For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಅಧ್ಯಕ್ಷರಿಗೆ ಶೇ.13 ಅಧಿಕ ವೇತನ: ಒಟ್ಟು ಗಳಿಕೆ ಎಷ್ಟು?

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧ್ಯಕ್ಷ ದಿನೇಶ್ ಕುಮಾರ್ ಖರಾ ಹಣಕಾಸು ವರ್ಷದಲ್ಲಿ 34.42 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಟೇಕ್ ಹೋಮ್ ಸ್ಯಾಲರಿಯಾಗಿ ಪಡೆದಿದ್ದಾರೆ. ಈ ಹಿಂದಿನ ಅಧ್ಯಕ್ಷ ರಜನೀಶ್ ಕುಮಾರ್‌ಗಿಂತ ಶೇಕಡ 13.4ರಷ್ಟು ಏರಿಕೆಯಾಗಿದೆ. ಈ ವೇಳೆಯಲ್ಲೇ ಬ್ಯಾಂಕ್‌ನ ನಾಲ್ವರು ವ್ಯವಸ್ಥಾಪಕ ನಿರ್ದೇಶಕರು 31.66 ಲಕ್ಷ ರೂಪಾಯಿಯಿಂದ 32.62 ಲಕ್ಷ ರೂಪಾಯಿಗೂ ಹೆಚ್ಚು ಗಳಿಸಿದ್ದಾರೆ.

ಎಸ್‌ಬಿಐ ಹಣಕಾಸು ವರ್ಷ 2022ರ ವಾರ್ಷಿಕ ವರದಿಯನ್ನು ಪ್ರಕಟ ಮಾಡಿದೆ. ಈ ಹೇಳಿಕೆಯಲ್ಲಿ ಎಸ್‌ಬಿಐ ಹಣಕಾಸು ವರ್ಷ 2022ರಲ್ಲಿ ಅಧ್ಯಕ್ಷ ದಿನೇಶ್ ಕುಮಾರ್ ಖರಾ ಮೂಲ ವೇತನವು ರೂಪಾಯಿ 27 ಲಕ್ಷ ಮತ್ತು ತುಟ್ಟಿ ಭತ್ಯೆ ರೂಪಾಯಿ 7,42,500 ಎಂದು ತಿಳಿಸಿದೆ. ಒಟ್ಟಾಗಿ ಏಪ್ರಿಲ್ 2021 ರಿಂದ ಮಾರ್ಚ್ 2022 ರ ಅವಧಿಯಲ್ಲಿ 34,42,500 ರೂಪಾಯಿ ವೇತನವಾಗಿದೆ.

 ಇನ್ಫೋಸಿಸ್ ಸಿಇಒ ವೇತನ ಶೇ.88 ಹೆಚ್ಚಳ, ವಾರ್ಷಿಕ ಗಳಿಕೆಯೆಷ್ಟು? ಇನ್ಫೋಸಿಸ್ ಸಿಇಒ ವೇತನ ಶೇ.88 ಹೆಚ್ಚಳ, ವಾರ್ಷಿಕ ಗಳಿಕೆಯೆಷ್ಟು?

ಅಕ್ಟೋಬರ್ 2020 ರಲ್ಲಿ ದಿನೇಶ್ ಕುಮಾರ್ ಖರಾ ಎಸ್‌ಬಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ದಿನೇಶ್ ಕುಮಾರ್ ಖರಾ ಎಸ್‌ಬಿಐನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಪ್ರೊಬೇಷನರಿ ಅಧಿಕಾರಿಯಾಗಿ ಆರಂಭದಲ್ಲಿ 1984 ರಲ್ಲಿ ಖಾರಾ ಎಸ್‌ಬಿಐಗೆ ಸೇರ್ಪಡೆಯಾಗಿದ್ದಾರೆ. ಸುಮಾರು 38 ವರ್ಷಗಳ ಬ್ಯಾಂಕಿಂಗ್ ಕ್ಷೇತ್ರದ ಸೇವೆ ನೀಡಿದ ಅನುಭವ ಹೊಂದಿದ್ದಾರೆ.

 ಕನಿಷ್ಠ ಶೇಕಡ 13.45ರಷ್ಟು ಅಧಿಕ ವೇತನ

ಕನಿಷ್ಠ ಶೇಕಡ 13.45ರಷ್ಟು ಅಧಿಕ ವೇತನ

ಈ ಹಿಂದೆ ರಜನೀಶ್ ಕುಮಾರ್ 30.34 ಲಕ್ಷ ರೂಪಾಯಿ ವೇತನ ಪಡೆದಿದ್ದಾರೆ. ಇದಕ್ಕಿಂತ ಕನಿಷ್ಠ ಶೇಕಡ 13.45ರಷ್ಟು ಹೆಚ್ಚು ವೇತನವನ್ನು ಪಡೆದಿದ್ದಾರೆ. ಹಣಕಾಸು ವರ್ಷ 2021ರಲ್ಲಿ ಎಸ್‌ಬಿಐ ಅಧ್ಯಕ್ಷ ಖರಾ 38.12 ಲಕ್ಷ ರೂಪಾಯಿಯನ್ನು ಟೇಕ್‌ ಹೋಮ್ ಸ್ಯಾಲರಿಯಾಗಿ ಪಡೆದಿದ್ದಾರೆ. ಇದರಲ್ಲಿ 4 ಲಕ್ಷ ಇನ್ಸೆಂಟೀವ್ ಆಗಿದೆ. ಈ ನಡುವೆ ಎಸ್‌ಬಿಐನ ವ್ಯವಸ್ಥಾಪಕ ನಿರ್ದೇಶಕರಾದ ಚಲ್ಲಾ ಶ್ರೀನಿವಾಸುಲು ಸೆಟ್ಟಿ ರೂಪಾಯಿ 32.62 ಲಕ್ಷ, ಅಶ್ವಿನಿ ಭಾಟಿಯಾ ರೂಪಾಯಿ 32.15 ಲಕ್ಷ, ಮತ್ತು ಸ್ವಾಮಿನಾಥನ್ ಜಾನಕಿರಾಮನ್ ರೂಪಾಯಿ 31.74 ಲಕ್ಷ ಮತ್ತು ಅಶ್ವಿನಿ ಕುಮಾರ್ ತಿವಾರಿ ರೂಪಾಯಿ 31.66 ಲಕ್ಷ ಗಳಿಸಿದ್ದಾರೆ.

 ಸಭೆಗಳಿಗೆ ಹಾಜರಾಗಲು ಎಷ್ಟು ಹಣ ಪಾವತಿ?

ಸಭೆಗಳಿಗೆ ಹಾಜರಾಗಲು ಎಷ್ಟು ಹಣ ಪಾವತಿ?

ಹಣಕಾಸು ವರ್ಷ 2022ರಲ್ಲಿ ಸೆಂಟ್ರಲ್ ಬೋರ್ಡ್ ಮತ್ತು ಬೋರ್ಡ್ ಮಟ್ಟದ ಸಮಿತಿಗಳ ಸಭೆಗಳಿಗೆ ಹಾಜರಾಗಲು ನಿರ್ದೇಶಕರಿಗೆ ಎಸ್‌ಬಿಐ ಸುಮಾರು ರೂಪಾಯಿ 1.52 ಕೋಟಿ ವೆಚ್ಚಕ್ಕಾಗಿ ಪಾವತಿಸಿದೆ. ಸೆಂಟ್ರಲ್ ಬೋರ್ಡ್ ಸಭೆಗಳಿಗೆ ಹಾಜರಾಗಲು ನಿರ್ದೇಶಕರಿಗೆ ರೂಪಾಯಿ 70,000 ಸಿಟ್ಟಿಂಗ್ ಶುಲ್ಕವನ್ನು ಎಸ್‌ಬಿಐ ಪಾವತಿ ಮಾಡಿದೆ. ಇತರ ಮಂಡಳಿ-ಮಟ್ಟದ ಸಮಿತಿಗಳ ಸಭೆಗಳಲ್ಲಿ ಭಾಗವಹಿಸಲು ರೂಪಾಯಿ 30,000 ಪಾವತಿಸಲಾಗಿದೆ.

 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಿಇಒ, ಎಂಡಿಗಳ ವೇತನ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಿಇಒ, ಎಂಡಿಗಳ ವೇತನ

ದಿನೇಶ್ ಕುಮಾರ್ ಖರಾ ಮಾತ್ರವಲ್ಲದೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಿಇಒಗಳು ಮತ್ತು ಎಂಡಿಗಳು ಹಣಕಾಸು ವರ್ಷ 2022ರಲ್ಲಿ ಹೆಚ್ಚಿನ ಸಂಬಳವನ್ನು ಪಡೆದಿದ್ದಾರೆ. ಕೆನರಾ ಬ್ಯಾಂಕ್ ಎಂಡಿ ಮತ್ತು ಸಿಇಒ, ಎಲ್ ವಿ ಪ್ರಭಾಕರ್ 36.89 ಲಕ್ಷ ರೂಪಾಯಿ ಸಂಬಳ ಪಡೆದರೆ, ಬ್ಯಾಂಕ್ ಆಫ್ ಬರೋಡಾದ ಎಂಡಿ ಮತ್ತು ಸಿಇಒ ಸಂಜೀವ್ ಚಡ್ಡಾ ಹಣಕಾಸು ವರ್ಷ 2022ರಲ್ಲಿ 40.46 ಲಕ್ಷ ರೂಪಾಯಿ ಸಂಬಳ ಪಡೆದಿದ್ದಾರೆ. ಈ ನಡುವೆ ಖಾಸಗಿ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಹೋಲಿಸಿದರೆ ದಿನೇಶ್ ಕುಮಾರ್ ಖರಾಗೆ ಲಭ್ಯವಾದ ವಾರ್ಷಿಕ ಸಂಬಳವು ಕಡಿಮೆಯಾಗಿದೆ. ಖಾಸಗಿ ಬ್ಯಾಂಕುಗಳು ಹಣಕಾಸು ವರ್ಷ 2022ರ ವಾರ್ಷಿಕ ವರದಿಯನ್ನು ಇನ್ನೂ ಪ್ರಕಟ ಮಾಡಿಲ್ಲ.

 ಇತರೆ ಬ್ಯಾಂಕ್‌ನ ಎಂಡಿ, ಸಿಇಒಗಳ ವೇತನ

ಇತರೆ ಬ್ಯಾಂಕ್‌ನ ಎಂಡಿ, ಸಿಇಒಗಳ ವೇತನ

ಹಣಕಾಸು ವರ್ಷ 21ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪ್ರಸ್ತುತ ಸಿಇಒ ಶಶಿಧರ್ ಜಗದೀಶನ್ ರೂಪಾಯಿ 4.77 ಕೋಟಿ ಗಳಿಸಿದ್ದರೆ, ಈ ಹಿಂದಿನ ಸಿಇಒ ಆದಿತ್ಯ ಪುರಿ ಅದೇ ಹಣಕಾಸು ವರ್ಷದಲ್ಲಿ 13.82 ಕೋಟಿ ಪಡೆದಿದ್ದಾರೆ. ಇದಲ್ಲದೆ, ಆಕ್ಸಿಸ್ ಬ್ಯಾಂಕ್‌ನ ಸಿಇಒ ಮತ್ತು ಎಂಡಿ ಅಮಿತಾಬ್ ಚೌಧರಿ 6.52 ಕೋಟಿ ರೂಪಾಯಿ ಟೇಕ್‌ ಹೋಮ್ ವೇತನ ಪಡೆದರೆ, ಐಸಿಐಸಿಐ ಬ್ಯಾಂಕ್‌ನ ಸಂದೀಪ್ ಭಕ್ಷಿ ವೇತನ 1.01 ಕೋಟಿ ರೂಪಾಯಿಯಷ್ಟಿದೆ. ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಉದಯ್ ಕೋಟಕ್ ಹಣಕಾಸು ವರ್ಷ 21 ರಲ್ಲಿ ಕೋವಿಡ್ ಹಿನ್ನೆಲೆಯಿಂದಾಗಿ 1 ರೂಪಾಯಿಯನ್ನು ಸಂಬಳವಾಗಿ ಪಡೆದಿದ್ದಾರೆ. ಆದರೆ ಈ ಹಿಂದಿನ ಹಣಕಾಸು ವರ್ಷದಲ್ಲಿ ಅವರ ಸಂಬಳ ರೂಪಾಯಿ 2.65 ಕೋಟಿ ಆಗಿತ್ತು.

English summary

SBI Chairman Dinesh Khara draws Rs 34.42 lakh annual salary in FY22

SBI chairman Dinesh Khara takes home Rs 34.42 lakh salary in FY22; 13% higher than predecessor Rajnish Kumar. Know more
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X