For Quick Alerts
ALLOW NOTIFICATIONS  
For Daily Alerts

ಪೇಟಿಎಂ ಮನಿಯಿಂದ ಸ್ಟಾಕ್ ಬ್ರೋಕಿಂಗ್: ಷೇರು ಹೂಡಿಕೆದಾರರಿಗೆ ಏನೆಲ್ಲ ಆಫರ್?

|

ಪೇಟಿಎಂ ಅಂಗಸಂಸ್ಥೆ ಪೇಟಿಎಂ ಮನಿಯಿಂದ ಸೋಮವಾರ ಸ್ಟಾಕ್ ಬ್ರೋಕಿಂಗ್ ಅರಂಭಿಸಲಾಗಿದೆ. ದೇಶದ ಎಲ್ಲರಿಗೂ ಷೇರು ಮಾರುಕಟ್ಟೆ ಪ್ರವೇಶ ಸಾಧ್ಯವಾಗಬೇಕು ಎಂಬ ಉದ್ದೇಶದೊಂದಿಗೆ ಇದನ್ನು ಆರಂಭಿಸಲಾಗಿದೆ. ಬಹಳ ಸಲೀಸಾಗಿ ಬಳಕೆ, ಕಡಿಮೆ ದರ (ಡೆಲಿವರಿ ಆರ್ಡರ್ ಗಳ ಮೇಲೆ ಶೂನ್ಯ ಬ್ರೋಕರೇಜ್, ಇಂಟ್ರಾಡೇಗೆ 10 ರುಪಾಯಿ), ಖಾತೆ ತೆರೆಯಲು ಡಿಜಿಟಲ್ ಕೆವೈಸಿ ಇನ್ನೂ ಸಾಕಷ್ಟು ಹೊಸ ಪ್ರಯತ್ನಗಳನ್ನು ಶುರು ಮಾಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಹತ್ತು ಲಕ್ಷ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಗುರಿ ಕಂಪೆನಿಯದ್ದು. ಅದರಲ್ಲೂ ಸಣ್ಣ ನಗರ ಹಾಗೂ ಪಟ್ಟಣಗಳಿಂದ ಮೊದಲ ಬಾರಿಗೆ ಡಿಮ್ಯಾಟ್ ಖಾತೆ ತೆರೆಯುವಂಥವರನ್ನು ಗುರಿ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಪೇಟಿಎಂ ಆನ್ ಲೈನ್ ವೆಲ್ತ್ ಮ್ಯಾನೇಜ್ ಮೆಂಟ್ ಪ್ಲಾಟ್ ಫಾರ್ಮ್.

2.2 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರು ನೋಂದಣಿ

2.2 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರು ನೋಂದಣಿ

ಈಗಾಗಲೇ 2.2 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರು ನೋಂದಣಿ ಮಾಡಿಸಿದ್ದಾರೆ. ಅದರಲ್ಲಿ ಶೇಕಡಾ 65ನಷ್ಟು ಬಳಕೆದಾರರು 18ರಿಂದ 30 ವರ್ಷ ವಯಸ್ಸಿನವರು ಎಂದು ಕಂಪೆನಿ ತಿಳಿಸಿದೆ. ಹೆಚ್ಚಿನ ಸಂಖ್ಯೆಯ ಹೂಡಿಕೆದಾರರು ಮುಂಬೈ, ಬೆಂಗಳೂರು, ಹೈದರಾಬಾದ್, ಜೈಪುರ್, ಅಹ್ಮದಾಬಾದ್ ನಂಥ ಟಯರ್ 1 ನಗರದವರು. ಜತೆಗೆ ಥಾಣೆ, ಗುಂಟೂರು, ಬರ್ಧಮಾನ್, ಕೃಷ್ಣಾ ಮತ್ತು ಆಗ್ರಾದಂಥ ಕಡೆಯಿಂದಲೂ ನೋಂದಣಿ ಮಾಡಿಸಿದ್ದಾರೆ.

ಐಒಎಸ್, ಆಂಡ್ರಾಯಿಡ್ ನಲ್ಲಿ ಪೇಟಿಎಂ ಮನಿ

ಐಒಎಸ್, ಆಂಡ್ರಾಯಿಡ್ ನಲ್ಲಿ ಪೇಟಿಎಂ ಮನಿ

ಪೇಟಿಎಂ ಮನಿ ಸೇವೆಯು ಐಒಎಸ್, ಆಂಡ್ರಾಯಿಡ್ ನಲ್ಲಿ ಕೂಡ ಸಿಗುತ್ತದೆ. ಇದರ ಜತೆಗೆ ವೇಗವಾದ ಸ್ಟಾಕ್ ಚಾರ್ಟ್ ಗಳು, ಮಾರ್ಕೆಟ್ ನಲ್ಲಿ ಏರಿಕೆ ಕಾಣುವ ಷೇರುಗಳನ್ನು ಅನುಸರಿಸಲು ಮಾಹಿತಿ, ಕಂಪೆನಿಗಳ ಫಂಡಮೆಂಟಲ್ಸ್ ದೊರೆಯುತ್ತವೆ. ಪೇಟಿಎಂ ಮನಿ ಅಪ್ಲಿಕೇಷನ್ ನಿಂದ ಬೆಲೆ ಅಲರ್ಟ್ ಕೂಡ ಮಾಡಲಾಗುತ್ತದೆ. ಎಸ್ ಐಪಿ ಮೂಲಕ ಹೂಡಿಕೆ ಮಾಡಬಹುದು. ವ್ಯವಹಾರ ಹಾಗೂ ಷೇರುಗಳ ಬಗ್ಗೆ ಮಾಹಿತಿ ಕಲೆಹಾಕಬಹುದು.

ಬಿಲ್ಟ್ ಇನ್ ಬ್ರೋಕರೇಜ್ ಕ್ಯಾಲ್ಕುಲೇಟರ್

ಬಿಲ್ಟ್ ಇನ್ ಬ್ರೋಕರೇಜ್ ಕ್ಯಾಲ್ಕುಲೇಟರ್

ಇದರ ಜತೆಗೆ ಬಿಲ್ಟ್ ಇನ್ ಬ್ರೋಕರೇಜ್ ಕ್ಯಾಲ್ಕುಲೇಟರ್ ಇರುತ್ತದೆ. ಇದರಿಂದ ಹೂಡಿಕೆದಾರರಿಗೆ ಒಂದು ವ್ಯವಹಾರಕ್ಕೆ ನಿರ್ದಿಷ್ಟವಾಗಿ ಎಷ್ಟು ಶುಲ್ಕ ತಗುಲುತ್ತದೆ, ಲಾಭದ ಪ್ರಮಾಣ ಎಷ್ಟು ಹಾಗೂ ಆಯಾ ವ್ಯವಹಾರದಲ್ಲಿ ಆದ ಲಾಭ- ನಷ್ಟದ ಬಗ್ಗೆ ನಿಖರವಾಗಿ ತಿಳಿದುಬರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

English summary

Paytm Money Opens Stockbroking With Attractive Offers

Paytm money, fully owned by Paytm opens stockbroking with attractive offers. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X