For Quick Alerts
ALLOW NOTIFICATIONS  
For Daily Alerts

PM Kisan 13th instalment : ಪಿಎಂ ಕಿಸಾನ್ 13ನೇ ಕಂತು: ಈ ತಿಂಗಳಲ್ಲೇ ಹಣ ಬಿಡುಗಡೆ ಸಾಧ್ಯತೆ

|

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿಗಾಗಿ ರೈತರು ಕಾಯುತ್ತಿದ್ದಾರೆ. ಈ ರೈತರಿಗೆ ಶುಭ ಸುದ್ದಿಯೊಂದಿದೆ. ಈ ತಿಂಗಳಿನಲ್ಲಿಯೇ 13ನೇ ಕಂತಿನ ಮೊತ್ತವು ನಿಮಗೆ ರೈತರ ಖಾತೆಗೆ ಜಮೆಯಾಗುವ ಸಾಧ್ಯತೆಯಿದೆ. ಆದರೆ ಕೇಂದ್ರ ಸರ್ಕಾರವು ಈವರೆಗೆ ದಿನಾಂಕವನ್ನು ಘೋಷಣೆ ಮಾಡಿಲ್ಲ.

 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ವಾರ್ಷಿಕವಾಗಿ ಕೇಂದ್ರ ಸರ್ಕಾರವು ರೈತರಿಗೆ ಆರು ಸಾವಿರ ರೂಪಾಯಿ ಹೂಡಿಕೆ ಮಾಡುತ್ತದೆ. ಪ್ರತಿ ಬಾರಿ ಎರಡು ಸಾವಿರ ರೂಪಾಯಿಯಂತೆ ಮೂರು ಕಂತಿನಲ್ಲಿ ಹಣವನ್ನು ಜಮೆ ಮಾಡುತ್ತದೆ. ಒಟ್ಟಾಗಿ 8 ಕೋಟಿ ರೈತರಿಗೆ ಮೊತ್ತವನ್ನು ಜಮೆ ಮಾಡಲಾಗುತ್ತದೆ.

PM Kisan 13th Instalment : ಪಿಎಂ ಕಿಸಾನ್ 13ನೇ ಕಂತು ಪಡೆಯಬೇಕಾದರೆ ಹೀಗೆ ಮಾಡಿPM Kisan 13th Instalment : ಪಿಎಂ ಕಿಸಾನ್ 13ನೇ ಕಂತು ಪಡೆಯಬೇಕಾದರೆ ಹೀಗೆ ಮಾಡಿ

ಈ ಹಿಂದೆ ಕೇಂದ್ರ ಸರ್ಕಾರವು ಅಕ್ಟೋಬರ್ 17ರಂದು 12ನೇ ಕಂತಿನ ಕಿಸಾನ್ ನಿಧಿ ಮೊತ್ತವನ್ನು ಬಿಡುಗಡೆ ಮಾಡಿತ್ತು. ಒಟ್ಟಾಗಿ 8 ಮಿಲಿಯನ್ ರೈತ ಕುಟುಂಬಕ್ಕೆ ಕೇಂದ್ರ ಸರ್ಕಾರವು 16,000 ಕೋಟಿ ರೂಪಾಯಿ ಮೊತ್ತವನ್ನು ಜಮೆ ಮಾಡಿದೆ. ಹಾಗಾದರೆ ಮುಂದಿನ ಕಂತು ಯಾವಾಗ ಜಮೆ ಆಗಲಿದೆ. ಕಂತು ತಪ್ಪದೆ ಬರಬೇಕಾದರೆ ಏನು ಮಾಡಬೇಕು ಎಂಬ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಕಂತು ಯಾವಾಗ ಬಿಡುಗಡೆಯಾಗಬಹುದು?

ಕಂತು ಯಾವಾಗ ಬಿಡುಗಡೆಯಾಗಬಹುದು?

ಸಾಮಾನ್ಯವಾಗಿ ವರ್ಷದಲ್ಲಿ ಮೂರು ಬಾರಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮೊತ್ತವು ಜಮೆಯಾಗುತ್ತದೆ. ಪ್ರತಿ ಕಂತಿನಲ್ಲಿ ಮೂರು ಸಾವಿರ ರೂಪಾಯಿಯಂತೆ ಒಟ್ಟಾಗಿ ಆರು ಸಾವಿರ ರೂಪಾಯಿ ಲಭ್ಯವಾಗುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು 2019ರಲ್ಲಿ ಆರಂಭ ಮಾಡಲಾಗಿದೆ. ಪ್ರತಿ ವರ್ಷವೂ ಏಪ್ರಿಲ್ ಹಾಗೂ ಜುಲೈನಲ್ಲಿ ಮೊದಲ ಕಂತು, ಆಗಸ್ಟ್‌ ಹಾಗೂ ನವೆಂಬರ್‌ ನಡುವೆ ಎರಡನೇ ಕಂತು ಹಾಗೂ ಡಿಸೆಂಬರ್ ಮತ್ತು ಮಾರ್ಚ್ ನಡುವೆ ಮೂರನೇ ಕಂತಿನ ಮೊತ್ತವು ಜಮೆ ಆಗಲಿದೆ. ಈ ಹಿಂದೆ ಜನವರಿ ಒಂದರಂದು ಮೊದಲ ಕಂತನ್ನು ಜಮೆ ಮಾಡಲಾಗಿತ್ತು.

 ಕಂತಿನ ಮೊತ್ತ ಲಭ್ಯವಾಗಬೇಕಾದರೆ ಈ ಕಾರ್ಯ ಮಾಡಿ
 

ಕಂತಿನ ಮೊತ್ತ ಲಭ್ಯವಾಗಬೇಕಾದರೆ ಈ ಕಾರ್ಯ ಮಾಡಿ

ಇನ್ನು ಕಂತಿನ ಮೊತ್ತ ಲಭ್ಯವಾಗಬೇಕಾದರೆ ನೀವು ಕೆವೈಸಿ ಪ್ರಕ್ರಿಯೆ ಸಂಪೂರ್ಣಗೊಳಿಸಬೇಕಾಗುತ್ತದೆ. ಕೆವೈಸಿ ಪ್ರಕ್ರಿಯೆ ಹೇಗೆ ಸಂಪೂರ್ಣಗೊಳಿಸುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ

* ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನೀಡಿ
* ಬಲಭಾಗದಲ್ಲಿ, ಮುಖಪುಟದ ಕೆಳಗೆ, ಇಕೆವೈಸಿ ಕಾಣಲಿದೆ.
* ಫಾರ್ಮರ್ಸ್ ಕಾರ್ನರ್‌ನ ಕೆಳಗೆ ಇಕೆವೈಸಿ ನಮೂದಿಸುವ ಬಾಕ್ಸ್ ಇದೆ
* ಅಲ್ಲಿ ನೀವು e-kyc ಅನ್ನು ಕ್ಲಿಕ್ ಮಾಡಿ
* ಆಧಾರ್ Ekyc ಯ ಪುಟ ತೆರೆಯಲಿದೆ
* ಈಗ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು
* ನಂತರ ತೋರಿಸಿರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು
* ಬಳಿಕ search ಬಟನ್‌ ಕ್ಲಿಕ್‌ ಮಾಡಬೇಕು
* ಅದರ ನಂತರ, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕು
* ಬಳಿಕ Get OTP ಅನ್ನು ಕ್ಲಿಕ್‌ ಮಾಡಿ
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ
* ಒಟಿಪಿಯನ್ನು ನಮೂದಿಸಿ, Submit ಮಾಡಿ
* ನೀವು Submit ಬಟನ್‌ ಕ್ಲಿಕ್‌ ಮಾಡಿದ ಬಳಿಕ ನಿಮ್ಮ ಪಿಎಂ ಕಿಸಾನ್ ಇ-ಕೆವೈಸಿ ಯಶಸ್ವಿಯಾಗುತ್ತದೆ

 

 ಇಕೆವೈಸಿ ಮಾಡಿದರೂ ಹಣ ಬಂದಿಲ್ಲವೇ?

ಇಕೆವೈಸಿ ಮಾಡಿದರೂ ಹಣ ಬಂದಿಲ್ಲವೇ?

ಒಂದು ವೇಳೆ ನೀವು ಇಕೆವೈಸಿ ಮಾಡಿದ್ದರೂ ಕೂಡಾ ನಿಮಗೆ ಯೋಜನೆಯ ಹಣ ಲಭ್ಯವಾಗಿಲ್ಲವಾದರೆ, ನೀವು ಅದಕ್ಕೆ ದೂರು ಸಲ್ಲಿಸುವ ಆಯ್ಕೆಯಿದೆ. ನೀವು ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ - 011-24300606 ಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಹಾಗೆಯೇ ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266 ಕ್ಕೂ ಕೂಡಾ ಕರೆ ಮಾಡಬಹುದು. ಇದಲ್ಲದೇ ಇಮೇಲ್ ಕೂಡಾ ಮಾಡಬಹುದು. PMkisan-ict@gov.in ಗೆ ಮೇಲ್ ಮಾಡುವ ಮೂಲಕ ಪಿಎಂ ಕಿಸಾನ್ ಯೋಜನೆಯ ಕಂತಿನ ಹಣ ಯಾಕೆ ಜಮೆಯಾಗಿಲ್ಲ ಎಂದು ಪ್ರಶ್ನಿಸಬಹುದು.

ಇಮೇಲ್ ಐಡಿ: pmkisan-ict@gov.in. ಮತ್ತು pmkisan-funds@gov.in ಸಹಾಯವಾಣಿ ಸಂಖ್ಯೆ: 011-24300606,155261, 011-23381092, ಟೋಲ್-ಫ್ರೀ ಸಂಖ್ಯೆ: 1800-115-526

 

English summary

PM Kisan 13th instalment: Farmers likely to receive payment this month, Details in Kannada

PM Kisan 13th instalment: Here is a significant update for the PM Kisan Yojana beneficiary farmers who are anxiously awaiting the 13th instalment.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X