For Quick Alerts
ALLOW NOTIFICATIONS  
For Daily Alerts

ಇಪಿಎಫ್ ಲೆಕ್ಕಾಚಾರ ಹಾಕುವುದು ಹೇಗೆ?

By Mahesh
|

ಇಪಿಎಫ್ ಲೆಕ್ಕಾಚಾರ ಹಾಕುವುದು ಹೇಗೆ?
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆ ಖಾತೆಗೆ ಉದ್ಯೋಗಿ ಹಾಗೂ ಉದ್ಯೋಗದಾತ ಸಂಸ್ಥೆ ಹಣ ಸೇರಿಸುವುದು ನಿಮಗೆ ಗೊತ್ತೇ ಇದೆ. ಈಗ ಪಿಎಫ್ ಮಾಹಿತಿ ಎಲ್ಲರಿಗೂ ಆನ್ ಲೈನ್ ನಲ್ಲಿ ಸಂಪೂರ್ಣವಾಗಿ ಲಭ್ಯವಾದ ಮೇಲೆ ನಿಮ್ಮ PF ಖಾತೆಗೆ ಜಮೆಯಾಗಿರುವ ಮೊತ್ತ ಹಾಗೂ ಪಿಎಫ್ ಹಣ ಹಿಂಪಡೆಯುವುದು, ವರ್ಗಾವಣೆ ಮಾಡುವುದು ಇತ್ಯಾದಿ ಕ್ರಿಯೆ ಸುಲಭ ಸಾಧ್ಯವಾಗಿದೆ.

ಆದರೆ, ಇಪಿಎಫ್ ಲೆಕ್ಕಾಚಾರ ಹಾಕುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ:

ಇಪಿಎಫ್ = ಉದ್ಯೋಗಿ (ಸಂಬಳದ ಶೇ 12 + ತುಟ್ಟಿಭತ್ಯೆ DA) + ಉದ್ಯೋಗ ಸಂಸ್ಥೆ (ಶೇ 12 + DA)

ಈ ಮೊದಲು ಉದ್ಯೋಗಿಯ ಮೂಲ ಸಂಬಳ(Basic) ಜೊತೆಗೆ ತುಟ್ಟಿಭತ್ಯೆಯನ್ನು ಸೇರಿಸಲಾಗುತ್ತಿತ್ತು. ಆದರೆ, ಹೊಸ ನಿಯಮದ ಪ್ರಕಾರ ಮೂಲ ಸಂಬಳ + ತುಟ್ಟಿಭತ್ಯೆ + ಇತರೆ ಸವಲತ್ತುಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ.

ಉದಾಹರಣೆಗೆ: ಸುರೇಶ್ ಎಂಬ ಉದ್ಯೋಗಿಯ ಮೂಲ ಸಂಬಳ ಮೊತ್ತ 30,000 ಇದೆ ಎಂದುಕೊಳ್ಳಿ. ಸಾರಿಗೆ ಸವಲತ್ತುಗಳು ತಿಂಗಳಿಗೆ 5,000 ರು ಇದೆ ಹಾಗೂ ವೈದ್ಯಕೀಯ ಭತ್ಯೆ 5,000 ಪ್ರತಿ ತಿಂಗಳಿಗೆ ಸಿಗುತ್ತಿದೆ. ಹಳೆ ನಿಯಮದ ಪ್ರಕಾರ ಇದರ ಮೊತ್ತ 30,000 ರು ಆಗುತ್ತದೆ. 30,000 X 12/100=3,600 ರು

ಹೊಸ ನಿಮಯದ ಪ್ರಕಾರ ಸಾರಿಗೆ, ಗೃಹಭತ್ಯೆ, ತುಟ್ಟಿಭತ್ಯೆ ಇತರೆ ಸವಲತ್ತುಗಳನ್ನು ಸೇರಿಸಲಾಗುತ್ತದೆ. ಹಾಗಾಗಿ ಲೆಕ್ಕಾಚಾರ ಹೀಗಿರುತ್ತದೆ. 40,000 X 12/100= 4,8000 ರು

ಇಪಿಎಫ್ ಪ್ರಯೋಜನ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆ ಖಾತೆದಾರರಿಗೆ ಮೂರು ಮುಖ್ಯ ಪ್ರಯೋಜನಗಳಿವೆ. ಇಲ್ಲಿ ಉಳಿತಾಯಕ್ಕಾಗಿ ಇಡಲಿರುವ ಮೊತ್ತಕ್ಕೆ ಬಡ್ಡಿ ಲಭಿಸುತ್ತದೆ. ನಿವೃತ್ತಿ ಪಿಂಚಣಿ ಸಿಗುತ್ತದೆ. ವಿಮೆ ಸೌಲಭ್ಯವೂ ಇದರ ಜೊತೆ ಕೂಡಿರುತ್ತದೆ.

ಪಿಎಫ್ 2012-13 ರ ಪಿಎಫ್ ಚಂದಾದಾರರಿಗೆ ಶೇ 8.7 ರ ಬಡ್ಡಿದರದಂತೆ ಪಾವತಿ ನೀಡಲು ಕೇಂದ್ರ ಸರ್ಕಾರ ಒಪ್ಪಿಸೆ ಸೂಚಿಸಿದೆ. ಸುಮಾರು 5 ಕೋಟಿಗೂ ಅಧಿಕ EPFO ಚಂದಾದಾರರಿಗೆ ಅನುಕೂಲವಾಗಲಿದೆ.

ಇಪಿಎಫ್ ಖಾತೆದಾರರಾದರೆ ತಕ್ಷಣವೇ Employees Pension Scheme 1995 ಹಾಗೂ Employees Deposit Linked Insurance Scheme 1976 (EDLIS) ನ ಸದಸ್ಯರಾಗುತ್ತೀರಿ. ಉಳಿದ ವಿವರ ಹಾಗೂ ಪಿಎಫ್ ವಿಥ್ ಡ್ರಾ ಯಾವಾಗ ಮಾಡಬಹುದು ಎಂಬುದರ ಬಗ್ಗೆ ಇಲ್ಲಿದೆ ಓದಿ

English summary

How to calculate employees provident fund (epf)? | ಇಪಿಎಫ್ ಲೆಕ್ಕಾಚಾರ ಹಾಕುವುದು ಹೇಗೆ?

Many of us willingly or unwillingly contribute a certain amount towards employees provident fund (EPF) every month. This is called employee contribution, while an amount will be contributed by your employer, which is referred to as Employer contribution.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X