಡಾ ಬ್ಯಾಂಕ್ ಮುಷ್ಕರವು ಚೆಕ್ ಕ್ಲಿಯರೆನ್ಸ್, ಫಂಡ್ ವರ್ಗಾವಣೆ, ಡೆಬಿಟ್ ಕಾರ್ಡ್ ಸಂಬಂಧಿತ ಸೇವೆಗಳು ಇತ್ಯಾದಿ ಸೇರಿದಂತೆ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇದೆ. ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಇತರ ಬ್ಯಾಂಕ್ ಒಕ್ಕೂಟಗಳು ಬ್ಯಾಂಕ್ ಮುಷ್ಕರವನ್ನು ಆಚರಿಸಲು ನಿರ್ಧಾರ ಮಾಡಿದೆ ಎಂದು ವರದಿಗಳು ಉಲ್ಲೇಖ ಮಾಡಿದೆ. ಮುಷ್ಕರದಲ್ಲಿ ಎನ್‌ಸಿಆರ್‌ನ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ರಾಷ್ಟ್ರವ್ಯಾಪಿ ಹಲವಾರು ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬ್ಯಾಂಕ್ ಒಕ್ಕೂಟ ಹೇಳಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣವನ್ನು ವಿರೋಧ ಮಾಡಿ ಬ್ಯಾಂಕ್‌ ನೌಕರರ ಸಂಘವು ಎರಡು ದಿನಗಳ ಮುಷ್ಕರವನ್ನು ನಡೆಸುತ್ತಿದೆ. ಈ ಹಿನ್ನೆಲೆಯಿಂದಾಗಿ ಹಲವಾರು ಬ್ಯಾಂಕ್‌ ವಹಿವಾಟಿನಲ್ಲಿ ವ್ಯತ್ಯಯ ಉಂಟಾಗಿದೆ. ಬ್ಯಾಂಕಿನಲ್ಲಿ ಚೆಕ್‌ನ ವಹಿವಾಟಿಗೂ ಈ ಮುಷ್ಕರದಿಂದಾಗಿ ಪೆಟ್ಟು ಬಿದ್ದಿದೆ ಎಂದು ಎಐಬಿಇಎ ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ, ಸಿ ಎಚ್‌ ವೆಂಕಟಚಲಂ, "ಬ್ಯಾಂಕ್‌ ನೌಕರರು ಸರ್ಕಾರಿ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದರ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ, ಇದರಿಂದಾಗಿ ಬಹಳಷ್ಟು ತೊಂದರೆ ಉಂಟಾಗಿದೆ. ಈ ಎರಡು ದಿನಗಳ ಮುಷ್ಕರದ ಸಂದರ್ಭದಲ್ಲಿ ಈವರೆಗೆ 37,000 ಕೋಟಿ ರೂಪಾಯಿ ಮೌಲ್ಯದ ಚೆಕ್‌ ವಹಿವಾಟಿಗೆ ಅಡೆತಡೆ ಉಂಟಾಗಿದೆ," ಎಂದು ತಿಳಿಸಿದ್ದಾರೆ.

English summary

No Bank Strike on February 23 and 24, 2022: Trade Union Defers Nationwide Bandh to March

No Bank Strike on February 23 and 24, 2022: Trade Union Defers Nationwide Bandh to March.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X