For Quick Alerts
ALLOW NOTIFICATIONS  
For Daily Alerts

ಉಳಿತಾಯ ಖಾತೆಗೆ ಅತಿ ಹೆಚ್ಚಿನ ಬಡ್ಡಿ ನೀಡುವ ಖಾಸಗಿ ಬ್ಯಾಂಕುಗಳು

|

ಅಲ್ಪಾವಧಿಯ ಹೂಡಿಕೆದಾರರಿಗೆ, ಉಳಿತಾಯ ಖಾತೆ ಅಥವಾ ಹೆಚ್ಚಿನ ಬಡ್ಡಿ ಹೊಂದಿರುವ ಖಾತೆಯು ಸೂಕ್ತ ಆಯ್ಕೆಯಾಗಿರುತ್ತದೆ. ಕಡಿಮೆ ಅವಧಿಯಲ್ಲಿ ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೂ ಉತ್ತಮ ರಿಟರ್ನ್ ಬಯಸುವುದು ತಪ್ಪಲ್ಲ. ಉಳಿತಾಯ ಖಾತೆಗಳು ಕೂಡ ತುರ್ತು ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ.

 

ನೀವು ಉಳಿತಾಯ ಖಾತೆಯೊಂದಿಗೆ ನಿಮ್ಮ ಹೂಡಿಕೆಯ ಪ್ರಯಾಣವನ್ನು ಆರಂಭಿಸುವುದಾದರೆ, ಇಲ್ಲಿ ಹೆಚ್ಚಿನ ಬಡ್ಡಿ ದರ ನೀಡುವ ಟಾಪ್ 5 ಖಾಸಗಿ ಬ್ಯಾಂಕುಗಳು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಒಂದು ಲಕ್ಷ ರೂಪಾಯಿಯಿಂದ 10 ಕೋಟಿ ರೂಪಾಯಿವರೆಗೆ ಕಡಿಮೆ ಅವಧಿಯಲ್ಲಿ ಠೇವಣಿ ಇಡುವ ಗ್ರಾಹಕರಿಗೆ ಎಷ್ಟು ಬಡ್ಡಿ ಸಿಗಬಹುದು ಎಂಬುದನ್ನು ತಿಳಿಸಲಾಗಿದೆ.

ಡಿಸಿಬಿ ಬ್ಯಾಂಕ್ ಉಳಿತಾಯ ಖಾತೆ

ಡಿಸಿಬಿ ಬ್ಯಾಂಕ್ ಉಳಿತಾಯ ಖಾತೆ

10 ನೇ ಜೂನ್ 2021 ರಿಂದ ಜಾರಿಗೆ ಬರುವಂತೆ, ಡಿಸಿಬಿ ಬ್ಯಾಂಕ್ ಶೇ. 3 ರಿಂದ ಶೇ. 6.75ರಷ್ಟು ಉಳಿತಾಯ ಖಾತೆಗಳ ಬಡ್ಡಿದರಗಳನ್ನು ನೀಡುತ್ತದೆ. ಉಳಿತಾಯ ಖಾತೆಗಳಲ್ಲಿ ವಿವಿಧ ಠೇವಣಿ ಬಾಕಿಗಳ ಮೇಲೆ ಡಿಸಿಬಿ ಬ್ಯಾಂಕ್ ನೀಡುವ ಬಡ್ಡಿ ದರಗಳು ಇಲ್ಲಿವೆ.


1 ಲಕ್ಷದವರೆಗೆ ಬಡ್ಡಿ ದರ 3.00%
1 ಲಕ್ಷದ ಮೇಲೆ 1 ಕೋಟಿ ರೂಪಾಯಿ ಒಳಗೆ 4.00%
1 ಕೋಟಿ ರೂಪಾಯಿಯಿಂದ 2 ಕೋಟಿ ರೂಪಾಯಿವರೆಗೆ 6.75%
2 ಕೋಟಿ ರೂಪಾಯಿಗಳಿಂದ 5 ಕೋಟಿ ರೂಪಾಯಿಗೆ 6.75%
5 ಕೋಟಿ ರೂಪಾಯಿಗಳಿಂದ 10 ಕೋಟಿ ರೂಪಾಯಿ ಒಳಗೆ 6.75%
10 ಕೋಟಿ ರೂಪಾಯಿ ಮತ್ತು ಅದಕ್ಕೂ ಹೆಚ್ಚಿನ ಹಣಕ್ಕೆ 6.50%

 

ಆರ್‌ಬಿಎಲ್‌ ಬ್ಯಾಂಕ್

ಆರ್‌ಬಿಎಲ್‌ ಬ್ಯಾಂಕ್

RBL ಬ್ಯಾಂಕ್ ಜುಲೈ 2, 2021 ರಂತೆ ಈ ಕೆಳಗಿನ ಬಡ್ಡಿ ದರಗಳನ್ನು ಉಳಿತಾಯ ಖಾತೆಗಳಿಗೆ ನೀಡುತ್ತಿದೆ.

1 ಲಕ್ಷದವರೆಗೆ ಬಡ್ಡಿ ದರ 4.25%
1 ಲಕ್ಷ ರೂ. 10 ಲಕ್ಷ ರೂಪಾಯಿವರೆಗೆ 5.75%
10 ಲಕ್ಷದಿಂದ 3 ಕೋಟಿ ರೂಪಾಯಿವರೆಗೆ 6.25%
3 ಕೋಟಿಯಿಂದ 5 ಕೋಟಿ ರೂಪಾಯಿವರೆಗೆ 6.00%

 5 ವರ್ಷದ ಅವಧಿಗೆ 10 ಅತ್ಯುತ್ತಮ ಬಡ್ಡಿ ಸಿಗುವ ಎಫ್‌ಡಿ ಯೋಜನೆಗಳು 5 ವರ್ಷದ ಅವಧಿಗೆ 10 ಅತ್ಯುತ್ತಮ ಬಡ್ಡಿ ಸಿಗುವ ಎಫ್‌ಡಿ ಯೋಜನೆಗಳು

ಬಂಧನ್ ಬ್ಯಾಂಕ್
 

ಬಂಧನ್ ಬ್ಯಾಂಕ್

ಬಂಧನ್ ಬ್ಯಾಂಕಿನ ದೇಶೀಯ / ಅನಿವಾಸಿ ರೂಪಾಯಿ ಉಳಿತಾಯ ಠೇವಣಿ ಬಡ್ಡಿ ದರ ಪಟ್ಟಿ, ಜೂನ್ 7, 2021 ರಿಂದ ಜಾರಿಗೆ ಬರುತ್ತದೆ.

ದೈನಂದಿನ ಬ್ಯಾಲೆನ್ಸ್ 1 ಲಕ್ಷ ರೂಪಾಯಿವರೆಗೆ 3.00%
ದೈನಂದಿನ ಬ್ಯಾಲೆನ್ಸ್ 1 ಲಕ್ಷದಿಂದ 10 ಲಕ್ಷ ರೂಪಾಯಿವರೆಗೆ 4.00%
10 ಲಕ್ಷ ರೂಪಾಯಿಯಿಂದ 10 ಕೋಟಿ ರೂಪಾಯಿವರೆಗೆ 6.00%

 

ಯೆಸ್‌ ಬ್ಯಾಂಕ್

ಯೆಸ್‌ ಬ್ಯಾಂಕ್

ಮೇ 13, 2021 ರಿಂದ ಜಾರಿಗೆ ಬರುವಂತೆ, ಯೆಸ್ ಬ್ಯಾಂಕ್ ತನ್ನ ಉಳಿತಾಯ ಠೇವಣಿ ಬಡ್ಡಿದರವು ಈ ಕೆಳಗಿದೆ.

ದೈನಂದಿನ ಬ್ಯಾಲೆನ್ಸ್ 1 ಲಕ್ಷ ರೂಪಾಯಿವರೆಗೆ 4.00%
1 ಲಕ್ಷದಿಂದ 10 ಲಕ್ಷ ರೂಪಾಯಿವರೆಗೆ 4.50%
10 ಲಕ್ಷ ರೂಪಾಯಿಯಿಂದ 100 ಕೋಟಿ ರೂಪಾಯಿ 5.25%

ಬ್ಯಾಂಕ್‌ಗಳ ಫಿಕ್ಸೆಡ್ ಡೆಪಾಸಿಟ್‌ಗಿಂತ ಹೆಚ್ಚಿನ ಬಡ್ಡಿ ಇಲ್ಲಿ ಸಿಗುತ್ತೆ: 5 ವರ್ಷಕ್ಕೆ 6 ಲಕ್ಷ ರೂ. ಬಡ್ಡಿ ಹಣಬ್ಯಾಂಕ್‌ಗಳ ಫಿಕ್ಸೆಡ್ ಡೆಪಾಸಿಟ್‌ಗಿಂತ ಹೆಚ್ಚಿನ ಬಡ್ಡಿ ಇಲ್ಲಿ ಸಿಗುತ್ತೆ: 5 ವರ್ಷಕ್ಕೆ 6 ಲಕ್ಷ ರೂ. ಬಡ್ಡಿ ಹಣ

 

ಇಂಡಸ್‌ಇಂಡ್ ಬ್ಯಾಂಕ್

ಇಂಡಸ್‌ಇಂಡ್ ಬ್ಯಾಂಕ್

ಜುಲೈ 23, 2021 ರ ವೇಳೆಗೆ ಇಂಡಸ್ಇಂಡ್ ಬ್ಯಾಂಕ್ ದೇಶೀಯ ಮತ್ತು ಅನಿವಾಸಿ (NRO/NRE) ಗ್ರಾಹಕರಿಗೆ ಉಳಿತಾಯ ಖಾತೆಗಳ ಮೇಲೆ ಈ ಕೆಳಗಿನ ಬಡ್ಡಿದರಗಳನ್ನು ನೀಡುತ್ತಿದೆ.

ದೈನಂದಿನ ಬ್ಯಾಲೆನ್ಸ್ 10 ಲಕ್ಷ ರೂಪಾಯಿವರೆಗೆ 4.00%
ದೈನಂದಿನ ಬ್ಯಾಲೆನ್ಸ್ 10 ಲಕ್ಷ ರೂಪಾಯಿ ಮೇಲ್ಪಟ್ಟು 5.00%

 

English summary

Top 5 Private Banks Offering Higher Interest On Savings Accounts In 2021

These banks offering higher interest rates on savings accounts in 2021
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X