For Quick Alerts
ALLOW NOTIFICATIONS  
For Daily Alerts

ವಾಲಂಟರಿ ಪ್ರಾವಿಡೆಂಟ್ ಫಂಡ್ (VPF) 4 ಅನುಕೂಲ, 3 ಲಾಭ

By ಅನಿಲ್ ಆಚಾರ್
|

"ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಕಡ್ಡಾಯ ಅನ್ನೋ ಕಾರಣಕ್ಕೆ ಮಾತ್ರ ಆ ನಿರ್ದಿಷ್ಟ ಮೊತ್ತವನ್ನು ಕಡಿತ ಮಾಡಲಿ ಅಂದುಕೊಂಡು ಸುಮ್ಮನಿದ್ದೀನಿ. ಅದರ ಮೇಲೆ ಒಂದು ರುಪಾಯಿ ಕೂಡ ಹೆಚ್ಚಿಗೆ ಕಡಿತ ಮಾಡಲು ಒಪ್ಪಲ್ಲ," ಎಂಬುದು ನಿಮ್ಮ ಧೋರಣೆಯೇ? ನಿಮಗೆ ಉಳಿತಾಯ ಮಾಡಲು ಸಾಧ್ಯವಿದ್ದರೂ ವಾಲಂಟರಿ ಪ್ರಾವಿಡೆಂಟ್ ಫಂಡ್ (ವಿಪಿಎಫ್) ಮೂಲಕ ಹಣ ಉಳಿತಾಯ ಮಾಡುತ್ತಿಲ್ಲ ಎಂದಾದಲ್ಲಿ ನೀವು ದೊಡ್ಡ ತಪ್ಪು ಮಾಡುತ್ತಿದ್ದೀರಿ ಅಂತಲೇ ಅರ್ಥ.

ನೀವು ಇಪಿಎಫ್ ಖಾತೆದಾರರಾಗಿದ್ದಲ್ಲಿ ಮೂಲವೇತನದ 12% ಮೊತ್ತವನ್ನು ವೇತನದಿಂದ ಕಡಿತ ಮಾಡಲಾಗುತ್ತದೆ. ಇದು ಕಡ್ಡಾಯ ಮೊತ್ತ. ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನೀವಾಗಿಯೇ ಹೇಳಿ ಇಪಿಎಫ್ ಗೆ ಜಮೆ ಮಾಡುತ್ತಾ ಹೋದರೆ, ಅದು ವಿಪಿಎಫ್. ಅರ್ಥಾತ್ ವಾಲಂಟರಿ ಪ್ರಾವಿಡೆಂಟ್ ಫಂಡ್.

SBI Yonoಗೆ ಲಾಗಿನ್ ಆಗದೆ ಬ್ಯಾಲೆನ್ಸ್ ಪರೀಕ್ಷಿಸಿ, ಪಾಸ್ ಬುಕ್ ನೋಡಿSBI Yonoಗೆ ಲಾಗಿನ್ ಆಗದೆ ಬ್ಯಾಲೆನ್ಸ್ ಪರೀಕ್ಷಿಸಿ, ಪಾಸ್ ಬುಕ್ ನೋಡಿ

ನಿಮಗೆ ಬರುವ ಮೂಲ ವೇತನ (ಬೇಸಿಕ್ ಸ್ಯಾಲರಿ) ಪೂರ್ತಿಯಾಗಿ ವಿಪಿಎಫ್ ಗೆ ಹೋಗುವಂತೆ ಮಾಡುವುದಕ್ಕೂ ಅವಕಾಶ ಇದೆ. ಏಕೆಂದರೆ, ಇಪಿಎಫ್ ನಲ್ಲಿ ಇರುವಂಥ ಅನುಕೂಲಗಳೇ ವಿಪಿಎಫ್ ನಲ್ಲೂ ಇವೆ. ವಾಲಂಟರಿ ಪ್ರಾವಿಡಂಟ್ ಫಂಡ್ ಅನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ನಾಲ್ಕು ಕಾರಣಗಳು ಇಲ್ಲಿವೆ:

ಬ್ಯಾಂಕ್ ಗಳಿಗಿಂತ ಹೆಚ್ಚಿನ ಬಡ್ಡಿ ದರ

ಬ್ಯಾಂಕ್ ಗಳಿಗಿಂತ ಹೆಚ್ಚಿನ ಬಡ್ಡಿ ದರ

2019- 20ರಲ್ಲಿ ಇಪಿಎಫ್ ಮೇಲಿನ ಬಡ್ಡಿ ದರ 8.50% ಇತ್ತು. ಇದನ್ನು ಬ್ಯಾಂಕ್ ಬಡ್ಡಿ ದರಕ್ಕೆ ಹೋಲಿಸಿದಲ್ಲಿ, ಸದ್ಯಕ್ಕೆ ಭಾರತದಲ್ಲಿ ಬ್ಯಾಂಕ್ ಗಳಲ್ಲಿ ನೀಡುತ್ತಿರುವ ಬಡ್ಡಿ ದರಕ್ಕಿಂತ 3% ಹೆಚ್ಚು. ನಿಮಗೆ ಗೊತ್ತಿರಬೇಕಾದದ್ದು ಏನೆಂದರೆ, ವಿಪಿಎಫ್ ಎಂಬುದು ಇಪಿಎಫ್ ನ ವಿಸ್ತರಣೆ. ಒಂದು ವೇಳೆ ಉದ್ಯೋಗ ಬದಲಾವಣೆ ಮಾಡಿದರೂ ಅದನ್ನು ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಬಹುದು. ಯಾವುದೇ ಕಂಪೆನಿಯಲ್ಲಿ ಉದ್ಯೋಗ ನಿರ್ವಹಿಸುವವರು ಇಪಿಎಫ್ ಗೆ ಅರ್ಹರು. ಇದರ ಅತಿ ದೊಡ್ಡ ಲಾಭ ಏನೆಂದರೆ, ಹೆಚ್ಚಿನ ಬಡ್ಡಿ ದರ. ಇಪಿಎಫ್ ಒದಿಂದ ಪ್ರತಿ ವರ್ಷವೂ ಬಡ್ಡಿ ದರ ಪರಿಷ್ಕರಿಸಲಾಗುತ್ತದೆ.

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿ ಇಪಿಎಫ್, ವಿಪಿಎಫ್ ಗೆ ತೆರಿಗೆ ಅನುಕೂಲ

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿ ಇಪಿಎಫ್, ವಿಪಿಎಫ್ ಗೆ ತೆರಿಗೆ ಅನುಕೂಲ

ವಿಪಿಎಫ್ ಮೂಲಕವಾಗಿ ಇಪಿಎಫ್ ಗೆ ಕಟ್ಟುವ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಅನುಕೂಲ ದೊರೆಯುತ್ತದೆ. 1.5 ಲಕ್ಷ ರುಪಾಯಿಯೊಳಗೆ ಮೊತ್ತಕ್ಕೆ ಸೆಕ್ಷನ್ 80C ಅಡಿಯಲ್ಲಿ ಅನುಕೂಲ ಸಿಗುತ್ತದೆ. ಇನ್ನು ವಾಲಂಟರಿ ಪ್ರಾವಿಡೆಂಟ್ ಫಂಡ್ ಆಧಾರ್ ಗೆ ಜೋಡಣೆ ಆಗಿರುವುದರಿಂದ ಒಂದು ಉದ್ಯೋಗದಿಂದ ಮತ್ತೊಂದಕ್ಕೆ ಬದಲಾಯಿಸಿದಾಗ ವರ್ಗಾವಣೆಗೆ ಯಾವ ಸಮಸ್ಯೆಯೂ ಇಲ್ಲ. ಒಂದು ವೆಳೆ ತಿಂಗಳ ವೇತನದಲ್ಲಿ ಹೆಚ್ಚುವರಿ ಹಣ ಉಳಿಯುತ್ತದೆ ಎಂದಾದಲ್ಲಿ ಖಂಡಿತಾ ವಿಪಿಎಫ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ವಿಪಿಎಫ್ ಮೂಲಕ ಬಂದ ಬಡ್ಡಿ ದರಕ್ಕೆ ತೆರಿಗೆ ಇಲ್ಲ

ವಿಪಿಎಫ್ ಮೂಲಕ ಬಂದ ಬಡ್ಡಿ ದರಕ್ಕೆ ತೆರಿಗೆ ಇಲ್ಲ

ವಿಪಿಎಫ್ ನಿಂದ ಬಂದ ಬಡ್ಡಿಗೆ ತೆರಿಗೆ ಬೀಳುವುದಿಲ್ಲ. ಆದರೆ ಮೊದಲ ಕೊಡುಗೆ ನೀಡಿದ ಐದು ವರ್ಷಗಳ ನಂತರ ವಿಥ್ ಡ್ರಾ ಮಾಡಿದಲ್ಲಿ ಬಡ್ಡಿ ಆದಾಯಕ್ಕೆ ತೆರಿಗೆ ಬೀಳುವುದಿಲ್ಲ. ಇದನ್ನು ಸರಳವಾಗಿ ಹೇಳಬೇಕು ಅಂದರೆ, ನಿಮ್ಮ ಕಾಂಟ್ರಿಬ್ಯೂಷನ್ ಜನವರಿ 1, 2020ರಿಂದ ಆರಂಭಿಸಿದಲ್ಲಿ ಜನವರಿ 1, 2025ರಿಂದ ತೆರಿಗೆಯಿಂದ ಮುಕ್ತವಾಗುತ್ತದೆ.

ಇಪಿಎಫ್ ಮತ್ತು ವಿಪಿಎಫ್ ಬಹಳ ಸುರಕ್ಷಿತ

ಇಪಿಎಫ್ ಮತ್ತು ವಿಪಿಎಫ್ ಬಹಳ ಸುರಕ್ಷಿತ

ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಹಾಗೂ ವಾಲಂಟರಿ ಪ್ರಾವಿಡೆಂಟ್ ಫಂಡ್ ಎರಡೂ ಬಹಳ ಸುರಕ್ಷಿತ. ಎರಡಕ್ಕೂ ಕೇಂದ್ರ ಸರ್ಕಾರದ ಬೆಂಬಲ ಇದೆ. ಆದ್ದರಿಂದ ವೈಯಕ್ತಿಕವಾಗಿ ಇಪಿಎಫ್ ನಲ್ಲಿ ಹಣ ಹಾಕಲು ಆಸಕ್ತಿ ವಹಿಸುತ್ತಾರೆ. ಇನ್ನೂ ಎಷ್ಟೋ ಮಂದಿ 58 ವರ್ಷಕ್ಕೆ ಮುಂಚಿತವಾಗಿ ಉದ್ಯೋಗವನ್ನು ಬಿಟ್ಟರೂ ಇಪಿಎಫ್ ನಲ್ಲಿ ಹಣವನ್ನು ಹಾಗೇ ಇರುವುದಕ್ಕೆ ಬಿಡುತ್ತಾರೆ. ಇನ್ನೊಂದು ವಿಷಯ ನೆನಪಿಟ್ಟುಕೊಳ್ಳಬೇಕು: ಒಂದು ವೇಳೆ ಉದ್ಯೋಗ ಬಿಟ್ಟಲ್ಲಿ ಮತ್ತು ಬೇಗ ನಿವೃತ್ತರಾದಲ್ಲಿ ಅಥವಾ ನಿರುದ್ಯೋಗಿಗಳಾದಲ್ಲಿ ಇಪಿಎಫ್ ನಲ್ಲಿ ಹಣವನ್ನು ಇರಿಸಬಹುದು. ಆದರೆ ಬಡ್ಡಿ ಮೇಲೆ ತೆರಿಗೆ ಬೀಳುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಒಟ್ಟಾರೆ ಹೇಳಬೇಕು ಅಂದರೆ, ವಿಪಿಎಫ್ ಎಂಬುದು ಹೂಡಿಕೆಗೆ ಸರಳ ಹಾಗೂ ಸುರಕ್ಷಿತ. ಜತೆಗೆ ಬಡ್ಡಿ ದರ ಹೆಚ್ಚು ಸಿಗುತ್ತದೆ. ತೆರಿಗೆ ಬೀಳುವುದಿಲ್ಲ.

English summary

Voluntary Provident Fund 4 Benefits And 3 Gains

Personal Finance: Here is the 4 benefits of Voluntary Provident Fund and 3 gains to employees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X