For Quick Alerts
ALLOW NOTIFICATIONS  
For Daily Alerts

ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಬೇಕೇ?, ಇಲ್ಲಿದೆ ವಿವರ

|

ಇತ್ತೀಚೆಗೆ ನಡೆದ 2021-22 ರ ಹಣಕಾಸು ವರ್ಷದ ಮೂರನೇ ನೀತಿ ಸಭೆಯಲ್ಲಿ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಕೊರೊನಾ ಎರಡನೇ ಅಲೆಯ ಬಳಿಕ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆ ರೆಪೋ ದರದಲ್ಲಿ ಯಥಾ ಸ್ಥಿತಿ ಕಾಯ್ದುಕೊಂಡಿದೆ. ಇದರಿಂದಾಗಿ ರೆಪೋದರ ಶೇಕಡ 4 ಹಾಗೂ ರಿವರ್ಸ್ ರೆಪೋ ದರ ಶೇಕಡ 3.35 ರಲ್ಲೇ ಮುಂದುವರಿಯಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದರು. ಈ ಬೆನ್ನಲ್ಲೇ ಭಾರತದ ಹಲವಾರು ಬ್ಯಾಂಕುಗಳು ಹೋಮ್‌ ಲೋನ್‌ (ಗೃಹಸಾಲ) ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಲು ಆರಂಭ ಮಾಡಿದೆ. ಡೆಪಾಸಿಟ್‌ ದರಗಳು ಹಾಗೂ ಸಾಲದ ದರಗಳು ಸಾಮಾನ್ಯವಾಗಿ ರೆಪೋ ದರದ ಮೇಲೆ ಪ್ರಭಾವಿತವಾಗಿರುತ್ತದೆ. ಆರ್‌ಬಿಐ ನ ಇತ್ತೀಚಿನ ನಿರ್ಧಾರದ ಹಿನ್ನೆಲೆ ಈಗ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಲು ಸ್ವತಂತ್ರವಾಗಿದೆ.

 

ಇನ್ನು ದೇಶದಲ್ಲಿ ಹೋಮ್‌ ಲೋನ್‌ಗೆ ಅತೀ ಕಡಿಮೆ ಬಡ್ಡಿ ದರ ಎಂದರೆ ಶೇಕಡ 6.60 ಆಗಿದೆ. ಇಷ್ಟು ಕಡಿಮೆ ಬಡ್ಡಿ ದರದಲ್ಲಿ ಹೋಮ್‌ ಲೋನ್‌ ಅನ್ನು ಕೋಟಕ್‌ ಮಹಿಂದ್ರ ಬ್ಯಾಂಕ್‌ ನೀಡಲಿದೆ. ಹಾಗೆಯೇ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶೇಕಡ 6.70 ಬಡ್ಡಿದರದಲ್ಲಿ ತನ್ನ ಹೋಮ್‌ ಲೋನ್‌ ನೀಡಲಿದೆ. ಇವೆಲ್ಲದರ ನಡುವೆ ಕೆಲವೊಂದು ಫಿನಾನ್ಸಿಂಗ್‌ ಕಂಪನಿಗಳು ಪ್ರಧಾನ ಸಾಲ ದರದ ಆಧಾರದಲ್ಲಿ ಗೃಹ ಸಾಲಕ್ಕೆ ಕಡಿಮೆ ಬಡ್ಡಿದರ ವಿಧಿಸಲಿದೆ. ಆದರೆ ಕೆಲವು ಫಿನಾನ್ಸಿಂಗ್‌ ಕಂಪನಿಗಳಲ್ಲಿ ಗೃಹ ಸಾಲಗಳ ಮೇಲೆ, ಬಡ್ಡಿದರ ಕಡಿತ ದೊರೆಯದೆ ಇರಬಹುದು. ಇದು ರೆಪೋ ದರದ ಮೇಲೆ ಆಧಾರಿತವಾಗಿದೆ ಎಂಬುವುದನ್ನು ನೀವು ನೆನಪಲ್ಲಿ ಇಟ್ಟುಕೊಳ್ಳಬೇಕು.

ಭಾರತ-ಅಫ್ಘಾನಿಸ್ತಾನ ನಡುವಿನ ಆಮದು & ರಫ್ತು ಸ್ಥಗಿತ: ಎಫ್‌ಐಇಒಭಾರತ-ಅಫ್ಘಾನಿಸ್ತಾನ ನಡುವಿನ ಆಮದು & ರಫ್ತು ಸ್ಥಗಿತ: ಎಫ್‌ಐಇಒ

ಪ್ರಸ್ತುತ ಕೆಲವೊಂದು ಫಿನಾನ್ಸಿಂಗ್‌ ಕಂಪನಿಗಳು ಬ್ಯಾಂಕುಗಳಿಗೆ ಸಮಾನವಾಗಿ 6.66 ಬಡ್ಡಿ ದರದಲ್ಲಿ ಗೃಹ ಸಾಲಗಳನ್ನು ನೀಡುತ್ತದೆ. ಆದರೆ ಇದೇ ಸಂದರ್ಭದಲ್ಲಿ ಕಡಿಮೆ ಅರ್ಹತೆ ಮಾನದಂಡ, ತ್ವರಿತ ಸಾಲ ಅನುಮೋದನೆ, 24/7 ಗ್ರಾಹಕರ ಬೆಂಬಲ, ಪ್ರೋಸೆಸಿಂಗ್‌ ಫೀ, ದಂಡ ದರಗಳು ಮತ್ತು ಮತ್ತು ಫಿನಾನ್ಸಿಂಗ್‌ ಕಂಪನಿಗಳ ಗೃಹ ಸಾಲಗಳಿಗೆ ಅನ್ವಯವಾಗುವ ನಿಯಮಗಳು ಮತ್ತು ಷರತ್ತುಗಳನ್ನು ಕೂಡಾ ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನೀವು ನಿಮ್ಮ ಕನಸಿನ ಮನೆ ನಿರ್ಮಾಣಕ್ಕೆ ಮುಂದಾಗಿದ್ದರೆ ಈ ಐದು ಗೃಹ ಸಾಲ ಒದಗಿಸುವ ಫಿನಾನ್ಸಿಂಗ್‌ ಕಂಪನಿಗಳ ಬಗ್ಗೆ ತಿಳಿದು ಕೊಳ್ಳಲೇ ಬೇಕು. ಮುಂದೆ ಓದಿ

 ಎಲ್ಐಸಿ ಹೌಸಿಂಗ್ ಫಿನಾನ್ಸ್‌ ಲಿಮಿಟೆಡ್‌ನ ಬಡ್ಡಿ ದರವೆಷ್ಟು?
 

ಎಲ್ಐಸಿ ಹೌಸಿಂಗ್ ಫಿನಾನ್ಸ್‌ ಲಿಮಿಟೆಡ್‌ನ ಬಡ್ಡಿ ದರವೆಷ್ಟು?

ಎಲ್ಐಸಿ ಹೌಸಿಂಗ್ ಫಿನಾನ್ಸ್‌ ಲಿಮಿಟೆಡ್‌ನ ಗೃಹ ಸಾಲದ ಮೇಲಿನ ಇತ್ತೀಚಿನ ಬಡ್ಡಿ ದರವನ್ನು ಈ ಕೆಳಗೆ ಉಲ್ಲೇಖ ಮಾಡಲಾಗಿದೆ. ಇದು ಕ್ರೆಡಿಟ್ ಇನ್ಫಾರ್‍ಮೇಶನ್‌ ಬ್ಯೂರೋ ಲಿಮಿಡೆಟ್‌ ಸ್ಕೋರ್‌ (CIBIL) ಹಾಗೂ ಸಾಲ ಮೊತ್ತದ ಮೇಲೆ ಆಧಾರಿತವಾಗಿದೆ.

50 ಲಕ್ಷದವರೆಗಿನ ಸಾಲ: ಸಿಐಬಿಐಎಲ್‌ 700, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 6.66 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.00 ಬಡ್ಡಿ ದರ
50 ಲಕ್ಷದವರೆಗಿನ ಸಾಲ: ಸಿಐಬಿಐಎಲ್‌ 650-699, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 7.10 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.20 ಬಡ್ಡಿ ದರ
50 ಲಕ್ಷದವರೆಗಿನ ಸಾಲ: ಸಿಐಬಿಐಎಲ್‌ 600-649, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 7.30 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.40 ಬಡ್ಡಿ ದರ
50 ಲಕ್ಷದವರೆಗಿನ ಸಾಲ: ಸಿಐಬಿಐಎಲ್‌ 600 ಕ್ಕಿಂತ ಕಡಿಮೆ, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 7.50 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.60 ಬಡ್ಡಿ ದರ

50 ಲಕ್ಷಕ್ಕಿಂತ ಅಧಿಕ ಒಂದು ಕೋಟಿವರೆಗಿನ ಸಾಲ: ಸಿಐಬಿಐಎಲ್‌ 700, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 6.90 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.00 ಬಡ್ಡಿ ದರ
50 ಲಕ್ಷಕ್ಕಿಂತ ಅಧಿಕ ಒಂದು ಕೋಟಿವರೆಗಿನ ಸಾಲ: ಸಿಐಬಿಐಎಲ್‌ 650-699, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 7.30 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.40 ಬಡ್ಡಿ ದರ
50 ಲಕ್ಷಕ್ಕಿಂತ ಅಧಿಕ ಒಂದು ಕೋಟಿವರೆಗಿನ ಸಾಲ: ಸಿಐಬಿಐಎಲ್‌ 600-649, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 7.60 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.70 ಬಡ್ಡಿ ದರ
50 ಲಕ್ಷಕ್ಕಿಂತ ಅಧಿಕ ಒಂದು ಕೋಟಿವರೆಗಿನ ಸಾಲ: ಸಿಐಬಿಐಎಲ್‌ 600 ಕ್ಕಿಂತ ಕಡಿಮೆ, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 7.70 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.80 ಬಡ್ಡಿ ದರ

ಒಂದು ಕೋಟಿಯಿಂದ ಮೂರು ಕೋಟಿವರೆಗಿನ ಸಾಲ: ಸಿಐಬಿಐಎಲ್‌ 700, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 6.90 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.00 ಬಡ್ಡಿ ದರ
ಒಂದು ಕೋಟಿಯಿಂದ ಮೂರು ಕೋಟಿವರೆಗಿನ ಸಾಲ: ಸಿಐಬಿಐಎಲ್‌ 650-699, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 7.40 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.50 ಬಡ್ಡಿ ದರ
ಒಂದು ಕೋಟಿಯಿಂದ ಮೂರು ಕೋಟಿವರೆಗಿನ ಸಾಲ: ಸಿಐಬಿಐಎಲ್‌ 600-649, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 7.70 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.80 ಬಡ್ಡಿ ದರ
ಒಂದು ಕೋಟಿಯಿಂದ ಮೂರು ಕೋಟಿವರೆಗಿನ ಸಾಲ: ಸಿಐಬಿಐಎಲ್‌ 600 ಕ್ಕಿಂತ ಕಡಿಮೆ, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 7.70 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.80 ಬಡ್ಡಿ ದರ

ಮೂರು ಕೋಟಿಯಿಂದ 15 ಕೋಟಿವರೆಗಿನ ಸಾಲ: ಸಿಐಬಿಐಎಲ್‌ 700, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 6.90 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.00 ಬಡ್ಡಿ ದರ
ಮೂರು ಕೋಟಿಯಿಂದ 15 ಕೋಟಿವರೆಗಿನ ಸಾಲ: ಸಿಐಬಿಐಎಲ್‌ 650-699, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 7.50 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.60 ಬಡ್ಡಿ ದರ
ಮೂರು ಕೋಟಿಯಿಂದ 15 ಕೋಟಿವರೆಗಿನ ಸಾಲ: ಸಿಐಬಿಐಎಲ್‌ 600-649, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 7.70 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.80 ಬಡ್ಡಿ ದರ
ಮೂರು ಕೋಟಿಯಿಂದ 15 ಕೋಟಿವರೆಗಿನ ಸಾಲ: ಸಿಐಬಿಐಎಲ್‌ 600 ಕ್ಕಿಂತ ಕಡಿಮೆ, ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 7.70 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.80 ಬಡ್ಡಿ ದರ

ಇನ್ನು 50 ಲಕ್ಷದವರೆಗಿನ ಸಾಲ ಸಿಐಬಿಐಎಲ್‌ 0 ಆದರೆ ಸಂಬಳ ಹೊಂದಿರುವ ಮತ್ತು ವೃತ್ತಿಪರರಿಗೆ ಶೇಕಡ 7.40 ಬಡ್ಡಿ ದರ, ಸಂಬಳ ಹೊಂದಿಲ್ಲದಿದ್ದರೆ ಹಾಗೂ ವೃತ್ತಿಪರರಲ್ಲದಿದ್ದರೆ ಶೇಕಡ 7.50 ಬಡ್ಡಿ ದರ

 ಹೆಚ್‌ಡಿಎಫ್‌ಸಿ ಲಿಮಿಟೆಡ್‌ನಲ್ಲಿ ಗೃಹ ಸಾಲದ ಬಡ್ಡಿ ದರ ಎಷ್ಟು?

ಹೆಚ್‌ಡಿಎಫ್‌ಸಿ ಲಿಮಿಟೆಡ್‌ನಲ್ಲಿ ಗೃಹ ಸಾಲದ ಬಡ್ಡಿ ದರ ಎಷ್ಟು?

ಎಚ್‌ಡಿಎಫ್‌ಸಿ ಲಿಮಿಟೆಡ್ ಶೇಕಡ 16.05 ನ ಚಿಲ್ಲರೆ ಪ್ರಧಾನ ಸಾಲದ ದರವನ್ನು ಆಧರಿಸಿ ಗೃಹ ಸಾಲದ ಮೇಲೆ ಈ ಕೆಳಗಿನ ಬಡ್ಡಿದರಗಳನ್ನು ನೀಡುತ್ತದೆ.

ವಿಶೇಷ ಗೃಹ ಸಾಲ ದರ

30 ಲಕ್ಷದವರೆಗಿನ ಸಾಲ: ಮಹಿಳೆಯರಿಗೆ ಶೇಕಡ 6.75 ರಿಂದ 7.25, ಉಳಿದವರಿಗೆ 6.80 ರಿಂದ 7.30 ಬಡ್ಡಿ ದರ
30.1 ಲಕ್ಷದಿಂದ 75 ಲಕ್ಷದವರೆಗಿನ ಸಾಲ: ಮಹಿಳೆಯರಿಗೆ ಶೇಕಡ 7.00 ರಿಂದ 7.50, ಉಳಿದವರಿಗೆ 7.05 ರಿಂದ 7.55 ಬಡ್ಡಿ ದರ
75.1 ಲಕ್ಷದಿಂದ ಅಧಿಕ ಸಾಲ: ಮಹಿಳೆಯರಿಗೆ ಶೇಕಡ 7.10 ರಿಂದ 7.60, ಉಳಿದವರಿಗೆ 7.15 ರಿಂದ 7.65 ಬಡ್ಡಿ ದರ

ಎಸ್‌ಬಿಐನಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ: ಇಲ್ಲಿದೆ ವಿವರಎಸ್‌ಬಿಐನಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ: ಇಲ್ಲಿದೆ ವಿವರ

ಪ್ರಮಾಣಿತ ಗೃಹ ಸಾಲ ದರ

30 ಲಕ್ಷದವರೆಗಿನ ಸಾಲ: ಮಹಿಳೆಯರಿಗೆ ಶೇಕಡ 6.95 ರಿಂದ 7.45, ಉಳಿದವರಿಗೆ 7.00 ರಿಂದ 7.50 ಬಡ್ಡಿ ದರ
30.1 ಲಕ್ಷದಿಂದ 75 ಲಕ್ಷದವರೆಗಿನ ಸಾಲ: ಮಹಿಳೆಯರಿಗೆ ಶೇಕಡ 7.20 ರಿಂದ 7.70, ಉಳಿದವರಿಗೆ 7.25 ರಿಂದ 7.75 ಬಡ್ಡಿ ದರ
75.1 ಲಕ್ಷದಿಂದ ಅಧಿಕ ಸಾಲ: ಮಹಿಳೆಯರಿಗೆ ಶೇಕಡ 7.30 ರಿಂದ 7.80, ಉಳಿದವರಿಗೆ 7.35 ರಿಂದ 7.85 ಬಡ್ಡಿ ದರ

 ಬಜಾಜ್‌ ಫಿನ್‌ ಸರ್ವ್ ಲಿಮಿಟೆಡ್‌ನಲ್ಲಿ ಗೃಹ ಸಾಲದ ಬಡ್ಡಿ ದರ ಎಷ್ಟು?

ಬಜಾಜ್‌ ಫಿನ್‌ ಸರ್ವ್ ಲಿಮಿಟೆಡ್‌ನಲ್ಲಿ ಗೃಹ ಸಾಲದ ಬಡ್ಡಿ ದರ ಎಷ್ಟು?

ಬಜಾಜ್‌ ಫಿನ್‌ ಸರ್ವ್ 30 ವರ್ಷಗಳ ಅವಧಿಯವರೆಗೆ ಗೃಹ ಸಾಲವನ್ನು ನೀಡುತ್ತದೆ.ಕಂಪನಿಯ ವಿವಿಧ ಗೃಹ ಸಾಲ ಉತ್ಪನ್ನಗಳ ಆಧಾರದ ಮೇಲೆ ಪ್ರಸ್ತುತ ಗೃಹ ಸಾಲ ದರಗಳು ಇಲ್ಲಿವೆ.

ಸಂಬಳ ಪಡೆಯುವವರು: ಗೃಹ ಸಾಲ, ಶೇಕಡ 6.75 ಗೃಹ ಸಾಲ ಬಡ್ಡಿ ದರ
ಸಂಬಳ ಪಡೆಯುವವರು: ಹೋಮ್‌ ಲೋನ್‌ ಬಾಲೆನ್ಸ್‌ ಟ್ರಾನ್ಸಫರ್‌, ಶೇಕಡ 6.75 ಬಡ್ಡಿ ದರ
ಸಂಬಳ ಪಡೆಯುವವರು: ಹೋಮ್‌ ಲೋನ್‌ ಟಾಪ್‌ ಅಪ್‌, ಶೇಕಡ 6.75 ಬಡ್ಡಿ ದರ

ಸ್ವ ಉದ್ಯೋಗಿಗಳು: ಗೃಹ ಸಾಲ, ಶೇಕಡ 8.25 ಗೃಹ ಸಾಲ ಬಡ್ಡಿ ದರ
ಸ್ವ ಉದ್ಯೋಗಿಗಳು: ಹೋಮ್‌ ಲೋನ್‌ ಬಾಲೆನ್ಸ್‌ ಟ್ರಾನ್ಸಫರ್‌, ಶೇಕಡ 8.25 ಬಡ್ಡಿ ದರ
ಸ್ವ ಉದ್ಯೋಗಿಗಳು: ಹೋಮ್‌ ಲೋನ್‌ ಟಾಪ್‌ ಅಪ್‌, ಶೇಕಡ 8.25 ಬಡ್ಡಿ ದರ

 ಟಾಟಾ ಕ್ಯಾಪಿಟಲ್‌ ಲಿಮಿಡೆಟ್‌ನಲ್ಲಿ ಗೃಹ ಸಾಲದ ಬಡ್ಡಿ ದರ ಎಷ್ಟು?

ಟಾಟಾ ಕ್ಯಾಪಿಟಲ್‌ ಲಿಮಿಡೆಟ್‌ನಲ್ಲಿ ಗೃಹ ಸಾಲದ ಬಡ್ಡಿ ದರ ಎಷ್ಟು?

ಟಾಟಾ ಕ್ಯಾಪಿಟಲ್ ಲಿಮಿಡೆಟ್‌ ಪ್ರಸ್ತುತ ಗೃಹ ಸಾಲದ ಮೇಲೆ ಈ ಕೆಳಗಿನ ದರಗಳನ್ನು ಅನುಕ್ರಮವಾಗಿ ನೀಡುತ್ತದೆ. ಕೇವಲ ಶೇಕಡ 6.90 ರಿಂದ ಬಡ್ಡಿ ದರ ಆರಂಭವಾಗುತ್ತದೆ.

ಸಂಬಳ ಪಡೆಯುವವರು ಎಷ್ಟೇ ಸಾಲ ಪಡೆಯುವುದಾದರೂ ಶೇ. 6.90 ದಿಂದ ಬಡ್ಡಿ ದರ ಆರಂಭ
ಸ್ವ ಉದ್ಯೋಗಿಗಳು ಎಷ್ಟೇ ಸಾಲ ಪಡೆಯುವುದಾದರೂ ಶೇ. 6.90 ದಿಂದ ಬಡ್ಡಿ ದರ ಆರಂಭ

ಬ್ಯಾಂಕ್ ಲಾಕರ್‌ಗಳಿಗೆ ಹೊಸ ನಿಯಮ ಜಾರಿಗೆ ತಂದ RBI: ಮಿಸ್‌ ಮಾಡದೆ ಓದಿಬ್ಯಾಂಕ್ ಲಾಕರ್‌ಗಳಿಗೆ ಹೊಸ ನಿಯಮ ಜಾರಿಗೆ ತಂದ RBI: ಮಿಸ್‌ ಮಾಡದೆ ಓದಿ

ಹೋಮ್‌ ಇಕ್ವಿಟಿ ಸಂಬಳ ಪಡೆಯುವವರು ಹಾಗೂ ಸ್ವ ಉದ್ಯೋಗಿಗಳು ಎಷ್ಟೇ ಸಾಲ ಪಡೆಯುವುದಾದರೂ ಶೇಕಡ 10.10 ದಿಂದ ಬಡ್ಡಿ ದರ ಆರಂಭ

 ಪಿಎನ್‌ಬಿ ಹೌಸಿಂಗ್‌ ಫಿನಾನ್ಸ್‌ ಲಿಮಿಟೆಡ್‌ನಲ್ಲಿ ಗೃಹ ಸಾಲದ ಬಡ್ಡಿ ದರ ಎಷ್ಟು?

ಪಿಎನ್‌ಬಿ ಹೌಸಿಂಗ್‌ ಫಿನಾನ್ಸ್‌ ಲಿಮಿಟೆಡ್‌ನಲ್ಲಿ ಗೃಹ ಸಾಲದ ಬಡ್ಡಿ ದರ ಎಷ್ಟು?

25 ಫೆಬ್ರವರಿ 2021 ರಿಂದ ಚಾಲ್ತಿಯಲ್ಲಿರುವ ಪಿಎನ್‌ಬಿ ಹೌಸಿಂಗ್‌ ಫಿನಾನ್ಸ್‌ ಲಿಮಿಟೆಡ್‌ನ ಗೃಹ ಸಾಲಗಳ ಮೇಲಿನ ಬದಲಾಗುತ್ತಿರುವ ಬಡ್ಡಿದರಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

35 ಲಕ್ಷದವರೆಗಿನ ಸಾಲ: ಕ್ರೆಡಿಟ್‌ ಸ್ಕೋರ್‌ 800, ಸ್ವ ಉದ್ಯೋಗಿಗಳು ಮತ್ತು ಸಂಬಳ ಪಡೆಯುವವರು ಶೇಕಡ 7.35 ರಿಂದ 7.85, ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಶೇಕಡ 7.55 ರಿಂದ 8.05
35 ಲಕ್ಷದವರೆಗಿನ ಸಾಲ: ಕ್ರೆಡಿಟ್‌ ಸ್ಕೋರ್‌ 750-800, ಸ್ವ ಉದ್ಯೋಗಿಗಳು ಮತ್ತು ಸಂಬಳ ಪಡೆಯುವವರು ಶೇಕಡ 7.55 ರಿಂದ 8.05, ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಶೇಕಡ 7.65 ರಿಂದ 8.15
35 ಲಕ್ಷದವರೆಗಿನ ಸಾಲ: ಕ್ರೆಡಿಟ್‌ ಸ್ಕೋರ್‌ 700-750, ಸ್ವ ಉದ್ಯೋಗಿಗಳು ಮತ್ತು ಸಂಬಳ ಪಡೆಯುವವರು ಶೇಕಡ 7.95 ರಿಂದ 8.45, ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಶೇಕಡ 8.35 ರಿಂದ 8.85
35 ಲಕ್ಷದವರೆಗಿನ ಸಾಲ: ಕ್ರೆಡಿಟ್‌ ಸ್ಕೋರ್‌ 650-700, ಸ್ವ ಉದ್ಯೋಗಿಗಳು ಮತ್ತು ಸಂಬಳ ಪಡೆಯುವವರು ಶೇಕಡ 8.35 ರಿಂದ 8.85, ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಶೇಕಡ 8.60 ರಿಂದ 9.10
35 ಲಕ್ಷದವರೆಗಿನ ಸಾಲ: ಕ್ರೆಡಿಟ್‌ ಸ್ಕೋರ್‌ 650 ರವರೆ, ಸ್ವ ಉದ್ಯೋಗಿಗಳು ಮತ್ತು ಸಂಬಳ ಪಡೆಯುವವರು ಶೇಕಡ 8.55 ರಿಂದ 9.05, ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಶೇಕಡ 8.85 ರಿಂದ 9.35
35 ಲಕ್ಷದವರೆಗಿನ ಸಾಲ: ಕ್ರೆಡಿಟ್‌ ಸ್ಕೋರ್‌ 0 ಗಿಂತ ಕಡಿಮೆ, ಸ್ವ ಉದ್ಯೋಗಿಗಳು ಮತ್ತು ಸಂಬಳ ಪಡೆಯುವವರು ಶೇಕಡ 8.55 ರಿಂದ 9.05, ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಶೇಕಡ 8.85 ರಿಂದ 9.35

35 ಲಕ್ಷಕ್ಕಿಂತ ಅಧಿಕ ಸಾಲ: ಕ್ರೆಡಿಟ್‌ ಸ್ಕೋರ್‌ 800, ಸ್ವ ಉದ್ಯೋಗಿಗಳು ಮತ್ತು ಸಂಬಳ ಪಡೆಯುವವರು ಶೇಕಡ 7.70 ರಿಂದ 8.20, ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಶೇಕಡ 7.90 ರಿಂದ 8.40
35 ಲಕ್ಷಕ್ಕಿಂತ ಅಧಿಕ ಸಾಲ: ಕ್ರೆಡಿಟ್‌ ಸ್ಕೋರ್‌ 750-800, ಸ್ವ ಉದ್ಯೋಗಿಗಳು ಮತ್ತು ಸಂಬಳ ಪಡೆಯುವವರು ಶೇಕಡ 7.85 ರಿಂದ 8.35, ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಶೇಕಡ 7.95 ರಿಂದ 8.45
35 ಲಕ್ಷಕ್ಕಿಂತ ಅಧಿಕ ಸಾಲ: ಕ್ರೆಡಿಟ್‌ ಸ್ಕೋರ್‌ 700-750, ಸ್ವ ಉದ್ಯೋಗಿಗಳು ಮತ್ತು ಸಂಬಳ ಪಡೆಯುವವರು ಶೇಕಡ 7.05 ರಿಂದ 8.55, ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಶೇಕಡ 8.55 ರಿಂದ 9.05
35 ಲಕ್ಷಕ್ಕಿಂತ ಅಧಿಕ ಸಾಲ: ಕ್ರೆಡಿಟ್‌ ಸ್ಕೋರ್‌ 650-700, ಸ್ವ ಉದ್ಯೋಗಿಗಳು ಮತ್ತು ಸಂಬಳ ಪಡೆಯುವವರು ಶೇಕಡ 8.55 ರಿಂದ 9.05, ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಶೇಕಡ 8.80 ರಿಂದ 9.30
35 ಲಕ್ಷಕ್ಕಿಂತ ಅಧಿಕ ಸಾಲ: ಕ್ರೆಡಿಟ್‌ ಸ್ಕೋರ್‌ 650 ರವರೆ, ಸ್ವ ಉದ್ಯೋಗಿಗಳು ಮತ್ತು ಸಂಬಳ ಪಡೆಯುವವರು ಶೇಕಡ 8.75 ರಿಂದ 9.25, ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಶೇಕಡ 9.05 ರಿಂದ 9.55
35 ಲಕ್ಷಕ್ಕಿಂತ ಅಧಿಕ ಸಾಲ: ಕ್ರೆಡಿಟ್‌ ಸ್ಕೋರ್‌ 0 ಗಿಂತ ಕಡಿಮೆ, ಸ್ವ ಉದ್ಯೋಗಿಗಳು ಮತ್ತು ಸಂಬಳ ಪಡೆಯುವವರು ಶೇಕಡ 8.75 ರಿಂದ 9.25, ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಶೇಕಡ 9.05 ರಿಂದ 9.55

 

English summary

These Housing Finance Companies Offers Cheapest Rates On Home Loans In 2021

These Housing Finance Companies Offers Cheapest Rates On Home Loans In 2021. Details here in Kannada Read on.
Story first published: Friday, August 20, 2021, 19:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X