For Quick Alerts
ALLOW NOTIFICATIONS  
For Daily Alerts

ಬಜೆಟ್‌ 2022: ವೇತನ ಪಡೆಯುವ ವರ್ಗದ ಐದು ನಿರೀಕ್ಷೆಗಳು

|

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಅದಕ್ಕೆ ಇನ್ನು ಕೆಲವೇ ವಾರಗಳು ಇದೆ. ಈ ನಡುವೆ 2022 ರ ಬಜೆಟ್‌ನಲ್ಲಿ ಏನೆಲ್ಲಾ ಘೋಷಣೆ ಆಗಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಕಳೆದ ವರ್ಷ, ಹಣಕಾಸು ಸಚಿವರು ಬಜೆಟ್‌ ಘೋಷಣೆ ಮಾಡುವ ಮೂಲಕ ಕೆಲವೊಂದು ಸರಳ ನೀತಿಗಳನ್ನು ಜಾರಿಗೆ ತಂದಿದ್ದರು. ಸ್ವಾವಲಂಬಿ ಆರೋಗ್ಯಕರ ಭಾರತ ಯೋಜನೆಯಿಂದ ವಾಹನ ಸ್ಕ್ರ್ಯಾಪಿಂಗ್ ನೀತಿಯವರೆಗೆ ಸಾಮಾನ್ಯ ಜನರಿಗೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಮುಂಬರುವ ಯೋಜನೆಯಲ್ಲಿಯೂ ಹಲವಾರು ಯೋಜನೆಗಳನ್ನು ಮಾಡುವ ಸಾಧ್ಯತೆ ಇದೆ.

 ಬಜೆಟ್ 2022 ಮುಂದೂಡುವ ಅಗತ್ಯವಿಲ್ಲ: ಚುನಾವಣಾ ಆಯೋಗ ಮುಖ್ಯಸ್ಥ ಬಜೆಟ್ 2022 ಮುಂದೂಡುವ ಅಗತ್ಯವಿಲ್ಲ: ಚುನಾವಣಾ ಆಯೋಗ ಮುಖ್ಯಸ್ಥ

ಪ್ರತಿ ವರ್ಷದಂತೆ ಈ ವರ್ಷದ ಬಜೆಟ್‌ನಿಂದಲೂ ತೆರಿಗೆದಾರರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. 2022 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತೆರಿಗೆದಾರರಿಗೆ ಗರಿಷ್ಠ ಸಡಿಲಿಕೆಯನ್ನು ನೀಡಲು ಕೇಂದ್ರವು ಗಮನಹರಿಸುತ್ತಿದೆ. ಸಂಬಳ ಪಡೆಯುವ ವರ್ಗಕ್ಕೆ ಹಲವಾರು ಒಳ್ಳೆಯ ಸುದ್ದಿಗಳನ್ನು ಕೇಂದ್ರ ಬಜೆಟ್ ನೀಡುವ ನಿರೀಕ್ಷೆ ಇದೆ. ವೇತನ ಪಡೆಯುವ ವರ್ಗ ಈ ವರ್ಷದ ಬಜೆಟ್‌ನಿಂದ ಏನನ್ನು ನಿರೀಕ್ಷಿಸಬಹುದು.

 1 ಲಕ್ಷ ಸ್ಟ್ಯಾಂಡರ್ಡ್ ಡಿಡಕ್ಷನ್

1 ಲಕ್ಷ ಸ್ಟ್ಯಾಂಡರ್ಡ್ ಡಿಡಕ್ಷನ್

ಪ್ರಸ್ತುತ, ಸೆಕ್ಷನ್ 16 ರ ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಸಂಬಳದ ವರ್ಗಗಳಿಗೆ 50,000 ರೂ.ಗೆ ನಿಗದಿಪಡಿಸಲಾಗಿದೆ. ಆದರೆ ಅದನ್ನು ಒಂದು ಲಕ್ಷ ರೂಪಾಯಿಗೆ ಏರಿಕೆ ಮಾಡಬೇಕು ಎಂದು ಜನರು ಒತ್ತಾಯ ಮಾಡಿದ್ದಾರೆ. ಮುಂಬರುವ ಯೂನಿಯನ್ ಬಜೆಟ್‌ನಲ್ಲಿ ಕಾರ್ಮಿಕ ವರ್ಗವು ಈ ನಿಟ್ಟಿನಲ್ಲಿ ಬದಲಾವಣೆಯನ್ನು ನಿರೀಕ್ಷಿಸುತ್ತಿದೆ. ಡೆಲಾಯ್ಟ್ ಇಂಡಿಯಾದ ಪೂರ್ವ-ಬಜೆಟ್ ನಿರೀಕ್ಷೆಗಳು 2022ರ ಪ್ರಕಾರ "ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಉದ್ಯೋಗಿಗಳು 'ವರ್ಕ್ ಫ್ರಮ್ ಹೋಮ್'ಗಾಗಿ ಅಧಿಕ ಖರ್ಚು ಮಾಡುತ್ತಿದ್ದಾರೆ. ಇಂಟರ್ನೆಟ್ ಶುಲ್ಕಗಳು, ಬಾಡಿಗೆ, ವಿದ್ಯುತ್, ಪೀಠೋಪಕರಣಗಳು ಇತ್ಯಾದಿಗಳಿಗೆ ಅಧಿಕ ಖರ್ಚನ್ನು ಉದ್ಯೋಗಿಗಳು ಮಾಡುತ್ತಿದ್ದಾರೆ. ಆದ್ದರಿಂದ, ಈ ವೆಚ್ಚಗಳನ್ನು ಪೂರೈಸಲು ಉದ್ಯೋಗದಾತರು ಭತ್ಯೆಗಳನ್ನು ಒದಗಿಸಬೇಕಾಗುತ್ತದೆ. ಸಂಬಳ ಪಡೆಯುವ ಉದ್ಯೋಗಿಗಳಿಗೆ 50,0000 ರೂ.ಗಳ ಹೆಚ್ಚುವರಿ 'ವರ್ಕ್ ಫ್ರಮ್ ಹೋಮ್' ಪ್ರಮಾಣಿತ ಕಡಿತವನ್ನು ಶಿಫಾರಸು ಮಾಡಲಾಗುತ್ತದೆ.

 ವರ್ಕ್ ಫ್ರಮ್‌ ಹೋಮ್‌ ಭತ್ಯೆ

ವರ್ಕ್ ಫ್ರಮ್‌ ಹೋಮ್‌ ಭತ್ಯೆ

ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಅನಿವಾರ್ಯವಾಗಿ ವರ್ಕ್ ಫ್ರಮ್‌ ಹೋಮ್‌ ಮಾಡಬೇಕಾಗಿದೆ. ಆದರೆ ಇದಕ್ಕಾಗಿ ಉದ್ಯೋಗಿಗಳೇ ವಿದ್ಯುತ್, ಇಂಟರ್ನೆಟ್ ಶುಲ್ಕಗಳು, ಬಾಡಿಗೆ, ಪೀಠೋಪಕರಣಗಳು ಇತ್ಯಾದಿಗಳ ವೆಚ್ಚವನ್ನು ಭರಿಸಬೇಕಾಗಿದೆ. ಅನೇಕ ಉದ್ಯೋಗದಾತರು ಉದ್ಯೋಗಿಗಳಿಗೆ ಮನೆಯಿಂದಲೇ ಕಚೇರಿ ಕೆಲಸಗಳನ್ನು ನಿರ್ವಹಿಸಲು ಭತ್ಯೆಗಳನ್ನು ನೀಡುತ್ತಿದ್ದಾರೆ. ಉದ್ಯೋಗಿಗಳಿಗೆ ದೊಡ್ಡ ಪರಿಹಾರ ನೀಡುವುದರಿಂದ ಅಂತಹ ಭತ್ಯೆಗಳನ್ನು ಆದಾಯ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಕೇಂದ್ರ ಬಜೆಟ್‌ನಲ್ಲೂ ಇದಕ್ಕೆ ಸಂಬಂಧಿಸಿದ ಕ್ರಮವನ್ನು ನಿರೀಕ್ಷಿಸಲಾಗಿದೆ.

 ವಿಮೆ, ಮೆಡಿಕ್ಲೈಮ್ ಮತ್ತು 80C ವಿನಾಯಿತಿ

ವಿಮೆ, ಮೆಡಿಕ್ಲೈಮ್ ಮತ್ತು 80C ವಿನಾಯಿತಿ

ಕೊರೊನಾ ವೈರಸ್‌ ಸಾಂಕ್ರಾಮಿಕದ ಮಧ್ಯೆ ಜೀವ ವಿಮೆಗಳ ಸಂಖ್ಯೆ ಮತ್ತು ಪ್ರಮಾಣವೂ ಹೆಚ್ಚಾಗಿದೆ. ಆದ್ದರಿಂದ, ತೆರಿಗೆದಾರರು ಈಗ ಈ ವಿಷಯದಲ್ಲಿ ವಿನಾಯಿತಿಯನ್ನು ನಿರೀಕ್ಷಿಸುತ್ತಿದ್ದಾರೆ. ಕೊರೊನಾ ಕಾರಣದಿಂದಾಗಿ ಪಡೆದ ವಿಮೆಯನ್ನು 5-10 ವರ್ಷಗಳವರೆಗೆ ತೆರಿಗೆ ಮುಕ್ತಗೊಳಿಸಲು ಬೇಡಿಕೆಯಿದೆ. ಮುಂಬರುವ ಬಜೆಟ್‌ನಲ್ಲಿ ಒಟ್ಟಾರೆ 80 ಸಿ ಮಿತಿಯನ್ನು ಹೆಚ್ಚಿಸಬಹುದು ಎಂದು ಜನರು ನಿರೀಕ್ಷಿಸುತ್ತಿದ್ದಾರೆ.

 ವಿಮೆ ಮೇಲಿನ ಜಿಎಸ್‌ಟಿ ವಿನಾಯಿತಿ

ವಿಮೆ ಮೇಲಿನ ಜಿಎಸ್‌ಟಿ ವಿನಾಯಿತಿ

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಉದ್ಯೋಗಿಗಳು ಅಥವಾ ತೆರಿಗೆದಾರರು ವಿಮೆ / ಮೆಡಿಕ್ಲೈಮ್ ಪ್ರೀಮಿಯಂನಲ್ಲಿ GST ಯಲ್ಲಿ ವಿನಾಯಿತಿಯನ್ನು ನಿರೀಕ್ಷಿಸುತ್ತಿದ್ದಾರೆ. ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ದೈನಿಕ್ ಜಾಗರಣ್ ವರದಿಯಲ್ಲಿ ಉಲ್ಲೇಖಿಸಿದಂತೆ, ಈ ಬೇಡಿಕೆಯನ್ನು ಬಜೆಟ್‌ನಲ್ಲಿ ಸೇರಿಸುವ ಸಾಧ್ಯತೆ ಇದೆ.

 ಹಿಂದೂ ಅವಿಭಜಿತ ಕುಟುಂಬಕ್ಕೆ ಏನಿದೆ ಪ್ರಯೋಜನ?

ಹಿಂದೂ ಅವಿಭಜಿತ ಕುಟುಂಬಕ್ಕೆ ಏನಿದೆ ಪ್ರಯೋಜನ?

ವೈಯಕ್ತಿಕ ತೆರಿಗೆದಾರರ ವಿಭಾಗದಲ್ಲಿ ಸೆಕ್ಷನ್ 87A ಅಡಿಯಲ್ಲಿ ಪ್ರಸ್ತುತ ಲಭ್ಯವಿರುವ ರಿಯಾಯಿತಿಯನ್ನು ಹಿಂದೂ ಅವಿಭಜಿತ ಕುಟುಂಬಕ್ಕೂ (ಹೆಚ್‌ಯುಎಫ್‌) ಲಭ್ಯವಾಗುವಂತೆ ಜನರು ಒತ್ತಾಯಿಸುತ್ತಿದ್ದಾರೆ. ಹಿಂದೂ ಅವಿಭಜಿತ ಕುಟುಂಬಕ್ಕೂ ಈ ಪ್ರಯೋಜನವನ್ನು ನೀಡಬೇಕು ಎಂದು ಬೇಡಿಕೆ ಇಡಲಾಗಿದ್ದು, ತೆರಿಗೆದಾರರು ಈ ಬಜೆಟ್‌ನಲ್ಲಿ ಇದನ್ನು ನಿರೀಕ್ಷಿಸಿದ್ದಾರೆ.

English summary

Union Budget: 5 things salaried class expect from this year's Budget

Union Budget: 5 things salaried class expect from this year's Budget.
Story first published: Thursday, January 13, 2022, 19:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X