For Quick Alerts
ALLOW NOTIFICATIONS  
For Daily Alerts

Budget 2023: ಪೆಟ್ರೋಲ್, ಚಿನ್ನ, ಬಜೆಟ್ ಬಳಿಕ ಈ ವಸ್ತುಗಳು ದುಬಾರಿ?

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಈ ಆಡಳಿತಾವಧಿಯ ಕೊನೆಯ ಬಜೆಟ್ ಇದಾಗಿದ್ದು ಹಲವಾರು ನಿರೀಕ್ಷೆಗಳು ಇದೆ. ಈಗಾಗಲೇ ಬೇರೆ ಬೇರೆ ವಲಯಗಳು ತಮ್ಮ ಬಜೆಟ್ ನಿರೀಕ್ಷೆ, ಬೇಡಿಕೆಗಳನ್ನು ವ್ಯಕ್ತಪಡಿಸಿದೆ. ಆದರೆ ಬಜೆಟ್ ಬಳಿಕ ಈ ವಸ್ತುಗಳ ದರ ಹೆಚ್ಚಳವಾಗುವ ಸಾಧ್ಯತೆಯಿದೆ.

ಈಗಾಗಲೇ ಸಾಮಾನ್ಯ ಜನರ ಕೈಗೆಟುಕದ ವಸ್ತುಗಳಾಗಿರುವ, ಅತೀ ದುಬಾರಿಯಾಗುತ್ತಾ ಸಾಗುತ್ತಿರುವ ವಸ್ತುಗಳ ದರವನ್ನು ಸರ್ಕಾರವು ಬಜೆಟ್ ಬಳಿಕ ಹೆಚ್ಚಳ ಮಾಡುವ ಬಗ್ಗೆ ಸುದ್ದಿಗಳಾಗಿದೆ. ಇದರಲ್ಲಿ ಪ್ರಮುಖವಾಗಿ ಐಷಾರಾಮಿ ವಸ್ತುಗಳು ಇರಲಿದೆ ಎಂಬ ಮಾಹಿತಿಯಿದೆ. ಆದರೆ ಯಾವೆಲ್ಲ ವಸ್ತುಗಳ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿರಲಿಲ್ಲ. ಖಾಸಗಿ ವಿಮಾನ, ಹೆಲಿಕಾಫ್ಟರ್, ಜ್ಯುವೆಲ್ಲರಿಗಳು ದುಬಾರಿಯಾಗುವ ನಿರೀಕ್ಷೆ ವ್ಯಕ್ತವಾಗಿತ್ತು.

Union Budget 2023: ಜ್ಯುವೆಲ್ಲರಿ ಸೇರಿ 35 ವಸ್ತುಗಳ ಬೆಲೆ ಏರಿಕೆ ಸಾಧ್ಯತೆUnion Budget 2023: ಜ್ಯುವೆಲ್ಲರಿ ಸೇರಿ 35 ವಸ್ತುಗಳ ಬೆಲೆ ಏರಿಕೆ ಸಾಧ್ಯತೆ

ಪ್ರಸ್ತುತ ಲಭ್ಯವಾಗಿರುವ ಮಾಹಿತಿ ಪ್ರಕಾರ ಬಜೆಟ್ ಬಳಿಕ ಪ್ರಮುಖವಾಗಿ ನಮ್ಮ ದೈನಂದಿನ ವಹಿವಾಟಿಗೆ, ಓಡಾಟಕ್ಕೆ ಅಗತ್ಯವಾಗುವ ವಸ್ತುಗಳ ದರ ಕೂಡಾ ಹೆಚ್ಚಾಗುವ ಸಾಧ್ಯತೆಯಿದೆ. ಯಾವೆಲ್ಲ ವಸ್ತುಗಳು ಬಜೆಟ್ ಬಳಿಕ ಮತ್ತಷ್ಟು ದುಬಾರಿಯಾಗಲಿದೆ ಎಂದು ತಿಳಿಯೋಣ ಮುಂದೆ ಓದಿ.....

 ಇಂಧನ ಬೆಲೆ ಏರಿಕೆ

ಇಂಧನ ಬೆಲೆ ಏರಿಕೆ

ಬಜೆಟ್ ಬಳಿಕ ಇಂಧನ ಬೆಲೆಯು ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಈಗ ಬಜೆಟ್ ಬಳಿಕ ಮತ್ತೆ ಹೆಚ್ಚಾಗುವ ನಿರೀಕ್ಷೆಯಿದೆ. ಕಳೆದ ಹಲವಾರು ತಿಂಗಳುಗಳಿಂದ ಕಚ್ಚಾ ತೈಲ ದರವು ಏರಿಕೆಯಾಗುತ್ತಿದೆ. ಮುಂದಿನ ಹಣಕಾಸು ವರ್ಷವೂ ಕೂಡಾ ದರ ಏರುಗತಿಯಲ್ಲೇ ಸಾಗುವ ನಿರೀಕ್ಷೆಯಿದೆ. ಆದರೆ ಉಕ್ರೇನ್-ರಷ್ಯಾ ಯುದ್ಧ ಆರಂಭವಾದಾಗ ಹೆಚ್ಚಳವಾಗಿದ್ದಷ್ಟು ಕಚ್ಚಾ ತೈಲ ಬೆಲೆ ಈಗಿಲ್ಲ. ಆದರೂ ದರ ಹೆಚ್ಚಳವಾಗಿಯೇ ಇದೆ. ಇನ್ನು ಇಂಧನ ಬೆಲೆ ಹೆಚ್ಚಾದಂತೆ ಸಾರಿಗೆ ವೆಚ್ಚವೂ ಕೂಡಾ ಅಧಿಕವಾಗಲಿದೆ.

Budget 2023 for Middle Class ನಾನೂ ಮಧ್ಯಮ ವರ್ಗಕ್ಕೆ ಸೇರಿದವಳು, ಒತ್ತಡ ಅರ್ಥವಾಗುತ್ತೆ: ನಿರ್ಮಲಾ ಸೀತಾರಾಮನ್Budget 2023 for Middle Class ನಾನೂ ಮಧ್ಯಮ ವರ್ಗಕ್ಕೆ ಸೇರಿದವಳು, ಒತ್ತಡ ಅರ್ಥವಾಗುತ್ತೆ: ನಿರ್ಮಲಾ ಸೀತಾರಾಮನ್

 ಚಿನ್ನದ ಬೆಲೆ ಹೆಚ್ಚಳ

ಚಿನ್ನದ ಬೆಲೆ ಹೆಚ್ಚಳ

ಕಳೆದ ಹಲವಾರು ದಿನಗಳಿಂದ ದೇಶದಲ್ಲಿ ಚಿನ್ನದ ಬೆಲೆಯು ಹೆಚ್ಚಳವಾಗುತ್ತಿದೆ. ಕಳೆದ ವಾರ ಸತತ ಐದು ದಿನ ಬೆಲೆ ಏರಿಕೆಯಾಗಿದೆ. ಮುಂದಿನ ಹಣಕಾಸು ವರ್ಷದಲ್ಲೂ ಬಂಗಾರ ದರ ಏರಿಕೆಯಾಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಡಾಲರ್ ಹಾಗೂ ಚಿನ್ನದ ಮೌಲ್ಯವು ತದ್ವಿರುದ್ಧವಾಗಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದರೆ ಚಿನ್ನದ ಬೆಲೆ ಇಳಿಯುತ್ತದೆ. ಡಾಲರ್ ಮೌಲ್ಯ ಇಳಿದರೆ ಚಿನ್ನದ ಮೌಲ್ಯ ಏರುತ್ತದೆ. ಪ್ರಸ್ತುತ ಡಾಲರ್‌ ಮೌಲ್ಯ ಇಳಿಯುತ್ತಿದ್ದು, ಇದರಿಂದಾಗಿ ಚಿನ್ನ ದುಬಾರಿಯಾಗುತ್ತಿದೆ. ಬಜೆಟ್ ಬಳಿಕ ಆಮದು ಸುಂಕ ಏರಿಕೆಯಾಗುವ ಸಾಧ್ಯತೆಯಿಂದಾಗಿ ಚಿನ್ನದ ಬೆಲೆ ಇನ್ನಷ್ಟು ಏರುವ ನಿರೀಕ್ಷೆಯಿದೆ.

 ಐಷಾರಾಮಿ ವಸ್ತುಗಳ ಬೆಲೆ ಏರಿಕೆ

ಐಷಾರಾಮಿ ವಸ್ತುಗಳ ಬೆಲೆ ಏರಿಕೆ

ಮುಂದಿನ ಬಜೆಟ್‌ ಬಳಿಕ ಐಷಾರಾಮಿ ವಸ್ತುಗಳ ದರ ಏರಿಕೆಯಾಗುವ ನಿರೀಕ್ಷೆಯಿದೆ. ಬಜೆಟ್‌ನಲ್ಲಿ ಐಷಾರಾಮಿ ವಸ್ತುಗಳ ಮೇಲಿನ ತೆರಿಗೆಯನ್ನು ಸರ್ಕಾರವು ಏರಿಸುವ ಸಾಧ್ಯತೆಯಿದ್ದು ಇದರಿಂದಾಗಿ ದರ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಐಷಾರಾಮಿ ಕಾರುಗಳು, ವಾಚ್‌ಗಳು, ಡಿಸೈನ್‌ ಬಟ್ಟೆಗಳ ದರವು ಬಜೆಟ್ ಬಳಿಕ ಏರುವ ನಿರೀಕ್ಷೆಯಿದೆ. ಸರ್ಕಾರವು ಈ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲಿದೆ. ಇನ್ನು ಸರ್ಕಾರದ ಹೊಸ ನಿಯಮ ಮತ್ತು ತಯಾರಿಕ ವೆಚ್ಚ ಅಧಿಕವಾದ ಕಾರಣದಿಂದಾಗಿ ಈಗಾಗಲೇ ಕಾರುಗಳ ಸಂಸ್ಥೆಯು ದರ ಏರಿಕೆ ಘೋಷಿಸಿದೆ.

 ಕೆಲವು ವಸ್ತುಗಳ ದರ ಇಳಿಕೆ

ಕೆಲವು ವಸ್ತುಗಳ ದರ ಇಳಿಕೆ

ಕೇಂದ್ರ ಬಜೆಟ್ ಮುಂದಿನ ಕೆಲವೇ ವಾರಗಳಲ್ಲಿ ಮಂಡನೆಯಾಗಲಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಇಂಧನ, ಚಿನ್ನ, ಐಷಾರಾಮಿ ವಸ್ತುಗಳ ಬೆಲೆ ಏರಿಸುವ ಕ್ರಮಕ್ಕೆ ಮುಂದಾಗುವ ಸೂಚನೆಯಿದೆ. ಆದರೆ ಲೋಕಸಭೆ ಚುನಾವಣೆಗೂ ಮುನ್ನ ಬರುವ ಬಜೆಟ್ ಇದಾದ ಕಾರಣ ಗ್ರಾಹಕರಿಗೆ ಕೆಲವು ರಿಲೀಫ್ ನೀಡುವ ಘೋಷಣೆಯನ್ನು ಕೇಂದ್ರ ಸರ್ಕಾರವು ಮಾಡಬಹುದು. ಕೆಲವು ವಸ್ತುಗಳ ದರ ಇಳಿಸುವ ಕ್ರಮವನ್ನು ಸರ್ಕಾರ ಕೈಗೊಳ್ಳುವ ನಿರೀಕ್ಷೆಯಿದೆ. ಉದ್ಯೋಗ ಸೃಷ್ಟಿ ಮೇಲೆ ಕೊಂಚ ಅಧಿಕ ಗಮನ ಹರಿಸುವ ಸಾಧ್ಯತೆಯಿದೆ.

English summary

Union Budget 2023: Some Items May get Costlier After Budget, Here's List of Items

Union Budget 2023: Some Items May get Costlier After Budget. here's list of items which may see price hike after budget.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X