For Quick Alerts
ALLOW NOTIFICATIONS  
For Daily Alerts

1 ವರ್ಷದಲ್ಲಿ 100 ಬಿ. ಡಾಲರ್ ಆದಾಯ ಗಳಿಸಿದ ಮೊದಲ ಭಾರತೀಯ ಕಂಪನಿ ರಿಲಯನ್ಸ್

|

ಬಿಲಿಯನೇರ್ ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಲಾಭದಲ್ಲಿ ಏರಿಕೆಯಾಗಿದೆ. ತೈಲ ಸಂಸ್ಕರಣಾ ಮಾರ್ಜಿನ್, ಟೆಲಿಕಾಂ ಮತ್ತು ಡಿಜಿಟಲ್ ಸೇವೆಗಳಲ್ಲಿನ ಬೆಳವಣಿಗೆಯ ನಡುವೆ ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿವ್ವಳ ಲಾಭದಲ್ಲಿ ಶೇಕಡಾ 22.5 ರಷ್ಟು ಏರಿಕೆಯಾಗಿದೆ. ಒಂದು ವರ್ಷದಲ್ಲಿ 100 ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿದ ಭಾರತದ ಮೊದಲ ಕಂಪನಿ ರಿಲಯನ್ಸ್ ಆಗಿದೆ.

ತೈಲದಿಂದ ಹಿಡಿದು ದೂರಸಂಪರ್ಕ ಸೇವೆಯವರೆಗಿನ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿವ್ವಳ ಲಾಭವು ಮಾರ್ಚ್ 31, 2022 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 13,227 ಕೋಟಿ ರೂಪಾಯಿಯಿಂದ 16,203 ಕೋಟಿ ರೂಪಾಯಿಗೆ ಏರಿದೆ ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ. ಆದರೆ ನಿವ್ವಳ ಆದಾಯವು ಆರು ತ್ರೈಮಾಸಿಕದ ಲೆಕ್ಕದಲ್ಲಿ ನೋಡಿದಾಗ ಶೇಕಡ 12.6 ಕುಸಿತ ಕಂಡಿದೆ.

Q4 ಫಲಿತಾಂಶಕ್ಕೂ ಮುನ್ನ ರಿಲಯನ್ಸ್ ಷೇರುಗಳ ಕುಸಿತQ4 ಫಲಿತಾಂಶಕ್ಕೂ ಮುನ್ನ ರಿಲಯನ್ಸ್ ಷೇರುಗಳ ಕುಸಿತ

ಬ್ರಾಡ್‌ಬ್ಯಾಂಡ್ ಚಂದಾದಾರರ ಹೆಚ್ಚಳ, ಆನ್‌ಲೈನ್ ಚಿಲ್ಲರೆ ವ್ಯಾಪಾರದ ಹೆಚ್ಚಳ, ಹೊಸ ಹೂಡಿಕೆ ಹೆಚ್ಚಳದಿಂದಾಗಿ ರಿಲಯನ್ಸ್ ಭಾರೀ ಲಾಭವನ್ನು ಗಳಿಸಿದೆ. ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಹೇಳುವುದಾದರೆ ರಾಷ್ಟ್ರದ ಅತಿದೊಡ್ಡ ಕಂಪನಿ ಈಗ ರಿಲಯನ್ಸ್ ಆಗಿದೆ.

 100 ಶತಕೋಟಿ ಆದಾಯ ದಾಟಿದ ಭಾರತದ ಮೊದಲ ಕಂಪನಿ

100 ಶತಕೋಟಿ ಆದಾಯ ದಾಟಿದ ಭಾರತದ ಮೊದಲ ಕಂಪನಿ

ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದಾಗ ಕಂಪನಿಯ ಆದಾಯವು ಹಣಕಾಸು ವರ್ಷ 2022ರ 35 ಪ್ರತಿಶತದಷ್ಟು ಏರಿದೆ. ಅಂದರೆ ಕಂಪನಿಯ ಆದಾಯವು 2.32 ಲಕ್ಷ ಕೋಟಿಗೆ ಹೆಚ್ಚಳಗೊಂಡಿದೆ. 2021-22 ರ ಪೂರ್ಣ ಹಣಕಾಸು ವರ್ಷದಲ್ಲಿ (ಏಪ್ರಿಲ್ 2021 ರಿಂದ ಮಾರ್ಚ್ 2022), ರಿಲಯನ್ಸ್ 7.92 ಲಕ್ಷ ಕೋಟಿ (ಯುಎಸ್‌ಡಿ 102 ಶತಕೋಟಿ) ಆದಾಯದ ಮೇಲೆ 60,705 ಕೋಟಿ ನಿವ್ವಳ ಲಾಭವನ್ನು ಪಡೆದಿದೆ. ಒಂದು ವರ್ಷದಲ್ಲಿ ಯುಎಸ್‌ಡಿ 100 ಶತಕೋಟಿ ಆದಾಯವನ್ನು ದಾಟಿದ ಮೊದಲ ಭಾರತೀಯ ಕಂಪನಿಯಾಗಿದೆ.

 ಯಾವ ಯಾವ ವಲಯದಿಂದ ಲಾಭ?

ಯಾವ ಯಾವ ವಲಯದಿಂದ ಲಾಭ?

ಸಂಸ್ಥೆಯು ಇದುವರೆಗಿನ ಅತ್ಯಧಿಕ ತ್ರೈಮಾಸಿಕ ಇಬಿಐಟಿಡಿಎ (ಬಡ್ಡಿ, ತೆರಿಗೆಗಳು, ವಿನಿಯೋಗಕ್ಕೆ ಮುನ್ನ ಗಳಿಕೆ) 33,968 ಕೋಟಿ ರೂಪಾಯಿ ಆಗಿದೆ. ಇದು ಕಳೆದ ವರ್ಷದಿಂದ ಈ ವರ್ಷಕ್ಕೆ 28 ಶೇಕಡಾ ಹೆಚ್ಚಾಗಿದೆ. ಒ2ಸಿ (ತೈಲ-ರಾಸಾಯನಿಕ) ವ್ಯವಹಾರ ಇಬಿಐಟಿಡಿಎ ಶೇ 25 ರಷ್ಟು ಏರಿಕೆಯಾಗಿದ್ದು 14,241 ಕೋಟಿ ರೂಪಾಯಿಗೆ ತಲುಪಿದೆ. ಆದರೆ ಡಿಜಿಟಲ್ ಸೇವೆಗಳ ತೆರಿಗೆ ಪೂರ್ವ ಗಳಿಕೆಯು 11,209 ಕೋಟಿ ರೂಪಾಯಿಗೆ ಏರಿದೆ. ಕಳೆದ ವರ್ಷಕ್ಕಿಂತ ಶೇಕಡ 25ರಷ್ಟು ಅಧಿಕವಾಗಿದೆ. ಚಿಲ್ಲರೆ ಇಬಿಐಟಿಡಿಎ ಶೇ 2.5 ರಷ್ಟು ಏರಿಕೆಯಾಗಿ 3,712 ಕೋಟಿಗೆ ತಲುಪಿದೆ.

 ಜಿಯೋ ಕೊಡುಗೆ ಏನಿದೆ?

ಜಿಯೋ ಕೊಡುಗೆ ಏನಿದೆ?

ರಷ್ಯಾ-ಉಕ್ರೇನ್ ಸಂಘರ್ಷವು ಕಚ್ಚಾ ತೈಲ-ಪೆಟ್ರೋಲಿಯಂ ಉತ್ಪನ್ನಗಳಿಗೆ ಈಗಾಗಲೇ ಬಿಗಿಯಾದ ಬೇಡಿಕೆ ಸೃಷ್ಟಿ ಮಾಡಿದೆ. ಈ ನಡುವೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಕಳೆದ ಎರಡು ತ್ರೈಮಾಸಿಕಗಳಲ್ಲಿ ಜಿಯೋ ಬಳಕೆ ಹೆಚ್ಚಳವಾಗಿದೆ. ಇದು ಕೂಡಾ ನಿವ್ವಳ ಲಾಭಕ್ಕೆ ಕೊಡುಗೆ ನೀಡಿದೆ. ಕಳೆದ ಎರಡು ತ್ರೈಮಾಸಿಕಗಳಲ್ಲಿ ಜಿಯೋ ಚಂದಾದಾರರ ಕಡಿತ ಉಂಟಾಗಿದೆ ಆದರೆ ಜನವರಿ-ಮಾರ್ಚ್‌ನಲ್ಲಿ 24 ಶೇಕಡ ನಿವ್ವಳ ಲಾಭ ಹೆಚ್ಚಳವಾಗಿದೆ. 4,173 ಕೋಟಿ ರೂಪಾಯಿಗೆ ತಲುಪಿದೆ. ಮಾರ್ಚ್ 31, 2022 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ, ರಿಲಯನ್ಸ್ ಜಿಯೊದ ನಿವ್ವಳ ಲಾಭವು ಸುಮಾರು 23 ಶೇಕಡಾ ಹೆಚ್ಚಳವಾಗಿದೆ. ಲಾಭವು 14,854 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

 ಮುಕೇಶ್ ಅಂಬಾನಿ ಹೇಳುವುದು ಏನು?

ಮುಕೇಶ್ ಅಂಬಾನಿ ಹೇಳುವುದು ಏನು?

ಈ ನಿವ್ವಳ ಲಾಭ ಹೆಚ್ಚಳದ ಬಗ್ಗೆ ಪ್ರತಿಕ್ರಿಯೆ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ, "ಕೊರೊನಾ ಸಾಂಕ್ರಾಮಿಕ ಮತ್ತು ಹೆಚ್ಚಿದ ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ನಡೆಯುತ್ತಿರುವ ಸವಾಲುಗಳ ಹೊರತಾಗಿಯೂ, ರಿಲಯನ್ಸ್ ಹಣಕಾಸು ವರ್ಷ 2021-22 ರಲ್ಲಿ ದೃಢವಾದ ಲಾಭ ಗಳಿಸಿದೆ," ಎಂದು ತಿಳಿಸಿದ್ದಾರೆ. "ಗ್ರಾಹಕರ ತೃಪ್ತಿ ಮತ್ತು ಸೇವೆಯ ಮೇಲಿನ ನಮ್ಮ ಪಟ್ಟುಬಿಡದ ಗಮನವು ಹೆಚ್ಚು ಜನರು ನಮ್ಮ ಸೇವೆ ಪಡೆಯುವುದಕ್ಕೆ ಕಾರಣವಾಗಿದೆ. ಇದರಿಂದಾಗಿ ಆದಾಯ ಹೆಚ್ಚಳವಾಗಿದೆ. ನಮ್ಮ ಚಿಲ್ಲರೆ ವ್ಯಾಪಾರವು 15,000 ಮಳಿಗೆಗಿಂತ ಅಧಿಕವಾಗಿದೆ. JioFiber ಈಗ ಪ್ರಾರಂಭವಾದ ಎರಡು ವರ್ಷಗಳಲ್ಲಿ ಭಾರತದಲ್ಲಿ ಅತಿದೊಡ್ಡ ಬ್ರಾಡ್‌ಬ್ಯಾಂಡ್ ಪೂರೈಕೆದಾರರಾಗಿದ್ದಾರೆ," ಎಂದು ಕೂಡಾ ಹೇಳಿದ್ದಾರೆ.

English summary

Reliance Becomes First Indian Company To Hit $100 Billion Revenue In A Year, Explained Here

Reliance Becomes First Indian Company To Hit $100 Billion Revenue In A Year, Explained Here. Read on.
Story first published: Saturday, May 7, 2022, 14:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X