For Quick Alerts
ALLOW NOTIFICATIONS  
For Daily Alerts

ಬ್ಯಾಂಕ್‌ಗಳು ನೀಡುವ ಆರೋಗ್ಯ ಕ್ರೆಡಿಟ್‌ ಕಾರ್ಡ್‌ಗೆ ನೀವು ಅರ್ಜಿ ಸಲ್ಲಿಸುವುದು ಸೂಕ್ತವೇ?

|

ವಿಶ್ವದಲ್ಲಿ ಕೊರೊನಾ ವೈರಸ್‌ ಸಾಂಕ್ರಾಮಿಕ ಆರಂಭವಾದ ಬಳಿಕ ಹಲವಾರು ಮಂದೆ ತಮ್ಮ ಆರೋಗ್ಯ ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕೆಲವು ಮಂದಿ ವಿಮೆ ಮಾಡಿಕೊಂಡದರೆ, ಇನ್ನೂ ಕೆಲವರು ಆರೋಗ್ಯಕ್ಕಾಗಿ ಉಳಿತಾಯ ಮಾಡಿಕೊಳ್ಳಲು ಆರಂಭ ಮಾಡಿದ್ದಾರೆ. ಹಾಗೆಯೇ ಜನರು ಈಗ ತಮ್ಮ ಮತ್ತು ತಮ್ಮ ಪ್ರೀತಿಪಾತ್ರರ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲು ಪ್ರಾರಂಭಿಸಿದ್ದಾರೆ.

ಈ ಪರಿಣಾಮವಾಗಿ, ಮಾರ್ಚ್ 2020 ರಿಂದ ಆರೋಗ್ಯ ಮತ್ತು ಕ್ಷೇಮ ವರ್ಗದ ಮೇಲಿನ ಖರ್ಚು ವೇಗವಾಗಿ ಬೆಳೆದಿದೆ. ಈ ಎಲ್ಲಾ ಬೆಳವಣಿಗೆಯ ನಡುವೆ ದೇಶದಲ್ಲಿ ಹಲವಾರು ಸಾಮಾಗ್ರಿಗಳ ಬೆಲೆಯು ಏರಿಕೆ ಕಂಡು ಬಂದಿತು. ಆರೋಗ್ಯ ಕ್ಷೇತ್ರದಲ್ಲಿ ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಬಿಕ್ಕಟ್ಟು ಕಾಣಿಸಿಕೊಂಡಿತು.

ಕೊರೊನಾದಿಂದ ಭಾರತಕ್ಕೆ 11.40 ಲಕ್ಷ ಕೋಟಿ ನಷ್ಟ: ವಿಶ್ವ ಬ್ಯಾಂಕ್ ಕೊರೊನಾದಿಂದ ಭಾರತಕ್ಕೆ 11.40 ಲಕ್ಷ ಕೋಟಿ ನಷ್ಟ: ವಿಶ್ವ ಬ್ಯಾಂಕ್

ಈ ಎಲ್ಲಾ ಬೆಳವಣಿಗೆ ನಡುವೆ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ವಿವಿಧ ಬ್ಯಾಂಕ್‌ಗಳು ಆರೋಗ್ಯ ಮತ್ತು ಕ್ಷೇಮ ಕ್ರೆಡಿಟ್ ಕಾರ್ಡ್‌ಗಳನ್ನು ಪ್ರಾರಂಭಿಸಿವೆ. ಈ ಕಾರ್ಡ್‌ಗಳು ವಾರ್ಷಿಕ ಶುಲ್ಕವನ್ನು ಹೊಂದಿದೆ. ಹಾಗಾದರೆ ನೀವು ಈ ಆರೋಗ್ಯ ಕಾರ್ಡ್‌ಗಳನ್ನು ನೀವು ಪಡೆಯಬೇಕೇ? ಏನಿದು ಆರೋಗ್ಯ ಕಾರ್ಡ್ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಏನಿದು ಆರೋಗ್ಯ ಕಾರ್ಡ್?

ಏನಿದು ಆರೋಗ್ಯ ಕಾರ್ಡ್?

ಆರೋಗ್ಯ ಮತ್ತು ಕ್ಷೇಮ ಕ್ರೆಡಿಟ್ ಕಾರ್ಡ್‌ಗಳು ಆರೋಗ್ಯ ಸೇವೆಗಳು ಮತ್ತು ತಪಾಸಣೆಗಳು, ವೈದ್ಯರು ಮತ್ತು ಇತರ ಪರಿಣಿತರೊಂದಿಗೆ ಸಮಾಲೋಚನೆ, ಔಷಧಾಲಯಗಳು ಇತ್ಯಾದಿಗಳ ಮೇಲೆ ಪ್ರಯೋಜನಗಳು ಮತ್ತು ರಿಯಾಯಿತಿಗಳನ್ನು ಒದಗಿಸುತ್ತವೆ. YES ಬ್ಯಾಂಕ್ ಮಾರ್ಚ್ 2021 ರಲ್ಲಿ ಮಾಸ್ಟರ್‌ಕಾರ್ಡ್‌ನೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಗ್ರಾಹಕರಿಗಾಗಿ ಸ್ವಯಂ-ಆರೈಕೆ ಕ್ಷೇಮ ಕ್ರೆಡಿಟ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ. ಎಸ್‌ಬಿಐ ಕೂಡಾ ಕಾರ್ಡ್ ಬಿಡುಗಡೆ ಮಾಡಿದೆ. SBI ಕಾರ್ಡ್‌ನಲ್ಲಿ ವಾರ್ಷಿಕ ಸದಸ್ಯತ್ವ ಮಾಡಿಕೊಂಡರೆ, ಅನಿಯಮಿತ ಆನ್‌ಲೈನ್ ವೈದ್ಯರ ಸಮಾಲೋಚನೆ, ವಾರ್ಷಿಕ ಮೂಲ ಆರೋಗ್ಯ ತಪಾಸಣೆ, ಔಷಧಾಲಯಗಳಲ್ಲಿ ಖರ್ಚು ಮಾಡುವಾಗ 5X ರಿವಾರ್ಡ್ ಪಾಯಿಂಟ್‌ಗಳು ಇತ್ಯಾದಿಗಳನ್ನು ಪಡೆಯಬಹುದಾಗಿದೆ. ಅದೇ ರೀತಿ, Axis Bank Aura Credit Card ಮೂಲಕ ಆನ್‌ಲೈನ್ ಫಿಟ್‌ನೆಸ್ ಸೆಷನ್‌ಗಳು, ಆರೋಗ್ಯ ತಪಾಸಣೆಯಲ್ಲಿ 500 ರೂ.ವರೆಗಿನ ವಾರ್ಷಿಕ ರಿಯಾಯಿತಿ ಇತ್ಯಾದಿಗಳನ್ನು ಪಡೆಯಬಹುದು. ವಾರ್ಷಿಕ ಶುಲ್ಕಗಳು ರೂ 499 ರಿಂದ ರೂ 2,999 ರ ನಡುವೆ ಇರುತ್ತದೆ.

 ಏನಿದೆ ಪ್ರಯೋಜನ?

ಏನಿದೆ ಪ್ರಯೋಜನ?

ನಿಯಮಿತ ಶಾಪಿಂಗ್, ಪ್ರಯಾಣ ಮತ್ತು ಬಹುಮಾನ ಕ್ರೆಡಿಟ್ ಕಾರ್ಡ್‌ಗಳಲ್ಲಿ, ನೀವು ಆರೋಗ್ಯ ಮತ್ತು ಕ್ಷೇಮ ಪ್ರಯೋಜನಗಳನ್ನು ಪಡೆಯುವುದಿಲ್ಲ. ಅಲ್ಲದೆ, ಬ್ಯಾಂಕ್‌ಗಳು ವೈದ್ಯರ ಸಮಾಲೋಚನೆ, ಆರೋಗ್ಯ ತಪಾಸಣೆ, ಅಪೊಲೊ ಫಾರ್ಮಸಿಯಿಂದ ಔಷಧಿಗಳನ್ನು ಖರೀದಿಸುವುದು ಇತ್ಯಾದಿಗಳಿಗಾಗಿ ನೀವು ಕೆಲವು ಆಸ್ಪತ್ರೆಯಿಂದ ಪ್ರಯೋಜನವನ್ನು ಪಡೆಯಬಹುದು. ಈ ಕ್ರೆಡಿಟ್ ಕಾರ್ಡ್‌ಗಳು ವರ್ಷಕ್ಕೆ ಸುಮಾರು 3,000 ರೂಪಾಯಿ ವೆಚ್ಚದಲ್ಲಿ ಆರೋಗ್ಯ ತಪಾಸಣೆ ಪ್ರಯೋಜನ ನೀಡುತ್ತದೆ. ಜಿಮ್‌ಗಳಿಗೆ ಪ್ರವೇಶಕ್ಕಾಗಿ ವಾರ್ಷಿಕವಾಗಿ 12,000 ರಿಂದ 15,000 ರೂ. ಪ್ರಯೋಜನ ನೀಡುತ್ತದೆ. ಕಾರ್ಡ್‌ದಾರರು ಆ್ಯಪ್ ಬಳಸಿ ಪಾಲುದಾರರಿಂದ ಫಿಟ್‌ನೆಸ್ ಪ್ರೋಗ್ರಾಂಗೆ ನೋಂದಾಯಿಸಿಕೊಳ್ಳಬಹುದು. ವೈದ್ಯರು ಮತ್ತು ಪೌಷ್ಟಿಕತಜ್ಞರನ್ನು ಸಂಪರ್ಕಿಸಬಹುದು. "ಗ್ರಾಹಕರು ನಮ್ಮ ಕ್ಷೇಮ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ 60,000 ರೂ.ವರೆಗೆ ತಪಾಸಣೆ ವೆಚ್ಚ ಪಡೆಯಬಹುದು," ಎಂದು ಯೆಸ್ ಬ್ಯಾಂಕ್‌ ವ್ಯಾಪಾರ ಮುಖ್ಯಸ್ಥ ರಜನೀಶ್ ಪ್ರಭು ಹೇಳುತ್ತಾರೆ. ಪ್ರಸ್ತುತ ಸುಮಾರು ಸುಮಾರು 60-65 ಪ್ರತಿಶತ ಗ್ರಾಹಕರು ಕಾರ್ಡ್ ಅನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ.

 ಈ ಕಾರ್ಡ್‌ನಲ್ಲಿ ಏನು ಇಲ್ಲ?

ಈ ಕಾರ್ಡ್‌ನಲ್ಲಿ ಏನು ಇಲ್ಲ?

ಸಾಮಾನ್ಯ ಕ್ರೆಡಿಟ್ ಕಾರ್ಡ್‌ಗಳು ಒದಗಿಸಿದಂತೆ ಈ ಕಾರ್ಡ್‌ಗಳು ಶಾಪಿಂಗ್ ಮತ್ತು ಪ್ರಯಾಣ ಪ್ರಯೋಜನಗಳನ್ನು ನೀಡುವುದಿಲ್ಲ. ಮತ್ತೊಂದು ನ್ಯೂನತೆಯೆಂದರೆ ಈ ಕ್ರೆಡಿಟ್ ಕಾರ್ಡ್‌ಗಳು ದೊಡ್ಡ ಆಸ್ಪತ್ರೆಗಳಿಗೆ ಅನ್ವಯ ಆಗದೆ ಇರಬಹುದು. "ಹೆಚ್ಚಿನ ಜನರು ನಗರದಲ್ಲಿ ಸಾಮಾನ್ಯ ಸಲಹೆ, ಕಣ್ಣು ಮತ್ತು ದಂತ ತಪಾಸಣೆಗಾಗಿ ಸಾಮಾನ್ಯ ವೈದ್ಯರನ್ನು ಭೇಟಿ ಮಾಡಲು ಬಯಸುತ್ತಾರೆ. ಜನರು ಈ ಆನ್‌ಲೈನ್‌ ತಪಾಸಣೆಯನ್ನು ಇಷ್ಟಪಡಲ್ಲ," ಎಂದು ವೈಯಕ್ತಿಕ ಹಣಕಾಸು ಬ್ಲಾಗರ್ ತುಷಾರ್ ಜೈನ್ ಹೇಳುತ್ತಾರೆ. ಇನ್ನು ತಜ್ಞರ ಪ್ರಕಾರ, ಬ್ಯಾಂಕ್‌ಗಳು ಆರೋಗ್ಯ ಮತ್ತು ಕ್ಷೇಮ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವ ಗ್ರಾಹಕರ ಕೆಲವು ವಿಭಾಗಗಳನ್ನು ಗುರಿಯಾಗಿಸಿಕೊಂಡಿದೆ. ಈ ನಡುವೆ ಆಕ್ಸಿಸ್ ಬ್ಯಾಂಕ್‌, "ಬ್ಯಾಂಕ್‌ಗಳು ಐದು ವರ್ಷಗಳ ಹಿಂದೆ ಆರೋಗ್ಯ ಮತ್ತು ಕ್ಷೇಮ ಕ್ರೆಡಿಟ್ ಕಾರ್ಡ್‌ಗಳನ್ನು ಪ್ರಾರಂಭಿಸಿದ್ದರೆ, ಅದು ಒಂದು ವಿಭಾಗವನ್ನು ಗುರಿಯಾಗಿಸಿದೆ ಎಂದು ಹೇಳಬಹುದು. ಆದರೆ ನಾವು ಆ ರೀತಿಯಲ್ಲ, ಇದು ಎಲ್ಲರಿಗೆ ಪ್ರಯೋಜಕರ," ಎಂದು ಹೇಳಿದೆ.

 ನೀವು ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬೇಕೆ?

ನೀವು ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬೇಕೆ?

ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವ ಶಾಪಿಂಗ್ ಅಥವಾ ಟ್ರಾವೆಲ್ ಕ್ರೆಡಿಟ್ ಕಾರ್ಡ್‌ಗಳಂತೆ ಈ ಆರೋಗ್ಯ ಕಾರ್ಡ್‌ಗಳು ಅಲ್ಲ. ಇದು ಆರೋಗ್ಯ ಮತ್ತು ಕ್ಷೇಮ ವೆಚ್ಚಗಳ ಮೇಲೆ ವಿನಾಯಿತಿ, ಪ್ರಯೋಜನವನ್ನು ನೀಡುವ ಕೆಲವೇ ಕೆಲವು ಕಾರ್ಡ್‌ಗಳಲ್ಲಿ ಒಂದಾಗಿದೆ. ಆದ್ದರಿಂದ, ಈ ಕಾರ್ಡ್‌ಗಳ ಆಯ್ಕೆಗಳು ಬಹಳ ಸೀಮಿತವಾಗಿವೆ. ಈ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಗ್ರಾಹಕರು ಇದರಿಂದ ಸೀಮಿತ ರೀತಿಯಲ್ಲಿ ಖರ್ಚು ಮಾಡಬಹುದು. ಈ ಕ್ರೆಡಿಟ್ ಕಾರ್ಡ್‌ಗಳು ವಾರ್ಷಿಕ ಶುಲ್ಕವನ್ನು ಹೊಂದಿದೆ. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ವೈದ್ಯಕೀಯ ವೆಚ್ಚಗಳನ್ನು ಮೌಲ್ಯಮಾಪನ ಮಾಡಬೇಕಾಗುತ್ತದೆ. "ಒಬ್ಬರು ನಿಯಮಿತ ವೈದ್ಯಕೀಯ ವೆಚ್ಚಗಳನ್ನು ಹೊಂದಿದ್ದರೆ ಮತ್ತು ನಿಯಮಿತವಾಗಿ ವೈದ್ಯರ ಸಮಾಲೋಚನೆಯ ಅಗತ್ಯವಿದ್ದರೆ, ಈ ಕಾರ್ಡ್‌ಗಳು ಉತ್ತಮ ಆಯ್ಕೆಯಾಗಿದೆ. ವೈದ್ಯಕೀಯ ಅವಶ್ಯಕತೆಯು ಒಮ್ಮೊಮ್ಮೆ ಮಾತ್ರ ಇದ್ದರೆ, ಕಡಿಮೆ ವಾರ್ಷಿಕ ಶುಲ್ಕವನ್ನು ಪಾವತಿ ಮಾಡಿ ಕಾರ್ಡ್ ಮಾಡಿಸಬೇಕು," ಎಂದು ಖೋಸ್ಲಾ ಹೇಳುತ್ತಾರೆ.

English summary

Should You Apply for the Health Credit Cards Offered by Banks?

Should you apply For the Health credit cards offered by banks?. Here's a details about the Health credit cards.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X