For Quick Alerts
ALLOW NOTIFICATIONS  
For Daily Alerts

Alert: ಜೂನ್‌ನಲ್ಲಿ SBI, HDFC, ICICI ಬ್ಯಾಂಕ್‌ನ ಈ ವಿಶೇಷ ಯೋಜನೆಗಳು ಮುಕ್ತಾಯ

|

ಭಾರತದ ಅನೇಕ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಪ್ರಾರಂಭಿಸಿರುವ ಹಿರಿಯ ನಾಗರಿಕರಿಗಾಗಿ ವಿಶೇಷ ನಿಶ್ಚಿತ ಠೇವಣಿ (ಎಫ್‌ಡಿ) ಯೋಜನೆಗಳು ಶೀಘ್ರದಲ್ಲೇ ಮುಕ್ತಾಯಗೊಳ್ಳಲಿವೆ.

ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಈ ಎಫ್‌ಡಿ ಯೋಜನೆಗಳನ್ನು ಮೇ 2020 ರಲ್ಲಿ ಬ್ಯಾಂಕುಗಳು ಪ್ರಾರಂಭಿಸಿದವು. ಈ ವಿಶೇಷ ಎಫ್‌ಡಿ ಯೋಜನೆಗಳಲ್ಲಿ, ಹಿರಿಯ ನಾಗರಿಕರು ಹೆಚ್ಚುವರಿ 0.5% ಬಡ್ಡಿ ದರವನ್ನು ಪಡೆಯುತ್ತಾರೆ. ಸಾಮಾನ್ಯವಾಗಿ ಎಫ್‌ಡಿಗಳಲ್ಲಿ ಹಿರಿಯ ನಾಗರಿಕರಿಗೆ ಅರ್ಧದಷ್ಟು ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ. ಈ ಎಫ್‌ಡಿ ಯೋಜನೆಗಳಲ್ಲಿ ಹಿರಿಯ ನಾಗರಿಕರಿಗೆ ಅನ್ವಯವಾಗುವ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತದೆ.

ಈ ಬ್ಯಾಂಕ್‌ಗಳಿಂದ ವಿಶೇಷ ಎಫ್‌ಡಿ ಯೋಜನೆ

ಈ ಬ್ಯಾಂಕ್‌ಗಳಿಂದ ವಿಶೇಷ ಎಫ್‌ಡಿ ಯೋಜನೆ

ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ವಿಶೇಷ ಎಫ್‌ಡಿ ಯೋಜನೆಗಳನ್ನು ಹಿರಿಯ ನಾಗರಿಕರಿಗೆ ನೀಡುತ್ತಿವೆ. ಆದಾಗ್ಯೂ, ಈ ವಿಶೇಷ ಎಫ್‌ಡಿ ಯೋಜನೆಗಳ ಲಾಭ ಪಡೆಯಲು, ಕನಿಷ್ಠ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಅವಶ್ಯಕ.

ಈ ವಿಶೇಷ ಎಫ್‌ಡಿ ಯೋಜನೆಗೆ ಕೊನೆಯ ದಿನಾಂಕ ಮಾರ್ಚ್ 31, 2021ಕ್ಕೆ ನಿಗದಿಯಾಗಿತ್ತು. ಆದರೆ ನಂತರ ಈ ಅವಧಿಯನ್ನು 30 ಜೂನ್ 2021 ಕ್ಕೆ ವಿಸ್ತರಿಸಲಾಯಿತು. ಆದ್ದರಿಂದ, ಜೂನ್ 30 ರ ನಂತರ ಈ ಸೌಲಭ್ಯ ಲಭ್ಯವಿರುವುದಿಲ್ಲ.

 

ಈ ವಿಶೇಷ ಯೋಜನೆಯಲ್ಲಿ ಯಾರೆಲ್ಲಾ ಹೂಡಿಕೆ ಮಾಡಬಹುದು!

ಈ ವಿಶೇಷ ಯೋಜನೆಯಲ್ಲಿ ಯಾರೆಲ್ಲಾ ಹೂಡಿಕೆ ಮಾಡಬಹುದು!

60 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಭಾರತೀಯ ಪ್ರಜೆ ಈ ನಿಶ್ಚಿತ ಠೇವಣಿಗಳಿಂದ ಗರಿಷ್ಠ ಆದಾಯವನ್ನು ಪಡೆಯಲು ಹೂಡಿಕೆ ಮಾಡಬಹುದು. ಇದು ದೀರ್ಘಾವಧಿಯ ಹೂಡಿಕೆಯಾಗಿದ್ದು, ಇದರಲ್ಲಿ ಕನಿಷ್ಠ 5 ವರ್ಷಗಳವರೆಗೆ ಹೂಡಿಕೆ ಮಾಡುವುದು ಅವಶ್ಯಕ.

ಹಿರಿಯ ನಾಗರಿಕರಿಗಾಗಿ ಎಸ್‌ಬಿಐ ವೀಕೇರ್ ಠೇವಣಿ ವಿಶೇಷ ಎಫ್‌ಡಿ ಯೋಜನೆ

ಹಿರಿಯ ನಾಗರಿಕರಿಗಾಗಿ ಎಸ್‌ಬಿಐ ವೀಕೇರ್ ಠೇವಣಿ ವಿಶೇಷ ಎಫ್‌ಡಿ ಯೋಜನೆ

ಎಸ್‌ಬಿಐ ಜೂನ್ 30 ರವರೆಗೆ ವಿಕೇರ್ ಠೇವಣಿ ಯೋಜನೆಯನ್ನು ನೀಡುತ್ತಿದ್ದು, ಇದು ಹಿರಿಯ ನಾಗರಿಕರು ಮಾಡಿದ ದೀರ್ಘಕಾಲೀನ ಎಫ್‌ಡಿ ಹೂಡಿಕೆಗಳಿಗೆ ಶೇ 0.80 ರಷ್ಟು ಹೆಚ್ಚುವರಿ ಬಡ್ಡಿದರವನ್ನು ನೀಡುತ್ತದೆ. ಹೂಡಿಕೆದಾರರು ತಮ್ಮ ಹೂಡಿಕೆಯ ಮೇಲೆ 6.20% ಬಡ್ಡಿದರವನ್ನು ಪಡೆಯುತ್ತಾರೆ.

ಎಚ್‌ಡಿಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ

ಎಚ್‌ಡಿಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ

ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಯೋಜನೆಗೆ ಹಿರಿಯ ನಾಗರಿಕರಿಗಾಗಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಎಂದು ಹೆಸರಿಸಿದೆ. ಹೂಡಿಕೆದಾರರು ತಮ್ಮ ಹೂಡಿಕೆಯ ಮೇಲೆ ಶೇಕಡಾ 6.25 ರಷ್ಟು ಬಡ್ಡಿದರವನ್ನು ಪಡೆಯುತ್ತಾರೆ.

ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್‌ಡಿ ಯೋಜನೆ

ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್‌ಡಿ ಯೋಜನೆ

ಹಿರಿಯ ನಾಗರಿಕರು ಮಾಡಿದ ಹೂಡಿಕೆಗಳಿಗೆ ಐಸಿಐಸಿಐ ಬ್ಯಾಂಕ್ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ. ಈ ಬ್ಯಾಂಕಿನ ಯೋಜನೆಯ ಹೆಸರು ಗೋಲ್ಡನ್ ಇಯರ್ಸ್ ಎಫ್‌ಡಿ ಸ್ಕೀಮ್. ಈ ಯೋಜನೆಯಲ್ಲಿ ಎಫ್‌ಡಿ ಹೂಡಿಕೆಯ ಬಡ್ಡಿದರವು ವಾರ್ಷಿಕ ಶೇಕಡಾ 6.30ರಷ್ಟಿದೆ.

ಬ್ಯಾಂಕ್ ಆಫ್ ಬರೋಡಾ ಎಫ್‌ಡಿ ಯೋಜನೆ

ಬ್ಯಾಂಕ್ ಆಫ್ ಬರೋಡಾ ಎಫ್‌ಡಿ ಯೋಜನೆ

ಹಿರಿಯ ನಾಗರಿಕರಿಗೆ ಬ್ಯಾಂಕ್ ಆಫ್ ಬರೋಡಾ (BoB) ಈ ಠೇವಣಿಗಳ ಮೇಲೆ 100 ಬಿಪಿಎಸ್ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಈ ನಿಶ್ಚಿತ ಠೇವಣಿಗಳು ಹಿರಿಯ ನಾಗರಿಕರಿಗೆ ಶೇಕಡಾ 6.25ರಷ್ಟು ಸಿಗುತ್ತದೆ. ಈ ದರಗಳು 16 ನವೆಂಬರ್ 2021 ರಿಂದ ಅನ್ವಯವಾಗಿವೆ.

English summary

Senior citizens special FD scheme of SBI, HDFC Bank, ICICI, BoB ends in June Month

Senior citizens special fixed deposit scheme were introduced amid the Covid-19 pandemic in May last year will end this month. Dont Miss the special schemes
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X