For Quick Alerts
ALLOW NOTIFICATIONS  
For Daily Alerts

ರಕ್ಷಾ ಬಂಧನ: ಸಹೋದರಿಗೆ ಏನೆಲ್ಲ ಉಡುಗೊರೆ ನೀಡಿದರೆ ಹಣಕಾಸು ಸಹಾಯ?

|

ರಕ್ಷಾ ಬಂಧನ ಸಹೋದರ, ಸಹೋದರಿಯರ ನಡುವಿನ ಒಂದು ಭಾಂದವ್ಯದ ಪ್ರತೀಕ. ಸಹೋದರಿ ತನ್ನ ಸಹೋದರರಿಗೆ ರಾಖಿಯನ್ನು ಕಟ್ಟುವುದು, ಸಹೋದರರು ಸಹೋದರಿಗೆ ಉಡುಗೊರೆಯನ್ನು ನೀಡುವುದು ರೂಢಿಯಾಗಿದೆ. ಆದರೆ ಈ ವರ್ಷ ಯಾವೆಲ್ಲ ಉಡುಗೊರೆ ನೀಡಿದರೆ ಅದು ಅತ್ಯಮೂಲ್ಯವಾಗಲಿದೆ ಎಂದು ನಿಮಗೆ ನಾವಿಲ್ಲಿ ವಿವರಿಸಿದ್ದೇವೆ.

ಪ್ರಸ್ತುತ ಹಣದುಬ್ಬರದ ಸಂದರ್ಭದಲ್ಲಿ ಎಲ್ಲವೂ ಕೂಡಾ ದುಬಾರಿಯಾಗಿದೆ. ಹಲವಾರು ಮಂದಿಗೆ ಹಣಕಾಸು ಸಮಸ್ಯೆಗಳು ಇದೆ. ಹೀಗುರುವಾಗ ನೀವು ನಿಮ್ಮ ಸಹೋದರಿಗೆ ಭವಿಷ್ಯದಲ್ಲಿಯೂ ಸಹಕಾರಿಯಾಗುವ ಉಡುಗೊರೆಯನ್ನು ನೀಡಿದರೆ ಉತ್ತಮವಲ್ಲವೇ?. ಹಣಕಾಸು ವಿಚಾರದಲ್ಲಿ ಸಹಕಾರಿಯಾಗುವ ಹಲವಾರು ಉಡುಗೊರೆಗಳನ್ನು ನೀವು ನಿಮ್ಮ ಸಹೋದರಿಗೆ ನೀಡಬಹುದು.

ರಕ್ಷಾ ಬಂಧನ 2022: ಸಹೋದರಿಗೆ ಚಿನ್ನ ಉಡುಗೊರೆ ನೀಡುವುದು ಉತ್ತಮವೇ?ರಕ್ಷಾ ಬಂಧನ 2022: ಸಹೋದರಿಗೆ ಚಿನ್ನ ಉಡುಗೊರೆ ನೀಡುವುದು ಉತ್ತಮವೇ?

ಸಹೋದರ ತನ್ನ ಸಹೋದರಿಗೆ ನೀಡುವ ಬೆಸ್ಟ್ ಗಿಫ್ಟ್ ಯಾವುದು. ಈ ರಕ್ಷಾ ಬಂಧನವನ್ನು ಹೇಗೆ ಜೀವನ ಪೂರ್ತಿ ನೆನಪಿಸುವ ದಿನವನ್ನಾಗಿಸುವುದು, ಸಹೋದರಿಗೆ ಈ ದಿನ ಹಣಕಾಸು ಸಹಾಯ ಹೇಗೆ ಮಾಡುವುದು ಎಂಬ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ.....

 ಆರೋಗ್ಯ ವಿಮೆ ಮಾಡಿಸಿ

ಆರೋಗ್ಯ ವಿಮೆ ಮಾಡಿಸಿ

ನೀವು ನಿಮ್ಮ ಸಹೋದರಿಗೆ ಆರೋಗ್ಯ ವಿಮೆ ಮಾಡಿಸಿದರೆ ಹೇಗೆ?. ಸಹೋದರಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಾಗ ಈ ಆರೋಗ್ಯ ವಿಮೆ ಸಹಾಯಕವಾಗಲಿದೆ. ಈ ಆರೋಗ್ಯ ವಿಮೆಯು ಆಸ್ಪತ್ರೆಯ ವೆಚ್ಚ, ಚಿಕಿತ್ಸೆ ವೆಚ್ಚ, ಆಸ್ಪತ್ರೆ ರೂಮ್ ಬಾಡಿಗೆ, ಇತರೆ ವೆಚ್ಚವನ್ನು ಕವರ್ ಮಾಡುತ್ತದೆ. ಇದು ನಗದುರಹಿತ ಚಿಕಿತ್ಸೆಗೆ ಸಹಕಾರಿಯಾಗಲಿದೆ.

ರಕ್ಷಾ ಬಂಧನ ಹಬ್ಬ: ನಿಮ್ಮ ಸಹೋದರಿಗೆ ಈ ಅಮೂಲ್ಯ ಉಡುಗೊರೆ ನೀಡಿ...ರಕ್ಷಾ ಬಂಧನ ಹಬ್ಬ: ನಿಮ್ಮ ಸಹೋದರಿಗೆ ಈ ಅಮೂಲ್ಯ ಉಡುಗೊರೆ ನೀಡಿ...

 ಡಿಜಿಟಲ್ ಗೋಲ್ಡ್/ ಗೋಲ್ಡ್ ಇಟಿಎಫ್

ಡಿಜಿಟಲ್ ಗೋಲ್ಡ್/ ಗೋಲ್ಡ್ ಇಟಿಎಫ್

ನೀವು ಚಿನ್ನದ ಮೇಲೆ ಹೂಡಿಕೆ ಮಾಡುವ ಮೂಲಕವೂ ನಿಮ್ಮ ಸಹೋದರಿಗೆ ಈ ರಕ್ಷಾ ಬಂಧನ ಉಡುಗೊರೆಯನ್ನು ನೀಡಬಹುದು. ಚಿನ್ನವನ್ನು ಉಡುಗೊರೆ ನೀಡುವುದರ ಬದಲಾಗಿ ಚಿನ್ನವನ್ನು ಡಿಜಿಟಲ್ ರೂಪದಲ್ಲಿ ನೀಡಲು ಸಾಧ್ಯವಾಗಲಿದೆ. ನೀವು ಡಿಜಿಟಲ್ ಗೋಲ್ಡ್ ಅನ್ನು ಖರೀದಿ ಮಾಡಿ ಅದನ್ನು ನಿಮ್ಮ ಸಹೋದರಿಗೆ ವರ್ಗಾವಣೆ ಮಾಡಬಹುದು. ಪ್ರಸ್ತುತ ಪ್ರಮುಖವಾಗಿ ಮೂರು ಕಂಪನಿಗಳು ಡಿಜಿಟಲ್ ಗೋಲ್ಡ್ ಅನ್ನು ನೀಡುತ್ತದೆ. ಎಂಎಂಟಿಸಿ-ಪಿಎಎಪಿ ಇಂಡಿಯಾ, ಆಂಗ್‌ಮಾಂಟ್ ಗೋಲ್ಡ್ ಲಿಮಿಟೆಡ್, ಡಿಜಿಟಲ್ ಗೋಲ್ಡ್ ಇಂಡಿಯಾ ಪ್ರಮುಖ ಮೂರು ಕಂಪನಿಗಳು ಆಗಿದೆ. ನೀವು ಗೋಲ್ಡ್ ಇಟಿಎಫ್ ಅನನ್ಉ ಕೂಡಾ ಖರೀದಿ ಮಾಡಬಹುದು.

 ಮ್ಯೂಚುವಲ್ ಫಂಡ್: ಭವಿಷ್ಯದ ಆದಾಯ
 

ಮ್ಯೂಚುವಲ್ ಫಂಡ್: ಭವಿಷ್ಯದ ಆದಾಯ

ನೀವು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಮೂಲಕವೂ ನಿಮ್ಮ ಸಹೋದರಿಯ ಭವಿಷ್ಯವನ್ನು ಸುರಕ್ಷಿತವಾಗಿಸಬಹುದು. ಆದರೆ ನೀವು ಸರಿಯಾಗಿ ತಜ್ಞರ ಸಲಹೆಯನ್ನು ಪಡೆದು ಮ್ಯೂಚುವಲ್ ಫಂಡ್ ಅನ್ನು ಖರೀದಿ ಮಾಡಿ. ಇದರಿಂದ ನಿಮ್ಮ ಸಹೋದರಿಗೆ ನಿರಂತರ ಆದಾಯ ಲಭ್ಯವಾಗಲಿದೆ. ಭಾರತದಲ್ಲಿ ಹಲವಾರು ಮ್ಯೂಚುವಲ್ ಫಂಡ್ ಇದೆ. ನೀವು ಈ ಅಪಾಯಯುಕ್ತ ಹೂಡಿಕೆಯ ಪೈಕಿ ಕೊಂಚ ಸುರಕ್ಷಿತ ಯಾವುದು ಎಂದು ನೋಡಿಕೊಂಡು ಹೂಡಿಕೆ ಮಾಡಿ. ಹೂಡಿಕೆಗೂ ಮುನ್ನ ಹಣಕಾಸು ತಜ್ಞರ ಸಲಹೆ ಪಡೆಯುವುದು ಉತ್ತಮ.

 ಸ್ಟಾಕ್ ಮೇಲೆ ಹೂಡಿಕೆ

ಸ್ಟಾಕ್ ಮೇಲೆ ಹೂಡಿಕೆ

ನೀವು ನಿಮ್ಮ ಸಹೋದರಿ ಹೆಸರಿನಲ್ಲಿ ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಮೂಲಕವು ವಿಶೇಷ ಗಿಫ್ಟ್ ಅನ್ನು ನಿಮ್ಮ ಸಹೋದರಿಗೆ ನೀಡಬಹುದು. ದೀರ್ಘಾವಧಿಯ ಹೂಡಿಕೆಯನ್ನು ಹೊಂದಿರುವ ಸ್ಟಾಕ್ ಅನ್ನು ಖರೀದಿ ಮಾಡಿ ನಿಮ್ಮ ಸಹೋದರಿಗೆ ಉಡುಗೊರೆಯನ್ನಾಗಿ ನೀಡಬಹುದು. ಇದಕ್ಕೂ ಕೂಡಾ ನೀವು ಹಣಕಾಸು ತಜ್ಞರ ಸಹಾಯವನ್ನು ಪಡೆಯುವುದು ಅತೀ ಮುಖ್ಯವಾಗಿದೆ.

 ಫಿಕ್ಸಿಡ್ ಡೆಪಾಸಿಟ್ ಅಥವಾ ರಿಕ್ಯೂರಿಂಗ್ ಡೆಪಾಸಿಟ್

ಫಿಕ್ಸಿಡ್ ಡೆಪಾಸಿಟ್ ಅಥವಾ ರಿಕ್ಯೂರಿಂಗ್ ಡೆಪಾಸಿಟ್

ಈ ಎಲ್ಲಾ ಹೂಡಿಕೆಗಳ ಪೈಕಿ ಅತೀ ಸುರಕ್ಷಿತವಾದ ಹೂಡಿಕೆ ಫಿಕ್ಸಿಡ್ ಡೆಪಾಸಿಟ್/ ಎಫ್‌ಡಿ ಅಥವಾ ರಿಕ್ಯೂರಿಂಗ್ ಡೆಪಾಸಿಟ್/ ಆರ್‌ಡಿ ಆಗಿದೆ. ಸಹೋದರರು ತಮ್ಮ ಸಹೋದರಿಗೆ ನೀಡಲು ಬಯಸುವ ಹಣವನ್ನು ಸಹೋದರಿ ಹೆಸರಲ್ಲಿ ಫಿಕ್ಸಿಡ್ ಡೆಪಾಸಿಟ್ ಆಗಿ ಹೂಡಿಕೆ ಮಾಡಬಹುದು. ಆರ್‌ಡಿಯನ್ನು ಕೂಡಾ ಮಾಡಬಹುದು,. ಆರ್‌ಡಿ ಖಾತೆಯನ್ನು ತೆರೆದು ಪ್ರತಿ ತಿಂಗಳು ಅದಕ್ಕೆ ಹೂಡಿಕೆಯನ್ನು ಮಾಡಬಹುದು. ಇದು ನಿಮ್ಮ ಸಹೋದರಿಗೆ ಭವಿಷ್ಯದಲ್ಲಿ ಸಹಕಾರಿಯಾಗಲಿದೆ. ಎಫ್‌ಡಿಯ ಮೇಲೆ ಉಳಿತಾಯ ಖಾತೆಗಿಂತ ಅಧಿಕ ಬಡ್ಡಿದರ ಲಭ್ಯವಾಗಲಿದೆ.

English summary

Raksha Bandhan 2022: Financial Products to Gift to Your Sister

Raksha Bandhan 2022: Here are the few financial products that you can gift to your sister this year. Health insurance, digital gold, mutual fund and others. Know more.
Story first published: Thursday, August 11, 2022, 17:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X