For Quick Alerts
ALLOW NOTIFICATIONS  
For Daily Alerts

UPI Transactions in Dec 2022 : ಡಿಸೆಂಬರ್‌ನಲ್ಲಿ ದಾಖಲೆಯ 7.82 ಬಿಲಿಯನ್ ಯುಪಿಐ ವಹಿವಾಟು!

|

ದೇಶದಲ್ಲಿ ಯುಪಿಐ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಪ್ರತಿ ತಿಂಗಳು ಕೂಡಾ ಯುಪಿಐ ವಹಿವಾಟು ಹೆಚ್ಚಳವಾಗುತ್ತಿದೆ. ಇನ್ನು ವಹಿವಾಟಿನ ಮೊತ್ತವು ಕೂಡಾ ಅಧಿಕವಾಗುತ್ತಿದೆ. ಭಾರತದಲ್ಲಿ ಯುಪಿಐ ಆರಂಭವಾದ ಬಳಿಕ ಮೊದಲ ಬಾರಿಗೆ ಡಿಸೆಂಬರ್‌ನಲ್ಲಿ ಮತ್ತೆ ದಾಖಲೆ ಪ್ರಮಾಣದಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ವಹಿವಾಟು ನಡೆದಿದೆ.

 

2022ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ದಾಖಲೆಯ 7.82 ಬಿಲಿಯನ್ ವಹಿವಾಟು ನಡೆದಿದೆ. ಅಂದರೆ ಸುಮಾರು 12.82 ಟ್ರಿಲಿಯನ್ ರೂಪಾಯಿ ವಹಿವಾಟು ನಡೆದಿದೆ. ನ್ಯಾಷನಲ್ ಪೇಮೆಂಟ್ಸ್ ಕಾಪೋರೇಟಿವ್ ಆಫ್ ಇಂಡಿಯಾ (ಎನ್‌ಪಿಸಿಐ) ಡೇಟಾವನ್ನು ಬಿಡುಗಡೆ ಮಾಡಿದೆ. ವಹಿವಾಟಿನ ಮೌಲ್ಯವು ಶೇಕಡ 7.73ರಷ್ಟು ಏರಿಕೆಯಾಗಿದೆ.

ವರ್ಷದಿಂದ ವರ್ಷದ ಲೆಕ್ಕಾಚಾರವನ್ನು ನಾವು ನೋಡಿದಾಗ ಅಂದರೆ ಕಳೆದ ವರ್ಷದ ಡಿಸೆಂಬರ್‌ಗೆ ಹೋಲಿಸಿದರೆ ಈ ವರ್ಷದ ಡಿಸೆಂಬರ್‌ನಲ್ಲಿ ವಹಿವಾಟು ಶೇಕಡ 71ರಷ್ಟು ಅಧಿಕವಾಗಿದೆ. ಹಾಗೆಯೇ ವಹಿವಾಟು ಮೌಲ್ಯವು ಶೇಕಡ 55ರಷ್ಟು ಏರಿಕೆಯಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

 2022ರಲ್ಲಿ ಎಷ್ಟು ಯುಪಿಐ ವಹಿವಾಟು?

2022ರಲ್ಲಿ ಎಷ್ಟು ಯುಪಿಐ ವಹಿವಾಟು?

ಕಳೆದ ಎರಡು ವರ್ಷದಿಂದ ಯುಪಿಐ ವಹಿವಾಟು ಏರುಗತಿಯಲ್ಲೇ ಸಾಗುತ್ತಿದೆ. ಆದರೆ ನಡುವೆ ಕೆಲವು ತಿಂಗಳು ಕೊಂಚ ವಹಿವಾಟು ಇಳಿದಿದೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಇದ್ದ ನಿರ್ಬಂಧಗಳ ಸಂದರ್ಭದಲ್ಲಿ ಕೊಂಚ ವಹಿವಾಟು ಕುಗ್ಗಿತ್ತು. ಆದರೆ ಅದಾದ ಬಳಿಕ ಯುಪಿಐ ವಹಿವಾಟು ಅಧಿಕವಾಗುತ್ತಲೇ ಸಾಗಿದೆ. 2022ರಲ್ಲಿ 74 ಬಿಲಿಯನ್ ಯುಪಿಐ ವಹಿವಾಟು ನಡೆದಿದೆ. ಸುಮಾರು 125.94 ಟ್ರಿಲಿಯನ್ ರೂಪಾಯಿ ವಹಿವಾಟು ನಡೆದಿದೆ. 2021ರಲ್ಲಿ 71.54 ಟ್ರಿಲಿಯನ್ ರೂಪಾಯಿ ಮೌಲ್ಯದ 38 ಬಿಲಿಯನ್ ವಹಿವಾಟು ನಡೆದಿದೆ. ಒಂದು ವರ್ಷದಲ್ಲೇ ಯುಪಿಐ ವಹಿವಾಟು ಶೇಕಡ 90ರಷ್ಟು ಏರಿಕೆಯಾಗಿದೆ. ಹಾಗೆಯೇ ವಹಿವಾಟು ಮೌಲ್ಯವು ಶೇಕಡ 76ರಷ್ಟು ಹೆಚ್ಚಾಗಿದೆ.

 ಮೊದಲ ಬಾರಿಗೆ ಬಿಲಿಯನ್ ವಹಿವಾಟು ಯಾವಾಗ ನಡೆದಿದ್ದು?

ಮೊದಲ ಬಾರಿಗೆ ಬಿಲಿಯನ್ ವಹಿವಾಟು ಯಾವಾಗ ನಡೆದಿದ್ದು?

ಮೊದಲ ಬಾರಿಗೆ ಬಿಲಿಯನ್ ವಹಿವಾಟು ಅಕ್ಟೋಬರ್ 2019ರಲ್ಲಿ ನಡೆದಿದೆ. 2016ರಲ್ಲಿ ಯುಪಿಐ ವಹಿವಾಟು ಆರಂಭವಾಗಿದ್ದು, ಇದಾದ ಮೂರು ವರ್ಷದ ಬಳಿಕ ಅಕ್ಟೋಬರ್ 2019ರಲ್ಲಿ ಯುಪಿಐ ವಹಿವಾಟು ಬಿಲಿಯನ್‌ಗೆ ತಲುಪಿದೆ. ಅದಾದ ಬಳಿಕ ನಿರಂತರವಾಗಿ ಬಿಲಿಯನ್ ವಹಿವಾಟು ನಡೆದಿದೆ. ಒಂದು ವರ್ಷದಲ್ಲೇ ಅಕ್ಟೋಬರ್ 2020ರಲ್ಲಿ 2 ಬಿಲಿಯನ್ ಯುಪಿಐ ವಹಿವಾಟು ನಡೆದಿದೆ. ಹಾಗೆಯೇ ಮುಂದಿನ 10 ತಿಂಗಳಿನಲ್ಲೇ 3 ಬಿಲಿಯನ್ ಯುಪಿಐ ವಹಿವಾಟು ನಡೆದಿದೆ. ಇದಾದ ಮೂರು ತಿಂಗಳಿನಲ್ಲಿಯೇ 4 ಬಿಲಿಯನ್ ವಹಿವಾಟು ನಡೆದಿದೆ. ಅದಾದ ಬಳಿಕ ಆರು ತಿಂಗಳಿನಲ್ಲಿಯೇ ಮತ್ತೆ ಒಂದು ಬಿಲಿಯನ್ ವಹಿವಾಟು ಏರಿಕೆಯಾಗಿದೆ. ಮುಂದಿನ ಮೂರು ತಿಂಗಳಿನಲ್ಲಿಯೇ 7 ಬಿಲಿಯನ್ ವಹಿವಾಟಿಗೆ ಹೆಚ್ಚಳವಾಗಿದೆ.

 2 ವರ್ಷದಿಂದ ಯುಪಿಐ ವಹಿವಾಟು ಏರಿಕೆ
 

2 ವರ್ಷದಿಂದ ಯುಪಿಐ ವಹಿವಾಟು ಏರಿಕೆ

ಯುಪಿಐ ವಹಿವಾಟು ಕಳೆದ ಎರಡು ವರ್ಷದಲ್ಲಿ ಭಾರೀ ಅಧಿಕವಾಗಿದೆ. ಜನರಿಂದ ಜನರಿಗೆ ವಹಿವಾಟಿಗಿಂತ ಅಧಿಕ ಜನರಿಂದ ವ್ಯಾಪಾರಿಗಳಿಗೆ ವಹಿವಾಟು ತೀರಾ ಹೆಚ್ಚಳವಾಗಿದೆ. ಆರಂಭದಲ್ಲಿ ಜನರು ಪರಸ್ಪರ ಹಣದ ವಹಿವಾಟು ನಡೆಸಲು ಯುಪಿಐ ಅನ್ನು ಬಳಸಲಾಗುತ್ತಿತ್ತು. ಆದರೆ ಬಳಿಕ ವ್ಯಾಪಾರಿಗಳಿಗೆ ಹಣವನ್ನು ನೀಡಲು ಯುಪಿಐ ವಹಿವಾಟನ್ನು ಬಳಸುವುದು ಅಧಿಕವಾಗಲು ಆರಂಭವಾಯಿತು. ಪ್ರಸ್ತುತ 5 ರೂಪಾಯಿಯ ವಸ್ತು ಖರೀದಿ ಮಾಡಿದರೂ ಯುಪಿಐ ವಹಿವಾಟು ನಡೆಸುವವರು ಅದೆಷ್ಟೋ ಮಂದಿ ಇದ್ದಾರೆ.

English summary

UPI Transactions in December 2022: UPI processes record 7.82 bn transactions, Details In Kannada

UPI Transactions in December 2022: In the calendar year 2022, UPI processed over 74 billion transactions, worth Rs 125.94 trillion, NPCI data showed. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X