For Quick Alerts
ALLOW NOTIFICATIONS  
For Daily Alerts

ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮೇಲೆ ದಂಡ ವಿಧಿಸಿದ ಆರ್‌ಬಿಐ

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ ಮೇಲೆ ದಂಡವನ್ನು ವಿಧಿಸಿದೆ. ಕೇಂದ್ರ ಬ್ಯಾಂಕ್‌ನ ಕೆಲವು ನಿರ್ದೇಶನಗಳನ್ನು ಅನುಸರಿಸದ ಕಾರಣಕ್ಕಾಗಿ ಸುಮಾರು 57.50 ಲಕ್ಷ ವಿತ್ತೀಯ ದಂಡವನ್ನು ವಿಧಿಸಿದೆ ಎಂದು ತಿಳಿಸಿದೆ.

ಎಟಿಎಂ ಕಾರ್ಡ್ ಕ್ಲೋನಿಂಗ್ ಮತ್ತು ಸ್ಕಿಮ್ಮಿಂಗ್ ಒಳಗೊಂಡ ವಂಚನೆಗಳ ಕೆಲವು ಘಟನೆಗಳು ಪತ್ತೆಯಾದ ಮೂರು ವಾರದ ಒಳಗಾಗಿ ಆರ್‌ಬಿಐಗೆ ಈ ಬಗ್ಗೆ ವರದಿ ಸಲ್ಲಿಸಲು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ವಿಫಲವಾಗಿದೆ ಎಂದು ಕೇಂದ್ರ ಬ್ಯಾಂಕ್ ಅಧಿಸೂಚನೆಯಲ್ಲಿ ತಿಳಿಸಿದೆ.

ಮೂರು ಬ್ಯಾಂಕ್‌ಗಳಿಗೆ ದಂಡ ವಿಧಿಸಿದ ಆರ್‌ಬಿಐಮೂರು ಬ್ಯಾಂಕ್‌ಗಳಿಗೆ ದಂಡ ವಿಧಿಸಿದ ಆರ್‌ಬಿಐ

ಇನ್ನು ಈ ಬ್ಯಾಂಕ್ ಕೆಲವು ಬದಲಾಗುವ ಸಾಲದ ದರಗಳನ್ನು ಮೈಕ್ರೋ ಮತ್ತು ಸಣ್ಣ ಉದ್ಯಮಗಳಿಗೆ ಲಿಂಕ್ ಮಾಡಿದೆ. ಬಾಹ್ಯ ಮಾನದಂಡದ ಬದಲಿಗೆ ಅಕ್ಟೋಬರ್ 1, 2019 ರಂದು ಅಥವಾ ನಂತರ ಎಂಸಿಎಲ್‌ಆರ್‌ ಅದನ್ನು ವಿಸ್ತರಿಸಲಾಗಿದೆ.

ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮೇಲೆ ದಂಡ ವಿಧಿಸಿದ ಆರ್‌ಬಿಐ

ಆರ್‌ಬಿಐ ನೀಡಿದ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದ ಕಾರಣಕ್ಕೆ ದಂಡವನ್ನು ಏಕೆ ವಿಧಿಸಬಾರದು ಎಂದು ಬ್ಯಾಂಕ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. "ನೋಟಿಸ್‌ಗೆ ಬ್ಯಾಂಕ್‌ನ ಉತ್ತರವನ್ನು ಪರಿಗಣಿಸಿದ ನಂತರ ಮತ್ತು ಹೆಚ್ಚುವರಿ ವರದಿಯನ್ನು ಪರಿಶೀಲಿಸಿದ ನಂತರ ಆರ್‌ಬಿಐ ಮೇಲಿನ ನಿರ್ದೇಶನಗಳನ್ನು ಅನುಸರಿಸದಿರುವ ಆರೋಪವನ್ನು ಸಮರ್ಥಿಸುತ್ತದೆ. ವಿತ್ತೀಯ ದಂಡವನ್ನು ವಿಧಿಸಲು ಸಮರ್ಥವಾಗಿದೆ ಎಂಬ ತೀರ್ಮಾನಕ್ಕೆ ಬಂದಿದೆ," ಎಂದು ಆರ್‌ಬಿಐ ಹೇಳಿದೆ.

ಈ ಹಿಂದೆ ಹಲವಾರು ಬ್ಯಾಂಕ್‌ಗಳ ಮೇಲೆ ದಂಡ ವಿಧಿಸಿದ ಆರ್‌ಬಿಐ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ಹಿಂದೆ ಫೆಬ್ರವರಿಯಲ್ಲಿ ಮೂರು ಸಹಕಾರಿ ಬ್ಯಾಂಕ್‌ಗಳಿಗೆ ದಂಡ ವಿಧಿಸಿದೆ. ತಮಿಳುನಾಡಿನ ಎರಡು ಮತ್ತು ಜಮ್ಮು ಮತ್ತು ಕಾಶ್ಮೀರದ ಒಂದು ಬ್ಯಾಂಕ್‌ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ದಂಡವನ್ನು ವಿಧಿಸಿದೆ.

ದಿ ಬಿಗ್ ಕಾಂಚೀಪುರಂ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್-ಕಾಂಚಿಪುರಂ, ಚೆನ್ನೈ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಮತ್ತು ದಿ ಬಾರಾಮುಲ್ಲಾ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಬ್ಯಾಂಕುಗಳಿಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ದಂಡವನ್ನು ವಿಧಿಸಿದೆ.

English summary

RBI imposes Rs 57.5 lakh penalty on Indian Overseas Bank

Reserve Bank of India (RBI) said on Friday it has imposed a monetary penalty of ₹ 57.50 lakh on Indian Overseas Bank.
Story first published: Saturday, June 25, 2022, 21:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X