For Quick Alerts
ALLOW NOTIFICATIONS  
For Daily Alerts

ಫೆಬ್ರವರಿ 1ರಿಂದ ಟಾಟಾ ಮೋಟರ್ಸ್ ಕಾರು ದುಬಾರಿ, ಯಾಕೆ, ಇಲ್ಲಿದೆ ಕಾರಣ?

|

ಟಾಟಾ ಮೋಟರ್ಸ್ ಕಾರುಗಳು ಮುಂದಿನ ತಿಂಗಳಿನಿಂದ ದುಬಾರಿಯಾಗಲಿದೆ. ಹೌದು ಸಂಸ್ಥೆಯು ತಮ್ಮ ಕಾರುಗಳ ದರವನ್ನು ಏರಿಕೆ ಮಾಡಿದೆ. ಫೆಬ್ರವರಿ 1, 2023ರಿಂದ ಈ ಪರಿಷ್ಕೃತ ದರವು ಜಾರಿಗೆ ಬರಲಿದೆ. ವೆಚ್ಚವು ಅಧಿಕವಾಗುವ ನಿಟ್ಟಿನಲ್ಲಿ ಟಾಟಾ ಮೋಟರ್ಸ್ ತನ್ನ ಕಾರುಗಳ ದರವನ್ನು ಏರಿಕೆ ಮಾಡಿದೆ.

ಸಂಸ್ಥೆಯಲ್ಲಿ ಸರಿಸುಮಾರು ಶೇಕಡ 1.2ರಷ್ಟು ದರವು ಹೆಚ್ಚಳವಾಗಲಿದೆ. ವೆರಿಯಂಟ್ ಹಾಗೂ ಮಾಡೆಲ್‌ಗಳ ಆಧಾರದಲ್ಲಿ ಬೆಲೆ ಏರಿಕೆಯಾಗುತ್ತದೆ. ಟಾಟಾ ಮೋಟರ್ಸ್‌ನಲ್ಲಿನ ಬೆಲೆ ಏರಿಕೆಯು ಸಂಸ್ಥೆಯಲ್ಲಿನ ಹಲವಾರು ಕಾರುಗಳ ಮೇಲೆ ಪ್ರಭಾವ ಬೀರಲಿದೆ. ಕಳೆದ ತಿಂಗಳಿನಲ್ಲೇ ಹಲವಾರು ಸಂಸ್ಥೆಗಳು ತಮ್ಮ ಕಾರುಗಳ, ವಾಹನಗಳ ಬೆಲೆಯನ್ನು ಹೆಚ್ಚಳ ಮಾಡಿದೆ.

ಟಾಟಾ ಮೋಟಾರ್ಸ್ ಷೇರಿನ ಟಾರ್ಗೆಟ್ 646 ರೂಪಾಯಿ: ICICI ಸೆಕ್ಯುರಿಟೀಸ್ಟಾಟಾ ಮೋಟಾರ್ಸ್ ಷೇರಿನ ಟಾರ್ಗೆಟ್ 646 ರೂಪಾಯಿ: ICICI ಸೆಕ್ಯುರಿಟೀಸ್

ಟಾಟಾ ಟಿಯಾಗೋ ಬಗ್ಗೆ ಮಾಹಿತಿ

ಟಾಟಾ ಟಿಯಾಗೋ, ಪಂಚ್, ಟಿಗಾರ್, ಅಲ್ಟ್ರಾಜ್, ನೆಕ್ಸಾಜ್, ಹ್ಯಾರಿಯರ್, ಟಾಟಾ ಸಫಾರಿ ಕಾರುಗಳ ದರವು ಏರಿಕೆಯಾಗಲಿದೆ. ಇತ್ತೀಚೆಗೆ ಮಾರುತಿ ಸುಜುಕಿ ಕೂಡಾ ಇತ್ತೀಚೆಗೆ ಕಾರುಗಳ ದರವು ಏರಿಕೆಯಾಗಿದೆ. ಮಾರುತಿ ಸುಜುಕಿ ವಾಹನಗಳ ದರವು ಶೇಕಡ 1.1ರಷ್ಟು ಹೆಚ್ಚಳವಾಗಿದೆ. ಇನ್ನು ಬೇರೆ ಬೇರೆ ಆಟೋಮೇಕರ್ಸ್‌ಗಳು ಕೂಡಾ ದರವನ್ನು ಏರಿಸುವ ಸಾಧ್ಯತೆಯಿದೆ.

ಫೆಬ್ರವರಿ 1ರಿಂದ ಟಾಟಾ ಮೋಟರ್ಸ್ ಕಾರು ದುಬಾರಿ, ಯಾಕೆ, ಇಲ್ಲಿದೆ ಕಾರಣ?

ಟಾಟಾ ಮೋಟರ್ಸ್ ಇತ್ತೀಚೆಗೆ ಟಿಯಾಗೋ ಇವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಟಾಟಾ ಮೋಟರ್ಸ್ ಟಿಯಾಗೋ ಇವಿ ಬೆಲೆಯು 8.49 ಲಕ್ಷ ರೂಪಾಯಿ ಆಗಿದೆ. ಟಿಯಾಗೋ ಎಕ್ಸ್‌ಇ, ಎಕ್ಸ್‌ಟಿ, ಎಕ್ಸ್‌ಝಡ್+, ಎಕ್ಸ್‌ಝೆಡ್‌+ ಟೆಕ್ ಲಕ್ಸ್ ಎಂಬ ನಾಲ್ಕು ವೇರಿಯಂಟ್‌ಗಳು ಭಾರತದಲ್ಲಿ ಲಭ್ಯವಿರಲಿದೆ.

ಆಗಸ್ಟ್‌ನಲ್ಲಿ ಆಟೊಮೊಬೈಲ್ ಕ್ಷೇತ್ರಕ್ಕೆ ಹಿನ್ನೆಡೆ: ಮಾರುತಿ ಕಾರುಗಳ ಮಾರಾಟವೂ ಇಳಿಕೆಆಗಸ್ಟ್‌ನಲ್ಲಿ ಆಟೊಮೊಬೈಲ್ ಕ್ಷೇತ್ರಕ್ಕೆ ಹಿನ್ನೆಡೆ: ಮಾರುತಿ ಕಾರುಗಳ ಮಾರಾಟವೂ ಇಳಿಕೆ

ಟಿಯಾಗೋ ಇವಿ ದೊಡ್ಡ ಬ್ಯಾಟರಿ ಪ್ಯಾಕ್‌ನಲ್ಲಿ 74hp ಪವರ್ ಮತ್ತು 114Nm ಟಾರ್ಕ್ ಮತ್ತು ಚಿಕ್ಕ ಬ್ಯಾಟರಿ ಪ್ಯಾಕ್‌ನಲ್ಲಿ 61hp ಮತ್ತು 110Nm ಅನ್ನು ಉತ್ಪಾದಿಸುವ ಜಿಪ್ಟ್ರಾನ್ ಎಲೆಕ್ಟ್ರಿಕ್ ಮೋಟರ್ ಇದೆ. ಟಿಯಾಗೋ ಇವಿ ಎರಡು ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ, 19.2kWh ಮತ್ತು 24kWh ಬ್ಯಾಟರಿ ಪ್ಯಾಕ್ ಆಗಿದೆ.

English summary

Tata Motors cars to get costlier from February 1st, 2023, Why Details Here

Tata Motors today announced that it will be increasing the prices across its ICE portfolio of passenger vehicles. Why Details Here.
Story first published: Saturday, January 28, 2023, 15:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X