For Quick Alerts
ALLOW NOTIFICATIONS  
For Daily Alerts

ಬಡ್ಡಿಗಳ ನಡುವಿನ ವ್ಯತ್ಯಾಸದ ಪರಿಹಾರ ಪಾವತಿಸುವ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

|

ನವದೆಹಲಿ, ಜನವರಿ 19: ನಿರ್ದಿಷ್ಟ ಸಾಲದ ಖಾತೆಗಳಲ್ಲಿ ಸಾಲ ಪಡೆದವರಿಗೆ ಆರು ತಿಂಗಳ ಕಾಲ (ಮಾರ್ಚ್ 1, 2020ರಿಂದ ಆಗಸ್ಟ್ 31, 2020) ರವರೆಗೆ ಚಕ್ರಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸದ ಪರಿಹಾರ ಪಾವತಿ ಯೋಜನೆಯ ಅಡಿಯಲ್ಲಿ ಪರಿಹಾರ ಪಾವತಿಸುವ ಕುರಿತ ಸಾಲ ನೀಡುವ ಸಂಸ್ಥೆಗಳು (ಎಲ್.ಐಗಳು) ಸಲ್ಲಿಸಿದ ಉಳಿಕೆ ಕ್ಲೇಮ್‌ಗಳಿಗೆ ಸಂಬಂಧಿಸಿದಂತೆ 973.74 ಕೋಟಿ ರೂ. ಪರಿಹಾರದ ಮೊತ್ತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

 

ಪ್ರಯೋಜನಗಳೇನು?
ಸಾಲಪಡೆದವರು ಆರು ತಿಂಗಳುಗಳ ಕಾಲ ಸಾಲದ ಕಂತು ಪಾವತಿಯಿಂದ ವಿನಾಯಿತಿ ನೀಡಿದ್ದ (ಮೊರಟೋರಿಯಂ) ಅವಧಿಯಲ್ಲಿ ಅದರ ಪ್ರಯೋಜನ ಪಡೆದಿರಲಿ ಅಥವಾ ಇಲ್ಲದಿರಲಿ, ಒಟ್ಟಾರೆ ಸಂಕಷ್ಟದಲ್ಲಿರುವ/ ದುರ್ಬಲ ವರ್ಗದ ಸಾಲಗಾರರಿಗೆ ಮೊರಟೋರಿಯಂ ಅವಧಿಯಲ್ಲಿನ ಚಕ್ರಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸದ ಪರಿಹಾರ ಪಾವತಿ ಮಾಡುವ ಮೂಲಕ, ಸಣ್ಣ ಸಾಲಗಾರರಿಗೆ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಉಂಟಾದ ಒತ್ತಡವನ್ನು ತಡೆದುಕೊಳ್ಳಲು ಮತ್ತು ತಮ್ಮ ಕಾಲ ಮೇಲೆ ತಾವು ಮರಳಿ ನಿಲ್ಲಲು ಯೋಜನೆಯು ಸಹಾಯ ಮಾಡುತ್ತದೆ.

 

ಕೇಂದ್ರ ಸಚಿವ ಸಂಪುಟದ ಅನುಮೋದನೆಯೊಂದಿಗೆ ಯೋಜನೆಗೆ ಕಾರ್ಯವಿಧಾನದ ಮಾರ್ಗಸೂಚಿಗಳನ್ನು ಈಗಾಗಲೇ ನೀಡಲಾಗಿದೆ. ಉಲ್ಲೇಖಿತ ಮೊತ್ತ 973.74 ಕೋಟಿ ರೂ.ಗಳನ್ನು ಈ ಕಾರ್ಯಾಚರಣೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಿತರಿಸಲಾಗುವುದು.

ಬಡ್ಡಿಗಳ ವ್ಯತ್ಯಾಸ ಪರಿಹಾರ ಪಾವತಿಸುವ ಯೋಜನೆಗೆ ಅನುಮೋದನೆ

ಹಿನ್ನೆಲೆ ಏನು?
2020ರ ಅಕ್ಟೋಬರ್‌ನಲ್ಲಿ ಸಂಪುಟವು ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ, "ನಿರ್ದಿಷ್ಟ ಸಾಲದ ಖಾತೆಗಳಲ್ಲಿ (1.3.2020 ರಿಂದ 31.8.2020) ಸಾಲಪಡೆದವರಿಗೆ ಆರು ತಿಂಗಳ ಕಾಲ ಚಕ್ರಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸದ ಪರಿಹಾರ ಪಾವತಿ ಮಾಡುವ ಯೋಜನೆ'ಗೆ 5,500 ಕೋಟಿ ರೂ. ಅನುಮೋದಿಸಿತ್ತು. ಕೆಳಗಿನ ಪ್ರವರ್ಗದ ಸಾಲಗಾರರು ಯೋಜನೆಯಡಿಯಲ್ಲಿ ಪರಿಹಾರ ಪಡೆಯಲು ಅರ್ಹರಾಗಿದ್ದರು.

* 2 ಕೋಟಿ ರೂ.ವರೆಗಿನ ಎಂ.ಎಸ್.ಎಂ.ಇ. ಸಾಲಗಳು

* 2 ಕೋಟಿ ರೂ.ವರೆಗಿನ ಶೈಕ್ಷಣಿಕ ಸಾಲಗಳು

* 2 ಕೋಟಿ ರೂ.ವರೆಗಿನ ಗೃಹ ಸಾಲಗಳು

* 2 ಕೋಟಿ ರೂ.ವರೆಗಿನ ಗ್ರಾಹಕ ಬಳಕೆ ವಸ್ತು ಸಾಲಗಳು.

* 2 ಕೋಟಿ ರೂ.ವರೆಗಿನ ಕ್ರೆಡಿಟ್ ಕಾರ್ಡ್ ಬಾಕಿಗಳು

* 2 ಕೋಟಿ ರೂ.ವರೆಗಿನ ವಾಹನ ಸಾಲಗಳು

* 2 ಕೋಟಿ ರೂ.ವರೆಗಿನ ವೃತ್ತಿಪರರ ವೈಯಕ್ತಿಕ ಸಾಲಗಳು

* 2 ಕೋಟಿ ರೂ.ವರೆಗಿನ ಬಳಕೆ (ಕಂನ್ಸೆಂಷನ್) ಸಾಲಗಳು.

2020-2021ರ ಹಣಕಾಸು ವರ್ಷದ ಆಯವ್ಯಯದಲ್ಲಿ ಯೋಜನೆಗಾಗಿ 5,500 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು. ಸಂಪುಟ ಅನುಮೋದಿಸಿದ ಸಂಪೂರ್ಣ ಮೊತ್ತ 5,500 ಕೋಟಿ ರೂ.ಗಳನ್ನು ಯೋಜನೆಯಡಿಯಲ್ಲಿ ನೋಡಲ್ ಸಂಸ್ಥೆಯಾದ ಎಸ್‌ಬಿಐಗೆ ಸಾಲ ನೀಡುವ ಸಂಸ್ಥೆಗಳಿಗೆ ಮರುಪಾವತಿಗಾಗಿ ವಿತರಿಸಲಾಗಿತ್ತು.

ಬಡ್ಡಿಗಳ ವ್ಯತ್ಯಾಸ ಪರಿಹಾರ ಪಾವತಿಸುವ ಯೋಜನೆಗೆ ಅನುಮೋದನೆ

5,500 ಕೋಟಿ ರೂ.ಗಳ ಅಂದಾಜು ಮೊತ್ತವನ್ನು ಮೇಲೆ ತಿಳಿಸಿದ ಪ್ರವರ್ಗದ ಸಾಲಗಳಿಗೆ ಎಸ್‌ಬಿಐ ಮತ್ತು ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ಗಳ ಪಾಲನ್ನು ಕ್ರೋಡೀಕರಿಸುವ ಮಾಡುವ ಮೂಲಕ ಮಾಡಲಾಗಿತ್ತು. ಸಾಲ ನೀಡುವ ಸಂಸ್ಥೆಗಳು ವೈಯಕ್ತಿಕವಾಗಿ ತಮ್ಮ ಲೆಕ್ಕ ಪರಿಶೋಧನಾ ಪೂರ್ವ ಖಾತೆ-ವಾರು ಕ್ಲೇಮ್‌ಗಳನ್ನು ಸಲ್ಲಿಸಿದ ನಂತರ ನಿಜವಾದ ಮೊತ್ತವು ತಿಳಿಯುತ್ತದೆ ಎಂದು ಸಂಪುಟಕ್ಕೆ ತಿಳಿಸಲಾಗಿದೆ.

ಈಗ, ಸಾಲ ನೀಡುವ ಸಂಸ್ಥೆಗಳಿಂದ ಅಂದಾಜು 6,473.74 ಕೋಟಿ ರೂ.ಗಳ ಕ್ರೋಡೀಕೃತ ಕ್ಲೇಮ್‌ಗಳನ್ನು ತಾನು ಸ್ವೀಕರಿಸಿರುವುದಾಗಿ ಎಸ್‌ಬಿಐ ಮಾಹಿತಿ ನೀಡಿದೆ. ಈಗಾಗಲೇ 5,500 ಕೋಟಿ ರೂ.ಗಳನ್ನು ಎಸ್‌ಬಿಐಗೆ ವಿತರಿಸಲಾಗಿದೆ, ಈಗ ಬಾಕಿ ಮೊತ್ತ 973.74 ಕೋಟಿ ರೂ.ಗಳಿಗೆ ಸಂಪುಟದ ಅನುಮೋದನೆಯನ್ನು ಕೋರಲಾಗಿದೆ.

English summary

Union Cabinet Approves Scheme For Grant of Ex-gratia Payment of Difference Between Interests

Union Cabinet approves Scheme for grant of ex-gratia payment of difference between compound interest and simple interest for six months to borrowers in specified loan accounts.
Story first published: Wednesday, January 19, 2022, 20:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X