For Quick Alerts
ALLOW NOTIFICATIONS  
For Daily Alerts

ಡೆಬಿಟ್ ಕಾರ್ಡ್ ಬೇಡ, ವಾಚ್ ಮೂಲಕವೇ ಪೇಮೆಂಟ್: ಏನಿದು ಟೈಟಾನ್ ಪೇ?

|

ಸಿನಿಮಾಗಳಲ್ಲಿ ನೋಡಿದ್ದ ಎಷ್ಟೋ ಅಚ್ಚರಿಯ ಸಂಗತಿಗಳನ್ನು ನಿಜ ಬದುಕಿನಲ್ಲೂ ಈಗಾಗಲೇ ಕಂಡಿದ್ದೇವೆ. ಈಗ ಅದಕ್ಕೆ ಹೊಸ ಸೇರ್ಪಡೆ ಎನ್ನುವಂತಿದೆ "ಟೈಟಾನ್ ಪೇ". ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಟೈಟಾನ್ ಸಹಯೋಗದಲ್ಲಿ ಕಾಂಟ್ಯಾಕ್ಟ್ ರಹಿತ ಪಾವತಿ ಸೇವೆ ಆರಂಭಿಸಲಿವೆ. ಅದು ಕೂಡ ವಾಚ್ ಮೂಲಕ. ಇಂಥದ್ದೊಂದು ಪ್ರಯತ್ನ ದೇಶದಲ್ಲೇ ಮೊದಲು ಎನ್ನಲಾಗಿದೆ.

ಕ್ರೆಡಿಟ್ ಸ್ಕೋರ್ ಕಡಿಮೆ ಆಗುವಂತೆ ಮಾಡಬಹುದಾದ 5 ಸಾಮಾನ್ಯ ತಪ್ಪುಕ್ರೆಡಿಟ್ ಸ್ಕೋರ್ ಕಡಿಮೆ ಆಗುವಂತೆ ಮಾಡಬಹುದಾದ 5 ಸಾಮಾನ್ಯ ತಪ್ಪು

"ಇದೀಗ ನಿಮ್ಮ ಪಾವತಿಗಳನ್ನು ಇನ್ನಷ್ಟು ವೇಗವಾಗಿ, ಸಮಸ್ಯೆಗಳಿಲ್ಲದಂತೆ, ಕಾಂಟ್ಯಾಕ್ಟ್ ರಹಿತವಾಗಿ ನಿಮ್ಮ ವಾಚ್ ಮೂಲಕವೇ ಮಾಡಿ. ಹೊಸದಾಗಿ ಟೈಟಾನ್ ಪೇ ಪ್ರಸ್ತುತಪಡಿಸಲಾಗುತ್ತಿದೆ. ಟೈಟಾನ್ ನಿಂದ ಹೊರ ತರುತ್ತಿರುವ ಹೊಸ ತಲೆಮಾರಿನ ಸ್ಟೈಲಿಷ್ ಸಂಗ್ರಹ" ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ಮಾಡಿದೆ.

ಟೈಟಾನ್ ಪೇ ವಾಚ್ ಟ್ಯಾಪ್ ಮಾಡಿದರೆ ಆಯಿತು

ಟೈಟಾನ್ ಪೇ ವಾಚ್ ಟ್ಯಾಪ್ ಮಾಡಿದರೆ ಆಯಿತು

ಈ ಸೇವೆ ಪ್ರಾರಂಭಿಸಿದ ಮೇಲೆ ಎಸ್ ಬಿಐ ಖಾತೆದಾರರಿಗೆ ಕಾರ್ಡ್ ಇರಬೇಕು ಅಂತೇನೂ ಇಲ್ಲ. ಕಾಂಟ್ಯಾಕ್ಟ್ ರಹಿತ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಮಷೀನ್ ಮುಂದೆ ಟೈಟಾನ್ ಪೇ ವಾಚ್ ಟ್ಯಾಪ್ ಮಾಡಿದರೆ ಆಯಿತು ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಲಾಗಿದೆ. "ನಮ್ಮ ಗ್ರಾಹಕರಿಗೆ ಈ ಟ್ಯಾಪ್ ಅಂಡ್ ಪೇ ತಂತ್ರಜ್ಞಾನದ ಹೊಸ ಆವಿಷ್ಕಾರದ ಕೊಡುಗೆಯು ಶಾಪಿಂಗ್ ಅನುಭವವನ್ನು ಬೇರೆ ರೀತಿಯಲ್ಲಿ ನೀಡುತ್ತದೆ. ಇನ್ನು ಅವಕಾಶಗಳು ಅಪರಿಮಿತ. ಏಕೆಂದರೆ ಡಿಜಿಟಲ್ ವ್ಯವಹಾರಗಳು ವಿಪರೀತ ಹೆಚ್ಚಾಗುತ್ತಿವೆ. ಇದು ಕಾಂಟ್ಯಾಕ್ಟ್ ಲೆಸ್ ಗೆ(ಪಾವತಿ) ಸೂಕ್ತ ಸಮಯ" ಎಂದು ಎಸ್ ಬಿಐ ಮುಖ್ಯಸ್ಥ ಹೇಳಿದ್ದಾರೆ.

2,000 ರುಪಾಯಿಯೊಳಗಿನ ವ್ಯವಹಾರಕ್ಕೆ ಪಿನ್ ಕೂಡ ಬೇಡ

2,000 ರುಪಾಯಿಯೊಳಗಿನ ವ್ಯವಹಾರಕ್ಕೆ ಪಿನ್ ಕೂಡ ಬೇಡ

ಈ ವ್ಯವಸ್ಥೆ ಪಡೆಯುವುದಕ್ಕೆ ಗ್ರಾಹಕರು YONOದಲ್ಲಿ ನೋಂದಣಿ ಮಾಡಿಸಬೇಕು. ಬ್ಯಾಂಕ್ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಂತೆ, ಎಸ್ ಬಿಐ ಖಾತೆದಾರರು ಟೈಟಾನ್ ಪೇ ವಾಚ್ ಅನ್ನು ಕಾಂಟ್ಯಾಕ್ಟ್ ಲೆಸ್ ಪಿಒಎಸ್ ಮಶೀನ್ ಮುಂದೆ ಟ್ಯಾಪ್ ಮಾಡಬಹುದು. ಎಸ್ ಬಿಐ ಬ್ಯಾಂಕ್ ಕಾರ್ಡ್ ಅನ್ನು ಸ್ವೈಪಿಂಗ್ ಮಾಡುವುದೋ ಅಥವಾ ಇನ್ ಸರ್ಟ್ ಮಾಡುವುದೋ ಆಗತ್ಯವಿಲ್ಲ. 2,000 ರುಪಾಯಿಯೊಳಗಿನ ವ್ಯವಹಾರಕ್ಕೆ ಪಿನ್ ಕೂಡ ನಮೂದಿಸುವ ಅಗತ್ಯ ಇಲ್ಲ. ತುಂಬ ಸುರಕ್ಷಿತವಾದ ಪ್ರಮಾಣೀಕೃತ ನಿಯರ್- ಫೀಲ್ಡ್ ಕಮ್ಯುನಿಕೇಷನ್ (NFC) ಚಿಪ್ ಅನ್ನು ವಾಚ್ ಗೆ ಅಳವಡಿಸಲಾಗಿರುತ್ತದೆ. ಆ ಮೂಲಕ ಬ್ಯಾಂಕ್ ನ ಎಲ್ಲ ಕಾಂಟ್ಯಾಕ್ಟ್ ರಹಿತ ಡೆಬಿಟ್ ಕಾರ್ಡ್ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ.

ವಾಚ್ ಬೆಲೆ ಎಷ್ಟು?

ವಾಚ್ ಬೆಲೆ ಎಷ್ಟು?

ಮಾಸ್ಟರ್ ಕಾರ್ಡ್ ಎನೇಬಲ್ಡ್ ಕಾಂಟ್ಯಾಕ್ಟ್ ಲೆಸ್ ಫೀಚರ್ ಹೊಂದಿರುವ ದೇಶದ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಪಿಒಎಸ್ ಮಶೀನ್ ಗಳಲ್ಲಿ ಈ ಪಾವತಿ ಫೀಚರ್ ಬಳಸಬಹುದು. ಟೈಟಾನ್ ಪೇ ಫೀಚರ್ ಇರುವಂಥ ಮೂರು ವಾಚ್ ಪುರುಷರಿಗೆ ಹಾಗೂ ಎರಡು ವಾಚ್ ಮಹಿಳೆಯರಿಗಾಗಿ ಪರಿಚಯಿಸಲಾಗುತ್ತಿದೆ. ಪುರುಷರ ವಾಚ್ ಬೆಲೆ ಕ್ರಮವಾಗಿ 2995, 3995 ಹಾಗೂ 5995 ರುಪಾಯಿ ಇದೆ. ಈ ವಾಚ್ ಗಳು ಕಪ್ಪು- ಬ್ರೌನ್ ಲೆದರ್ ಸ್ಟ್ರಾಪ್ಸ್, ಗುಂಡಾದ ಡಯಲ್ ನೊಂದಿಗೆ ಬರುತ್ತವೆ. ಇನ್ನು ಮಹಿಳೆಯರ ವಾಚ್ ಬೆಲೆ 3895 ರು. ಹಾಗೂ 4395 ರು. ಈ ಎಲ್ಲ ವಾಚ್ ಗಳನ್ನು ಟೈಟಾನ್ ಇಂಡಿಯಾ ವೆಬ್ ಸೈಟ್ ನಲ್ಲಿ ಖರೀದಿ ಮಾಡಬಹುದು.

English summary

SBI, Titan Launch Contactless Payment watch: How To Use, Price And Other Details

State Bank of India and Titan Company have partnered to launch contactless payment services through watches, called Titan Pay.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X