For Quick Alerts
ALLOW NOTIFICATIONS  
For Daily Alerts

ಎಸ್‌ಬಿಐನಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ: ಇಲ್ಲಿದೆ ವಿವರ

|

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ರಿಟೇಲ್‌ ಲೋನ್‌ ಮತ್ತು ಡೆಪಾಸಿಟ್‌ಗಳ ಮೇಲೆ ತನ್ನ ಗ್ರಾಹಕರಿಗೆ ಹೊಸ ಕೊಡುಗೆಗಳನ್ನು ನೀಡಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಗ್ರಾಹಕರಿಗೆ ಕಾರಿನ ಲೋನ್‌ ಮೇಲಿನ ಬಡ್ಡಿದರಗಳ ಮೇಲೆ ರಿಯಾಯಿತಿ ನೀಡುವುದಾಗಿ ಹಾಗೂ ಶೇಕಡ 100 ರಷ್ಟು ಪ್ರೊಸೆಸಿಂಗ್‌ ಫೀ ಅನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದೆ. ಇದರ ಜೊತೆಗೆಯೇ ಇತರೆ ಬಡ್ಡಿದರ ಕಡಿತವನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಪ್ರಸ್ತುತ ಪಡಿಸಿದೆ.

 

ಈ ಬಗ್ಗೆ ಮಾಹಿತಿ ನೀಡಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ರಿಟೇಲ್ ಮತ್ತು ಡಿಜಿಟಲ್ ಬ್ಯಾಂಕಿಂಗ್) ನಿರ್ದೇಶಕ ಸಿ ಎಸ್‌ ಸೆಟ್ಟಿ, "ಈ ಹಬ್ಬದ ಸೀಸನ್‌ ನಡುವೆ ನಮ್ಮ ಎಲ್ಲಾ ರಿಟೇಲ್‌ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಘೋಷಣೆ ಮಾಡಲು ನಾವು ಸಂತಸ ವ್ಯಕ್ತಪಡಿಸುತ್ತೇವೆ," ಎಂದು ಹೇಳಿದ್ದಾರೆ.

ಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆ ಕುಸಿತ: ಆಗಸ್ಟ್ 19ರ ಲೇಟೆಸ್ಟ್‌ ರೇಟ್‌ ಇಲ್ಲಿದೆಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆ ಕುಸಿತ: ಆಗಸ್ಟ್ 19ರ ಲೇಟೆಸ್ಟ್‌ ರೇಟ್‌ ಇಲ್ಲಿದೆ

ಹಾಗೆಯೇ ಈ ಹೊಸ ಆಫರ್‌ಗಳು ಗ್ರಾಹಕರು ತಮ್ಮ ಲೋನ್‌ನಲ್ಲಿ ಹೆಚ್ಚಿನ ಉಳಿತಾಯ ಮಾಡಲು ಸಹಾಯ ಮಾಡುತ್ತದೆ ಎಂದು ನಾವು ನಂಬಿದ್ದೇವೆ ಮತ್ತು ಹಾಗೆಯೇ ಇದೇ ಸಂದರ್ಭದಲ್ಲಿ ಹಬ್ಬದ ವಾತಾವರಣಕ್ಕೆ ಒಂದು ಮೌಲ್ಯವನ್ನು ಒದಗಿಸುತ್ತದೆ ಎಂದು ನಾವು ನಂಬಿದ್ದೇವೆ. ಇದು ನಮ್ಮ ಎಲ್ಲಾ ಪ್ರಮುಖ ಗ್ರಾಹಕರಿಗೆ ಉತ್ತಮ ಹಣಕಾಸು ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ ಎಂದು ಭಾವಿಸು‌‌ತ್ತೇವೆ. ಇನ್ನು ಈ ಹೊಸ ಆಫರ್‌ಗಳು ಗ್ರಾಹಕರ ಅಗತ್ಯ ಹಾಗೂ ಅವಶ್ಯಕತೆಯನ್ನು ಪೂರೈಸಲು ಸಹಾಯ ಮಾಡಲು ಎಸ್‌ಬಿಐ ನಿರಂತರ ಪ್ರಯತ್ನ ಮಾಡುತ್ತದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನಿರ್ದೇಶಕ ಸಿ ಎಸ್‌ ಸೆಟ್ಟಿ ತಿಳಿಸಿದ್ದಾರೆ.

 ಎಸ್‌ಬಿಐ ಗೃಹ ಸಾಲದ ಬಡ್ಡಿ ದರಗಳು ಮತ್ತು ಪ್ರೊಸೆಸಿಂಗ್‌ ಫೀ

ಎಸ್‌ಬಿಐ ಗೃಹ ಸಾಲದ ಬಡ್ಡಿ ದರಗಳು ಮತ್ತು ಪ್ರೊಸೆಸಿಂಗ್‌ ಫೀ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಗೃಹ ಸಾಲದ ಮೇಲಿನ ಸಂಪೂರ್ಣ ಪ್ರೊಸೆಸಿಂಗ್‌ ಫೀ ಮನ್ನಾ ಮಾಡುವುದಾಗಿ ತಿಳಿಸಿದೆ. ವಿಶೇಷವಾಗಿ ಮಹಿಳಾ ಗ್ರಾಹಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗೃಹ ಸಾಲವನ್ನು 5 ಬಿಪಿಎಸ್ ಬಡ್ಡಿ ರಿಯಾಯಿತಿಯೊಂದಿಗೆ ಪಡೆಯಬಹುದಾಗಿದೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯೋನೋ ಆಪ್‌ ಮೂಲಕ ಈ ಎಸ್‌ಬಿಐ ಗೃಹ ಸಾಲಕ್ಕೆ ಮಹಿಳೆಯರು ಮಾತ್ರವಲ್ಲದೇ ಎಲ್ಲರೂ ಅರ್ಜಿ ಸಲ್ಲಿಸಬಹುದಾಗಿದೆ.

 ಕಾರು ಖರೀದಿ ಸಾಲದ ಮೇಲೆ ರಿಯಾಯಿತಿ
 

ಕಾರು ಖರೀದಿ ಸಾಲದ ಮೇಲೆ ರಿಯಾಯಿತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಲ್ಲಾ ಗ್ರಾಹಕರಿಗೆ ಕಾರು ಖರೀದಿ ಸಾಲದ ಮೇಲೆ 100 ಪ್ರತಿಶತ ಮನ್ನಾವನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. ಇನ್ನು ಇದನ್ನು ಹೊರತು ಪಡಿಸಿ ಎಸ್‌ಬಿಐ ಗ್ರಾಹಕರು ತಮ್ಮ ಕಾರು ಖರೀದಿ ಮೇಲಿನ ಸಾಲಕ್ಕಾಗಿ ಶೇಕಡ 90 ರಷ್ಟು ಆನ್‌-ರೋಡ್‌ ಫಿನಾನ್ಸ್‌ ಸೌಲಭ್ಯವನ್ನು ಪಡೆಯಬಹುದಾಗಿದೆ. ಇನ್ನು ವಿಶೇಷವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯೋನೋ ಆಪ್‌ ಮೂಲಕ ಕಾರು ಖರೀದಿ ಸಾಲಕ್ಕೆ ಅರ್ಜಿ ಸಲ್ಲಿಸುವ ಗ್ರಾಹಕರಿಗೆ 25 ಬಿಪಿಎಸ್‌ ರಿಯಾಯಿತಿ ನೀಡಲು ಎಸ್‌ಬಿಐ ಮುಂದಾಗಿದೆ. ಇನ್ನು ಎಸ್‌ಬಿಐನ ಯೋನೋ ಬಳಸುವ ಗ್ರಾಹಕರಿಗೆ ಮತ್ತು ಹೊಸ ಕಾರು ಖರೀದಿ ಮಾಡಲು ಬಯಸುವವರು ವಾರ್ಷಿಕ ಶೇ .7.5 ರ ಬಡ್ಡಿದರದಲ್ಲಿ ಸಾಲ ಪಡೆಯಬಹುದು.

ಬಿಟ್‌ಕಾಯಿನ್‌ ಬೆಲೆ ಮತ್ತಷ್ಟು ಕುಸಿತ: ಪ್ರಮುಖ ಕ್ರಿಪ್ಟೋಕರೆನ್ಸಿಗಳ ಆಗಸ್ಟ್‌ 19ರ ಬೆಲೆ ಇಲ್ಲಿದೆಬಿಟ್‌ಕಾಯಿನ್‌ ಬೆಲೆ ಮತ್ತಷ್ಟು ಕುಸಿತ: ಪ್ರಮುಖ ಕ್ರಿಪ್ಟೋಕರೆನ್ಸಿಗಳ ಆಗಸ್ಟ್‌ 19ರ ಬೆಲೆ ಇಲ್ಲಿದೆ

 ಎಸ್‌ಬಿಐ ಗೋಲ್ಡ್ ಲೋನ್ ರಿಯಾಯಿತಿ

ಎಸ್‌ಬಿಐ ಗೋಲ್ಡ್ ಲೋನ್ ರಿಯಾಯಿತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಗೋಲ್ಡ್ ಲೋನ್ ಮೇಲಿನ ಬಡ್ಡಿದರದಲ್ಲಿ 75 ಬಿಪಿಎಸ್ ಕಡಿತವನ್ನು ನೀಡುತ್ತಿದೆ. ಎಸ್‌ಬಿಐ ನ ಗ್ರಾಹಕರು ಇವುಗಳನ್ನು ಬ್ಯಾಂಕಿನ ಯಾವುದೇ ಕಚೇರಿಯಿಂದ ವರ್ಷಕ್ಕೆ ಶೇ. 7.5 ಬಡ್ಡಿ ದರದಲ್ಲಿ ಪಡೆಯಬಹುದಾಗಿದೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯೋನೋ ಆಪ್‌ ಮೂಲಕ ಗೋಲ್ಡ್ ಲೋನ್‌ಗೆ ಅರ್ಜಿ ಸಲ್ಲಿಸುವವರಿಗೆ ಪ್ರೊಸೆಸಿಂಗ್‌ ಫೀ ಯನ್ನು ಮನ್ನಾ ಮಾಡುವುದಾಗಿ ಬ್ಯಾಂಕ್‌ ಹೇಳಿದೆ.

 ಎಸ್‌ಬಿಐ ವೈಯಕ್ತಿಕ ಮತ್ತು ಪಿಂಚಣಿ ಸಾಲ ರಿಯಾಯಿತಿ

ಎಸ್‌ಬಿಐ ವೈಯಕ್ತಿಕ ಮತ್ತು ಪಿಂಚಣಿ ಸಾಲ ರಿಯಾಯಿತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಲ್ಲಾ ಚಾನೆಲ್‌ಗಳಲ್ಲಿ ಪ್ರೊಸೆಸಿಂಗ್‌ ಫೀಗೆ ಶೇಕಡ 100 ರಷ್ಟು ಮನ್ನಾವನ್ನು ಬ್ಯಾಂಕ್ ಘೋಷಿಸಿದೆ. ಕೋವಿಡ್‌ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರಾಗಿರುವ ಕೊರೊನಾ ವಾರಿಯರ್‌ಗಳಿಗೆ ಈ ವೈಯಕ್ತಿಕ ಸಾಲದಲ್ಲಿ ವಿಶೇಷವಾಗಿ 50 ಬಿಪಿಎಸ್‌ ರಿಯಾಯಿತಿಯನ್ನು ನೀಡಲಾಗುವುದು ಎಂದು ಕೂಡಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಹಾಗೆಯೇ ಅತೀ ಶೀಘ್ರದಲ್ಲೇ ಕಾರು ಖರೀದಿ ಮೇಲಿನ ಸಾಲ ಹಾಗೂ ಗೋಲ್ಡ್‌ ಲೋನ್‌ಗೂ ಈ ವಿಶೇಷ 50 ಬಿಪಿಎಸ್‌ ರಿಯಾಯಿತಿ ಅನ್ವಯವಾಗಲಿದೆ ಎಂದು ಎಸ್‌ಬಿಐ ವಿವರಿಸಿದೆ.

ಭಾರತದಲ್ಲಿ ರಿಯಲ್‌ಮೆ ಬುಕ್ ಸ್ಲಿಮ್ ಲ್ಯಾಪ್‌ಟಾಪ್ ಬಿಡುಗಡೆಭಾರತದಲ್ಲಿ ರಿಯಲ್‌ಮೆ ಬುಕ್ ಸ್ಲಿಮ್ ಲ್ಯಾಪ್‌ಟಾಪ್ ಬಿಡುಗಡೆ

 ಎಸ್‌ಬಿಐ 'ಪ್ಲಾಟಿನಂ ಟರ್ಮ್‌ ಡೆಪಾಸಿಟ್‌ಗಳ' ಬಡ್ಡಿ ದರ

ಎಸ್‌ಬಿಐ 'ಪ್ಲಾಟಿನಂ ಟರ್ಮ್‌ ಡೆಪಾಸಿಟ್‌ಗಳ' ಬಡ್ಡಿ ದರ

ಇನ್ನು ರಿಟೇಲ್‌ ಡೆಪಾಸಿಟ್‌ದಾರರಿಗೆ 'ಪ್ಲಾಟಿನಂ ಟರ್ಮ್‌ ಡೆಪಾಸಿಟ್‌' ಸ್ಕೀಮ್‌ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಸ್ತುತ ಪಡಿಸುತ್ತಿದೆ. ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಅಮೃತ ಮಹೋತ್ಸವದ ಹಿನ್ನೆಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಿಟೇಲ್‌ ಡೆಪಾಸಿಟ್‌ದಾರರಿಗೆ ಈ ಹೊಸ ಸ್ಕೀಮ್‌ ಅನ್ನು ಆರಂಭ ಮಾಡಿದೆ. ಈ 'ಪ್ಲಾಟಿನಂ ಟರ್ಮ್‌ ಡೆಪಾಸಿಟ್‌' ಸ್ಕೀಮ್‌ನ ಅಡಿಯಲ್ಲಿ ಬ್ಯಾಂಕಿನ ಗ್ರಾಹಕರು 75 ದಿನಗಳು, 75 ವಾರಗಳು ಮತ್ತು 75-ತಿಂಗಳ ಅವಧಿಗಳ ಟರ್ಮ್‌ ಡೆಪಾಸಿಟ್‌ಗಳ ಮೇಲೆ 15 ಬಿಪಿಎಸ್‌ ವರೆಗಿನ ಹೆಚ್ಚುವರಿ ಬಡ್ಡಿಯನ್ನು ಪಡೆಯಬಹುದಾಗಿದೆ. ಈ ರಿಟೇಲ್‌ ಡೆಪಾಸಿಟ್‌ದಾರರಿಗಾಗಿ ಜಾರಿಗೆ ತಂದಿರುವ ನೂತನ 'ಪ್ಲಾಟಿನಂ ಟರ್ಮ್‌ ಡೆಪಾಸಿಟ್‌' ಸ್ಕೀಮ್‌ ಆಗಸ್ಟ್ 15 ರಿಂದ ಜಾರಿಗೆ ಬಂದಿದ್ದು, 2021 ರ ಸೆಪ್ಟೆಂಬರ್ 14 ರವರೆಗೆ ವಿಸ್ತರಿಸಲಾಗುತ್ತದೆ,

 ಎಸ್‌ಬಿಐ ಆದಾಯ ತೆರಿಗೆ ರಿಟರ್ನ್ ಅಪ್‌ಡೇಟ್‌

ಎಸ್‌ಬಿಐ ಆದಾಯ ತೆರಿಗೆ ರಿಟರ್ನ್ ಅಪ್‌ಡೇಟ್‌

ತನ್ನ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚು ಸಾಲ ಪಡೆಯುವ ಗ್ರಾಹಕರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಯೋನೊದಲ್ಲಿ ಉಚಿತವಾಗಿ ಸಲ್ಲಿಸಬಹುದು ಎಂದು ಹೇಳಿದ್ದಾರೆ. ಟ್ವೀಟ್‌ನಲ್ಲಿ, "ಎಸ್‌ಬಿಐ ಭಾರತದ 75 ನೇ ಸ್ವಾತಂತ್ರ್ಯ ದಿನದಂದು ನಿಮಗಾಗಿ ವಿಶೇಷ ಕೊಡುಗೆ ನೀಡುವ ಮೂಲಕ ಆಚರಣೆ ಮಾಡುತ್ತಿದೆ. ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು Tax2win ಜೊತೆಗೆ ಯೋನೊದಲ್ಲಿ ಉಚಿತವಾಗಿ ಸಲ್ಲಿಸಿ!," ಎಂದು ಹೇಳಿದೆ.

(ಒನ್‌ ಇಂಡಿಯಾ)

English summary

SBI Cuts Personal Loan, Home Loan, Car Loan Interest Rates; Know details in kannada

State Bank of India cuts Personal, Home, Car Loan Interest Rates, No Processing Fee. Know more details in kannada. Read on.
Story first published: Thursday, August 19, 2021, 18:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X