For Quick Alerts
ALLOW NOTIFICATIONS  
For Daily Alerts

SBI WhatsApp Services: ವಾಟ್ಸಾಪ್‌ ಮೂಲಕ 9 ಎಸ್‌ಬಿಐ ಬ್ಯಾಂಕಿಂಗ್ ಸೇವೆ ಪಡೆಯಿರಿ

|

ಹಲವಾರು ಬ್ಯಾಂಕುಗಳು ತಮ್ಮ ಬ್ಯಾಂಕಿಂಗ್ ಸೇವೆಯನ್ನು ಇತ್ತೀಚೆಗೆ ವಾಟ್ಸಾಪ್ ಮೂಲಕವೂ ನೀಡಲು ಆರಂಭಿಸಿದೆ. ವೆಬ್‌ಸೈಟ್, ಆಪ್‌ಗಳ ಮೂಲಕ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದ್ದ ಬ್ಯಾಂಕುಗಳು ಈಗ ವಾಟ್ಸಾಪ್‌ನಲ್ಲೇ ಸರಳ ಹಾಗೂ ಸುಲಭವಾಗಿ ವಾಟ್ಸಾಪ್ ಸೇವೆಯನ್ನು ನೀಡುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ವಾಟ್ಸಾಪ್ ಮೂಲಕ ಒಟ್ಟು 9 ಬ್ಯಾಂಕಿಂಗ್ ಸೇವೆಯನ್ನು ನೀಡುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಭಾರತದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸಂಸ್ಥೆಯಾಗಿದೆ. ಈ ಬ್ಯಾಂಕ್ ಆನ್‌ಲೈನ್ ಹಾಗೂ ಮೊಬೈಲ್ ಮೂಲಕ ತಮ್ಮ ಗ್ರಾಹಕರಿಗೆ ಹಲವಾರು ಸೇವೆಗಳನ್ನು ನೀಡುತ್ತದೆ. ಇತ್ತೀಚೆಗೆ ಎಸ್‌ಬಿಐ ವಾಟ್ಸಾಪ್ ಸೇವೆಯು ಗ್ರಾಹಕರಿಗೆ ಪ್ರಮುಖ 9 ಕಾರ್ಯಗಳನ್ನು ಸರಳವಾಗಿಸಿದೆ.

LIC Whatsapp Service : ಎಲ್‌ಐಸಿಯಲ್ಲೂ ವಾಟ್ಸಾಪ್ ಸೇವೆ: ಈ ಸಂಖ್ಯೆ ಸೇವ್ ಮಾಡಿಕೊಳ್ಳಿLIC Whatsapp Service : ಎಲ್‌ಐಸಿಯಲ್ಲೂ ವಾಟ್ಸಾಪ್ ಸೇವೆ: ಈ ಸಂಖ್ಯೆ ಸೇವ್ ಮಾಡಿಕೊಳ್ಳಿ

ಪ್ರಮುಖವಾಗಿ ಗ್ರಾಹಕರು ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡದೆ, ಆನ್‌ಲೈನ್‌ ಮೂಲಕ ಉಂಟಾಗುವ ಕೆಲವು ಗೊಂದಲಕ್ಕೆ ಒಳಗಾಗದೆ, ವಾಟ್ಸಾಪ್‌ನಲ್ಲಿ ಚಾಟ್ ಮಾಡಿಕೊಂಡು ಸೇವೆಯನ್ನು ಪಡೆಯಬಹುದು. ನೀವು ಬ್ಯಾಂಕಿಂಗ್ ಸೇವೆಯನ್ನು ಪಡೆಯಲು ಬರೀ ಕ್ಯೂಆರ್‌ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಸಾಕಾಗುತ್ತದೆ. ಎಸ್‌ಬಿಐ ಈಗ ಒಟ್ಟು 9 ವಾಟ್ಸಾಪ್ ಸೇವೆಗಳನ್ನು ನೀಡುತ್ತದೆ. ಯಾವೆಲ್ಲ ಸೇವೆಗಳು ಎಂದು ಈ ಕೆಳಗೆ ವಿವರಿಸಿದ್ದೇವೆ ಮುಂದೆ ಓದಿ....

ವಾಟ್ಸಾಪ್‌ ಮೂಲಕ 9 ಎಸ್‌ಬಿಐ ಬ್ಯಾಂಕಿಂಗ್ ಸೇವೆ ಪಡೆಯಿರಿ

ಎಸ್‌ಬಿಐನ 9 ವಾಟ್ಸಾಪ್ ಸೇವೆಗಳು

1. ಮಿನಿ ಸ್ಟೇಟ್‌ಮೆಂಟ್
2. ಖಾತೆಯಲ್ಲಿನ ಮೊತ್ತ
2. ಪಿಂಚಣಿ ರಶೀದಿ
4. ಸಾಲದ ಬಗ್ಗೆ ಮಾಹಿತಿ: ಅರ್ಹತೆ, ಬಡ್ಡಿದರ ಇತ್ಯಾದಿ
5. ಡೆಪಾಸಿಟ್ ಬಗ್ಗೆ ಮಾಹಿತಿ: ಬಡ್ಡಿದರ, ಮೊತ್ತ ಇತ್ಯಾದಿ
6. ಎನ್‌ಆರ್‌ಐ ಸೇವೆ: ಫೀಚರ್, ಬಡ್ಡಿದರ
7. ಇನ್ಸ್ಟಾ ಖಾತೆಯನ್ನು ತೆರೆಯುವ ಮಾಹಿತಿ: ಅರ್ಹತೆ, ದಾಖಲೆ, ಇತ್ಯಾದಿ
8. ಸಹಾಯವಾಣಿ
9. ಪ್ರೀ ಅಪ್ರೋವ್‌ ಆದ ಸಾಲದ ಬಗ್ಗೆ ಮಾಹಿತಿ

ನೀವು ಈ ಮಾಹಿತಿಯನ್ನು ಪಡೆಯಬೇಕಾದರೆ ವಾಟ್ಸಾಪ್‌ನಲ್ಲಿ +919022690226 ಸಂಖ್ಯೆಗೆ "Hi" ಎಂದು ಕಳುಹಿಸಬೇಕು. ಬಳಿಕ ಚಾಟ್‌ಬಾಟ್‌ ಕಳುಹಿಸುವ ಸೂಚನೆಯನ್ನು ಪಾಲಿಸಬೇಕು. ಹಾಗೆಯೇ ನಿಮ್ಮ ಫೋನ್‌ ಸಂಖ್ಯೆಯಿಂದ ಎಸ್‌ಎಂಎಸ್ ಅನ್ನು ಕಳುಹಿಸುವ ಮೂಲಕವೂ ಮಾಹಿತಿಯನ್ನು ಪಡೆಯಬಹುದು. WAREG ACCOUNT NUMBER ಟೈಪ್ ಮಾಡಿ +917208933148ಗೆ ಕಳುಹಿಸಬಹುದು.

English summary

SBI WhatsApp Services: SBI Now Provides Nine Banking Services Using WhatsApp

SBI now provides nine banking services using WhatsApp. Here are 9 SBI WhatsApp Services available to handle banking inquiries. read on.
Story first published: Tuesday, January 10, 2023, 12:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X