For Quick Alerts
ALLOW NOTIFICATIONS  
For Daily Alerts

New EPF Rule : ಪಿಎಫ್ ನಿಯಮ: ಐದು ಪ್ರಮುಖ ಬದಲಾವಣೆಗಳು ಇಲ್ಲಿದೆ

|

ಏಪ್ರಿಲ್ ತಿಂಗಳು ಈಗಾಗಲೇ ಆರಂಭವಾಗಿದೆ. ಈ ತಿಂಗಳಿನಲ್ಲಿ ಪಿಎಫ್ ನಿಯಮದಲ್ಲಿ ಹಲವಾರು ಬದಲಾವಣೆ ಆಗಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳ ಭವಿಷ್ಯ ನಿಧಿ ಅಥವಾ ಪಿಎಫ್ ಕೊಡುಗೆಗಳಿಗೆ ತೆರಿಗೆ ವಿಧಿಸಲಾಗುತ್ತದೆ.

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಕೊಡುಗೆಗಳ ಮೇಲೆ ವರ್ಷಕ್ಕೆ 2.50 ಲಕ್ಷ ರೂ.ಗಿಂತ ಹೆಚ್ಚಿನ ತೆರಿಗೆಯನ್ನು ವಿಧಿಸುವ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಆದರೆ, ಸರ್ಕಾರಿ ನೌಕರರ ವಿಷಯದಲ್ಲಿ ಈ ನಿಯಮ ಜಾರಿಗೆ ಬಂದಾಗ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

How To Withdraw PF Online : ಆನ್‌ಲೈನ್‌ ಮೂಲಕ ಪಿಎಫ್ ಹಣ ವಿತ್ ಡ್ರಾ ಮಾಡಲು ಇಲ್ಲಿದೆ ಸರಳ ಹಂತHow To Withdraw PF Online : ಆನ್‌ಲೈನ್‌ ಮೂಲಕ ಪಿಎಫ್ ಹಣ ವಿತ್ ಡ್ರಾ ಮಾಡಲು ಇಲ್ಲಿದೆ ಸರಳ ಹಂತ

ಭಾರತದಾದ್ಯಂತ ಉದ್ಯೋಗಿಗಳು ಕಡ್ಡಾಯವಾಗಿ ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆಯನ್ನು ಹೊಂದಿರಬೇಕು. ಸಾಮಾನ್ಯವಾಗಿ ನಿವೃತ್ತಿಯ ನಂತರದ ಹಣವನ್ನು ಬಳಸಿಕೊಳ್ಳಲು ಪಿಎಫ್ ಖಾತೆ ಪ್ರಮುಖ ಎಂದು ಭಾವಿಸಲಾಗಿದೆ. ಏಪ್ರಿಲ್‌ನಲ್ಲಿ ಪಿಎಫ್‌ನಲ್ಲಿ ಕೆಲವು ಬದಲಾವಣೆಗಳು ಆಗಿದೆ. ಅವು ಯಾವುದು ಎಂದು ತಿಳಿಯೋಣ ಮುಂದೆ ಓದಿ...

ಪಿಎಫ್ ನಿಯಮ: ಐದು ಪ್ರಮುಖ ಬದಲಾವಣೆಗಳು ಇಲ್ಲಿದೆ

* ಈ ಒಂದು ಹೊಸ ಬದಲಾವಣೆ ಹೆಚ್ಚು ಹಣವನ್ನು ಗಳಿಸುವ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿದೆ. ದೇಶದಲ್ಲಿ ತೆರಿಗೆದಾರರ ಒಂದು ಭಾಗದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಹೊಸ ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ ಪಿಎಫ್ ಖಾತೆಗಳನ್ನು ತೆರಿಗೆ ಮತ್ತು ತೆರಿಗೆಯಲ್ಲದ ಕೊಡುಗೆ ಖಾತೆಗಳಾಗಿ ವಿಂಗಡಿಸಬಹುದು. ಗಮನಿಸಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ ಈ ಹೊಸ ನಿಯಮವು ಉದ್ಯೋಗಿ ನೀಡಿದ ಕೊಡುಗೆಗಳಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಉದ್ಯೋಗದಾತರು ನೀಡಿದ ಕೊಡುಗೆಗಳಿಗೆ ತೆರಿಗೆ ವಿಧಿಸಲಾಗುವುದಿಲ್ಲ.

23 ಕೋಟಿಗೂ ಅಧಿಕ ಖಾತೆಗಳಿಗೆ ಪಿಎಫ್‌ ಬಡ್ಡಿದರ ಜಮೆ: ಹೀಗೆ ಪರಿಶೀಲಿಸಿ..23 ಕೋಟಿಗೂ ಅಧಿಕ ಖಾತೆಗಳಿಗೆ ಪಿಎಫ್‌ ಬಡ್ಡಿದರ ಜಮೆ: ಹೀಗೆ ಪರಿಶೀಲಿಸಿ..

* ಹೊಸ ನಿಯಮವನ್ನು ವಿವರಿಸುತ್ತಾ ಈ ಬಗ್ಗೆ ಮಾಹಿತಿ ನೀಡಿದ I.P. Pasricha & Co ನ ಪಾಲುದಾರ ಮನೀತ್ ಪಾಲ್ ಸಿಂಗ್, "ಒಂದು ಹಣಕಾಸು ವರ್ಷದಲ್ಲಿ ಉದ್ಯೋಗಿಯಿಂದ ಇಪಿಎಫ್ ಮತ್ತು ವಿಪಿಎಫ್‌ನಲ್ಲಿನ ಠೇವಣಿ ರೂ.2.5 ಲಕ್ಷವನ್ನು ಮೀರಿದರೆ, ರೂ.2.5 ಲಕ್ಷಕ್ಕಿಂತ ಹೆಚ್ಚಿನ ಕೊಡುಗೆಗಳ ಮೇಲೆ ಗಳಿಸಿದ ಬಡ್ಡಿಯ ಮೇಲೆ ತೆರಿಗೆ ಹಾಕಲಾಗುತ್ತದೆ. ಇಪಿಎಫ್ ಖಾತೆಗೆ ಉದ್ಯೋಗದಾತರು ಯಾವುದೇ ಕೊಡುಗೆಯನ್ನು ನೀಡದಿದ್ದಲ್ಲಿ ಆರ್ಥಿಕ ವರ್ಷದಲ್ಲಿ 5 ಲಕ್ಷದವರೆಗಿನ ಠೇವಣಿಗೆ ಬಡ್ಡಿಯು ತೆರಿಗೆ-ವಿನಾಯತಿಯನ್ನು ಹೊಂದಿರುತ್ತದೆ," ಎಂದು ಹೇಳಿದ್ದಾರೆ.

ಪಿಎಫ್ ನಿಯಮ: ಐದು ಪ್ರಮುಖ ಬದಲಾವಣೆಗಳು ಇಲ್ಲಿದೆ

* "ಈ ಕ್ರಮವು PF ನಲ್ಲಿ ಹೆಚ್ಚಿನ ಮೊತ್ತವನ್ನು ಠೇವಣಿ ಮಾಡುವ ಹೆಚ್ಚಿನ ಆದಾಯದ ಹೊಂದಿರುವ ವ್ಯಕ್ತಿಗಳ ಮೇಲೆ ಪರಿಣಾಮ ಬೀರಲಿದೆ. ವರ್ಷಕ್ಕೆ ರೂ 21 ಲಕ್ಷಕ್ಕಿಂತ ಹೆಚ್ಚು ಪಿಎಫ್ ಹಣವನ್ನು ಹೊಂದಿರುವ ಯಾರಾದರೂ ಅವರ ಇಪಿಎಫ್ ಕೊಡುಗೆಯ ಮೇಲೆ ಬಡ್ಡಿ ಬೀಳಲಿದೆ. ಇದು ಸರಿಸುಮಾರು ಪಿಎಫ್ ಕೊಡುಗೆದಾರರ ಶೇಕಡಾ 1 ರಷ್ಟಿದೆ," ಎಂದು ಕೂಡಾ ಮನೀತ್ ಪಾಲ್‌ ಸಿಂಗ್‌ ಹೇಳಿದ್ದಾರೆ. ಇದರರ್ಥ ಹೆಚ್ಚಿನ ಸಂಬಳ ಪಡೆಯುವ ಪಿಎಫ್ ಕೊಡುಗೆದಾರರು ತಮ್ಮ ಪಿಂಚಣಿ ಯೋಜನೆಗೆ ತೆರಿಗೆ ವಿಧಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ.

* ಆದಾಯ ತೆರಿಗೆ ಇಲಾಖೆಗೆ ನೀತಿಗಳನ್ನು ರೂಪಿಸುವ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ಹೊಸ ನಿಯಮವನ್ನು ಜಾರಿಗೆ ತರಲು ಆದಾಯ ತೆರಿಗೆ ನಿಯಮಗಳು, 1962 ರ ಅಡಿಯಲ್ಲಿ ಹೊಸ ವಿಭಾಗ 9ಡಿ ಅನ್ನು ರಚಿಸುವಂತೆ ಸೂಚಿಸಿದೆ. ಆದಾಗ್ಯೂ ಮಾರ್ಚ್ 31, 2021 ರವರೆಗಿನ ಪಿಎಫ್ ಕೊಡುಗೆಗಳು ತೆರಿಗೆ ಮುಕ್ತವಾಗಿರುತ್ತವೆ ಎಂದು ಸಿಬಿಡಿಟಿ ಹೇಳಿದೆ. ಇದರರ್ಥ ಏಪ್ರಿಲ್ 1, 2021 ರಿಂದ ಮಾಡಿದ ಕೊಡುಗೆಗಳು ಮಾತ್ರ ಹೊಸ ನಿಯಮದ ಅಡಿಯಲ್ಲಿ ತೆರಿಗೆಗೆ ಒಳಪಡುತ್ತವೆ.

* ಪಿಎಫ್ ಕೊಡುಗೆಗಳ ಮೇಲೆ ತೆರಿಗೆಗಳನ್ನು ಉಳಿಸಲು, ಹಲವಾರು ಕೆಲಸಗಳನ್ನು ಮಾಡಬಹುದು ಎಂದು ಸಿಂಗ್‌ ಹೇಳಿದ್ದಾರೆ. "ತೆರಿಗೆಯನ್ನು ತಪ್ಪಿಸಲು ಎನ್‌ಪಿಎಸ್, Ulips, ಇತ್ಯಾದಿಗಳಂತಹ ಇತರ ಹೂಡಿಕೆ ಆಯ್ಕೆಗಳಿಗೆ ಪಿಎಫ್‌ಗೆ ಸ್ವಯಂಪ್ರೇರಿತ ಕೊಡುಗೆಯನ್ನು ರವಾನೆ ಮಾಡಬಹುದು. ಆದಾಯ ತೆರಿಗೆ ರಿಟರ್ನ್ ಮೂಲಕ ತೆರಿಗೆ ಮರುಪಾವತಿ ಪಡೆಯಬಹುದು. ಎಲ್ಲಾ ಹೂಡಿಕೆಗಳು ತೆರಿಗೆ ಮುಕ್ತ ಆದಾಯವನ್ನು ಒದಗಿಸುವುದಿಲ್ಲ ಎಂದು ಕೂಡಾ ತಿಳಿದಿರಲಿ," ಎಮದು ಹೇಳಿದ್ದಾರೆ.

English summary

PF Rule Change from April: Tax on EPF, Two PF Accounts, Here's A Details in Kannada

PF Rule Change from April: Tax on EPF, Two PF Accounts, Here's A Details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X