For Quick Alerts
ALLOW NOTIFICATIONS  
For Daily Alerts

ಗಮನಿಸಿ: ಡಿ. 31 ಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿಬಿಡಿ

|

ನಾವು 2022 ರ ಹೊಸ ವರ್ಷಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳು ಇದೆ. ಆದರೆ ಹೊಸ ವರ್ಷ ಬರುವುದಕ್ಕೂ ಮುನ್ನ ನೀವು ಮುಗಿಸಬೇಕಾದ ಹಲವಾರು ಪ್ರಮುಖ ಕೆಲಸಗಳು ಇದೆ. ಇನ್ನು ಕೆಲವೇ ಒಂದು ವಾರವಷ್ಟೇ ಇದೆ. ಈ ಹಿನ್ನೆಲೆಯಿಂದಾಗಿ ಈಗಲೇ ಮುಂದಿನ ತಿಂಗಳು ಆರಂಭಕ್ಕೂ ಮುನ್ನ ಈ ಕಾರ್ಯವನ್ನು ಮಾಡಿ ಮುಗಿಸಿಬಿಡಿ.

ಒಂದು ವೇಳೆ ನೀವು ಈ ವರ್ಷ ಅಂತ್ಯ ಅಂದರೆ ಈ ತಿಂಗಳ ಅಂತ್ಯದೊಳಗೆ ಈ ಕಾರ್ಯಗಳನ್ನು ಸಂಪೂರ್ಣ ಮಾಡದಿದ್ದರೆ ನಿಮಗೆ ಹಲವಾರು ಅಡೆತಡೆಗಳು ಉಂಟಾಗಲಿದೆ ಅಥವಾ ನೀವು ದಂಡವನ್ನು ಕೂಡಾ ತೆರಬೇಕಾಗುತ್ತದೆ. ನೀವು ಡಿಸೆಂಬರ್‌ ಅಂತ್ಯವಾಗುವುದಕ್ಕೂ ಮುನ್ನ ಯಾವೆಲ್ಲಾ ಕಾರ್ಯಗಳನ್ನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....

ಐಟಿ ರಿಟರ್ನ್ ಫೈಲಿಂಗ್: ಇಲ್ಲಿದೆ ತೆರಿಗೆದಾರರಿಗೆ ITR 1, ITR 2 ವಿವರಐಟಿ ರಿಟರ್ನ್ ಫೈಲಿಂಗ್: ಇಲ್ಲಿದೆ ತೆರಿಗೆದಾರರಿಗೆ ITR 1, ITR 2 ವಿವರ

 ಆದಾಯ ತೆರಿಗೆ ರಿಟರ್ನ್ ಫೈಲಿಂಗ್‌

ಆದಾಯ ತೆರಿಗೆ ರಿಟರ್ನ್ ಫೈಲಿಂಗ್‌

ಈ ವರ್ಷದುದ್ದಕ್ಕೂ ಕೊರೊನಾ ವೈರಸ್‌ ಸಾಂಕ್ರಾಮಿಕ ಮೊದಲಾದ ಕಾರಣಗಳಿಂದ ಹಲವಾರು ಬಾರಿ ಆದಾಯ ತೆರಿಗೆ ರಿಟರ್ನ್ ಫೈಲಿಂಗ್‌ ಕೊನೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ಆದರೆ ಈಗ ನೀವು ಐಟಿ ರಿಟರ್ನ್ ಅನ್ನು ಸಲ್ಲಿಕೆ ಮಾಡಲೇ ಬೇಕಾದ ಕೊನೆಯ ದಿನ ಹತ್ತಿರವಾಗುತ್ತಿದೆ. ಹೌದು ನೀವು ಡಿಸೆಂಬರ್‌ 31, 2021 ಕ್ಕೂ ಮುನ್ನ ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಬೇಕು. ಪ್ರಾಯಶಃ ಇನ್ನೂ ಹೆಚ್ಚು ಕಾಲ ಈ ಆದಾಯ ತೆರಿಗೆ ರಿಟರ್ನ್ ಫೈಲಿಂಗ್‌ ಕೊನೆಯ ದಿನಾಂಕ ವಿಸ್ತರಣೆ ಆಗುವ ಸಾಧ್ಯತೆ ಇಲ್ಲ. ಇನ್ನು ನೀವು ಕೊನೆಯ ದಿನಾಂಕಕ್ಕೂ ಮುನ್ನ ಐಟಿ ರಿಟರ್ನ್ ಸಲ್ಲಿಕೆ ಮಾಡದಿದ್ದರೆ, ಐದು ಸಾವಿರ ರೂಪಾಯಿ ದಂಡವನ್ನು ತೆರೆಬೇಕಾಗುತ್ತದೆ. ಆದ್ದರಿಂದಾಗಿ ಈಗಲೇ ಐಟಿ ರಿಟರ್ನ್ ಫೈಲ್‌ ಮಾಡುವುದು ಉ‌ತ್ತಮ. ಇನ್ನು ನೀವು ಮೊಬೈಲ್‌ನಲ್ಲೇ ಐಟಿ ರಿಟರ್ನ್ ಅನ್ನು ಸಲ್ಲಿಕೆ ಮಾಡಬಹುದು. ಜನರಿಗೆ ಸುಲಭ ಆಗುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯು ತನ್ನ ಎಲ್ಲಾ ಸೇವೆಗಳನ್ನು ಮತ್ತು ಆದಾಯ ತೆರಿಗೆ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೀಡಿದೆ. ಮೊಬೈಲ್‌ನಲ್ಲಿ ಯಾವುದೇ ಸಮಯದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸಬಹುದು. ಆದಾಯ ತೆರಿಗೆ ಇಲಾಖೆ ಈ ಮೊಬೈಲ್ ಅಪ್ಲಿಕೇಶನ್(Mobile App) ಅನ್ನು ಜೂನ್ 7, 2021 ರಂದು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಅನ್ನು ಆಪಲ್ ಆ್ಯಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಆನ್‌ಲೈನ್‌ ಮೂಲಕ ಜೀವನ ಪ್ರಮಾಣ ಪತ್ರ ಪಡೆಯುವುದು ಹೇಗೆ?ಆನ್‌ಲೈನ್‌ ಮೂಲಕ ಜೀವನ ಪ್ರಮಾಣ ಪತ್ರ ಪಡೆಯುವುದು ಹೇಗೆ?

 ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಿ

ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಿ

ಭಾರತದಲ್ಲಿ ಪಿಂಚಣಿದಾರರು ಪ್ರತಿ ವರ್ಷ ತಾವು ಜೀವಂತವಾಗಿರುವ ಸಾಕ್ಷಿಯಾಗಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬೇಕಾಗಿದೆ. ಪ್ರತಿ ವರ್ಷವೂ ಈ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಲು ನವೆಂಬರ್‌ 30 ಕೊನೆಯ ದಿನಾಂಕ ಆಗಿದೆ. ಒಂದು ವೇಳೆ ಪಿಂಚಣಿದಾರರು ಈ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡದಿದ್ದರೆ, ಪಿಂಚಣಿಯು ಸ್ಥಗಿತವಾಗುವ ಸಾಧ್ಯತೆ ಇದೆ. ಈ ವರ್ಷ ಕೊರೊನಾ ವೈರಸ್‌ ಸೋಂಕು ಕಾರಣದಿಂದಾಗಿ ಜೀವನ ಪ್ರಮಾಣ ಪತ್ರ ಸಲ್ಲಿಕೆಯ ಕೊನೆಯ ದಿನಾಂಕವನ್ನು ಡಿಸೆಂಬರ್‌ 31, 2021 ಕ್ಕೆ ವಿಸ್ತರಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಈ ಪ್ರಮಾಣ ಪತ್ರವನ್ನು ಈಗಲೇ ಸಲ್ಲಿಕೆ ಮಾಡಿಬಿಡಿ. ಇನ್ನು ನೀವು ವಿಡಿಯೋ ಕರೆ, ಡಿಜಿಟಲ್‌ ಮೂಲಕವಾಗಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡುವ ಅವಕಾಶವಿದೆ.

 ಡಿಮ್ಯಾಟ್‌ ಖಾತೆಯ ಕೆವೈಸಿ ಮಾಡಿಸಿಕೊಳ್ಳಿ

ಡಿಮ್ಯಾಟ್‌ ಖಾತೆಯ ಕೆವೈಸಿ ಮಾಡಿಸಿಕೊಳ್ಳಿ

ಸೆಕ್ಯೂರಿಟಿ ಎಕ್ಸ್‌ಚೇಂಜ್‌ ಬೋರ್ಡ್ ಆಫ್‌ ಇಂಡಿಯಾ (ಸೆಬಿ) ಈ ಹಿಂದೆ ಡಿಮ್ಯಾಟ್‌ ಖಾತೆಗೆ ಕೆವೈಸಿ ಮಾಡಿಸಿಕೊಳ್ಳುವ ಕೊನೆಯ ದಿನಾಂಕವನ್ನು ಸೆಪ್ಟೆಂಬರ್‌ 30 ರಿಂದ ಡಿಸೆಂಬರ್‌ 31, 2021 ಕ್ಕೆ ವಿಸ್ತರಣೆ ಮಾಡಿದೆ. ಭಾರತದಲ್ಲಿ ಷೇರು ಮಾರುಕಟ್ಟೆದಾರರ ಸಂಖ್ಯೆಯು ಕೂಡಾ ಅಧಿಕವಾಗುತ್ತಿದೆ. ಒಂದು ವೇಳೆ ನೀವು ಅಂತಿಮ ದಿನಾಂಕಕ್ಕೂ ಮುನ್ನ ಕೆವೈಸಿಯನ್ನು ಮಾಡದಿದ್ದರೆ, ನಿಮ್ಮ ಡಿಮ್ಯಾಟ್‌ ಖಾತೆಯೇ ರದ್ದಾಗಬಹುದು. ಆದ್ದರಿಂದಾಗಿ ಶೀಘ್ರವೇ ಡಿಮ್ಯಾಟ್‌ ಖಾತೆಗೆ ಕೆವೈಸಿ ಮಾಡಿಸಿಕೊಳ್ಳಿ.

 ಆಧಾರ್‌ ಸಂಖ್ಯೆ ಮತ್ತು ಯುಎಎನ್‌ ಲಿಂಕ್‌

ಆಧಾರ್‌ ಸಂಖ್ಯೆ ಮತ್ತು ಯುಎಎನ್‌ ಲಿಂಕ್‌

ಆಧಾರ್‌ ಸಂಖ್ಯೆಗೆ ಯುನಿವರ್ಸಲ್‌ ಅಕೌಂಟ್‌ ನಂಬರ್‌ (ಯುಎಎನ್‌) ಅನ್ನು ಲಿಂಕ್‌ ಮಾಡುವುದು ಉತ್ತರ ಭಾರತದ ಏಳು ರಾಜ್ಯಗಳಲ್ಲಿ ಡಿಸೆಂಬರ್‌ 31, 2021 ಕ್ಕೆ ಕೊನೆಯಾಗಲಿದೆ. ಬೇರೆ ರಾಜ್ಯಗಳಲ್ಲಿ ಕೊನೆಯ ದಿನಾಂಕವು ಸೆಪ್ಟೆಂಬರ್‌ 2021 ರಲ್ಲಿ ಕೊನೆಯಾಗಿದೆ. ಆಧಾರ್‌ ಸಂಖ್ಯೆಯೊಂದಿಗೆ ಯುನಿವರ್ಸಲ್‌ ಅಕೌಂಟ್‌ ನಂಬರ್‌ ಅನ್ನು ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಇದನ್ನು ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಕಡ್ಡಾಯಗೊಳಿಸಿದೆ.

English summary

Things You Need To Do Before December 31, 2021: Explained in Kannada

Things You Need To Do Before December 31, 2021: Explained in Kannada.
Story first published: Friday, December 24, 2021, 16:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X