For Quick Alerts
ALLOW NOTIFICATIONS  
For Daily Alerts

ಏಪ್ರಿಲ್ 1, 2021ರಿಂದ ಕೈ ತಲುಪುವ ವೇತನ ಕಡಿತ; ಏಕೆ ಗೊತ್ತಾ?

By ಅನಿಲ್ ಆಚಾರ್
|

ಮುಂದಿನ ಆರ್ಥಿಕ ವರ್ಷದ ಆರಂಭದಿಂದ ಖಾಸಗಿ ಉದ್ಯೋಗಿಗಳ ವೇತನದಲ್ಲಿ ಕಡಿತ ಎದುರಿಸಬೇಕಾಗುತ್ತದೆ. ಏಕೆಂದರೆ, ಹೊಸ ವೇತನ ನಿಯಮದ ಅನುಸಾರ ವೇತನವನ್ನು ಉದ್ಯೋಗದಾತರು ಮರು ಹೊಂದಾಣಿಕೆ ಮಾಡಬೇಕಾದ್ದರಿಂದ ಕಡಿತವಾಗಬಹುದು.

ವೇತನ ಹೊಸ ಸಂಹಿತೆ ಭಾಗವಾಗಿ ಕಳೆದ ವರ್ಷ ಸಂಸತ್ ನಲ್ಲಿ ಹೊಸ ಪರಿಹಾರ ನಿಯಮವನ್ನು ತಂದಿದ್ದು, ಮುಂದಿನ ಆರ್ಥಿಕ ವರ್ಷಕ್ಕೆ ಅನುಷ್ಠಾನಕ್ಕೆ ತರಲಾಗುವುದು. ಅದರ ಪ್ರಕಾರ, ಒಟ್ಟಾರೆ ವೇತನದಲ್ಲಿ ಭತ್ಯೆಯು 50% ದಾಟುವಂತಿಲ್ಲ. ಎಕನಾಮಿಕ್ ಟೈಮ್ಸ್ ನಲ್ಲಿ ವರದಿ ಆಗಿರುವಂತೆ, ಮುಂದಿನ ವರ್ಷ ಏಪ್ರಿಲ್ ನಿಂದ ಮೂಲ ವೇತನ (ಬೇಸಿಕ್ ಪೇ) 50% ಅಥವಾ ಅದಕ್ಕಿಂತ ಹೆಚ್ಚಿಗೆ ಇರಬೇಕು.

"ಲಾಕ್ ಡೌನ್ ಅವಧಿಯಲ್ಲಿ ವರ್ಕ್ ಫ್ರಮ್ ಹೋಮ್ ಮಾಡಿದ್ದಲ್ಲಿ ಪ್ರಯಾಣ ಭತ್ಯೆ ಇಲ್ಲ"

 

ಸಾಮಾನ್ಯ ಸಂದರ್ಭದಲ್ಲಿ ಹಲವು ಕಂಪೆನಿಗಳು ಭತ್ಯೆಯಿಂದ ಹೊರತಾದ ಭಾಗವು 50 ಪರ್ಸೆಂಟ್ ಗಿಂತ ಕಡಿಮೆ ಇರುತ್ತದೆ. ಆದ್ದರಿಂದ ವೇತನ ಸ್ವರೂಪದಲ್ಲಿ ಇಳಿಕೆ ಆಗಬಹುದು. ಈ ಸನ್ನಿವೇಶದಲ್ಲಿ ಮೂಲ ವೇತನದಲ್ಲಿ ಹೆಚ್ಚಳ ಆಗಬಹುದು ಮತ್ತು ಪಿಎಫ್ ಕೊಡುಗೆ ಏರಿಕೆ ಆಗಿ, ಟೇಕ್ ಹೋಮ್ ಸಂಬಳದಲ್ಲಿ ಇಳಿಕೆ ಆಗಬಹುದು.

ಏಪ್ರಿಲ್ 1, 2021ರಿಂದ ಕೈ ತಲುಪುವ ವೇತನ ಕಡಿತ; ಏಕೆ ಗೊತ್ತಾ?

ಇನ್ನು ಗ್ರಾಚ್ಯುಟಿ ಮತ್ತು ಪಿಎಫ್ ಅನ್ನು ಮೂಲ ವೇತನದ ಆಧಾರದಲ್ಲಿ ಲೆಕ್ಕ ಹಾಕುವುದರಿಂದ ಅದು ಏರಿಕೆ ಆಗಬಹುದು. ಕಂಪೆನಿಗಳ ಸಹ ಗ್ರಾಚ್ಯುಟಿ, ಪಿಎಫ್ ಗೆ ಹೆಚ್ಚಿನ ಮೊತ್ತವನ್ನು ನೀಡುತ್ತಾರೆ.

English summary

Take Home Pay Shall Fall From 2021 April Next Year: Know Why?

Your take home pay shall fall from 2021 April next year. Know why?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X