For Quick Alerts
ALLOW NOTIFICATIONS  
For Daily Alerts

Numerology Special: ಯಾವ ದಿನಾಂಕದಲ್ಲಿ ಹುಟ್ಟಿದವರಿಗೆ ಯಾವ ಬಿಜಿನೆಸ್ ಸೂಕ್ತ?

By ಶಂಕರ್ ಭಟ್
|

"ನಾನು ಯಾವ ಬಿಜಿನೆಸ್ ಮಾಡಬಹುದು?"- ಇದೊಂದು ಪ್ರಶ್ನೆ ಯಾವುದಾದರೂ ಒಂದು ಸಂದರ್ಭದಲ್ಲಿ ಉದ್ಭವಿಸುತ್ತದೆ. ಕೆಲವರು ತಮ್ಮ ಹಣೆಬರಹ ಸರಿ ಇಲ್ಲ ಎಂದು ವೈಫಲ್ಯಕ್ಕೆ ಒಂದು ಹೆಸರಿಡುತ್ತಾರೆ. ಮತ್ತೆ ಕೆಲವರು ಸುತ್ತಮುತ್ತಲಿನವರನ್ನು, ಸನ್ನಿವೇಶವನ್ನು ತಮ್ಮ ಸೋಲಿಗೆ ಹೊಣೆ ಮಾಡುತ್ತಾರೆ. ಆದರೆ ಸಂಖ್ಯಾಶಾಸ್ತ್ರ ನಂಬುವವರಿಗಾಗಿ ಈ ಲೇಖನ ಇದೆ.

 

ಒಂದು ವೇಳೆ ನೀವು ವ್ಯಾಪಾರ ಮಾಡಬೇಕು ಅಂದುಕೊಂಡಿದ್ದರೆ ಅಥವಾ ಈಗಾಗಲೇ ವ್ಯಾಪಾರ ಮಾಡುವವರಾಗಿದ್ದು, ಯಾಕೋ ಎಷ್ಟು ಪ್ರಯತ್ನ ಮಾಡಿದರೂ ಕೈ ಹತ್ತುತ್ತಿಲ್ಲ ಎಂಬ ಚಿಂತೆ ನಿಮಗಿದ್ದರೆ ಇಲ್ಲಿರುವ ಮಾಹಿತಿಯನ್ನು ಅನ್ವಯಿಸಿಕೊಂಡು ಪ್ರಯತ್ನಿಸಬಹುದು. ಯಾವುದೇ ಬಲವಂತ ಇಲ್ಲದೆ, ನಿಮ್ಮ ಮನಸು- ಬುದ್ಧಿಗೆ ಸರಿ ಎನಿಸಿದರೆ ಅನುಸರಿಸಬಹುದು.

Yearly Money- Finance Horoscope: 2020ರ ಹಣಕಾಸಿನ ವರ್ಷ ಭವಿಷ್ಯYearly Money- Finance Horoscope: 2020ರ ಹಣಕಾಸಿನ ವರ್ಷ ಭವಿಷ್ಯ

ನಿಮ್ಮ ಜನ್ಮ ದಿನದ ಆಧಾರದಲ್ಲಿ ಯಾವ ವ್ಯಾಪಾರ ಆಗಿಬರುತ್ತದೆ ಎಂಬುದನ್ನು ಸಂಖ್ಯಾಶಾಸ್ತ್ರವು ತಿಳಿಸಿದೆ. ಅದರ ಪ್ರಕಾರ ಯಾರಿಗೆ ಯಾವ ಬಿಜಿನೆಸ್ ಸೂಕ್ತ ಎಂಬ ಮಾಹಿತಿ ಇಲ್ಲಿದೆ.

ಸಂಖ್ಯೆ 1

ಸಂಖ್ಯೆ 1

ಯಾವುದೇ ತಿಂಗಳ 1, 10, 19 ಅಥವಾ 28ನೇ ತಾರೀಕಿನಂದು ಜನಿಸಿದವರು ಈ ಸಂಖ್ಯೆಗೆ ಬರುತ್ತಾರೆ. ಸರ್ಕಾರದ ದೊಡ್ಡ ದೊಡ್ಡ ಗುತ್ತಿಗೆ, ರಾಜಕೀಯ ಕಾರ್ಯಕ್ರಮಗಳ ಇವೆಂಟ್ ಮ್ಯಾನೇಜ್ ಮೆಂಟ್, ಹೃದ್ರೋಗ ತಪಾಸಣೆ ಕೇಂದ್ರ, ಮಕ್ಕಳ ಆಸ್ಪತ್ರೆ, ಕಲಾ ವಿಷಯಗಳಿಗೆ ಸಂಬಂಧಿಸಿದಂಥ ಕಾಲೇಜು ಸ್ಥಾಪನೆ, ಕಂಪ್ಯೂಟರ್- ಲ್ಯಾಪ್ ಟಾಪ್ ಮಾರಾಟ ಮತ್ತು ಸರ್ವೀಸ್ ಸೆಂಟರ್, ಕಾನೂನು ಪುಸ್ತಕಗಳ ಮಾರಾಟ ಮಳಿಗೆ... ಹೀಗೆ ರವಿ ಗ್ರಹಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಮುಂದುವರಿದರೆ ಯಶಸ್ಸು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.

ಸಂಖ್ಯೆ 2

ಸಂಖ್ಯೆ 2

ಯಾವುದೇ ತಿಂಗಳ 2, 11, 20 ಅಥವಾ 29ನೇ ತಾರೀಕಿನಂದು ಜನಿಸಿದವರು ಈ ಸಂಖ್ಯೆಗೆ ಬರುತ್ತಾರೆ. ಇವರಿಗೆ ಆಸ್ಪತ್ರೆ, ಬೇಬಿ ಸಿಟ್ಟಿಂಗ್, ಮಕ್ಕಳು- ಹಿರಿಯರ ಡೇ ಕೇರ್, ವಾಟರ್ ಟ್ಯಾಂಕ್ ಮೂಲಕ ನೀರು ಸರಬರಾಜು, ಮಿನರಲ್ ವಾಟರ್ ವ್ಯವಹಾರ, ಮಾನಸಿಕ ಚಿಕಿತ್ಸಾ ಕೇಂದ್ರ, ಎಂಆರ್ ಐ- ಸಿ.ಟಿ. ಸ್ಕ್ಯಾನಿಂಗ್ ಸೆಂಟರ್, ಡಯಾಲಿಸಿಸ್ ಸೆಂಟರ್, ಡಯಾಗ್ನಿಸಿಸ್ ಸೆಂಟರ್, ಹೀಲಿಂಗ್ ಸೆಂಟರ್, ಕುಟುಂಬ ಸಲಹಾ ಕೇಂದ್ರ, ಹಾಲಿನ ಡೇರಿ, ಮೆಡಿಕಲ್ ಶಾಪ್, ಪಶು ಸಂಗೋಪನೆ... ಹೀಗೆ ಚಂದ್ರನಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಮುಂದುವರಿದರೆ ಉತ್ತಮ.

ಜನ್ಮ ದಿನಕ್ಕೂ ಹೆಸರಿಗೂ ಎಂಥ ನಂಟು? ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಗೊತ್ತಾ?

ಸಂಖ್ಯೆ 3
 

ಸಂಖ್ಯೆ 3

ಯಾವುದೇ ತಿಂಗಳ 3, 12, 21 ಅಥವಾ 30ನೇ ತಾರೀಕಿನಂದು ಜನಿಸಿದವರು ಈ ಸಂಖ್ಯೆಗೆ ಬರುತ್ತಾರೆ. ಸ್ಟೇಷನರಿ, ಪ್ರಾಥಮಿಕ ಶಿಕ್ಷಣದಿಂದ ಮೊದಲುಗೊಂಡು ಉನ್ನತ ಶಿಕ್ಷಣದ ತನಕ ಕಾಲೇಜು ಸ್ಥಾಪನೆ, ಖಾಸಗಿ ಟ್ಯೂಷನ್, ವಿದೇಶ ಪ್ರವಾಸಕ್ಕೆ ಮಾರ್ಗದರ್ಶನ ಮಾಡುವುದು, ಕೆರಿಯರ್ ಗೈಡೆನ್ಸ್, ಇಂಟಿರೀಯರ್ ಡೆಕೊರೇಷನ್, ಆಯುರ್ವೇದ ಔಷಧಗಳ ಮಾರಾಟ, ಸಾವಯವ ಕೃಷಿ ಉತ್ಪನ್ನಗಳು- ಖಾದಿ ವಸ್ತ್ರಗಳ ಮಾರಾಟ, ಪುಸ್ತಕ ಪ್ರಕಾಶನ (ಶೈಕ್ಷಣಿಕ ಕ್ಷೇತ್ರದ ಪುಸ್ತಕಗಳು), ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಭಿವೃದ್ಧಿ, ಡೇಟಾ ಸೈನ್ಸ್ ಅಭಿವೃದ್ಧಿ, ಸಾಫ್ಟ್ ವೇರ್, ಬಿಪಿಒ... ಹೀಗೆ ಗುರು ಗ್ರಹಕ್ಕೆ ಸಂಬಂಧಿಸಿದ ಕ್ಷೇತ್ರಗಳನ್ನು ಆರಿಸಿಕೊಳ್ಳಬಹುದು.

ಸಂಖ್ಯೆ 4

ಸಂಖ್ಯೆ 4

ಯಾವುದೇ ತಿಂಗಳ 4, 13, 22 ಅಥವಾ 31ನೇ ತಾರೀಕಿನಂದು ಜನಿಸಿದವರು ಈ ಸಂಖ್ಯೆಗೆ ಬರುತ್ತಾರೆ. ಷೇರು ಬ್ರೋಕಿಂಗ್, ಕಮಿಷನ್ ಏಜೆಂಟ್ ಹೌಸ್, ಚರ್ಮ ರೋಗಕ್ಕೆ ಸಂಬಂಧಿಸಿದ ಚಿಕಿತ್ಸಾಲಯ, ಅಂತ್ಯ ಸಂಸ್ಕಾರಕ್ಕೆ ಬೇಕಾದ ವಸ್ತುಗಳ ಮಾರಾಟ, ಹೋಟೆಲ್-ರೆಸ್ಟೋರೆಂಟ್, ಬಾರ್- ಪಬ್, ಕ್ಯಾಸಿನೋ, ಲಾಟರಿ ಟಿಕೆಟ್ ಮಾರಾಟ, ಕಥೆ- ಕಾದಂಬರಿಗಳು ಪುಸ್ತಕ ಪ್ರಕಾಶನ... ಇತ್ಯಾದಿ ರಾಹುಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಮುಂದುವರಿಯಬಹುದು.

ಜನ್ಮದಿನಾಂಕದ ಪ್ರಕಾರ ನಿಮ್ಮ ಗುಣ-ಸ್ವಭಾವ ಹೇಗೆ?

ಸಂಖ್ಯೆ 5

ಸಂಖ್ಯೆ 5

ಯಾವುದೇ ತಿಂಗಳ 5, 14 ಅಥವಾ 23ನೇ ತಾರೀಕಿನಂದು ಹುಟ್ಟಿದವರು ಈ ಸಂಖ್ಯೆಗೆ ಬರುತ್ತಾರೆ. ಟೂರಿಸ್ಟ್ ಬಿಜಿನೆಸ್, ಟ್ರಾವೆಲ್ ಆಪರೇಟರ್ ಗಳು, ಗ್ಯಾಜೆಟ್- ಮೊಬೈಲ್ ಫೋನ್ ಗಳ ಮಾರಾಟ, ಪತ್ರಿಕೋದ್ಯಮ, ಆನ್ ಲೈನ್ ವ್ಯಾಪಾರ, ವೆಬ್ ಪೋರ್ಟಲ್ (ಸುದ್ದಿ ಮಾಧ್ಯಮ), ವಿಮಾನ ಯಾನ, ಟೆಲಿಕಾಂ ಆಪರೇಟರ್ ಕಂಪೆನಿಗಳು ಆರಂಭಿಸಬಹುದು. ವಿದೇಶಿ ವಿನಿಮಯ, ಬೆಲೆಬಾಳುವ ಲೋಹಗಳ ಮಾರಾಟ, ಕಾರು- ಸ್ಕೂಟರ್ ಗಳ ತಯಾರಿಕೆ, ಮಾರಾಟ, ಕಾಲ್ ಸೆಂಟರ್... ಇತ್ಯಾದಿ ಬುಧ ಗ್ರಹಕ್ಕೆ ಸಂಬಂಧಿಸಿದ ವ್ಯಾಪಾರಗಳನ್ನು ಮಾಡಬಹುದು.

ಸಂಖ್ಯೆ 6

ಸಂಖ್ಯೆ 6

ಯಾವುದೇ ತಿಂಗಳ 6, 15 ಅಥವಾ 24ನೇ ತಾರೀಕಿನಂದು ಜನಿಸಿದವರು ಈ ಸಂಖ್ಯೆಗೆ ಬರುತ್ತಾರೆ. ಸಿನಿಮಾ ನಿರ್ಮಾಣ, ಬ್ಯೂಟಿಪಾರ್ಲರ್, ಲೇವಾದೇವಿ ವ್ಯವಹಾರ, ಐವಿಎಫ್ ಸೆಂಟರ್, ಮ್ಯಾಟ್ರಿಮೋನಿ, ಫ್ಯಾನ್ಸಿ ಸ್ಟೋರ್ಸ್, ಬಟ್ಟೆ- ಸೀರೆ ಅಂಗಡಿ, ಆಭರಣದ ಮಳಿಗೆ, ಗಾರ್ಮೆಂಟ್ಸ್, ಫ್ಯಾಷನ್ ವಸ್ತುಗಳ ತಯಾರಿಕೆ, ಆಂಟಿಕ್ ವಸ್ತುಗಳ ಮಾರಾಟ, ಕೃತಕ ಹಲ್ಲು ತಯಾರಿಕೆ, ಹಿಯರಿಂಗ್ ಏಡ್ ಮಾರಾಟ... ಹೀಗೆ ಶುಕ್ರ್ ಗ್ರಹಕ್ಕೆ ಸಂಬಂಧಿಸಿದ ವ್ಯಾಪಾರ- ವ್ಯವಹಾರ ಆರಿಸಿಕೊಳ್ಳಬಹುದು.

ಸಂಖ್ಯೆ 7

ಸಂಖ್ಯೆ 7

ಯಾವುದೇ ತಿಂಗಳ 7, 16 ಅಥವಾ 25ನೇ ತಾರೀಕಿನಂದು ಹುಟ್ಟಿದವರು ಈ ಸಂಖ್ಯೆಗೆ ಬರುತ್ತಾರೆ. ಧಾರ್ಮಿಕ ಪ್ರವಾಸಗಳ ಆಯೋಜನೆ, ಧಾರ್ಮಿಕ ಗ್ರಂಥಗಳ ಮಾರಾಟ, ಗ್ರಂಥಿಗೆ ಅಂಗಡಿ, ಆಪ್ತ ಸಲಹಾ ಕೇಂದ್ರ, ಧಾನ್ಯಗಳ ಮಾರಾಟ ಅಥವಾ ಕಮಿಷನ್ ಏಜೆಂಟ್, ಹೂವು- ಹಣ್ಣಿನ ಸಗಟು ವ್ಯಾಪಾರ, ಪೂಜಾ ಸಾಮಗ್ರಿಗಳ ಮಾರಾಟ, ದೇವತಾ ವಿಗ್ರಹಗಳ ತಯಾರಿ ಮತ್ತು ಮಾರಾಟ... ಹೀಗೆ ಕೇತುಗ್ರಹಕ್ಕೆ ಸಂಬಂಧಿಸಿದ ಕ್ಷೇತ್ರಗಳನ್ನು ಆರಿಸಿಕೊಳ್ಳಬೇಕು.

ಸಂಖ್ಯೆ 8

ಸಂಖ್ಯೆ 8

ಯಾವುದೇ ತಿಂಗಳ 8, 17 ಅಥವಾ 26ನೇ ತಾರೀಕಿನಂದು ಜನಿಸಿದವರು ಈ ಸಂಖ್ಯೆಗೆ ಬರುತ್ತಾರೆ. ಇಟ್ಟಿಗೆ, ಜಲ್ಲಿಕಲ್ಲು, ಕಬ್ಬಿಣ- ಸಿಮೆಂಟ್ ಮಾರಾಟ, ಸಿವಿಲ್ ಕಾಂಟ್ರ್ಯಾಕ್ಟ್, ಕಬ್ಬಿಣದ ವಸ್ತುಗಳ ಮಾರಾಟ, ಒಳಚರಂಡಿ ಕಾಮಗಾರಿ, ಟ್ಯಾಂಕ್- ಸಂಪ್ ಕ್ಲೀನ್, ಗ್ಯಾರೇಜ್, ವಾಟರ್ ವರ್ಕ್ಸ್, ಮರಗೆಲಸ, ಕಾರುಗಳ ವ್ಹೀಲ್ ಬ್ಯಾಲೆನ್ಸಿಂಗ್, ಇನ್ಷೂರೆನ್ಸ್, ಸೆಕೆಂಡ್ ಹ್ಯಾಂಡ್ ಕಾರು- ಸ್ಕೂಟರ್ ಮಾರಾಟ ಮತ್ತಿತರ ಶನಿ ಗ್ರಹಕ್ಕೆ ಸಂಬಂಧಿಸಿದ ವ್ಯವಹಾರ ಮಾಡಬಹುದು.

ಸಂಖ್ಯೆ 9

ಸಂಖ್ಯೆ 9

ಯಾವುದೇ ತಿಂಗಳ 9, 18 ಅಥವಾ 27ನೇ ತಾರೀಕಿನಂದು ಜನಿಸಿದವರು ಈ ಸಂಖ್ಯೆಗೆ ಬರುತ್ತಾರೆ. ಎಲೆಕ್ಟ್ರಿಕಲ್ ಕಾಂಟ್ರ್ಯಾಕ್ಟ್- ವಸ್ತುಗಳ ಮಾರಾಟ, ಸೆಕ್ಯೂರಿಟಿ ಏಜೆನ್ಸಿ, ಶಸ್ತ್ರಾಸ್ತ್ರಗಳ ಮಾರಾಟ, ಅಡುಗೆ ಕಾಂಟ್ರ್ಯಾಕ್ಟ್, ಕಟ್ಟಡ ನಿರ್ಮಾಣವೂ ಸೇರಿದಂತೆ ಅಗತ್ಯ ಇರುವ ಕಡೆಗಳಿಗೆ ಜನರ ನೇಮಕಾತಿಗೆ ಸಹಾಯ- ಅದಕ್ಕೆ ಕಮಿಷನ್, ಯುದ್ಧ ಸಾಮಗ್ರಿಗಳ ಮಾರಾಟ, ರಿಯಲ್ ಎಸ್ಟೇಟ್, ಲ್ಯಾಂಡ್ ಡೆವಲಪ್ ಮೆಂಟ್, ಆಪರೇಷನ್ ಗೆ ಅಗತ್ಯ ಇರುವ ಸಲಕರಣೆಗಳ ಮಾರಾಟ- ಮಾರ್ಕೆಟಿಂಗ್, ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ... ಮತ್ತಿತರ ಕುಜ ಗ್ರಹಕ್ಕೆ ಸಂಬಂಧಿಸಿದ ಬಿಜಿನೆಸ್ ಗಳನ್ನು ಆರಿಸಿಕೊಳ್ಳಬಹುದು.

English summary

Numerology Special: Business Suitable On The Basis Of Birth Number

According to numerology, which business suitable for your birth number? Here is the complete details.
Story first published: Sunday, January 5, 2020, 10:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X