For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ಡಿಜಿಟಲ್‌ ವ್ಯತ್ಯಯ: ಏನೇನು ಸಮಸ್ಯೆ?

|

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಲ್ಲಿ ಖಾತೆದಾರರು ಮಾರ್ಚ್ 12ರಂದು ಬ್ಯಾಂಕ್‌ನ ಡಿಜಿಟಲ್ ಬ್ಯಾಂಕಿಂಗ್ ಚಾನೆಲ್‌ಗಳಲ್ಲಿ ವ್ಯತ್ಯಯವನ್ನು ಕಂಡಿದ್ದು, ಈ ವ್ಯತ್ಯಯವು ಇಂದು ಕೂಡಾ ಮುಂದುವರಿಲಿದೆ.

ಈ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ತಮ್ಮ ಅಪ್ಲಿಕೇಶನ್‌ಗಳು ಮಾರ್ಚ್ 12 ರಂದು ತಂತ್ರಜ್ಞಾನದ ನವೀಕರಣಗಳಿಗೆ ಒಳಗಾಗಲಿವೆ ಎಂದು ತಿಳಿಸಿತು. ಇದರ ಪರಿಣಾಮವಾಗಿ, ಯೋನೋ, ಯೋನೋ ಲೈಟ್‌, ಯೋನೋ ಬಿಜೆನೆಸ್‌, ಯುಪಿಐ ಸೇರಿದಂತೆ ಎಸ್‌ಬಿಐ ಅಪ್ಲಿಕೇಶನ್‌ಗಳಲ್ಲಿನ ಸೇವೆಗಳ ಅಡ್ಡಿಗಳ ಬಗ್ಗೆ ಗ್ರಾಹಕರಿಗೆ ತಿಳಿಸಲಾಯಿತು.

EPFO Alert: ಬಡ್ಡಿದರ ಶೇ.8.5ರಿಂದ 8.1ಕ್ಕೆ ಇಳಿಕೆEPFO Alert: ಬಡ್ಡಿದರ ಶೇ.8.5ರಿಂದ 8.1ಕ್ಕೆ ಇಳಿಕೆ

ಈ ಪ್ಲಾಟ್‌ಫಾರ್ಮ್‌ಗಳಲ್ಲಿ ತಂತ್ರಜ್ಞಾನದ ನವೀಕರಣಗಳು ಮಾರ್ಚ್ 12 ರಂದು ರಾತ್ರಿ 11:30 ರಿಂದ ಮಾರ್ಚ್ 13 ರ ಬೆಳಿಗ್ಗೆ 2:00 ರವರೆಗೆ ಮುಂದುವರಿಯುತ್ತದೆ ಎಂದು ಬ್ಯಾಂಕ್ ಗ್ರಾಹಕರಿಗೆ ತಿಳಿಸಿತು. ಈ ಟ್ವೀಟ್ ಬಗ್ಗೆ ಉಲ್ಲೇಖ ಮಾಡಿ, ಗ್ರಾಹಕರೊಬ್ಬರು ತಮ್ಮ ಖಾತೆಯಿಂದ 30,000 ರೂಪಾಯಿಗಳನ್ನು ಹೇಗೆ ಕಳೆದುಕೊಂಡರು ಎಂಬುದನ್ನು ಟ್ವಿಟ್ಟರ್‌ ಮೂಲಕ ಹಂಚಿಕೊಂಡಿದ್ದಾರೆ.

 ಎಸ್‌ಬಿಐ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ಡಿಜಿಟಲ್‌ ವ್ಯತ್ಯಯ

ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಶುಲ್ಕ

ಹಲವಾರು ಇತರ ಗ್ರಾಹಕರು ಅನಗತ್ಯ ವಹಿವಾಟುಗಳು ಮತ್ತು ಕಡಿತಗಳ ಬಗ್ಗೆ ದೂರು ನೀಡಿದ್ದಾರೆ. ಯೋನೋ ಆ್ಯಪ್‌ನಲ್ಲಿ ಆಯಾ ಖಾತೆಗಳ ನಿಷ್ಕ್ರಿಯತೆಯ ಬಗ್ಗೆ ಹಲವಾರು ಮಂದಿ ದೂರಿದ್ದಾರೆ. ಆಶ್ಚರ್ಯಕರವಾಗಿ, ಕೆಲವು ಗ್ರಾಹಕರು ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಶುಲ್ಕವನ್ನು ಭರಿಸಬೇಕಾಗಿತ್ತು.

ಕಳೆದ ವಾರ ಟಾಪ್ 10 ಸಂಸ್ಥೆ ಮೌಲ್ಯ: RIL ಹಾಗೂ ಇನ್ಫಿಗೆ ಭಾರಿ ಲಾಭ ಕಳೆದ ವಾರ ಟಾಪ್ 10 ಸಂಸ್ಥೆ ಮೌಲ್ಯ: RIL ಹಾಗೂ ಇನ್ಫಿಗೆ ಭಾರಿ ಲಾಭ

ಪ್ರಶ್ನೆಗಳನ್ನು ಪರಿಹರಿಸುವ ಸಲುವಾಗಿ, ಎಸ್‌ಬಿಐ ಟ್ವೀಟ್‌ಗಳಿಗೆ ಉತ್ತರಿಸಿದೆ. "ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ತಾಂತ್ರಿಕ ಸಮಸ್ಯೆಗಳಿಂದಾಗಿ, ಕೆಲವು ಬಳಕೆದಾರರು ತಮ್ಮ ಯೋನೋ ಲೈಟ್‌ ಅಪ್ಲಿಕೇಶನ್‌ನಲ್ಲಿ ತಪ್ಪಾದ ಅಧಿಸೂಚನೆ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ. ನಮ್ಮ ತಾಂತ್ರಿಕ ತಂಡವು ಈ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದೆ. ದಯವಿಟ್ಟು ನಮಗೆ ಸಹಕರಿಸಿ," ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಎಸ್‌ಬಿಐ ತಮ್ಮ ಮೊಬೈಲ್ ಅಪ್ಲಿಕೇಷನ್ ಅನ್ನು 'ಓನ್ಲಿ ಯೋನೋ' ಎಂದು ಮರು ಪ್ರಾರಂಭಿಸುವ ಕುರಿತು ಟ್ವೀಟ್ ಮಾಡಿದೆ. ಹೆಚ್ಚಿನ ಪ್ರಮಾಣದ ವಹಿವಾಟುಗಳನ್ನು ನಿರ್ವಹಿಸಲು ಕ್ಲೌಡ್ ಸಾಮರ್ಥ್ಯವನ್ನು ಸಕ್ರಿಯಗೊಳಿಸಲು ಮತ್ತು ಉತ್ತಮ ಗ್ರಾಹಕ ಅನುಭವಗಳನ್ನು ಎಸ್‌ಬಿಐ ಖಾತ್ರಿಪಡಿಸಿದೆ.

ಯೋನೋಗೆ ಮಾತ್ರ ಆರ್ಕಿಟೆಕ್ಚರ್ ಮತ್ತು ವಿನ್ಯಾಸಕ್ಕಾಗಿ ಉತ್ತಮ ತಾಂತ್ರಿಕ ಮಾರ್ಗದರ್ಶನವನ್ನು ಪಡೆಯಲು ಬ್ಯಾಂಕ್ ವಿವಿಧ ಸಲಹೆಗಾರರಿಂದ ಬಿಡ್‌ಗಳನ್ನು ಆಹ್ವಾನಿಸಿದೆ. ಇತ್ತೀಚೆಗೆ ನಿತಿನ್ ಚುಗ್ ಅವರನ್ನು ಎಸ್‌ಬಿಐ ನೇಮಿಸಿಕೊಂಡಿದ್ದು, ಅವರು ಮೊದಲು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಡಿಜಿಟಲ್ ಬ್ಯಾಂಕಿಂಗ್ ವಿಭಾಗವನ್ನು ಮುನ್ನಡೆಸಿದ್ದರು.

English summary

SBI Customers Complain of Digital Outages on Mobile Platform, Problem to Continue

SBI customers complain of digital outages on mobile platform, problem to continue tomorrow.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X